BSNL New Year 2025: ಬರೋಬ್ಬರಿ 850GB ಡೇಟಾದೊಂದಿಗೆ ಸುಮಾರು 425 ದಿನಗಳ ವ್ಯಾಲಿಡಿಟಿ ನೀಡುವ BSNL ಲಭ್ಯ!

Updated on 26-Dec-2024
HIGHLIGHTS

BSNL New Year 2025 ಅಡಿಯಲ್ಲಿ ಹಳೆಯ ಯೋಜನೆಯ ವ್ಯಾಲಿಡಿಟಿಯನ್ನು ಹೆಚ್ಚಿಸಿದೆ.

BSNL New Year 2025 ಪ್ಲಾನ್ ಆಫರ್ ಕೇವಲ 16ನೇ ಜನವರಿ 2025 ವರೆಗೆ ಮಾತ್ರ ಲಭ್ಯವಿರುತ್ತದೆ.

BSNL ಹೊಸ ವರ್ಷದಡಿಯಲ್ಲಿ 2399 ರೂಗಳ ಪ್ಲಾನ್ ಈಗ 425 ದಿನಗಳ ವ್ಯಾಲಿಡಿಟಿ ಮತ್ತು ಪ್ರಯೋಜನ ನೀಡುತ್ತಿದೆ.

BSNL New Year 2025: ಭಾರತ ಸರ್ಕಾರಿ ಸೌಮ್ಯದ ಟೆಲಿಕಾಂ ಕಂಪನಿಯಾಗಿರುವ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಇದೀಗ ಹೊಸ ವರ್ಷಕ್ಕಾಗಿ ಅತ್ಯಂತ ಕಡಿಮ ಬೆಲೆಗೆ ಈಗಾಗಲೇ ಹೆಚ್ಚು ಪ್ರಯೋಜನಗಳನ್ನು ನೀಡುತ್ತಿದ್ದ ₹2399 ರೂಗಳ ರಿಚಾರ್ಜ್ ಯೋಜನೆಯಲ್ಲಿ ಭಾರಿ ಅಪ್ಡೇಟ್ ಮಾಡಿದೆ. ಆಫರ್ ಏನಪ್ಪಾ ಅಂದರೆ ಈ ಬಿಎಸ್‌ಎನ್‌ಎಲ್‌ (BSNL) ಜಬರ್ದಸ್ತ್ ಪ್ಲಾನ್ ಬರೋಬ್ಬರಿ 425 ದಿನಗಳ ವ್ಯಾಲಿಡಿಟಿಯೊಂದಿಗೆ ಒಟ್ಟಾರೆಯಾಗಿ 850GB ಡೇಟಾವನ್ನು ಸುಮಾರು 14 ತಿಂಗಳ ವ್ಯಾಲಿಡಿಟಿಯೊಂದಿಗೆ ನೀಡುತ್ತಿದೆ. ಈ BSNL New Year 2025 ಪ್ಲಾನ್ ಆಫರ್ ಕೇವಲ 16ನೇ ಜನವರಿ 2025 ವರೆಗೆ ಮಾತ್ರ ಲಭ್ಯವಿರುತ್ತದೆ.

ಬಿಎಸ್ಎನ್ಎಲ್ ಹೊಸ ವರ್ಷದ ರಿಚಾರ್ಜ್ ಪ್ಲಾನ್ (BSNL New Year 2025)

ನೀವು ಇತರರಿಗಿಂತ ಹೆಚ್ಚು ಡೇಟಾವನ್ನು ಬಳಸುವವರಲ್ಲಿ ಒಬ್ಬರಾಗಿದ್ದರೆ ನೀವು ಈ BSNL ದೀರ್ಘಾವಧಿಯ ಯೋಜನೆಗಳನ್ನು ತುಂಬಾ ಇಷ್ಟಪಡುತ್ತೀರಿ. ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ BSNL ಪ್ರತಿದಿನ 2GB ಡೇಟಾ ವೋಚರ್ ಇತರ ಕಂಪನಿಗಳಿಗೆ ಹೋಲಿಸಿದರೆ ಅತ್ಯುತ್ತಮ ಯೋಜನೆಯಾಗಿ ಹೊರಬರುತ್ತಿದೆ. ಇದರ ಬೆಲೆ ₹2399 ರೂಗಳಾಗಿದ್ದು ಒಮ್ಮೆ ರಿಚಾರ್ಜ್ ಮಾಡಿಕೊಂಡರೆ ಪದೇ ಪದೇ ಅಥವಾ ಪ್ರತಿ ತಿಂಗಳು ರಿಚಾರ್ಜ್ ಮಾಡುವುದರಿಂದ ದೂರವಿರಬಹುದು.

BSNL New Year 2025- Rs 2399 Recharge Plan

ಬಿಎಸ್ಎನ್ಎಲ್ ನೀಡುತ್ತಿರುವ ಈ ರಿಚಾರ್ಜ್ ಯೋಜನೆಯ ಬೆಲೆ ₹2,399 ರೂಗಳಾಗಿದ್ದು ಇದನ್ನು ಮಾಸಿಕವಾಗಿ ನೋಡುವುದಾದರೆ ತಿಂಗಳಿಗೆ ₹200 ರೂಪಾಯಿಗಳ ಅಂದಾಜು ಖರ್ಚು ಬರುತ್ತದೆ.ಇರೊಂದಿಗೆ ಚಂದಾದಾರರು ದಿನಕ್ಕೆ 2GB ಹೈ-ಸ್ಪೀಡ್ ಡೇಟಾ, ಪ್ರತಿದಿನ 100 ಉಚಿತ SMS ಮತ್ತು ರಾಷ್ಟ್ರವ್ಯಾಪಿ ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ಧ್ವನಿ ಕರೆಗಳನ್ನು ಪಡೆಯುವಿರಿ. ಹೆಚ್ಚುವರಿಯಾಗಿ ಯೋಜನೆಯು ರಾಷ್ಟ್ರವ್ಯಾಪಿ ಉಚಿತ ರೋಮಿಂಗ್ ಅನ್ನು ಒಳಗೊಂಡಿದೆ ಮತ್ತು ಝಿಂಗ್ ಮ್ಯೂಸಿಕ್, ಬಿಎಸ್ಎನ್ಎಲ್ ಟ್ಯೂನ್ಸ್, ಹಾರ್ಡಿ ಗೇಮ್ಸ್, ಚಾಲೆಂಜರ್ ಅರೆನಾ ಗೇಮ್ಸ್ ಮತ್ತು ಗೇಮನ್ ಆಸ್ಟ್ರೋಟೆಲ್ನಂತಹ ಮೌಲ್ಯವರ್ಧಿತ ಸೇವೆಗಳ ಶ್ರೇಣಿಯನ್ನು ನೀಡುತ್ತದೆ.

Also Read: IRCTC Down Today: ಭಾರತೀಯ ರೈಲ್ವೆ ಸೈಟ್ ಸ್ಥಗಿತ! ಟೀಕೆಟ್ ಬುಕ್ ಮಾಡಲು ಪರದಾಡುತ್ತಿರುವ ಪ್ರಯಾಣಿಕರು!

Jio, Airtel ಮತ್ತು Vi ತಲೆ ಕೆಡಿಸಿಕೊಳ್ಳಲು ಕಾರಣ!

ಖಾಸಗಿ ಟೆಲಿಕಾಂ ದೈತ್ಯರಾದ ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಇತ್ತೀಚೆಗೆ ಹಲವಾರು ಯೋಜನೆಗಳ ಬೆಲೆಗಳನ್ನು ಹೆಚ್ಚಿಸಿ ತಮ್ಮ ಬಳಕೆದಾರರನ್ನು ಕಳೆದುಕೊಂಡಿವೆ ಇದರ ವಿರುದ್ಧವಾಗಿ BSNL ಕಡಿಮೆ ಬೆಲೆಗೆ ಹೆಚ್ಚು ಪ್ರಯೋಜನಗಳನ್ನು ನೀಡಿ ಗ್ರಾಹಕರನ್ನು ತನ್ನತ್ತ ಸೆಳೆದುಕೊಂಡಿದೆ. ಇದು ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಬಳಕೆದಾರರ ಮೇಲೆ ಪರಿಣಾಮ ಬೀರುತ್ತದೆ. ಮತ್ತು ಲಕ್ಷಾಂತರ ಚಂದಾದಾರರ ಮೇಲೆ ಪರಿಣಾಮ ಬೀರಬಹುದು. ಈ ಬೆಲೆ ಏರಿಕೆಗಳ ಹೊರತಾಗಿಯೂ ಈ ಕಂಪನಿಗಳು ಮಾಸಿಕ, ತ್ರೈಮಾಸಿಕ ಮತ್ತು ವಾರ್ಷಿಕ ಯೋಜನೆಗಳನ್ನು ಒದಗಿಸುವುದನ್ನು ಮುಂದುವರಿಸುತ್ತವೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :