425 ದಿನಗಳಿಗೆ ಅನ್ಲಿಮಿಟೆಡ್ ಪ್ರಯೋಜನಗಳನ್ನು ನೀಡುವ BSNL ಹೊಸ ವರ್ಷದ ಆಫರ್ ಪ್ಲಾನ್!

425 ದಿನಗಳಿಗೆ ಅನ್ಲಿಮಿಟೆಡ್ ಪ್ರಯೋಜನಗಳನ್ನು ನೀಡುವ BSNL ಹೊಸ ವರ್ಷದ ಆಫರ್ ಪ್ಲಾನ್!
HIGHLIGHTS

BSNL ಹೊಸ ವರ್ಷದಡಿಯಲ್ಲಿ 2399 ರೂಗಳ ಪ್ಲಾನ್ ಈಗ 425 ದಿನಗಳ ವ್ಯಾಲಿಡಿಟಿ ಮತ್ತು ಪ್ರಯೋಜನ ನೀಡುತ್ತಿದೆ.

ಈ BSNL ಕೊಡುಗೆಯು 16ನೇ ಜನವರಿ 2025 ರವರೆಗೆ ಮಾತ್ರ ಮಾನ್ಯವಾಗಿರುತ್ತದೆ.

ಹೊಸ ವರ್ಷದ ಅಡಿಯಲ್ಲಿ BSNL ಜಬರ್ದಸ್ತ್ ಕೊಡುಗೆಯನ್ನು ತಮ್ಮ ಗ್ರಾಹಕರಿಗಾಗಿ ಪ್ರಕಟಿಸಿದೆ. ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ BSNL ತನ್ನ ಗ್ರಾಹಕರಿಗೆ ವಿಶೇಷ ಕೊಡುಗೆಯನ್ನು ಪರಿಚಯಿಸಿದೆ. ಆಫರ್ ಏನಪ್ಪಾ ಅಂದರೆ ಈ ಬಿಎಸ್‌ಎನ್‌ಎಲ್‌ (BSNL) ಜಬರ್ದಸ್ತ್ ಪ್ಲಾನ್ ಬರೋಬ್ಬರಿ 425 ದಿನಗಳ ವ್ಯಾಲಿಡಿಟಿಯೊಂದಿಗೆ ಒಟ್ಟಾರೆಯಾಗಿ 850GB ಡೇಟಾವನ್ನು ಸುಮಾರು 14 ತಿಂಗಳ ವ್ಯಾಲಿಡಿಟಿಯೊಂದಿಗೆ ನೀಡುತ್ತಿದೆ. ಹೌದು BSNL ಯೋಜನೆಯು ಮೊದಲು 395 ದಿನಗಳವರೆಗೆ ಮಾನ್ಯವಾಗಿದೆ. ಈಗ ಅದು ಹೆಚ್ಚು ದಿನಗಳವರೆಗೆ ಮಾನ್ಯವಾಗಿರುತ್ತದೆ. ನೀವು BSNL ಗ್ರಾಹಕರಾಗಿದ್ದರೆ ಈ ಕೊಡುಗೆಯು ನಿಮಗೆ ಉತ್ತಮವಾಗಿರುತ್ತದೆ.

Also Read: Moto G05 India Launch ಬಿಡುಗಡೆಗೆ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ

BSNL ಹೊಸ ವರ್ಷದ ಆಫರ್

ಪ್ರಸಿದ್ಧ ಟೆಲಿಕಾಂ ಕಂಪನಿ BSNL ತಮ್ಮ ಅಧಿಕೃತ X ಅಂದರೆ ಹಿಂದಿನ ಟ್ವಿಟರ್ ಹ್ಯಾಂಡಲ್ ಮೂಲಕ ಹೊಸ ವರ್ಷದ ಕೊಡುಗೆಯ ಬಗ್ಗೆ ಮಾಹಿತಿ ನೀಡಿದೆ. ಈ ಕೊಡುಗೆಯ ಅಡಿಯಲ್ಲಿ ಕಂಪನಿಯು ರೂ 2,399 ರ ವಾರ್ಷಿಕ ರೀಚಾರ್ಜ್ ಯೋಜನೆಯೊಂದಿಗೆ ಬಳಕೆದಾರರಿಗೆ ದೀರ್ಘಾವಧಿಯ ಮಾನ್ಯತೆಯನ್ನು ನೀಡುತ್ತಿದೆ. ಈ ಯೋಜನೆಯು 395 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ.

ಬಿಎಸ್ಎನ್ಎಲ್ ನೀಡುತ್ತಿರುವ ಈ ರಿಚಾರ್ಜ್ ಯೋಜನೆಯ ಬೆಲೆ ₹2,399 ರೂಗಳಾಗಿದ್ದು ಇದನ್ನು ಮಾಸಿಕವಾಗಿ ನೋಡುವುದಾದರೆ ತಿಂಗಳಿಗೆ ₹200 ರೂಪಾಯಿಗಳ ಅಂದಾಜು ಖರ್ಚು ಬರುತ್ತದೆ.ಇರೊಂದಿಗೆ ಚಂದಾದಾರರು ದಿನಕ್ಕೆ 2GB ಹೈ-ಸ್ಪೀಡ್ ಡೇಟಾ, ಪ್ರತಿದಿನ 100 ಉಚಿತ SMS ಮತ್ತು ರಾಷ್ಟ್ರವ್ಯಾಪಿ ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ಧ್ವನಿ ಕರೆಗಳನ್ನು ಪಡೆಯುವಿರಿ. ಹೆಚ್ಚುವರಿಯಾಗಿ ಯೋಜನೆಯು ರಾಷ್ಟ್ರವ್ಯಾಪಿ ಉಚಿತ ರೋಮಿಂಗ್ ಅನ್ನು ಒಳಗೊಂಡಿದೆ ಮತ್ತು ಝಿಂಗ್ ಮ್ಯೂಸಿಕ್, ಬಿಎಸ್ಎನ್ಎಲ್ ಟ್ಯೂನ್ಸ್, ಹಾರ್ಡಿ ಗೇಮ್ಸ್, ಚಾಲೆಂಜರ್ ಅರೆನಾ ಗೇಮ್ಸ್ ಮತ್ತು ಗೇಮನ್ ಆಸ್ಟ್ರೋಟೆಲ್ನಂತಹ ಮೌಲ್ಯವರ್ಧಿತ ಸೇವೆಗಳ ಶ್ರೇಣಿಯನ್ನು ನೀಡುತ್ತದೆ.

ನೀವು ಇತರರಿಗಿಂತ ಹೆಚ್ಚು ಡೇಟಾವನ್ನು ಬಳಸುವವರಲ್ಲಿ ಒಬ್ಬರಾಗಿದ್ದರೆ ನೀವು ಈ BSNL ದೀರ್ಘಾವಧಿಯ ಯೋಜನೆಗಳನ್ನು ತುಂಬಾ ಇಷ್ಟಪಡುತ್ತೀರಿ. ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ BSNL ಪ್ರತಿದಿನ 2GB ಡೇಟಾ ವೋಚರ್ ಇತರ ಕಂಪನಿಗಳಿಗೆ ಹೋಲಿಸಿದರೆ ಅತ್ಯುತ್ತಮ ಯೋಜನೆಯಾಗಿ ಹೊರಬರುತ್ತಿದೆ. ಇದರ ಬೆಲೆ ₹2399 ರೂಗಳಾಗಿದ್ದು ಒಮ್ಮೆ ರಿಚಾರ್ಜ್ ಮಾಡಿಕೊಂಡರೆ ಪದೇ ಪದೇ ಅಥವಾ ಪ್ರತಿ ತಿಂಗಳು ರಿಚಾರ್ಜ್ ಮಾಡುವುದರಿಂದ ದೂರವಿರಬಹುದು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo