BSNL cheapest prepaid plan: ದೇಶದಲ್ಲಿ ನಿಮಗೆ ಈಗಾಗಲೇ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಟೆಲಿಕಾಂ ಕಂಪನಿಗಳು ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ತಮ್ಮ ಪ್ರಿಪೇಯ್ಡ್ ಯೋಜನೆಗಳ ಬೆಲೆಗಳನ್ನು ಹೆಚ್ಚಿಸುತ್ತಿವೆ ಇದರಿಂದಾಗಿ ಪ್ರಿಪೇಯ್ಡ್ ಯೋಜನೆಗಳು ದುಬಾರಿಯಾಗುತ್ತಿವೆ. ಎಲ್ಲಾ ಟೆಲಿಕಾಂ ಆಪರೇಟರ್‌ಗಳು ಪ್ರಿಪೇಯ್ಡ್ (Prepaid) ಪ್ಲಾನ್ (Plan)ಗಳನ್ನು ಶೇಕಡಾ 25% ರಷ್ಟು ಹೆಚ್ಚಿಸಿದ್ದಾರೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಅನೇಕ ವಿಶೇಷ ಸುಂಕದ ವೋಚರ್ಗಳನ್ನು ಕೈಗೆಟುಕುವ ಬೆಲೆಯಲ್ಲಿ ತಂದಿದೆ.
ಅಂದ್ರೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಭಾರತದಲ್ಲಿನ ಏಕೈಕ ಟೆಲಿಕಾಂ ತನ್ನ ಯಾವುದೇ ಬೆಲೆಗಳನ್ನು ಸದ್ಯಕ್ಕೆ ಹೆಚ್ಚಿಸಿಲ್ಲ. ಈ ಸುಂಕಗಳ ಬೆಲೆಯ ಕುರಿತು ಮಾತನಾಡುಡುವುದಾದರೆ ಜನಪ್ರಿಯವಾಗಿರುವ 250 ಕ್ಕಿಂತ ಕಡಿಮೆ ಮತ್ತು ಗ್ರಾಹಕರಿಗೆ 90 ದಿನಗಳವರೆಗೆ ಮಾನ್ಯತೆಯನ್ನು ನೀಡುತ್ತವೆ. ಆದರೆ ಇಂದು ಈ ಲೇಖನದಲ್ಲಿ BSNL ನ ಈ ಅತಿ ಕಡಿಮೆ ಬೆಲೆಯ ಯೋಜನೆಗಳು ರೂ 75 ರಿಂದ ರೂ 200 ರೂಗಳೊಳಗೆ ಬರುವ ಯೋಜನೆಗಳ ಬಗ್ಗೆ ಒಮ್ಮೆ ನೋಡ್ಕೊಳ್ಳೋಣ.
ಈ ಯೋಜನೆಯಡಿಯಲ್ಲಿ ಬಳಕೆದಾರರಿಗೆ 50 ದಿನಗಳ ಸಿಂಧುತ್ವ ಪಡೆಯಬಹುದಾಗಿದೆ. ಜೊತೆಗೆ 100 ನಿಮಿಷಗಳ ಧ್ವನಿ ಕರೆ ಸೌಲಭ್ಯವು ಲಭ್ಯವಿದೆ. ಅಷ್ಟೇ ಅಲ್ಲ ಬಳಕೆದಾರರು ಇದರ ಅಡಿಯಲ್ಲಿ 2GB ಡೇಟಾ ಮತ್ತು ಉಚಿತ ರಿಂ ಗ್ಳಟೋನ್ಗಳ ಪ್ರಯೋಜನವನ್ನು ಸಹ ಪಡೆಯಬಹುದು. ಮಾತ್ರವಲ್ಲದೆ ಈ ಯೋಜನೆಗಳ ಅಡಿಯಲ್ಲಿ ಬಳಕೆದಾರರು ಧ್ವನಿ ಕರೆ ಡೇಟಾ ಮತ್ತು ಸಾಕಷ್ಟು ಮಾನ್ಯತೆಯ ಲಾಭವನ್ನು ಪಡೆಯಬಹುದು.
BSNL ನ ರೂ 94 ಯೋಜನೆಯು ಈಗ ಊಟಮಾ ಆಯ್ಕೆಯಾಗಿದ್ದು BSNL ನ 94 ರೂವಿನ STV ಯೋಜನೆಯಲ್ಲಿ ಬಳಕೆದಾರರಿಗೆ ಅನೇಕ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಜೊತೆಗೆ 75 ದಿನಗಳ ಸಿಂಧುತ್ವ 3 GB ಡೇಟಾ ಲಭ್ಯವಿರುತ್ತದೆ. ಅಷ್ಟೇ ಅಲ್ಲದೆ ಬಳಕೆದಾರರು ಯಾವುದೇ ನೆಟ್ವರ್ಕ್ಗೆ ಕರೆ ಮಾಡಿದರೆ ಮತ್ತು ದೆಹಲಿ ಮತ್ತು ಮುಂಬೈನಲ್ಲಿ ರಾಷ್ಟ್ರೀಯ ರೋಮಿಂಗ್ ಮಾಡಿದರೆ ಅವರಿಗೆ 100 ಉಚಿತ ದೇಶೀಯ ನಿಮಿಷಗಳನ್ನು ನೀಡಲಾಗುತ್ತದೆ. ಉಚಿತ ಕರೆಗಳಿಗೆ ನಿಮಿಷಕ್ಕೆ 30 ಪೈಸೆ ದರದಲ್ಲಿ ವಿಧಿಸಲಾಗುತ್ತದೆ.
BSNL ನ 198 ರೂಗಳ STV ಯೋಜನೆಯು ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. ಈ ಯೋಜನೆಯ ಮಾನ್ಯತೆ 50 ದಿನಗಳು. ಈ ಯೋಜನೆಯಡಿಯಲ್ಲಿ ಪ್ರತಿದಿನ 2GB ಡೇಟಾವನ್ನು ನೀಡಲಾಗುತ್ತದೆ. 298 ರೂ.ವಿನ ಯೋಜನೆ: BSNL ಕಂಪನಿಯು 56 ದಿನಗಳ ವ್ಯಾಲಿಡಿಟಿಯೊಂದಿಗೆ ಟ್ಯಾರಿಫ್ ವೋಚರ್ ನೀಡುತ್ತದೆ. ಜೊತೆಗೆ ಪ್ರತಿದಿನ 1GB ಡೇಟಾ ಮತ್ತು 100 SMS ಸೌಲಭ್ಯವನ್ನು ಪಡೆಯಬಹುದು.