BSNL ಧಮಾಕ: 349, 399 ಮತ್ತು 499 ರೂಗಳ ಅದ್ದೂರಿ ಪ್ಲಾನಲ್ಲಿ ದಿನಕ್ಕೆ 3GB ಯ ಡೇಟಾ ಲಭ್ಯ
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ತನ್ನ ಬ್ರಾಡ್ಬ್ಯಾಂಡ್ ಸೇವೆಗಾಗಿ ಮೂರು ಹೊಸ ಯೋಜನೆಗಳನ್ನು ಪರಿಚಯಿಸಿದೆ. ಈ ಯೋಜನೆಗಳ ಅಡಿಯಲ್ಲಿ ಬಳಕೆದಾರರಿಗೆ 3GB ವರೆಗಿನ ಡೇಟಾವನ್ನು 8mbps ವೇಗದವರೆಗೆ ನೀಡಲಾಗುವುದು. ಈ ಮೂರು ಹೊಸ ಯೋಜನೆಗಳಲ್ಲಿ ಮೊದಲ ಯೋಜನೆ 349 ಎರಡನೆಯದು 399 ಮತ್ತು ಮೂರನೆಯದು 499 ರೂಪಾಯಿಗಾಲ ಪ್ಲಾನ್. ಈ 349 ಮತ್ತು 399 ರೂಗಳ ಯೋಜನೆಯಲ್ಲಿ 2GB ಡೇಟಾವನ್ನು ನೀಡಲಾಗುವುದು. ಅದೇ ಸಮಯದಲ್ಲಿ 499 ರೂಗಳ ಯೋಜನೆಯಲ್ಲಿ ಪ್ರತಿದಿನ 3GB ಡೇಟಾವನ್ನು ನೀಡಲಾಗುವುದು. ಈ ಯೋಜನೆಗಳನ್ನು ಜುಲೈ 1 ರಿಂದ ದೇಶಾದ್ಯಂತ ಜಾರಿಗೆ ತರಲಾಗುವುದು.
349 ರೂಗಳ ಪ್ಲಾನ್: ಈ ಯೋಜನೆಯ ಹೆಸರೇ ಸೂಚಿಸುವಂತೆ ಈ ಯೋಜನೆಯಲ್ಲಿ ಬಳಕೆದಾರರಿಗೆ ದಿನಕ್ಕೆ 2GB ಯ ಡೇಟಾ ನೀಡಲಾಗುವುದು. ಇದು 8Mbps ವರೆಗೆ ವೇಗವನ್ನು ಒದಗಿಸುತ್ತದೆ. ಡೇಟಾ ಮಿತಿ ಮುಗಿದ ನಂತರ ವೇಗವನ್ನು 1Mbps ಗೆ ಇಳಿಸಲಾಗುತ್ತದೆ. ಡೇಟಾದ ಹೊರತಾಗಿ ಈ ಯೋಜನೆಯು ಅನ್ಲಿಮಿಟೆಡ್ ವಾಯ್ಸ್ ಕರೆಗಳನ್ನು ಒದಗಿಸುತ್ತದೆ (ಬಿಎಸ್‌ಎನ್‌ಎಲ್ ನೆಟ್‌ವರ್ಕ್‌ಗಳಿಗೆ ಮಾತ್ರ). ಅದೇ ಸಮಯದಲ್ಲಿ ಇತರ ನೆಟ್‌ವರ್ಕ್‌ಗಳಲ್ಲಿ ಬೆಳಿಗ್ಗೆ 10:30 ರಿಂದ 6 ರವರೆಗೆ ಮತ್ತು ಭಾನುವಾರದಂದು ಅನ್ಲಿಮಿಟೆಡ್ ಕರೆಗಳನ್ನು ಮಾಡಬಹುದು.
399 ರೂಗಳ ಪ್ಲಾನ್: ಈ ಯೋಜನೆಯಲ್ಲು ಸಹ ಹೆಸರೇ ಸೂಚಿಸುವಂತೆ ಈ ಯೋಜನೆಯಲ್ಲಿ ಬಳಕೆದಾರರಿಗೆ ದಿನಕ್ಕೆ 2GB ಯ ಡೇಟಾ ನೀಡಲಾಗುವುದು. ಇದು 8Mbps ವರೆಗೆ ವೇಗವನ್ನು ಒದಗಿಸುತ್ತದೆ. ಡೇಟಾ ಮಿತಿ ಮುಗಿದ ನಂತರ ವೇಗವನ್ನು 1Mbps ಗೆ ಇಳಿಸಲಾಗುತ್ತದೆ. ಡೇಟಾದ ಹೊರತಾಗಿ ಈ ಯೋಜನೆಯು ಅನ್ಲಿಮಿಟೆಡ್ ವಾಯ್ಸ್ ಕರೆಗಳನ್ನು ಇತರ ನೆಟ್‌ವರ್ಕ್‌ಗಳಲ್ಲಿಯೂ ಬಳಸಲು ಅವಕಾಶ ಒದಗಿಸುತ್ತದೆ.
499 ರೂಗಳ ಪ್ಲಾನ್: ಈ ಯೋಜನೆಯಲ್ಲಿ 3GB ಡೇಟಾ ಈ ಯೋಜನೆಯಲ್ಲಿ ಪ್ರತಿದಿನ 3GB ಡೇಟಾವನ್ನು ನೀಡಲಾಗುವುದು. 8Mbps ವರೆಗೆ ವೇಗವೂ ಇರುತ್ತದೆ. ಮಿತಿ ಸ್ಥಗಿತವಾದ ನಂತರ ಅದರ ವೇಗವು 1Mbps ವರೆಗೆ ಇರುತ್ತದೆ. ಅಲ್ಲದೆ ಈ ಯೋಜನೆಯಲ್ಲಿ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆಗಳನ್ನು ಮಾಡಬಹುದು. ಈ ಮೇಲಿನ ಎಲ್ಲಾ ಮೂರು ಯೋಜನೆಗಳಲ್ಲಿ ಉಚಿತ ಇಮೇಲ್ ಐಡಿ ಮತ್ತು 1GB ಸ್ಥಳವನ್ನು ಒದಗಿಸಲಾಗುವುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile