ಬಿಎಸ್ಎನ್ಎಲ್ (BSNL) ತಮ್ಮ ಬಳಕೆದಾರರಿಗೆ ಪ್ರತಿ ಬಾರಿ ಒಂದಲ್ಲ ಒಂದು ಹೊಸ ಯೋಜನೆಗಳನ್ನು ಪರಿಚಯಿಸುತ್ತಲೇ ಇರುತ್ತದೆ
ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳೊಂದಿಗೆ ಪೈಪೋಟಿ ನಡೆಸುತ್ತಾ ಅತಿ ಕಡಿಮೆ ಬೆಲೆಗೆ ಹೆಚ್ಚು ಪ್ರಯೋಜನಗಳನ್ನು ನೀಡುತ್ತಿದೆ.
BSNL ಬರೋಬ್ಬರಿ 160 ದಿನಗಳ ಅಂದ್ರೆ 5 ತಿಂಗಳ ವ್ಯಾಲಿಡಿಟಿಯನ್ನು ನೀಡುವ 997 ರೂಗಳ ಯೋಜನೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.
ಭಾರತದಲ್ಲಿ ಸರಕಾರಿ ಸೌಮ್ಯದ ಟೆಲಿಕಾಂ ಕಂಪನಿಯಾಗಿರುವ ಬಿಎಸ್ಎನ್ಎಲ್ (BSNL) ತಮ್ಮ ಬಳಕೆದಾರರಿಗೆ ಪ್ರತಿ ಬಾರಿ ಒಂದಲ್ಲ ಒಂದು ಹೊಸ ಯೋಜನೆಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಇದರೊಂದಿಗೆ ಭಾರತದಲ್ಲಿ ಈಗಾಗಲೇ ಹೆಚ್ಚು ಗ್ರಾಹಕರನ್ನು ಹೊಂದಿರುವ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳೊಂದಿಗೆ ಪೈಪೋಟಿ ನಡೆಸುತ್ತಾ ಅತಿ ಕಡಿಮೆ ಬೆಲೆಗೆ ಹೆಚ್ಚು ಪ್ರಯೋಜನಗಳನ್ನು ನೀಡುತ್ತಿದೆ. ಒಂದೇ ಯೋಜನೆಯಲ್ಲಿ ನಿಮಗೆ ಅನ್ಲಿಮಿಟೆಡ್ ಕರೆ ಮತ್ತು 4G ಡೇಟಾದೊಂದಿಗೆ ಬರೋಬ್ಬರಿ 160 ದಿನಗಳ ಅಂದ್ರೆ 5 ತಿಂಗಳ ವ್ಯಾಲಿಡಿಟಿಯನ್ನು ನೀಡುವ 997 ರೂಗಳ ಯೋಜನೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ನೀವು ಈ BSNL Offer ಬಳಕೆದಾರರಾಗಿದ್ದರೆ ಮೊನ್ನೆ ಈ ಯೋಜನೆ ಪ್ರಯೋಜನಗಳನ್ನು ನೋಡಬಹುದು.
BSNL Offer ಪ್ಲಾನ್ ರೂ 997 ರೂಗಳ ಯೋಜನೆ ವಿವರಗಳು
ಬಿಎಸ್ಎನ್ಎಲ್ (BSNL) ನೀಡುತ್ತಿರುವ ಈ ಹೊಸ ರೂ 997 ರೀಚಾರ್ಜ್ ಯೋಜನೆಯು ದೀರ್ಘಾವಧಿಯ ಮಾನ್ಯತೆ ಮತ್ತು ವೆಚ್ಚ-ಸಮರ್ಥ ಡೇಟಾ ಮತ್ತು ಕರೆ ಸೇವೆಗಳನ್ನು ಬಯಸುವ ಬಳಕೆದಾರರಿಗೆ ಉತ್ತಮ ಆಯ್ಕೆಯಾಗಿದೆ. ಮುಂಬರುವ 4G ಮತ್ತು ಭವಿಷ್ಯದ 5G ಸೇವೆಗಳ ಬಿಡುಗಡೆಯೊಂದಿಗೆ, BSNL ಭಾರತದಲ್ಲಿನ ಪ್ರಮುಖ ಟೆಲಿಕಾಂ ಆಟಗಾರರಿಗೆ ಬಲವಾದ ಪರ್ಯಾಯವಾಗಿ ತನ್ನನ್ನು ತಾನು ಸ್ಥಾಪಿಸಿಕೊಳ್ಳುತ್ತಿದೆ. ಇದಕ್ಕೆ ಹೋಲಿಸಿದರೆ ಈ ಬೆಲೆ BSNL ಹೊರೆತುಪಡಿಸಿ ಬೇರೆ ಯಾವ ಕಂಪನಿಗಳು ಇಂತಹ ಆಫರ್ಗಳನ್ನು ನೀಡುತ್ತಿಲ್ಲ ಎನ್ನುವುದನ್ನು ಗಮನಿಸಬೇಕಿದೆ. ಈ ವಿಶೇಷ ಯೋಜನೆಗಳಲ್ಲಿ ರೂಪಾಯಿ 997 ರಿಚಾರ್ಜ್ ಯೋಜನೆ ಒಂದು ಬಿಡುಗಡೆಯಾಗಿದೆ.
ಈ ಒಂದು ಯೋಜನೆ ಅಡಿಯಲ್ಲಿ ನೀವು 160 ದಿನಗಳವರೆಗೆ ಈ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು. ಅಂದ್ರೆ ಒಟ್ಟು ವ್ಯಾಲಿಡಿಟಿಗಾಗಿ 320GB 4G ಡೇಟಾವನ್ನು ಪಡೆಯುತ್ತೀರಿ. ಈ ಒಂದು ಯೋಜನೆಯಲ್ಲಿ ಪ್ರತಿದಿನ 2GB ಹೈ-ಸ್ಪೀಡ್ ಡೇಟಾ ಉಪಯೋಗಿಸಬಹುದು. ಪ್ರತಿದಿನ 100 SMS ಉಚಿತ ಮತ್ತು ಯಾವುದೇ ನೆಟ್ವರ್ಕ್ ನೊಂದಿಗೆ ಉಚಿತ ಆ ನಿಯಮಿತ ಕರೆಗಳು ಮತ್ತು ಬೇರೆ ದೇಶದ ಜೊತೆಗೆ ಉಚಿತ ರೋವಿಂಗ್ ಪಡೆಯಬಹುದು. ಯೋಜನೆಯು ರಾಷ್ಟ್ರವ್ಯಾಪಿ ಉಚಿತ ರೋಮಿಂಗ್ ಮತ್ತು ಹಾರ್ಡಿ ಗೇಮ್ಸ್, ಜಿಂಗ್ ಮ್ಯೂಸಿಕ್ ಮತ್ತು BSNL ಟ್ಯೂನ್‌ನಂತಹ ಮೌಲ್ಯವರ್ಧಿತ ಸೇವೆಗಳಿಗೆ ಪ್ರವೇಶವನ್ನು ಒಳಗೊಂಡಿದೆ, ಇದು ಸಂಪರ್ಕ ಮತ್ತು ಮನರಂಜನೆ ಎರಡನ್ನೂ ಹುಡುಕುವ ಗ್ರಾಹಕರಿಗೆ ಆಕರ್ಷಕ ಆಯ್ಕೆಯಾಗಿದೆ.
ಅತಿ ಶೀಘ್ರದಲ್ಲೇ 5G ನೆಟ್ವರ್ಕ್ ಆರಂಭಿಸಲಿರುವ BSNL
ಈಗ ಇದರ ಬಗ್ಗೆ ಕೇಳುವ ಬಳಕೆದಾರರು ಹೇಳುವುದು ಏನೆಂದರೆ ಸರಿಯಾಗಿ 4G ಬರುತ್ತಿಲ್ಲ ಇನ್ನು 5G ಯಾರಿಗೆ ಬೇಕು ಎನ್ನುವ ಹಲವಾರು ಜನರ ಯೋಚನೆಯನ್ನು ಬದಲಾಯಿಸಿದೆ. ಇದಕ್ಕೆ ಕಾರಣವೆಂದರೆ ದೇಶದ ಅತಿದೊಡ್ಡ ಟೆಕ್ ಕಂಪನಿ ಟಾಟಾ ಗ್ರೂಪ್ TCS ಈಗ BSNL ಟವರ್ ಮತ್ತು ನೆಟ್ವರ್ಕ್ ಅನ್ನು ಸರಿಪಡಿಸುವ ಕಾರ್ಯವನ್ನು ವಹಿಸಿಕೊಂಡಿರುವುದು ಜನರಿಗೆ ಒಂಚೂರು ಸಮಾಧಾನ ನೀಡಿದೆ. ಇದರಡಿಯಲ್ಲಿ ಅತಿ ಬೇಗ ದೇಶದಲ್ಲಿ BSNL 5G ನೆಟ್ವರ್ಕ್ ಹರಡಿದರೆ ಹೆಚ್ಚು ಆಶ್ಚರ್ಯಪಡುವ ಅಗತ್ಯವಿಲ್ಲ. BSNL ತನ್ನ ಬಳಕೆದಾರರಿಗೆ ವೇಗವಾದ ಸಂಪರ್ಕ ಮತ್ತು ಉತ್ತಮ ಸೇವೆಯ ಗುಣಮಟ್ಟವನ್ನು ಭರವಸೆ ನೀಡುವ ಮೂಲಕ 5G ಸೇವೆಗಳನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ. ಟೆಲಿಕಾಂ ಲ್ಯಾಂಡ್‌ಸ್ಕೇಪ್ ವಿಕಸನಗೊಳ್ಳುತ್ತಿರುವಂತೆ BSNL ಈ ಹೊಸ ಬೆಳವಣಿಗೆಗಳೊಂದಿಗೆ ಸ್ಪರ್ಧಾತ್ಮಕವಾಗಿ ಉಳಿಯುವ ಗುರಿಯನ್ನು ಹೊಂದಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile