ಹೊಸ 2025 ವರ್ಷದ ಆಗಮನದ ಆಚರಣೆಗೆ ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದಿವೆ.
ಭಾರತ್ ಸಂಚಾರ್ ನಿಗಮ ಲಿಮಿಟೆಡ್ (BSNL) ಕೇವಲ 277 ರೂಗಳ ಯೋಜನೆಯ ಬಗ್ಗೆ ಒಂದಿಷ್ಟು ಮಾಹಿತಿ.
BSNL ಕೇವಲ 277 ರೂಗಳ ಯೋಜನೆಯಲ್ಲಿ 60 ದಿನಗಳ ವ್ಯಾಲಿಡಿಟಿ ಮತ್ತು 120GB ಡೇಟಾವನ್ನು ನೀಡುತ್ತಿದೆ.
BSNL New Year 2025: ಪ್ರಸ್ತುತ ಜಗತ್ತಿನಾದ್ಯಾಂತ ಈ ವರ್ಷ ಕೊನೆಗೊಂಡು ಹೊಸ 2025 ವರ್ಷದ ಆಗಮನದ ಆಚರಣೆಗೆ ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದಿವೆ. ಈ ಮುಂಬರಲಿರುವ ಹರ್ಷದ ಸಡಗರವನ್ನು ಮತ್ತಷ್ಟು ಹೆಚ್ಚಿಸಲು ಭಾರತ್ ಸಂಚಾರ್ ನಿಗಮ ಲಿಮಿಟೆಡ್ (BSNL) ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ ಆಕರ್ಷಕ ರಿಚಾರ್ಜ್ ಯೋಜನೆಯೊಂದನ್ನು ಹೆಚ್ಚುವರಿ ಪ್ರಯೋಜನಗಳೊಂದಿಗೆ ಅಪ್ಡೇಟ್ ಮಾಡಿ ನೀಡುತ್ತಿದೆ. BSNL ಕೇವಲ 277 ರೂಗಳ ಯೋಜನೆಯಲ್ಲಿ ಅಂದ್ರೆ ಅತಿ ಕಡಿಮೆ ಬೆಲೆಗೆ 60 ದಿನಗಳ ವ್ಯಾಲಿಡಿಟಿ ಮತ್ತು 120GB ಡೇಟಾವನ್ನು ನೀಡುತ್ತಿದೆ.
BSNL New Year 2025 ರೂ. 277 ರೂಗಳ ಯೋಜನೆಯ ವಿವರಗಳು:
ಭಾರತ್ ಸಂಚಾರ್ ನಿಗಮ ಲಿಮಿಟೆಡ್ (BSNL) ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ ಸೀಮಿತ ಅವಧಿಗೆ ರೂ 277 ರೀಚಾರ್ಜ್ ಕೊಡುಗೆಯನ್ನು ಪ್ರಕಟಿಸಿದೆ. ಈ ಆಫರ್ ಹೊಸ ವರ್ಷದವರೆಗೆ ಅಂದರೆ 16ನೇ ಜನವರಿ 2025 ರವರೆಗೆ ಮಾತ್ರ ಮಾನ್ಯವಾಗಿರುತ್ತದೆ. ನೀವು ಪೂರ್ವಪಾವತಿ ಮಾಡಿದರೆ ಮುಂದಿನ 60 ದಿನಗಳವರೆಗೆ ನಿಮಗೆ ಯಾವುದೇ ತಲೆನೋವು ಇರುವುದಿಲ್ಲ. ಒಟ್ಟು 120GB ಡೇಟಾವನ್ನು ಬರೋಬ್ಬರಿ 2 ತಿಂಗಳು ಅಂದ್ರೆ 60 ದಿನಗಳವರೆಗೆ ಉಚಿತ ವ್ಯಾಲಿಡಿಟಿಯನ್ನು ಹೊಂದಿದೆ.
ನೀವು ಪ್ರತಿದಿನ ಹೆಚ್ಚು ಡೇಟಾವನ್ನು ಬಳಸಬೇಕೆಂದು ಇದರ ಅರ್ಥವಲ್ಲ. ಇದರರ್ಥ ನೀವು ಪ್ರತಿದಿನ ನಿಮಗೆ ಬೇಕಾದಷ್ಟು ಡೇಟಾವನ್ನು ಬಳಸಬಹುದು. 120GB ಉಚಿತ ಸಂಚಾರದ ಅವಧಿ ಮುಗಿದ ನಂತರ ಇಂಟರ್ನೆಟ್ ವೇಗವು 40Kbps ಕಡಿಮೆಯಾಗುತ್ತದೆ. ಈ ಹೊಸ ವರ್ಷದ ಆಫರ್ ವಿಶೇಷವಾಗಿ ಹೆಚ್ಚಿನ ಡೇಟಾವನ್ನು ಸೇವಿಸುವ ಗ್ರಾಹಕರಿಗೆ ಇದು ಆದರ್ಶ ಯೋಜನೆಯಾಗಿದೆ. ಬಜೆಟ್ ಯೋಜನೆಯು ಗರಿಷ್ಠ ಸೇವೆಯನ್ನು ಆನಂದಿಸಲು ನಿಮಗೆ ಅನುಮತಿಸುತ್ತದೆ.
Also Read: ಹೊಸ ವರ್ಷದಿಂದ SIM Card ಖರೀದಿಯಲ್ಲಿ ಭಾರಿ ಬದಲಾವಣೆ! ಹೊಸ ನಿಯಮ ಹೇಳುವುದೇನು?
BSNL ಯಶಸ್ಸು Airtel ಮತ್ತು Jio ಕಂಪನಿಗಳಿಗೆ ತಲೆನೋವು!
ಹೌದು, ಭಾರತ್ ಸಂಚಾರ್ ನಿಗಮ ಲಿಮಿಟೆಡ್ (BSNL) ಹೊಸ ಆಫರ್ ಅಡಿಯಲ್ಲಿ ಕಡಿಮೆ ಬೆಲೆಗೆ ಹೆಚ್ಚಿನ ಪ್ರಯೋಜನಗಳನ್ನು ನೀಡಿದೆ. ಈ ಮಾದರಿಯ ಅನುಕೂಲಗಳಿಂದ ತಮ್ಮ ಗ್ರಾಹಕರ ಸಂಖ್ಯೆಯನ್ನು ಸಹ ಹೆಚ್ಚಿಸಿಕೊಂಡಿದೆ. ಅಲ್ಲದೆ ಇತ್ತೀಚೆಗೆ TRAI ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ BSNL ತನ್ನ ಗ್ರಾಹಕರ ನೆಲೆಯನ್ನು ಗಣನೀಯವಾಗಿ ಹೆಚ್ಚಿಸಿದೆ. ಏರ್‌ಟೆಲ್‌ನ ಕಾರ್ಯಕ್ಷಮತೆ ಉತ್ತೇಜಕವಾಗಿದ್ದರೂ ರಿಲಯನ್ಸ್ ಜಿಯೋ ದೊಡ್ಡ ಆಘಾತವನ್ನು ಎದುರಿಸಿತು. ಜಿಯೋ ಗ್ರಾಹಕರು ಬಿಎಸ್‌ಎನ್‌ಎಲ್ ಮತ್ತು ಇತರ ನೆಟ್‌ವರ್ಕ್‌ಗಳಿಗೆ ಬದಲಾಯಿಸುವ ಸರತಿಗೆ ಅಂತ್ಯವಿಲ್ಲ ಎಂದು TRAI ಇತ್ತೀಚಿನ ವರದಿ ಬಹಿರಂಗಪಡಿಸಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile