BSNL Plans
BSNL ಪ್ರಸ್ತುತ ಹೆಚ್ಚು ಪೈಪೋಟಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ, ಏರ್‌ಟೆಲ್, ವಿಐ ಮತ್ತು ಬಿಎಸ್‌ಎನ್‌ಎಲ್ ಆಕರ್ಷಕ ರೀಚಾರ್ಜ್ ಯೋಜನೆಗಳೊಂದಿಗೆ ಗ್ರಾಹಕರನ್ನು ಆಕರ್ಷಿಸಲು ನಿರಂತರವಾಗಿ ಹೆಣಗಾಡುತ್ತಿವೆ.ಬಿಎಸ್ಎನ್ಎಲ್ ಪ್ರೈವೇಟ್ ಆಪರೇಟರ್‌ಗಳೊಂದಿಗೆ ಸ್ಪರ್ಧಿಸಲು ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಒಂದು ವಿಶಿಷ್ಟ ಯೋಜನೆಯನ್ನು ಹೊಂದಿದ್ದು ಒಂದೇ ರೀಚಾರ್ಜ್ ಯೋಜನೆಯಲ್ಲಿ ಬರೋಬ್ಬರಿ 6 ತಿಂಗಳಿಗೆ ಅನ್ಲಿಮಿಟೆಡ್ ಕರೆ ಮತ್ತು ಡೇಟಾ ಡೇಟಾವನ್ನು ನೀಡುತ್ತದೆ.
ಈ BSNL ಯೋಜನೆಯು ಜನರಿಗೆ ಕೈಗೆಟುಕುವ ಮತ್ತು ತಡೆರಹಿತ ಸಂಪರ್ಕವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯೊಂದಿಗೆ ಬಳಕೆದಾರರು ಒಂದೇ ಪಾವತಿಯಲ್ಲಿ ಅನಿಯಮಿತ ಧ್ವನಿ ಕರೆಗಳು, ಹೆಚ್ಚಿನ ವೇಗದ ಡೇಟಾ ಮತ್ತು ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಬಹುದು. ನೀವು ಪ್ರತಿ ತಿಂಗಳು ರಿಚಾರ್ಜ್ ಮಾಡುವ ತಲೆನೋವಿನಿಂದ ಜುಜುತ್ತಿದ್ದರೆ 160 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಈ BSNL Plan ರೀಚಾರ್ಜ್ ಬಗ್ಗೆ ತಿಳಿಯಿರಿ.
ಈ BSNL ಪ್ಲಾನ್ ರೂ. 900 ಅಡಿಯಲ್ಲಿ ಬರುವ ಅತ್ಯುತ್ತಮ ರಿಚಾರ್ಜ್ ಪ್ಲಾನ್ ಆಗಿದ್ದು ಗ್ರಾಹಕರಿಗೆ ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಉತ್ತಮ ಡೇಟಾ ಮತ್ತು SMS ಪ್ರಯೋಜನಗಳನ್ನು ನೀಡುತ್ತಿದೆ. ನೀವು ಆಗಾಗ್ಗೆ ರೀಚಾರ್ಜ್ ಮಾಡುವ ಜಗಳವನ್ನು ಬಯಸದಿದ್ದರೆ ಮತ್ತು ಒಂದು ರೀಚಾರ್ಜ್‌ನೊಂದಿಗೆ ಬರೋಬ್ಬರಿ 6 ತಿಂಗಳು ಅಥವಾ 180 ದಿನಗಳ ವ್ಯಾಲಿಡಿಟಿಯೊಂದಿಗೆ ಅರ್ಧ ವರ್ಷಕ್ಕಾಗುವ ಪ್ರಯೋಜನಗಳನ್ನು ನೀಡುವ ಈ ಬಿಎಸ್ಎನ್ಎಲ್ ಪ್ಲಾನ್ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ಪರಿಶೀಲಿಸಿ.
ಬಿಎಸ್ಎನ್ಎಲ್ ಬಳಕೆದಾರರು ಇದಕ್ಕಾಗಿ ಪ್ರತಿ ತಿಂಗಳು ಸುಮಾರು ರೂ 150 ಖರ್ಚು ಮಾಡಬೇಕಾಗುತ್ತದೆ. ಈ ಯೋಜನೆಯ ಪ್ರಯೋಜನಗಳ ಕುರಿತು ಮಾತನಾಡುವುದಾದರೆ ಬಳಕೆದಾರರು ಉಚಿತ ರಾಷ್ಟ್ರೀಯ ರೋಮಿಂಗ್ ಮತ್ತು ದೇಶಾದ್ಯಂತ ಅನಿಯಮಿತ ವಾಯ್ಸ್ ಕರೆಗಳ ಪ್ರಯೋಜನವನ್ನು ಪಡೆಯುತ್ತಾರೆ. BSNL ಈ ಅತಿ ಕಡಿಮೆ ಬೆಲೆಯ ರೀಚಾರ್ಜ್ ಯೋಜನೆಯು (Recharge Plan) ತಮ್ಮ ಸೆಕೆಂಡರಿ ಸಿಮ್ ಕಾರ್ಡ್ ಅನ್ನು ದೀರ್ಘಕಾಲದವರೆಗೆ ಸಕ್ರಿಯವಾಗಿಡಲು ಬಯಸುವ ಬಳಕೆದಾರರಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.
ಈ ಯೋಜನೆಯ ಮೂಲಕ ಬಳಕೆದಾರರು 6 ತಿಂಗಳವರೆಗೆ ಒಳಬರುವ ಮತ್ತು ಹೊರಹೋಗುವ ಕರೆಗಳ ಜೊತೆಗೆ ಡೇಟಾ ಮತ್ತು SMS ಪ್ರಯೋಜನವನ್ನು ಪಡೆಯುತ್ತಾರೆ. ಬಳಕೆದಾರರು ದೆಹಲಿ ಮತ್ತು ಮುಂಬೈನಲ್ಲಿ MTNL ನೆಟ್‌ವರ್ಕ್‌ನಲ್ಲಿ ಉಚಿತ ಕರೆಯನ್ನು ಸಹ ಪಡೆಯಬಹುದು. ಇದಲ್ಲದೆ ಈ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರು ಯಾವುದೇ ದೈನಂದಿನ ಮಿತಿಯಿಲ್ಲದೆ 90GB ಡೇಟಾವನ್ನು ಪಡೆಯುತ್ತಾರೆ.
ಡೇಟಾ ಖಾಲಿಯಾದ ನಂತರ ಬಳಕೆದಾರರು 40kbps ವೇಗದಲ್ಲಿ ಅನಿಯಮಿತ ಇಂಟರ್ನೆಟ್‌ನ ಪ್ರಯೋಜನವನ್ನು ಪಡೆಯುತ್ತಾರೆ. BSNL ಈ ಅತಿ ಕಡಿಮೆ ಬೆಲೆಯ ರೀಚಾರ್ಜ್ ಯೋಜನೆಯಲ್ಲಿ ಲಭ್ಯವಿರುವ ಇತರ ಪ್ರಯೋಜನಗಳ ಕುರಿತು ಮಾತನಾಡುವುದಾದರೆ ಬಳಕೆದಾರರು ಪ್ರತಿದಿನ 100 ಉಚಿತ SMS ಪ್ರಯೋಜನವನ್ನು ಪಡೆಯುತ್ತಾರೆ.