ಭಾರತದಲ್ಲಿ ಸರ್ಕಾರಿ ಸೌಮ್ಯದ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ಬಿಎಸ್ಎನ್ಎಲ್ (BSNL) ಬೇರೆ ಟೆಲಿಕಾಂ ಕಂಪನಿಗಳ ಹೋಲಿಕೆಯಲ್ಲಿ ಅತಿ ಕಡಿಮೆ ಬಳಕೆದಾರರನ್ನು ಹೊಂದಿದ್ದರೂ ಸಹ ತನ್ನ ವಿಶೇಷ ಯೋಜನೆ ಮತ್ತು ಪ್ರಯೋಜನಗಳ ವಿಷಯದಲ್ಲಿ ಎಲ್ಲಕ್ಕಿಂತ ಮುಂಚೂಣಿಯಲ್ಲಿದೆ. ನೀವು ಪ್ರತಿ ತಿಂಗಳ ರಿಚಾರ್ಜ್ ಮಾಡುವ ತಲೆನೋವಿನ ದೂರವಾಗಲು ಬಯಸುತ್ತಿದ್ದರೆ ಈಗ BSNL ನಿಮಗಾಗಿ ಅತ್ಯುತ್ತಮವಾದ 2399 ರೂಗಳ ವಾರ್ಷಿಕ ಯೋಜನೆಯನ್ನು ನೀಡುತ್ತಿದೆ. ಇದರ ಮಾನ್ಯತೆ ಒಂದು ವರ್ಷಕ್ಕಿಂತ ಅಧಿಕ ಅಂದ್ರೆ ಬರೋಬ್ಬರಿ 395 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಇದರೊಂದಿಗೆ ನಿಮಗೆ ಈ ಪ್ಲಾನ್ ನಿಮಗೆ ಪ್ರತಿದಿನ 2GB ಡೇಟಾ ಮತ್ತು ಉಚಿತ ಅನ್ಲಿಮಿಟೆಡ್ ವಾಯ್ಸ್ ಕರೆಗಳನ್ನು ಸಹ ನೀಡುತ್ತಿದೆ. ಇದರ ಬೆಲೆ ಮತ್ತು ಇದರ ಮತ್ತಷ್ಟು ವಿಶೇಷತೆಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.
Also Read: 32MP ಸೆಲ್ಫಿ ಕ್ಯಾಮೆರಾದೊಂದಿಗೆ Realme GT 6 ಭಾರತದಲ್ಲಿ ಬಿಡುಗಡೆಗೆ ಡೇಟ್ ಫಿಕ್ಸ್ ಆಗಿದೆ
ಈ ಜನಪ್ರಿಯ ವಾರ್ಷಿಕ ಯೋಜನೆಯಲ್ಲಿ ನಿಮಗೆ ಅಗತ್ಯಕ್ಕಿಂತ ಅಧಿಕವಾಗಿ ಉತ್ತಮ ಪ್ರಯೋಜನಗಳನ್ನು ಕಂಪನಿ ನೀಡುತ್ತಿದೆ. ಇದರಲ್ಲಿ ನಿಮಗೆ ದಿನಕ್ಕೆ ಎಷ್ಟು ಖರ್ಚು ಆಗುತ್ತದೆಂದು ನೋಡುವುದಾದರೆ ಕೇವಲ 6 ರೂಗಳಲ್ಲಿ ನಿಮಗೆ 2GB ಡೇಟಾ ಮತ್ತು ಉಚಿತ ಅನ್ಲಿಮಿಟೆಡ್ ವಾಯ್ಸ್ ಕರೆಗಳನ್ನು ಬಳಸುವ ಅವಕಾಶವನ್ನು BSNL ಕಂಪನಿ ನೀಡುತ್ತಿದೆ. ನಾವು 2399 ರೂಗಳ ವಾರ್ಷಿಕ ಯೋಜನೆಯ ಬಗ್ಗೆ ಈ ಲೇಖನದಲ್ಲಿ ಮಾತನಾಡುತ್ತಿದ್ದು ಇದರಲ್ಲಿ ಅತಿ ಕಡಿಮೆ ದಿನದ ಖರ್ಚಿನಲ್ಲಿ ವರ್ಷಕ್ಕಿಂತ ಅಧಿಕ ಅನುಕೂಲ ಮತ್ತು ಪ್ರಯೋಜನಗಳನ್ನು ಬಳಸಬಹುದು.
ವಾಸ್ತವವಾಗಿ ನಾವು 2399 ರೂಗಳ ಈ BSNL ಪ್ರಿಪೇಯ್ಡ್ ಯೋಜನೆಯನ್ನು ಕುರಿತು ಮಾತನಾಡುತ್ತಿದ್ದೇವೆ. ಈ ಯೋಜನೆಯಲ್ಲಿ ಗ್ರಾಹಕರು 395 ದಿನಗಳ ಪೂರ್ಣ ವ್ಯಾಲಿಡಿಟಿಯನ್ನು ಪಡೆಯುತ್ತಾರೆ. ನೀವು ಇದರಲ್ಲಿನ ಬೆಲೆ ಮತ್ತು ವ್ಯಾಲಿಡಿಟಿಯನ್ನು ನೋಡಿದರೆ ಯೋಜನೆಯ ದೈನಂದಿನ ವೆಚ್ಚ 6.07 ರೂಗಳಿಗೆ ನಿಗದಿತ ಮಾನ್ಯತೆಯ ಹೊರತಾಗಿ ಯೋಜನೆಯು ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ಕರೆಗಳನ್ನು ಸಹ ನೀಡುತ್ತದೆ. ಈ ಯೋಜನೆಯಲ್ಲಿ ಗ್ರಾಹಕರು 2GB ಸ್ಥಳೀಯ ಡೇಟಾವನ್ನು ಪಡೆಯುತ್ತಾರೆ ಅಂದರೆ ಸಂಪೂರ್ಣ ಮಾನ್ಯತೆಯ ಅವಧಿಯಲ್ಲಿ ಒಟ್ಟಾರೆಯಾಗಿ 790GB ಡೇಟಾವನ್ನು ಪಡೆಯುತ್ತಾರೆ.
ಇದರಲ್ಲಿನ ಡೇಟಾ ಮಿತಿ ಮುಗಿದ ನಂತರವೂ ನೀವು 40kbps ವೇಗದಲ್ಲಿ ಅನ್ಲಿಮಿಟೆಡ್ ಇಂಟರ್ನೆಟ್ ಅನ್ನು ಬಳಸುವುದನ್ನು ಮುಂದುವರಿಸಬಹುದು. ಪ್ರಸ್ತುತ ಈ ಯೋಜನೆಯು ಕರ್ನಾಟಕ ಸೇರಿ ದೇಶದ ಆಯ್ದ ರಾಜ್ಯಗಳಲ್ಲಿ ಮಾತ್ರ ಲಭ್ಯವಿದೆ. ನೀವು ಸಹ ಈ ಪ್ರದೇಶದಲ್ಲಿ ವಾಸಿಸುತ್ತಿದ್ದರೆ ನೀವು ಈ ಯೋಜನೆಯನ್ನು ಪ್ರಯತ್ನಿಸಬಹುದು. ಆಸಕ್ತ ಬಳಕೆದಾರರು BSNL ಖಾತೆಯಲ್ಲಿ ಇದನ್ನು ಪರಿಶೀಲಿಸಿ ಈ 2399 ರೂಗಳ ರಿಚಾರ್ಜ್ ಅನ್ನು ಪಡೆಯಬಹುದು. ಇಷ್ಟೇ ಅಲ್ಲ ಪ್ಲಾನ್‌ನಲ್ಲಿ ಪ್ರತಿದಿನ 100 SMS ಕೂಡ ಲಭ್ಯವಿದೆ. ಇದರ ಹೊರತಾಗಿ ಯೋಜನೆಯು ಉಚಿತ PRBT (ವೈಯಕ್ತಿಕ ರಿಂಗ್‌ಟೋನ್) ಜೊತೆಗೆ Hardy Games, Challenger Arena Games, Gameon Astrotell, Gameium, Lystn Podocast, Zing Music ಚಂದಾದಾರಿಕೆಯನ್ನು ಸಹ ಒದಗಿಸುತ್ತದೆ.