ಭಾರತೀಯ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್ (BSNL Recharge Plan) ಇದೀಗ ಅತ್ಯಂತ ಕಡಿಮ ಬೆಲೆಯ ವಾರ್ಷಿಕ ಮೊಬೈಲ್ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. BSNL ಅದ್ದೂರಿಯ ಪ್ಲಾನ್ ಮೂಲಕ ಪ್ರತಿಸ್ಪರ್ಧಿಗಳಾದ Jio, Airtel ಮತ್ತು Vi ಬಳಕೆದಾರರಿಗೆ ಚುಡಾಯಿಸಿದೆ. ಏಕೆಂದರೆ ಬಿಎಸ್‌ಎನ್‌ಎಲ್‌ನಿಂದ ಜಬರ್ದಸ್ತ್ ಪ್ಲಾನ್ 730GB ಡೇಟಾವನ್ನು 365 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡುತ್ತಿದೆ.
ನೀವು ಇತರರಿಗಿಂತ ಹೆಚ್ಚು ಡೇಟಾವನ್ನು ಬಳಸುವವರಲ್ಲಿ ಒಬ್ಬರಾಗಿದ್ದರೆ ನೀವು ಈ BSNL ದೀರ್ಘಾವಧಿಯ ಯೋಜನೆಗಳನ್ನು ತುಂಬಾ ಇಷ್ಟಪಡುತ್ತೀರಿ. ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ BSNL 2GB ದೈನಂದಿನ ಡೇಟಾ ವೋಚರ್ ಇತರ ಕಂಪನಿಗಳಿಗೆ ಹೋಲಿಸಿದರೆ ಅತ್ಯುತ್ತಮ ಯೋಜನೆಯಾಗಿ ಹೊರಬರುತ್ತಿದೆ. ಇದರ ಬೆಲೆ 1515 ರೂಗಳಾಗಿದ್ದು ಒಮ್ಮೆ ರಿಚಾರ್ಜ್ ಮಾಡಿ ಪದೇ ಪದೇ ರಿಚಾರ್ಜ್ ಮಾಡುವುದರಿಂದ ದೂರವಿರಬಹುದು. ಹಾಗಾದ್ರೆ ಯಾವ ಪ್ಲಾನ್ ಎಂಬುದರ ಪೂರ್ತಿ ಮಾಹಿತಿ ಇಲ್ಲಿದೆ.
ಈ ಲೇಖನದಲ್ಲಿ ನಾವು BSNL ರೂ.1515 ರೀಚಾರ್ಜ್ ಯೋಜನೆಯ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದು ಬಿಎಸ್ಎನ್ಎಲ್ (BSNL Recharge Plan) ಗ್ರಾಹಕರು ನೀವಾಗಿದ್ದರೆ ಈ ಯೋಜನೆಯನ್ನು ಒಮ್ಮೆ ನೋಡಲೇಬೇಕು ಏಕೆಂದರೆ ಇದರಲ್ಲಿ ನಿಮಗೆ ಅತ್ಯುತ್ತಮವಾದ ಪ್ರಯೋಜನಗಳೊಂದಿಗೆ ಉತ್ತಮ ಅನುಕೂಲಗಳನ್ನು ಕಂಪನಿ ನೀಡುತ್ತಿದೆ. ಈ ವಾರ್ಷಿಕ ಯೋಜನೆ ಅಂದ್ರೆ ಹೆಸರೇ ಸೂಚಿಸುವಂತೆ ನಿಮಗೆ ಇದರಲ್ಲಿ 365 ದಿನಗಳ ಅಂದ್ರೆ ಪೂರ್ತಿ ಒಂದು ವರ್ಷದ ವ್ಯಾಲಿಡಿಟಿಯೊಂದಿಗೆ ಅನ್ಲಿಮಿಟೆಡ್ ವಾಯ್ಸ್ ಕರೆಗಳನ್ನು ಸಹ ಪಡೆಯುವಿರಿ.
ಈ ಯೋಜನೆಯ ವಿಶೇಷತೆ ಅಂದ್ರೆ ಇದರಲ್ಲಿ ನಿಮಗೆ ಪ್ರತಿದಿನ 2GB ಹೈ ಸ್ಪೀಡ್ ಇಂಟರ್ನೆಟ್ ಮೊಬೈಲ್ ಡೇಟಾ ಸಹ ಲಭ್ಯವಿದ್ದು ಪೂರ್ತಿ ವಾಲಿಡಿಟಿಗೆ ಒಟ್ಟಾರೆಯಾಗಿ 730GB ಡೇಟಾವನ್ನು ಪಡೆಯುವಿರಿ. ಅಲ್ಲದೆ ಇದರಲ್ಲಿ ನಿಮಗೆ ಸಿಗುವ ಪ್ರತಿದಿನದ 2GB ಡೇಟಾ ಒಂದು ವೇಳೆ ಖಾಲಿಯಾದರೆ ಚಿಂತಿಸುವ ಅಗತ್ಯವಿಲ್ಲ ಏಕೆಂದರೆ ನಿಮ್ಮ ಅನ್ಲಿಮಿಟೆಡ್ ಲಭ್ಯವಿರುತ್ತದೆ ಆದರೆ ಅದರ ಸ್ಪೀಡ್ ಮಾತ್ರ 40Kbps ಸಿಗುತ್ತದೆ. ಈ BSNL ಯೋಜನೆಯು ದೀರ್ಘಕಾಲದ ವ್ಯಾಲಿಡಿಟಿಯನ್ನು ನೋಡುವವರಿಗೆ ತುಂಬಾ ಉಪಯುಕ್ತವಾದ ಯೋಜನೆಯಾಗಿದೆ. ಕೊನೆಯದಾಗಿ ಈ ಪ್ಲಾನ್ ಕುರಿತು ನಿಮಗೆ ಮತ್ತಷ್ಟು ಮಾಹಿತಿ ಬೇಕಿದ್ದರೆ BSNL ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಪಡೆಯಬಹುದು.