30 ದಿನಗಳ ವ್ಯಾಲಿಡಿಟಿಯೊಂದಿಗೆ Unlimited ಕರೆ ಮತ್ತು ದಿನಕ್ಕೆ 3GB ಡೇಟಾ ನೀಡುವ BSNL ಬೆಸ್ಟ್ ಪ್ಲಾನ್ ಬೆಲೆ ಎಷ್ಟು?

Updated on 16-Feb-2024
HIGHLIGHTS

ಬಿಎಸ್ಎನ್ಎಲ್ (BSNL) ಬೆಸ್ಟ್ ಪ್ಲಾನ್ STV_299 ರೂಗಳ ಬೆಸ್ಟ್ ರಿಚಾರ್ಜ್ ಪ್ರಿಪೇಯ್ಡ್ ಯೋಜನೆ

ಬಿಎಸ್ಎನ್ಎಲ್ (BSNL) 30 ದಿನಗಳ ವ್ಯಾಲಿಡಿಟಿಯೊಂದಿಗೆ ಅನ್ಲಿಮಿಟೆಡ್ ಕರೆ ಮತ್ತು ದಿನಕ್ಕೆ 3GB ಡೇಟಾದ ನೀಡುವ ಅತ್ಯುತ್ತಮ ಯೋಜನೆ.

ಭಾರತದ ಜನಪ್ರಿಯ ಸರ್ಕಾರಿ ಟೆಲಿಕಾಂ ಕಂಪನಿಯಾಗಿರುವ ಬಿಎಸ್ಎನ್ಎಲ್ (BSNL) ತಮ್ಮ ಬಳಕೆದಾರರಿಗೆ ಅದ್ದೂರಿಯ Recharge ಯೋಜನೆಗಳನ್ನು ನೀಡುವಲ್ಲಿ ಉತ್ತಮವಾಗಿದೆ. ಇದಕ್ಕೆ ಟಕ್ಕರ್ ನೀಡಲು Jio, Airtel ಮತ್ತು Vi ಸಹ ತಮ್ಮ ಯೋಜನೆಗಳಲ್ಲಿ ಭಾರಿ ಸುಧಾರಣೆಯನ್ನು ತೋರಿವೆ. ಬಿಎಸ್ಎನ್ಎಲ್ (BSNL) ಈಗ ಸುಮರು 300 ರೂಗಳೊಳಗಿನ ಅತ್ಯುತ್ತಮ ರಿಚಾರ್ಜ್ ಪ್ರಿಪೇಯ್ಡ್ ಪ್ಲಾನ್ ಬಗ್ಗೆ ನಿಮಗೆ ಮಾಹಿತಿಯನ್ನು ನೀಡಲಿದ್ದು ಪ್ರಸ್ತುತ ಈ ಬೆಲೆಯಲ್ಲಿ ಬೇರೆ ಯಾರು ನಿಡುತ್ತಿಲ್ಲದ ಈ ಬೆಸ್ಟ್ ಪ್ಲಾನ್ STV_299 ರೂಗಳ ಬೆಸ್ಟ್ Prepaid ಯೋಜನೆಯ 30 ದಿನಗಳ ವ್ಯಾಲಿಡಿಟಿಯೊಂದಿಗೆ ಅನಿಯಮಿತ ಕರೆ ಮತ್ತು ಡೇಟಾದ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡಿದ್ದೇವೆ.

Also Read: ಮೋಟೋರೊಲದಿಂದ ಕೈಗೆಟಕುವ ಬೆಲೆಗೆ Moto G04! ಖರೀದಿಗೂ ಮುಂಚೆ ಈ ಟಾಪ್ 5 ಫೀಚರ್ ತಿಳಿಯಿರಿ

BSNL ನಿಂದ ರೂ 299 ಯೋಜನೆಯ ವಿವರಗಳು

ಬಿಎಸ್ಎನ್ಎಲ್ (BSNL) ಡೇಟಾ ಪ್ರಯೋಜನಗಳ ಹೊರತಾಗಿ ಗ್ರಾಹಕರು ಈ ಯೋಜನೆಯೊಂದಿಗೆ BSNL ನಿಂದ ಅನಿಯಮಿತ ವಾಯ್ಸ್ ಕರೆ ಮತ್ತು 100 SMS/ದಿನವನ್ನು ಪಡೆಯುತ್ತಾರೆ. ಈ BSNL ಯೋಜನೆಯೊಂದಿಗೆ ಇತರ ಯಾವುದೇ ಹೆಚ್ಚುವರಿ ಪ್ರಯೋಜನಗಳಿಲ್ಲ. ಈ ಯೋಜನೆಯು ಖಾಸಗಿ ಟೆಲಿಕಾಂಗಳೊಂದಿಗೆ ಬಳಕೆದಾರರು ಪಡೆಯುವುದಕ್ಕಿಂತ ಹೆಚ್ಚಿನ ಡೇಟಾವನ್ನು ನೀಡುತ್ತದೆ. ಆದರೆ ಬಿಎಸ್ಎನ್ಎಲ್ (BSNL) ಬಳಕೆದಾರರು ಇನ್ನೂ ಖಾಸಗಿ ಕಂಪನಿಗಳ ಸೇವೆಗಳನ್ನು ಬಯಸುತ್ತಾರೆ. ಏಕೆಂದರೆ ಖಾಸಗಿ ಕಂಪನಿಗಳು ವೇಗವಾಗಿ ನೆಟ್‌ವರ್ಕ್ ಸೇವೆಗಳನ್ನು ನೀಡುತ್ತವೆ ಮತ್ತು ಗ್ರಾಹಕರೊಂದಿಗೆ ತೊಡಗಿಸಿಕೊಳ್ಳಲು ಉತ್ತಮ ವಿಧಾನವನ್ನು ಹೊಂದಿವೆ.

Rs 299 BSNL Recharge Plan

ಬಿಎಸ್ಎನ್ಎಲ್ (BSNL) ರೂ 299 ಯೋಜನೆಯು ನಿಮಗೆ 3GB ದೈನಂದಿನ ಡೇಟಾದೊಂದಿಗೆ ಬರುತ್ತದೆ. ಇದರಲ್ಲಿ ದಿನದ ಡೇಟಾ ಖಾಲಿಯಾದ ನಂತರ ಅನ್ಲಿಮಿಟೆಡ್ ಬಳಕೆಗೆ ಸ್ಪೀಡ್ 64kbps ಇಳಿಯುತ್ತದೆ. ಇದರೊಂದಿಗೆ ನಿಮಗೆ ದಿನಕ್ಕೆ 100 SMS ಸಹ ವಿಶೇಷವಾಗಿ ಲಭ್ಯವಿರುತ್ತದೆ. ಭಾರತದಲ್ಲಿನ ಯಾವುದೇ ರೂ 299 ಪ್ಲಾನ್ ಇದೀಗ ಗ್ರಾಹಕರಿಗೆ ನೀಡುವ ಅತಿ ಕಡಿಮೆ ಬೆಲೆಯ ಡೇಟಾ ಪ್ಲಾನ್ ಇದಾಗಿದೆ. ಏಕೆಂದರೆ Jio Airtel ಮತ್ತು Vi ಟೆಲಿಕಾಂಗಳು ಸಾಮಾನ್ಯವಾಗಿ ಅದೇ ಬೆಲೆಗೆ ಜಾಸ್ತಿ ಅಂದ್ರೆ 1GB ಯಿಂದ 2GB ವರೆಗಿನ ಪ್ರತಿದಿನದ ಡೇಟಾವನ್ನು ನೀಡುತ್ತವೆ. ಆದರೆ ಅವುಗಳ ವ್ಯಾಲಿಡಿಟಿಯ ವಿಭಾಗದಲ್ಲಿ ಬಂದಾಗ ಈ ಯೋಜನೆಯು 30 ದಿನಗಳ ಸೇವಾ ಮಾನ್ಯತೆಯನ್ನು ಹೊಂದಿರುವ ಯಾವುದೇ ಯೋಜನೆಗಳಿಲ್ಲಿ.

Jio ಮತ್ತು Vi ಸಹ 299 ರೂಗಳ ಯೋಜನೆಯನ್ನು ಹೊಂದಿವೆ

ಕಂಪನಿಯು 2GB ಡೇಟಾ, ಅನಿಯಮಿತ ಕರೆಗಳು ಮತ್ತು 100 SMS ಗಳ ಪ್ರಯೋಜನವನ್ನು 28 ದಿನಗಳವರೆಗೆ 299 ರೂಗಳಿಗೆ ನೀಡುತ್ತದೆ. ಇದರಲ್ಲಿ ಜಿಯೋ ಅಪ್ಲಿಕೇಶನ್‌ಗಳ ಪೂರಕ ಚಂದಾದಾರಿಕೆ ಲಭ್ಯವಿರುತ್ತದೆ. Vodafone Idea ಅಂದರೆ Vi ಯೋಜನೆಯಲ್ಲಿ ಬಳಕೆದಾರರು 1.5GB ದೈನಂದಿನ ಡೇಟಾ, 100 SMS ದೈನಂದಿನ ಮತ್ತು ಅನಿಯಮಿತ ಕರೆಗಳ ಪ್ರಯೋಜನವನ್ನು ಪಡೆಯುತ್ತಾರೆ. ಇದರ ಮಾನ್ಯತೆ 28 ದಿನಗಳು. Vi Hero ಅನಿಯಮಿತ ಪ್ರಯೋಜನಗಳು ಯೋಜನೆಯಲ್ಲಿ ಲಭ್ಯವಿದೆ. Vi ಬಳಕೆದಾರರು Vi ಚಲನಚಿತ್ರಗಳನ್ನು ಪ್ರವೇಶಿಸಬಹುದು. Binge All Night, Weekend Data Rollover ಮತ್ತು Data Delight ಆಫರ್‌ಗಳು ಲಭ್ಯವಿವೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ ವಾಟ್ಸಾಪ್ Channel View ಮಾಡಿ ಸೇರಿಕೊಳ್ಳಿ!

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :