BSNL FREE Data: ಬಿಎಸ್ಎನ್ಎಲ್ ಬಳಕೆದಾರರೇ ಈ ಕೆಲಸ ಮಾಡಿ 4GB ಉಚಿತ ಡೇಟಾ ಪಡೆಯಿರಿ!

BSNL FREE Data: ಬಿಎಸ್ಎನ್ಎಲ್ ಬಳಕೆದಾರರೇ ಈ ಕೆಲಸ ಮಾಡಿ 4GB ಉಚಿತ ಡೇಟಾ ಪಡೆಯಿರಿ!

BSNL Offers FREE data till 31st March 2024: ಸರ್ಕಾರಿ ಸೌಮ್ಯದ ಟೆಲಿಕಾಂ ಕಂಪನಿಯಾದ ಭಾರತ್ ಸಂಚಾರ ನಿಗಮ್ ಲಿಮಿಟೆಡ್ ತಮ್ಮ ಬಳಕೆದಾರರಿಗೆ ಉಚಿತ ಡೇಟಾ ನೀಡುವ ದಮಕ ಆಫರನ್ನು ನೀಡುತ್ತಿದೆ. ಈ ಆಫರ್ ಹೊಸ ಕೊಡುಗೆ ಏನಲ್ಲ ಆದರೆ ಈ ಆಫರ್ ಶೀಘ್ರದಲ್ಲೇ ಕೊನೆಗೊಳ್ಳಲಿದೆ. ಈ ಮೂಲಕ ನಿಮ್ಮ 2G ಅಥವಾ 3G ಸಿಮ್ ಕಾರ್ಡ್ ಅನ್ನು BSNL 4G ಸಿಮ್‌ಗೆ ಅಪ್‌ಗ್ರೇಡ್ ಮಾಡಿಕೊಳ್ಳುವುದರಿಂದ ನೀವು BSNL FREE Data ಪಡೆಯಲು ಅರ್ಹರಾಗುವಿರಿ. ಬಿಎಸ್ಎನ್ಎಲ್ ಕರ್ನಾಟಕ ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದ ಮೂಲಕ ಈ ಆಫರ್ ಪಡೆಯಲು ಕೊನೆಯ ದಿನಾಂಕವನ್ನು 31ನೇ ಮಾರ್ಚ್ 2024 ಕೊನೆಗೊಳಿಸಲಿದೆ.

Also Read: ಸ್ಮಾರ್ಟ್‌ಫೋನ್ ಬಳಕೆಯಿಂದ ಬ್ರೈನ್ ಟ್ಯೂಮರ್‌ಗಳ (Brain Tumors) ಆಗುತ್ತಾ? ಹೊಸ ರಿಸರ್ಚ್ ಹೇಳುವುದು ಏನು?

BSNL Offers FREE data till 31st March 2024
BSNL Offers FREE data till 31st March 2024

Is BSNL available in 4G?

ಬಿಎಸ್ಎನ್ಎಲ್ BSNL 4G ಸೇವೆಗಾಗಿ ಬಳಕೆದಾರರು ಕಾತರದಿಂದ ಕಾಯುತ್ತಿದ್ದಾರೆ. ಸರ್ಕಾರಿ ಟೆಲಿಕಾಂ ಕಂಪನಿಯು ಶೀಘ್ರದಲ್ಲೇ ದೇಶಾದ್ಯಂತ ತನ್ನ 4G ಸೇವೆಯನ್ನು ಪ್ರಾರಂಭಿಸಲಿದೆ. ಒಂದೆಡೆ ಖಾಸಗಿ ಟೆಲಿಕಾಂ ಕಂಪನಿಗಳು 5ಜಿ ಸೇವೆ ಆರಂಭಿಸಿದರೆ ಮತ್ತೊಂದೆಡೆ ಬಿಎಸ್‌ಎನ್‌ಎಲ್ ಬಳಕೆದಾರರು 2G ಅಥವಾ 3G ಸೇವೆಗಳನ್ನು ಮಾತ್ರ ಬಳಸುತ್ತಿದ್ದಾರೆ. ಸಾರ್ವಜನಿಕ ವಲಯದ ಟೆಲಿಕಾಂ ಕಂಪನಿಯ ಸೇವೆಯನ್ನು ಮೇಲ್ದರ್ಜೆಗೇರಿಸಲು ಸರ್ಕಾರ ಸಿದ್ಧತೆ ನಡೆಸಿದೆ. BSNL 4G ಸೇವೆಯ ಪ್ರಾರಂಭದೊಂದಿಗೆ ಬಳಕೆದಾರರು ಸೂಪರ್ಫಾಸ್ಟ್ ಇಂಟರ್ನೆಟ್ ಸೇವೆಗಳನ್ನು ಪಡೆಯಲು ಪ್ರಾರಂಭಿಸುತ್ತಾರೆ.

BSNL FREE Data ಆಫರ್

ಈ ಆಫರ್ ಪಡೆಯಲು ನಿಮಗೆ ಯಾವುದೇ ರೀತಿಯ ಹೆಚ್ಚು ವೆಚ್ಚವಾಗದ ಕಾರಣ ಆದಷ್ಟು ಬೇಗ ಈ ಆಫರ್ ಅನ್ನು ಪಡೆದುಕೊಳ್ಳಬಹುದು. ನೀವು ನಿಮ್ಮ ಹಳೆಯ 2G ಅಥವಾ 3G ಸಿಮ್ ಕಾರ್ಡ್ ಅನ್ನು BSNL 4G ಸಿಮ್ ಕಾರ್ಡ್ ಗೆ ಅಪ್ಗ್ರೇಡ್ ಮಾಡಿ ಉಚಿತ ಬೋನಸ್ ಡೇಟಾವನ್ನು ಪಡೆಯಬಹುದು. ಇತ್ತೀಚೆಗೆ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ಭಾರತದ ಪ್ರಮುಖ ಉತ್ತರ ರಾಜ್ಯಗಳಲ್ಲಿ BSNL ಸುಮಾರು 3500 4G ಸೈಟ್‌ಗಳನ್ನು ನಿಯೋಜಿಸಿದೆ.

BSNL Offers FREE data till 31st March 2024
BSNL Offers FREE data till 31st March 2024

ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ BSNL 4G ಗಾಗಿ 4200 ಸೈಟ್‌ಗಳು ನಿರ್ಮಾಣ ಹಂತದಲ್ಲಿವೆ. BSNL 4G ಸೈಟ್‌ಗಳನ್ನು ಯಾವುದೇ ಸಲಕರಣೆಗಳ ನವೀಕರಣವಿಲ್ಲದೆ 5G ಗೆ ಅಪ್‌ಗ್ರೇಡ್ ಮಾಡಬಹುದು. ಕೇಂದ್ರ ಸರ್ಕಾರ ಈಗಾಗಲೇ 5G ಸ್ಪೆಕ್ಟ್ರಮ್ ಅನ್ನು BSNL ಕಾಯ್ದಿರಿಸಿದೆ. ಹೀಗಾಗಿ ಸೈಟ್‌ಗಳು ಸಿದ್ಧವಾದಾಗ BSNL ಭಾರತದಲ್ಲಿ 5G ಸ್ವತಂತ್ರವಲ್ಲದ (NSA) ಅನ್ನು ರೋಲ್‌ಔಟ್ ಮಾಡಲು ಸಾಧ್ಯವಾಗುತ್ತದೆ

BSNL ವೃದ್ದಿಪಡಿಸಲು ಸರ್ಕಾರ ದೊಡ್ಡ ಹೂಡಿಕೆ ಮಾಡಿದೆ

BSNL ಸಂಪರ್ಕವನ್ನು ಸುಧಾರಿಸಲು 24,500 ಕೋಟಿ ರೂಗಳನ್ನು ಹೂಡಿಕೆ ಮಾಡಲು ಸರ್ಕಾರ ನಿರ್ಧರಿಸಿದೆ. ದೇಶದಾದ್ಯಂತ ಕಂಪನಿಯ 1 ಲಕ್ಷ ಹೊಸ ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲಾಗುವುದು. ಅದೇ ಸಮಯದಲ್ಲಿ BSNL ತನ್ನ 5G ಸೇವೆಯನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ. 4G ಸೇವೆಯನ್ನು ಪ್ರಾರಂಭಿಸಿದ ನಂತರ ಕಂಪನಿಯು ಶೀಘ್ರದಲ್ಲೇ 5G ಸೇವೆಯನ್ನು ಪ್ರಾರಂಭಿಸಬಹುದು. ಇದಕ್ಕಾಗಿ ಕಂಪನಿಯು ಇತ್ತೀಚೆಗೆ Ericssion ನೊಂದಿಗೆ ಪಾಲುದಾರಿಕೆ ಹೊಂದಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo