ಬಿಎಸ್‍ಎನ್‍ಎಲ್‍ನ ದೇಶದ ಸರ್ಕಾರಿ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಅತಿ ಕಡಿಮೆ ಬೆಲೆಯ ಮತ್ತು ದೀರ್ಘಾವಧಿಯ ಯೋಜನೆಗಳಿಗೆ ಹೆಸರುವಾಸಿಯಾಗಿದೆ. ನಿಮಗೊತ್ತಾ ಟೆಲಿಕಾಂ ಕಂಪನಿಗಳಲ್ಲಿ ಮಾಸಿಕ ರಿಚಾರ್ಜ್ ಮುಕ್ತಾಯವಾದರೆ ಒಳಬರುವ ಕರೆಗಳು ಬಂದ್ ಆಗುತ್ತವೆ. ಆದರೆ BSNL ಮಾತ್ರ ಅಂತಹ ತಲೆನೋವಿನಿಂದ ತನ್ನ ಬಳಕೆದಾರರನ್ನು ದುರವಿಡುತ್ತದೆ. BSNL ಪ್ಲಾನ್‌ಗಳಲ್ಲಿ ದೀರ್ಘ ವ್ಯಾಲಿಡಿಟಿಯನ್ನು ಹುಡುಕುತ್ತಿರುವ 90 ದಿನಗಳ ವ್ಯಾಲಿಡಿಟಿಯನ್ನು ನೀಡುವ 450 ರೂ.ಗಿಂತ ಕಡಿಮೆಯಿರುವ ಇದೇ ಯೋಜನೆಯನ್ನು ಆಯ್ಕೆ ಮಾಡುವುದು ಉತ್ತಮ.
Also Read: ವಿರಾಟ್ ಕೊಹ್ಲಿ ಸೇರಿ ಹಲವಾರು ಸೆಲೆಬ್ರಟಿಗಳು ಬಳಸುವ ಈ WHOOP ಫಿಟ್‌ನೆಸ್ ಬ್ಯಾಂಡ್‌ನ ವಿಶೇಷತೆಗಳೇನು?
ನೀವು ಬಿಎಸ್‍ಎನ್‍ಎಲ್ ಬಳಕೆದಾರರಿಗಿದ್ದರೆ ಪ್ರಿಪೇಯ್ಡ್ ರಿಚಾರ್ಜ್ ವಿಭಾಗದಲ್ಲಿ ಕೈಗೆಟಕುವ ಬೆಲೆಗೆ ಉತ್ತಮ ಪ್ಲಾನ್ ಬೇಕಿದ್ದರೆ ಈ ರೂ.439 ಯೋಜನೆಯು 90 ದಿನಗಳ ಅಂದರೆ 3 ತಿಂಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಡೇಟಾಕ್ಕಿಂತ ಹೆಚ್ಚಿನ ಕರೆಗಳ ಅಗತ್ಯವಿರುವ ಬಳಕೆದಾರರಿಗೆ ಇದು ಉಪಯುಕ್ತವಾಗಿರುತ್ತದೆ. BSNL ನ 439 ರೂ ಪ್ಲಾನ್ ಕರೆ ಮಾಡುವುದರ ಮೇಲೆ ಅವಲಂಬಿತವಾಗಿದೆ. ಇದರಲ್ಲಿ 300 SMS ಲಭ್ಯವಿದೆ. BSNL ನಿಂದ ರೂ 439 ಯೋಜನೆಯು ಮುಖ್ಯವಾಗಿ ವಾಯ್ಸ್ ಕರೆ ಮಾಡುವ ಯೋಜನೆಯನ್ನು ಬಯಸುವ ವ್ಯಕ್ತಿಗಳಿಗೆ ಆಕರ್ಷಕ ಆಯ್ಕೆಯಾಗಿದೆ.
ಬಿಎಸ್‍ಎನ್‍ಎಲ್‍ನ ಈ ಯೋಜನೆಯ ವಿಶೇಷತೆಯೆಂದರೆ ಅದರ ವ್ಯಾಲಿಡಿಟಿ 90 ದಿನಗಳು. ಇದು ಮಾರುಕಟ್ಟೆಯಲ್ಲಿ ಲಭ್ಯವಿರುವ ಯೋಜನೆಗಳಿಂದ ಭಿನ್ನವಾಗಿದೆ. ಇಂದಿನ ಸಮಯದಲ್ಲಿ ಹೆಚ್ಚಿನ ಪ್ರಿಪೇಯ್ಡ್ ಯೋಜನೆಗಳು ಡೇಟಾದ ಮೇಲೆ ಕೇಂದ್ರೀಕರಿಸುತ್ತವೆ ಆದರೆ ಅವುಗಳು ಹೆಚ್ಚಿನ ಕರೆ ಪ್ರಯೋಜನಗಳನ್ನು ನೀಡುತ್ತವೆ. ಈ ಯೋಜನೆಯ 1 ತಿಂಗಳ ವೆಚ್ಚದ ಬಗ್ಗೆ ನಾವು ಮಾತನಾಡಿದರೆ ಅದು ಕೇವಲ 146 ರೂಗಳಾಗುತ್ತವೆ. ಈ ಯೋಜನೆಯ ಒಂದು ದಿನದ ವೆಚ್ಚ ಸುಮಾರು 5 ರೂಗಳ ಖರ್ಚು ಮಾಡಿ ಇದರ ಲಾಭವನ್ನು ಪಡೆಯಬಹುದು.
ಬಿಎಸ್‍ಎನ್‍ಎಲ್‍ನ ಮತ್ತೊಂದು ಪ್ರಿಪೇಯ್ಡ್ ಪ್ಲಾನ್ ನೋಡುವುದುದಾದರೆ ಇದು 599 ರೂಗಳ ಬೆಸ್ಟ್ ಪ್ಲಾನ್ 84 ದಿನಗಳ ಮಾನ್ಯತೆಯನ್ನು ಹೊಂದಿದೆ. ಅಂದರೆ ಈ BSNL ಯೋಜನೆಯಲ್ಲಿ ಒಟ್ಟು ಎರಡೂವರೆ ತಿಂಗಳ ಮಾನ್ಯತೆ ಲಭ್ಯವಿದೆ. ನೀವು ದೀರ್ಘ ವ್ಯಾಲಿಡಿಟಿ ಹೊಂದಿರುವ ಯೋಜನೆಯನ್ನು ಹುಡುಕುತ್ತಿದ್ದರೆ ಈ ಯೋಜನೆಯು ನಿಮಗೆ ಉತ್ತಮವಾಗಿದೆ. BSNL ನ ಈ ಯೋಜನೆಯಲ್ಲಿ 2GB ಡೇಟಾದ ಪ್ರಯೋಜನವು ಲಭ್ಯವಿದೆ. ಈ ಯೋಜನೆಯಲ್ಲಿ 84 ದಿನಗಳವರೆಗೆ 252GB ಡೇಟಾ ಲಭ್ಯವಿರುತ್ತದೆ. ನೀವು ಪ್ರತಿದಿನ 100 ಉಚಿತ SMS ಅನ್ನು ಸಹ ಪಡೆಯುತ್ತೀರಿ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ