ಬಿಎಸ್ಎನ್ಎಲ್ 4G 2022 (BSNL 4G 2022) ರ ವೇಳೆಗೆ ಪ್ಯಾನ್-ಇಂಡಿಯಾ 4G ರೋಲ್‌ಔಟ್ ಅನ್ನು ಅಂದಾಜಿಸಿದೆ. ಖಾಸಗಿ ಟೆಲಿಕಾಂ ಕಂಪನಿಗಳು ಈ ಸರ್ಕಾರಿ ಕಂಪನಿಯ ನಿರ್ಧಾರದ ನಂತರ ಕೋಪದ ವಾತಾವರಣವಿದ್ದರು ಅನೇಕ ಭಾರತೀಯರು ಸಾಮಾಜಿಕ ಮಾಧ್ಯಮದಲ್ಲಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಅನ್ನು ಬೆಂಬಲಿಸುತ್ತಿದ್ದಾರೆ. ಏಕೆಂದರೆ ಇತ್ತೀಚೆಗೆ ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ತಮ್ಮ ಪ್ರಿ-ಪೇಯ್ಡ್ ಯೋಜನೆಗಳನ್ನು 25% ಪ್ರತಿಶತದಷ್ಟು ದುಬಾರಿಗೊಳಿಸಿ ಬಳಕೆದಾರರ ಬಾಯಿಗೆ ನುಂಗಲಾಗದ ತುತ್ತನ್ನು ನೀಡಿದ್ದಾರೆ.
ಏತನ್ಮಧ್ಯೆ ಬಿಎಸ್ಎನ್ಎಲ್ ದೊಡ್ಡ ಘೋಷಣೆಯನ್ನು ಮಾಡಿದೆ ಇದರಿಂದಾಗಿ ತನ್ನ ಗ್ರಾಹಕರಲ್ಲಿ ಸಂತೋಷದ ಅಲೆ ಇದೆ. BSNL ಸೆಪ್ಟೆಂಬರ್ 2022 ರ ವೇಳೆಗೆ ದೇಶಾದ್ಯಂತ 4G ಅನ್ನು ಪ್ರಾರಂಭಿಸುವುದಾಗಿ ಹೇಳಿದೆ. ಈ ವಿಷಯಗಳನ್ನು ಬಿಎಸ್‌ಎನ್‌ಎಲ್ ಸಂಸತ್ತಿನಲ್ಲಿ ಹೇಳಿದೆ. BSNL ತನ್ನ 4G ಸೇವೆಯಿಂದ 900 ಕೋಟಿ ರೂಪಾಯಿಗಳವರೆಗೆ ಲಾಭವನ್ನು ನಿರೀಕ್ಷಿಸುತ್ತಿದೆ.
BSNL 4G ಸೇವೆಯು ಖಾಸಗಿ ಕಂಪನಿಗಳಿಗೆ ಸವಾಲಾಗಿರುವುದಿಲ್ಲ. ಪಿಟಿಐ ವರದಿಯ ಪ್ರಕಾರ ಬಿಎಸ್‌ಎನ್‌ಎಲ್‌ನಿಂದ 4ಜಿ ರೋಲ್‌ಔಟ್ ಕುರಿತ ಪ್ರಶ್ನೆಗೆ ಉತ್ತರಿಸಿದ ಟೆಲಿಕಾಂ ರಾಜ್ಯ ಸಚಿವರು ಬಿಎಸ್‌ಎನ್‌ಎಲ್ ತನ್ನ 4ಜಿ ಸೇವೆಗಳ ರೋಲ್‌ಔಟ್‌ಗೆ ಸೆಪ್ಟೆಂಬರ್ 2022 ಅನ್ನು ಗಡುವು ಎಂದು ನಿಗದಿಪಡಿಸಿತ್ತು ಎಂದು ಹೇಳಿದರು. ದೇಶಾದ್ಯಂತ 4G ಸೇವೆಯನ್ನು ಪ್ರಾರಂಭಿಸುವ ಮೊದಲು BSNL ಮೊದಲ ವರ್ಷದಲ್ಲಿ ಸುಮಾರು 900 ಕೋಟಿ ಆದಾಯವನ್ನು ಪಡೆಯಲಿದೆ ಎಂದು ಅವರು ಹೇಳಿದರು.
ಕೆಲವು ದಿನಗಳ ಹಿಂದೆ BSNL 4G ಅಪ್‌ಗ್ರೇಡೇಶನ್‌ಗಾಗಿ ರಾಷ್ಟ್ರೀಯ ಭದ್ರತಾ ಮಂಡಳಿಯ ಸೆಕ್ರೆಟರಿಯೇಟ್ (NSCS) ನಿಂದ ಅನುಮತಿಯನ್ನು ಪಡೆದುಕೊಂಡಿತು ಆದರೆ 4G ಗಾಗಿ Nokia ನ ಭಾಗಗಳನ್ನು ಸರ್ಕಾರವು ಅಸುರಕ್ಷಿತವೆಂದು ಕರೆಯಿತು ಮತ್ತು ತಿರಸ್ಕರಿಸಿತು. BSNL ಸಂಪೂರ್ಣವಾಗಿ ಮೇಡ್ ಇನ್ ಇಂಡಿಯಾ ಭಾಗಗಳನ್ನು ಬಳಸಬೇಕೆಂದು ಸರ್ಕಾರ ಬಯಸುತ್ತದೆ.
ಖಾಸಗಿ ಕಂಪನಿಗಳ ಬಗ್ಗೆ ಗ್ರಾಹಕರ ಅಸಮಾಧಾನ ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬರುತ್ತಿದ್ದು ಇದು ನಿಜವಾಗಿಯೂ ಬಿಎಸ್‌ಎನ್‌ಎಲ್‌ಗೆ ಬೆಂಬಲವಾಗಿದೆಯೇ ಎಂಬುದು ದೇಶದಾದ್ಯಂತ ಬಿಎಸ್‌ಎನ್‌ಎಲ್‌ನ 4ಜಿ ಸೇವೆಯನ್ನು ಪ್ರಾರಂಭಿಸಿದ ನಂತರವಷ್ಟೇ ತಿಳಿಯಲಿದೆ.