ಹೆಚ್ಚಿನ ಡೇಟಾ ಬಳಸುವ ಅಭ್ಯಾಸವನ್ನು ಹೊಂದಿರುವ ಬಳಕೆದಾರರಿಗಾಗಿ BSNL ಎರಡು ಅತ್ಯಂತ ಸ್ಫೋಟಕ ಪ್ಲಾನ್ ನೀಡುತ್ತಿದೆ
ಭಾರತದಲ್ಲಿ ಬಹುತೇಕ ಎಲ್ಲಾ ಖಾಸಗಿ ಟೆಲಿಕಾಂ ಕಂಪನಿಗಳು ತಮ್ಮ ಸುಂಕ ಪ್ಲಾನ್ಗಳ ಬೆಲೆಯನ್ನು 2019 ರ ಅಂತ್ಯದ ವೇಳೆಗೆ ಹೆಚ್ಚಿಸಿದ್ದರೂ BSNL ತನ್ನ ಬಳಕೆದಾರರಿಗಾಗಿ ಈ ಕೆಲಸವನ್ನು ಇನ್ನೂ ಮಾಡಿಲ್ಲ ಅಂದರೆ ಬಿಎಸ್‌ಎನ್‌ಎಲ್‌ನಿಂದ ಇದುವರೆಗೆ ಅದರ ಸುಂಕ ಯೋಜನೆಗಳ ಬೆಲೆಯಲ್ಲಿ ಯಾವುದೇ ಹೆಚ್ಚಳ ಕಂಡುಬಂದಿಲ್ಲ. ಆದರೆ ರಿಲಯನ್ಸ್ ಜಿಯೋ, ಏರ್‌ಟೆಲ್, ವೊಡಾಫೋನ್-ಐಡಿಯಾ ತಮ್ಮ ಪ್ರಿಪೇಯ್ಡ್ ಯೋಜನೆಗಳ ಬೆಲೆಯನ್ನು ಹೆಚ್ಚಿಸಿವೆ. ಆದರೆ ಇಲ್ಲಿಯವರೆಗೆ ಯೋಜನೆಗಳನ್ನು BSNL ಮೊದಲಿನಂತೆಯೇ ಅದೇ ದರದಲ್ಲಿ ಒದಗಿಸುತ್ತಿದೆ. ಈ ಪ್ಲಾನ್ಗಳಲ್ಲಿ ನಿಮಗೆ ಪ್ರತಿದಿನ 10GB ಡೇಟಾವನ್ನು ನೀಡಲಾಗುತ್ತಿದೆ. ಈ ಪ್ಲಾನ್ಗಳ ವ್ಯಾಲಿಡಿಟಿ ಕ್ರಮವಾಗಿ 28 ಮತ್ತು 84 ದಿನಗಳಾಗಲಿವೆ.
ಮೊದಲಿದೆ ಈ 96 ರೂಗಳ ಬೆಲೆಯಲ್ಲಿ ಈ ಯೋಜನೆಯನ್ನು ಕಂಪನಿಯು 28 ದಿನಗಳ ಮಾನ್ಯತೆಯೊಂದಿಗೆ ಪ್ರಾರಂಭಿಸಿದೆ. ಇದಲ್ಲದೆ ಈ ಯೋಜನೆಯಲ್ಲಿ ಪ್ರತಿದಿನ 10GB ಡೇಟಾವನ್ನು ನೀಡಲಾಗುತ್ತಿದೆ. ಇದರೊಂದಿಗೆ ಈ ಯೋಜನೆಯಲ್ಲಿ ನೀವು ಒಟ್ಟು 280GB ಡೇಟಾವನ್ನು ಪಡೆಯುತ್ತಿರುವಿರಿ. ಹಾಗೆಯೇ ಈ ಮಶವನ್ನು ಗಮನದಲ್ಲಿಡಿ ಇದು ಕೇವಲ ಡೇಟಾ ಪ್ಲಾನ್ ಆಗಿದ್ದು ಈ ಪ್ಲಾನಲ್ಲಿ ನಿಮಗೆ ಬೇರೆ ಯಾವುದೇ ಪ್ರಯೋಜನ ಸಿಗೋದಿಲ್ಲ ಅಂದರೆ ನಿಮಗೆ ಕರೆ ಮತ್ತು ಎಸ್‌ಎಂಎಸ್ ಸೌಲಭ್ಯ ಸಿಗುತ್ತಿಲ್ಲ.
ಮತ್ತೊಂದು 236 ರೂಗಳ ಬೆಲೆಯಲ್ಲಿ ಈ ಯೋಜನೆಯನ್ನು ಕಂಪನಿಯು 84 ದಿನಗಳ ಮಾನ್ಯತೆಯೊಂದಿಗೆ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಮತ್ತು ಈ ಯೋಜನೆಯಲ್ಲಿ ನಿಮಗೆ 10GB ದೈನಂದಿನ ಡೇಟಾವನ್ನು ನೀಡಲಾಗುತ್ತಿದೆ. ಈ ಯೋಜನೆಯಲ್ಲಿ ನೀವು ಡೇಟಾ ಪ್ರಯೋಜನಗಳನ್ನು ಮಾತ್ರ ಪಡೆಯುತ್ತಿರುವಿರಿ. ಇದಲ್ಲದೆ ಕರೆ ಮತ್ತು ಎಸ್‌ಎಂಎಸ್ ಅಥವಾ ಇತರ ಯಾವುದೇ ಪ್ರಯೋಜನಗಳೂ ಸಹ ಈ ಯೋಜನೆಯಲ್ಲಿ ಲಭ್ಯವಿಲ್ಲ. ಈ ಯೋಜನೆಯಲ್ಲಿ ನೀವು 10Mbps ವೇಗವನ್ನು ಪಡೆಯುತ್ತಿದ್ದೀರಿ ಅಂದರೆ ಈ ಸಂದರ್ಭದಲ್ಲಿ ಕಂಪನಿಯು ರಿಲಯನ್ಸ್ ಜಿಯೋ ಮತ್ತು ಏರ್ಟೆಲ್ ಅನ್ನು ಹಿಂದಕ್ಕೆ ಇಟ್ಟಿದೆ.
ಇತ್ತೀಚೆಗೆ ನಮಗೆ ತಿಳಿದಿರುವಲ್ಲಿ BSNL ತನ್ನ 4G ನೆಟ್ವರ್ಕ್ ಅನ್ನು ದೊಡ್ಡ ರೀತಿಯಲ್ಲಿ ವಿಸ್ತರಿಸಿದೆ. ಆದರೆ ಇಲ್ಲಿಯವರೆಗೆ ಅಂದ್ರೆ ಸದ್ಯಕ್ಕೆ ಈ ಯೋಜನೆಗಳನ್ನು ಕೇರಳ, ತೆಲಂಗಾಣ, ಆಂಧ್ರಪ್ರದೇಶ, ಕೋಲ್ಕತಾ, ಮಹಾರಾಷ್ಟ್ರ, ಕರ್ನಾಟಕ, ಗುಜರಾತ್, ಚೆನ್ನೈ, ತಮಿಳುನಾಡು, ಮತ್ತು ಮಧ್ಯಪ್ರದೇಶ ವಲಯಗಳಲ್ಲಿ ಮಾತ್ರ ನೀಡಲಾಗುತ್ತಿದೆ. ಅತಿ ಶೀಘ್ರದಲ್ಲೇ ದೇಶದಾದ್ಯಂತ ಬರುವ ನಿರೀಕ್ಷೆಯಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile