ಸರ್ಕಾರಿ ಸೌಮ್ಯದ ಟೆಲಿಕಾಂ ಕಂಪನಿ BSNL ತಮ್ಮ ಬಳಕೆದಾರರಿಗೆ ಹೆಚ್ಚಿನ ಪ್ರಯೋಜನೆಗಳನ್ನು ನೀಡಲು ಅತ್ಯುತ್ತಮ ವಾರ್ಷಿಕ ವ್ಯಾಲಿಡಿಟಿಯ ಯೋಜನೆಗಳನ್ನು ನೀಡುತ್ತಿದೆ. ಇದು ಮೂಲಭೂತವಾಗಿ ಬಳಕೆದಾರರ ಕೈಗೆಟಕುವ ಬೆಲೆಗೆ ಅಂದರೆ ಸುಮಾರು ತಿಂಗಳಿಗೆ 250 ರೂಗಳಂತೆ ಸಣ್ಣ ಮೊತ್ತವನ್ನು ಪಾವತಿಸುವ ಮೂಲಕ ವಾರ್ಷಿಕ ಯೋಜನೆಯಲ್ಲಿ 365 ದಿನಗಳೊಂದಿಗೆ ಹೆಚ್ಚುವರಿಯಾಗಿ 30 ದಿನಗಳನ್ನು ಸೇರಿಸಿ ಒಟ್ಟಾರೆಯಾಗಿ 395 ದಿನಗಳ ಭರ್ಜರಿಯ ರಿಚಾರ್ಜ್ ಪ್ಲಾನ್ ಅನ್ನು ಕಂಪನಿ ನೀಡುತ್ತಿದೆ. ಯಾವುದಪ್ಪಾ ಈ BSNL ಪ್ಲಾನ್ ಅಂತೀರಾ ಇದರ ಬೆಲೆ 2999 ರೂಗಳಾಗಿದ್ದು ಇದರ ಸಂಪೂರ್ಣ ವಿವರಗಳನ್ನು ತಿಳಿಯಿರಿ.
Also Read: Important: ಉಚಿತ Aadhaar ಅಪ್‌ಡೇಟ್‌ಗಾಗಿ UIDAI ಮತ್ತೊಂದು ಹೊಸ ದಿನಾಂಕ ನೀಡಿದೆ
ಈ ಯೋಜನೆಗಳು ಭಾರಿ ಆಫರ್ ಮತ್ತು ಅನುಕೂಲಗಳೊಂದಿಗೆ ಬಂಡಲ್ ಆಗಿವೆ. ಪದೇ ಪದೇ ರಿಚಾರ್ಜ್ ಮಾಡದೇ ಒಮ್ಮೆ ರಿಚಾರ್ಜ್ ಮಾಡಿಕೊಳ್ಳುವ ಬಿಎಸ್ಎನ್ಎಲ್ ಬಳಕೆದಾದರು ತಮ್ಮ ಡಿವೈಸ್‌ಗಳನ್ನು ಸದಾ ಸಕ್ರಿಯವಾಗಿಡಲು ಬಯಸುವವರಿಗೆ ಈ ಪ್ಲಾನ್ ಸೂಕ್ತವಾಗಿವೆ. ಭಾರತದಲ್ಲಿ ಇಂದೊಂದೇ ಕಂಪನಿ ಯಾವುದೇ ಮಾಸಿಕ ರಿಚಾರ್ಜ್ ಮುಗಿದ ನಂತರ ಒಳಬರುವ ಕರೆಗಳನ್ನು ಬಂದ್ ಮಾಡುವುದಿಲ್ಲ. ಆದರೆ Jio, Airtel ಮತ್ತು Vi ಕಂಪನಿ ನಿಮ್ಮ ಪ್ಲಾನ್ ಮಾನ್ಯತೆ ಮುಗಿದ ಕೆಲವೇ ದಿನಗಳಲ್ಲಿ ಒಳಬರುವ ಕರೆಗಳನ್ನು ಸಹ ಬಂದ್ ಮಾಡುತ್ತವೆ. ಆದ್ದರಿಂದ ಜನ ಸಾಮಾನ್ಯರಿಗೆ BSNL ನಿಜಕ್ಕೂ ಹೆಚ್ಚುವರಿಯ ಪ್ರಯೋಜನಗಳನ್ನು ನೀಡುತ್ತಿದೆ.
ಅತಿ ಕಡಿಮೆ ಬೆಲೆಗೆ ಅದ್ದೂರಿಯ ಪ್ರಯೋಜನಗಳನ್ನು ನೀಡುವ BSNL ತಮ್ಮ ಬಳಕೆದಾರರಿಗೆ ವಾರ್ಷಿಕ ಯೋಜನೆಯಲ್ಲಿ ಹೆಚ್ಚುವರಿಯ ಡೇಟಾ, ಕರೆಗಳು ಮತ್ತು SMS ಸಹ ನೀಡುತ್ತಿದೆ. ಈ ಎಲ್ಲಾ ಬಿಎಸ್ಎನ್ಎಲ್ ಯೋಜನೆಗಳು ರಾಷ್ಟ್ರದಾದ್ಯಂತ ಲಭ್ಯವಿದ್ದು ಅವುಗಳಲ್ಲಿ ಕೆಲವು ನಿರ್ದಿಷ್ಟ ರಾಜ್ಯ/ವಲಯಕ್ಕೆ ನಿರ್ಬಂಧಿಸಬಹುದು. ಆದ್ದರಿಂದ ಈ ಪ್ಲಾನ್ ರಿಚಾರ್ಜ್ ಮಾಡುವ ಮೊದಲು ಒಮ್ಮೆ BSNL ಕಸ್ಟಮರ್ ಕೇರ್ ಕರೆ ಮಾಡಿ ಈ ಪ್ಲಾನ್ ಬಗ್ಗೆ ಖಚಿತಪಡಿಸಿಕೊಳ್ಳುವುದು ಉತ್ತಮ. ಈ ವ್ಯಾಲಿಡಿಟಿ ವಿಸ್ತರಣೆ ಪ್ಯಾಕ್ ವಾಯ್ಸ್ ಕರೆಗಳು, ಡೇಟಾ ಮತ್ತು SMS ಪ್ಯಾಕ್‌ಗಳಂತಹ ಹೆಚ್ಚುವರಿ ಪರ್ಕ್‌ಗಳನ್ನು ಸಹ ನೀಡುತ್ತದೆ.
ಇದರಲ್ಲಿ ನಿಮಗೆ ಒಂದು ವರ್ಷಕ್ಕಿಂತ ಹೆಚ್ಚು ಮಾನ್ಯತೆ ಲಭ್ಯರುತ್ತದೆ. ಅಂದ್ರೆ BSNL ನಿಮಗೆ 395 ದಿನಗಳ ವ್ಯಾಲಿಡಿಟಿಯೊಂದಿಗೆ ರೂ 2,999 ಪ್ಯಾಕ್ ಅನ್ನು ನೀಡುತ್ತದೆ. ಇದು ಅನಿಯಮಿತ ಕರೆಗಳು, ಪ್ರತಿದಿನ ನಿಮಗೆ 2GB ಹೈ ಸ್ಪೀಡ್ ಡೇಟಾ ಲಭ್ಯವಿರುತ್ತದೆ ಇದರೊಂದಿಗೆ ದಿನದ ಮಿತಿ ಮುಗಿದ ನಂತರ ಡೇಟಾವನ್ನು ನೀವು ಅನ್ಲಿಮಿಟೆಡ್ ಬಳಕೆಗಾಗಿ 80kbps ಸ್ಪೀಡ್ನಲ್ಲಿ ಬಳಸಬಹುದು. ಇದರೊಂದಿಗೆ 30 ದಿನಗಳ BSNL ಟ್ಯೂನ್‌ಗಳನ್ನು ನೀಡುತ್ತದೆ. ಇತರ ಪ್ರಯೋಜನಗಳಲ್ಲಿ ಪ್ರತಿದಿನ 100 SMS ಮತ್ತು 30 ದಿನಗಳವರೆಗೆ ಉಚಿತ EROS Now ಮನರಂಜನಾ ಸೇವೆಗಳು ಮತ್ತು 30 ದಿನಗಳವರೆಗೆ ಲೋಕಧುನ್ ಸೇರಿವೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ