ಸರ್ಕಾರಿ ಸೌಮ್ಯದ ಟೆಲಿಕಾಂ ಕಂಪನಿಯಾಗಿರುವ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಇಂದು ಬಹುದೊಡ್ಡ ಘೋಷಣೆಯನ್ನು ಮಾಡಿದೆ. ಮುಂದಿನ ವರ್ಷದ ಅಂದ್ರೆ ಜನವರಿ 2025 ಸಂಕ್ರಾಂತಿಯಷ್ಟರಲ್ಲಿ ಭಾರತದಲ್ಲಿ BSNL 5G ಸೇವೆಗಳನ್ನು ಆರಂಭಿಸುವುದಾಗಿ ತಮ್ಮ @BSNLCorporate ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. BSNL ಬಳಕೆದಾರರಿಗೆ ಹೆಚ್ಚಿನ ವೇಗ ಮತ್ತು ಯೋಜನೆಗಳಲ್ಲಿ ನಿರೀಕ್ಷಿತ ಪ್ರಗತಿಯೊಂದಿಗೆ ಬರುವುದಾಗಿ ಅಪ್ಡೇಟ್ ಮಾಡಲಾಗಿದೆ.
ಅಲ್ಲದೆ ಕಂಪನಿ ಈಗಾಗಲೇ ತಿಳಿದಿರುವಂತೆ ತಮ್ಮ ನೆಟ್ವರ್ಕ್ ಅನ್ನು ಸುಧಾರಿಸಲು ಈಗಾಗಲೇ ಟಾಟಾ ಕಂಪನಿಯೊಂದಿಗೆ ಕೈ ಜೋಡಿಸಿ ಕೆಲಸ ಮಾಡುತ್ತಿದ್ದು ಈಗ ನೆಟ್ವರ್ಕ್ ತಲೆನೋವು ಸಾಕಷ್ಟು ಕಡಿಮೆಯಾಗಿದೆ. ಇದೆ ರೀತಿಯಲ್ಲಿ ಸುಧಾರಣೆಯೊಂದಿಗೆ ನಡೆಯುತ್ತಿದ್ದರೆ 5G ನೆಟ್ವರ್ಕ್ ವಲಯದಲ್ಲಿ Jio ಮತ್ತು Airtel ಕಂಪನಿಗಳೊಂದಿಗೆ ಸ್ಪರ್ಧಾತ್ಮಕ ಬೆಲೆಯನ್ನು ನಿರೀಕ್ಷಿಸಬಹುದು.
Also Read: Vivo Y300 Pro ಸದ್ದಿಲ್ಲದೇ 6500mAh ಬ್ಯಾಟರಿ ಮತ್ತು snapdragon ಚಿಪ್‌ನೊಂದಿಗೆ ಬಿಡುಗಡೆಯಾಗಿದೆ
ಈಗಾಗಲೇ ಮೇಲೆ ತಿಳಿಸಿರುವಂತೆ ಇದರ ಬಗ್ಗೆ ಮಾಹಿತಿಯನ್ನು ನೀಡಿರುವ ಕಂಪನಿಯ ಅಧಿಕೃತವಾದ ಟ್ವಿಟ್ಟರ್ ಮಾಹಿತಿಯನ್ನು ಸಹ ಈ ಕೆಳಗೆ ಕಾಣಬಹುದು. ದಿ ಹಿಂದೂ ವರದಿಯ ಪ್ರಕಾರ ಬಿಎಸ್‌ಎನ್‌ಎಲ್‌ನ ಆಂಧ್ರಪ್ರದೇಶದ ಪ್ರಧಾನ ಜನರಲ್ ಮ್ಯಾನೇಜರ್ ಎಲ್. ಶ್ರೀನು (L. Srinu) ಇತ್ತೀಚಿನ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.
ಬಿಎಸ್‌ಎನ್‌ಎಲ್ ತನ್ನ BSNL 5G ಸೇವೆಗಳನ್ನು 2025 ರಲ್ಲಿ ಸಂಕ್ರಾಂತಿಯ ವೇಳೆಗೆ ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಅದನ್ನು ದೆಹಲಿಯ ನೆಹರು ಪ್ಲೇಸ್, ಚಾಣಕ್ಯಪುರಿ ಮತ್ತು ಮಿಂಟೋ ರೋಡ್ಗಳಲ್ಲಿ ಲೈವ್ ಪರೀಕ್ಷೆ ನಡೆಯುತ್ತಿದೆ ಎಂದು ಟ್ವಿಟ್ಟರ್ ಮೂಲಕ ತಿಳಿಸಲಾಗಿದೆ.
BSNL ಈಗಾಗಲೇ ಟಾಟಾ ಕಂಪನಿಯ TCS ಜೊತೆಗೆ ಸೇರಿ ಉತ್ತಮ 4G ತಂತ್ರಜ್ಞಾನವನ್ನು ಪೂರೈಸುತ್ತಿದೆ. ಇದರಡಿಯಲ್ಲಿ ಕಂಪನಿ 5G ಟೆಕ್ನಾಲಜಿಯೊಂದಿಗೆ ಅಪ್‌ಗ್ರೇಡ್ ಮಾಡಲು ವಿನ್ಯಾಸಗೊಳಿಸಲಾಗಿದೆ. ಇದರರ್ಥ 5G ಪರಿವರ್ತನೆ ಮಾಡಲು BSNL ಗಮನಾರ್ಹವಾದ ಹೆಚ್ಚುವರಿ ಹೂಡಿಕೆಗಳನ್ನು ಮಾಡುವ ಅಗತ್ಯವಿರುವುದಿಲ್ಲ. BSNL ಈಗಾಗಲೇ ತನ್ನ 4G ಸೇವೆಗಳನ್ನು ಪ್ರಾರಂಭಿಸಿರುವ ಪ್ರದೇಶಗಳಲ್ಲಿ 5G ರೋಲ್‌ಔಟ್ ಪ್ರಾರಂಭವಾಗುತ್ತದೆ. ಇದು ಸುಗಮ ಮತ್ತು ಪರಿಣಾಮಕಾರಿ ಅಪ್‌ಗ್ರೇಡ್ ಪ್ರಕ್ರಿಯೆಯನ್ನು ಖಾತ್ರಿಪಡಿಸುತ್ತದೆ. ಅಲ್ಲದೆ ಪ್ರಸ್ತುತ ಕಂಪನಿಯು ಟವರ್‌ಗಳು ಮತ್ತು ಇತರ ಅಗತ್ಯ ಉಪಕರಣಗಳನ್ನು ಒಳಗೊಂಡಂತೆ ಅದರ ಮೂಲಸೌಕರ್ಯವನ್ನು ನವೀಕರಿಸುವತ್ತ ಗಮನಹರಿಸಿದೆ ಸಾಧ್ಯವಾದಷ್ಟು ಬೇಗ 5G ರೋಲ್‌ಔಟ್ ಅನ್ನು ಸುಲಭಗೊಳಿಸುತ್ತದೆ.
ಪ್ರಸ್ತುತ ಪ್ರಮುಖ ಟೆಲಿಕಾಂ ಆಟಗಾರರಾದ Jio, Airtel ಮತ್ತು Vi ತಮ್ಮ ರೀಚಾರ್ಜ್ ಪ್ಲಾನ್ ಬೆಲೆಗಳನ್ನು ಹೆಚ್ಚಿಸುವುದರೊಂದಿಗೆ ಹೆಚ್ಚಿನ ಮೊಬೈಲ್ ಬಳಕೆದಾರರು ಹೆಚ್ಚು ಕೈಗೆಟುಕುವ ಆಯ್ಕೆಗಳಿಗಾಗಿ BSNL ಸೇರಲು ಓಡೋಡಿ ಬರುತ್ತಿದ್ದರೆ. BSNL ಟೆಲಿಕಾಂ ಕಂಪನಿಯು ಬೆಳೆಯುತ್ತಿರುವ ಬೇಡಿಕೆಯನ್ನು ಪೂರೈಸಲು ಮತ್ತು ಬಳಕೆದಾರರ ಅನುಕೂಲವನ್ನು ಹೆಚ್ಚಿಸಲು ತನ್ನ 4G ನೆಟ್‌ವರ್ಕ್ ವ್ಯಾಪ್ತಿಯನ್ನು ವೇಗವಾಗಿ ವಿಸ್ತರಿಸುತ್ತಿದೆ. ಈಗ ದೇಶದಲ್ಲಿ 5G ಸೇವೆಯನ್ನು ಆಕರ್ಷಣೆಯೊಂದಿಗೆ ಇನ್ನಷ್ಟು ಹೆಚ್ಚಿಸಲು ಸಿದ್ಧವಾಗಿದೆ. ಈ 5G ಮಾರುಕಟ್ಟೆಗೆ BSNL ಪ್ರವೇಶವು ಕಂಪನಿ ಮತ್ತು ಅದರ ಲಕ್ಷಾಂತರ ಬಳಕೆದಾರರಿಗೆ ಮಹತ್ವದ ಹೆಜ್ಜೆಯನ್ನು ಸೂಚಿಸುತ್ತದೆ.