ಭಾರತದ ಸರ್ಕಾರಿ ಸೌಮ್ಯದ ಟೆಲಿಕಾಂ ಕಂಪನಿ BSNL ಈಗ ಭಾರತದಲ್ಲಿ ಅತಿ ನಿರೀಕ್ಷಿತ BSNL 5G ಸೇವೆಗಳನ್ನು ಆರಂಭಿಸುವುದಾಗಿ ತಮ್ಮ @BSNLCorporate ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿ ಬಳಕೆದಾರರಿಗೆ ಸಿಹಿಸುದ್ದಿಯನ್ನು ಹಂಚಿಕೊಂಡಿದ್ದಾರೆ. ಇದರ ಕಾರಣ ಜನ ರಿಚಾರ್ಜ್ ಬೆಲೆ ಏರಿಕೆಯಯ ಅಡಿಯಲ್ಲಿ ಈಗಾಗಲೇ BSNL ಕಂಪನಿಯನ್ನು ಸೇರಲು ಮುಗಿಬಿದ್ದಿದ್ದು ಈಗ ಈ BSNL ತಮ್ಮದೆಯಾದ BSNL 5G ಅನ್ನು ಆರಂಭಿಸುವ ಸುದ್ದಿ ನೀಡಿ ಜನಸಮಾನ್ಯರಿಗೆ ಮತ್ತೊಂದು ಸಿಹಿಸುದ್ದಿಯನ್ನು ನೀಡಿದೆ. ನಿಮಗೆ ತಿಳಿದಿರುವಂತೆ BSNL ಯೋಜನೆಗಳು ಇತರ ಕಂಪನಿಗಳಿಗಿಂತ ಅಗ್ಗವಾಗಿರುವುದೇ ದೊಡ್ಡ ಕಾರಣ ಜನಸಾಗರ ಹರಿದು ಬರುತ್ತಿದೆ.
Also Read: iPhone 16 launch Event ಲೈವ್ ಸ್ಟ್ರೀಮಿಂಗ್ ನೋಡುವುದು ಎಲ್ಲಿ? ಮಾರಾಟ ಯಾವಾಗ? ಮತ್ತು ಬೆಲೆ ಎಷ್ಟು?
‘ದಿ ಹಿಂದೂ’ ವರದಿಯಲ್ಲಿ ಬಿಡುಗಡೆ ದಿನಾಂಕ BSNL ನ ಆಂಧ್ರಪ್ರದೇಶದ ಪ್ರಧಾನ ಜನರಲ್ ಮ್ಯಾನೇಜರ್ ಎಲ್. ಶ್ರೀನು (L. Srinu) ಅವರು 5G ಅನ್ನು ಬಹಿರಂಗಪಡಿಸಿದ್ದಾರೆ. 2025 ಸಂಕ್ರಾಂತಿ ಸಂದರ್ಭದಲ್ಲಿ BSNL 5G ನೆಟ್‌ವರ್ಕ್ ಅನ್ನು ಪ್ರಾರಂಭಿಸಬಹುದು ಎಂದು ಶ್ರೀನು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಅಂದರೆ BSNL 5G ಗಾಗಿ ಕಾಯುತ್ತಿರುವ ಜನರಿಗೆ ಇದು ತುಂಬಾ ಒಳ್ಳೆಯ ಸುದ್ದಿಯಾಗಿದೆ ಮತ್ತು ಅವರು ಕಡಿಮೆ ಬೆಲೆಯಲ್ಲಿ 5G ನೆಟ್‌ವರ್ಕ್‌ನ ಪ್ರಯೋಜನವನ್ನು ಪಡೆಯಲಿದ್ದಾರೆ. BSNL ಕೂಡ ಕೆಲವು ನವೀಕರಣಗಳನ್ನು ಮಾಡುತ್ತಿದೆ ಮತ್ತು ತನ್ನದೇ ಆದ 4G ನೆಟ್ವರ್ಕ್ ಅನ್ನು ಉತ್ತಮಗೊಳಿಸಿವುದರೊಂದಿಗೆ ಬಳಕೆದಾರರಿಗೆ ಉತ್ತಮ ನೆಟ್ವರ್ಕ್ ಮತ್ತು ಕಡಿಮೆ ಬೆಲೆಯ ಯೋಜನೆಗಳನ್ನು ನೀಡುವ ಗುರಿಯನ್ನು ಹೊಂದಿದೆ.
ಅಲ್ಲದೆ ಕಂಪನಿ ಈಗಾಗಲೇ ತಿಳಿದಿರುವಂತೆ ತಮ್ಮ ನೆಟ್ವರ್ಕ್ ಅನ್ನು ಸುಧಾರಿಸಲು ಈಗಾಗಲೇ ಟಾಟಾ ಕಂಪನಿಯೊಂದಿಗೆ ಕೈ ಜೋಡಿಸಿ ಕೆಲಸ ಮಾಡುತ್ತಿದ್ದು ಈಗ ನೆಟ್ವರ್ಕ್ ತಲೆನೋವು ಸಾಕಷ್ಟು ಕಡಿಮೆಯಾಗಿದೆ. ಇದೆ ರೀತಿಯಲ್ಲಿ ಸುಧಾರಣೆಯೊಂದಿಗೆ ನಡೆಯುತ್ತಿದ್ದರೆ 5G ನೆಟ್ವರ್ಕ್ ವಲಯದಲ್ಲಿ Jio ಮತ್ತು Airtel ಕಂಪನಿಗಳೊಂದಿಗೆ ಸ್ಪರ್ಧಾತ್ಮಕ ಬೆಲೆಯನ್ನು ನಿರೀಕ್ಷಿಸಬಹುದು.
ಹೌದು ಈಗಾಗಲೇ BSNL 4G ಸಿಮ್ ಕಾರ್ಡ್ ಬಳಸುತ್ತಿರುವ ಬಳಕೆದಾರರು ತಮ್ಮ ಹಳೆಯ ಸಿಮ್‌ನಿಂದಲೇ 5G ಬಳಸಬಹುದು. ಆದರೆ ನಿಮ್ಮ ಸ್ಮಾರ್ಟ್ಫೋನ್ 5G ಬೆಂಬಲಿತವಾಗಿರಬೇಕು ಎನ್ನುವುದನ್ನು ಗಮನದಲ್ಲಿರಲಿ. ಅಲ್ಲದೆ BSNL ಈಗಾಗಲೇ ಟಾಟಾ ಕಂಪನಿಯ TCS ಜೊತೆಗೆ ಸೇರಿ ಉತ್ತಮ 4G ತಂತ್ರಜ್ಞಾನವನ್ನು ಪೂರೈಸುತ್ತಿದೆ. ಇದರಡಿಯಲ್ಲಿ ಕಂಪನಿ 5G ಟೆಕ್ನಾಲಜಿಯೊಂದಿಗೆ ಅಪ್‌ಗ್ರೇಡ್ ಮಾಡಲು ವಿನ್ಯಾಸಗೊಳಿಸಲಾಗಿದೆ.
ಇದರರ್ಥ 5G ಪರಿವರ್ತನೆ ಮಾಡಲು BSNL ಗಮನಾರ್ಹವಾದ ಹೆಚ್ಚುವರಿ ಹೂಡಿಕೆಗಳನ್ನು ಮಾಡುವ ಅಗತ್ಯವಿರುವುದಿಲ್ಲ. BSNL ಈಗಾಗಲೇ ತನ್ನ 4G ಸೇವೆಗಳನ್ನು ಪ್ರಾರಂಭಿಸಿರುವ ಪ್ರದೇಶಗಳಲ್ಲಿ 5G ರೋಲ್‌ಔಟ್ ಪ್ರಾರಂಭವಾಗುತ್ತದೆ. ಇದು ಸುಗಮ ಮತ್ತು ಪರಿಣಾಮಕಾರಿ ಅಪ್‌ಗ್ರೇಡ್ ಪ್ರಕ್ರಿಯೆಯನ್ನು ಖಾತ್ರಿಪಡಿಸುತ್ತದೆ. ಅಲ್ಲದೆ ಪ್ರಸ್ತುತ ಕಂಪನಿಯು ಟವರ್‌ಗಳು ಮತ್ತು ಇತರ ಅಗತ್ಯ ಉಪಕರಣಗಳನ್ನು ಒಳಗೊಂಡಂತೆ ಅದರ ಮೂಲಸೌಕರ್ಯವನ್ನು ನವೀಕರಿಸುವತ್ತ ಗಮನಹರಿಸಿದೆ ಸಾಧ್ಯವಾದಷ್ಟು ಬೇಗ 5G ರೋಲ್‌ಔಟ್ ಅನ್ನು ಸುಲಭಗೊಳಿಸುತ್ತದೆ.