ಪ್ರತಿಯೊಂದು ಪ್ರಿಪೇಯ್ಡ್ ಬಳಕೆದಾರರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ರೀಚಾರ್ಜ್ ಪ್ಯಾಕ್ ಆಯ್ಕೆ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ. ಅನಿಯಮಿತ ಪ್ರಿಪೇಯ್ಡ್ ಯೋಜನೆಗಳು ದೈನಂದಿನ ಡೇಟಾ ಮತ್ತು ಉಚಿತ ಕರೆ ಮಾಡುವಂತಹ ಪ್ರಯೋಜನಗಳನ್ನು ನೀಡುತ್ತವೆ. ರಿಲಯನ್ಸ್ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್‌ನೊಂದಿಗೆ ಲಭ್ಯವಿರುವ ಹೆಚ್ಚಿನ ಅನಿಯಮಿತ ಯೋಜನೆಗಳು 1.5GB ಅಥವಾ ಹೆಚ್ಚಿನ ದೈನಂದಿನ ಡೇಟಾದೊಂದಿಗೆ ಬರುತ್ತವೆ. ನಿಮ್ಮ ದೈನಂದಿನ ಡೇಟಾ ಬಳಕೆ 1.5GB ಗಿಂತ ಕಡಿಮೆಯಿದ್ದರೆ ಮತ್ತು ಹೆಚ್ಚಿನ ಕರೆಗಳು ಅಗತ್ಯವಿದ್ದರೆ ಇಷ್ಟು ಕಡಿಮೆ ಬೆಲೆಗೆ ಈ ಮೂರು ಕಂಪನಿಗಳ ಪ್ರಿಪೇಯ್ಡ್ ರೀಚಾರ್ಜ್ ಬಗ್ಗೆ ಒಮ್ಮೆ ನೋಡ್ಕೊಳ್ಳಿ.
Airtel Rs 219 Plan
ನೀವು ಏರ್ಟೆಲ್ ಬಳಕೆದಾರರಾಗಿದ್ದರೆ ಈ 219 ರೂಗಳ ಯೋಜನೆ ನಿಮಗೆ ಉತ್ತಮವಾಗಿರುತ್ತದೆ. ಇದರಲ್ಲಿ ನೀವು ಪ್ರತಿದಿನ 1GB ಡೇಟಾ ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ಕರೆ ಮತ್ತು ಪ್ರತಿದಿನ 100 SMS ಸಹ ಪಡೆಯುತ್ತೀರಿ. ಇದಲ್ಲದೆ ಉಚಿತ ಹಲೋ ಟ್ಯೂನ್, ವಿಂಕ್ ಮ್ಯೂಸಿಕ್ ಮತ್ತು ಏರ್ಟೆಲ್ ಎಕ್ಸ್ಟ್ರೀಮ್ ಆಪ್ಗೆ ಉಚಿತ ಚಂದಾದಾರಿಕೆಗಳು ಈ ಯೋಜನೆಯೊಂದಿಗೆ ಲಭ್ಯವಿದೆ. ಈ ಪ್ರಿಪೇಯ್ಡ್ ಪ್ಯಾಕ್‌ನ ವ್ಯಾಲಿಡಿಟಿ 28 ದಿನಗಳಾಗಿರುತ್ತದೆ.
Vodafone Plans
ವೊಡಾಫೋನ್ ಅಂತಹ ಎರಡು ಯೋಜನೆಗಳನ್ನು ಹೊಂದಿದೆ. ಒಂದು 199 ಇನ್ನೊಂದು 219 ರೂಗಳದಾಗಿದೆ. ಈ ಎರಡೂ ಯೋಜನೆಗಳಿಗೆ ಪ್ರತಿದಿನ 1GB ಡೇಟಾದೊಂದಿಗೆ ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ಕರೆ ಮತ್ತು ಪ್ರತಿದಿನ 100 ಎಸ್‌ಎಂಎಸ್ ಸಿಗುತ್ತದೆ. ಇದಲ್ಲದೆ ವೊಡಾಫೋನ್ ಪ್ಲೇ ಮತ್ತು Zee 5 ಎರಡೂ ಉಚಿತ ಚಂದಾದಾರಿಕೆಯನ್ನು ಪಡೆಯುತ್ತವೆ. ಇವೆರಡರ ನಡುವಿನ ವ್ಯತ್ಯಾಸವೆಂದರೆ 199 ರೂ ಪ್ಯಾಕ್‌ನ ವ್ಯಾಲಿಡಿಟಿ 24 ದಿನಗಳಾದರೆ ಈ 219 ರೂಗಳ ಪ್ರಿಪೇಯ್ಡ್ ಪ್ಯಾಕ್‌ನ ವ್ಯಾಲಿಡಿಟಿ 28 ದಿನಗಳಾಗಿರುತ್ತದೆ.
Reliance Jio Plans
ಈ ಪ್ಲಾನ್ ಅಲ್ಲಿ ದಿನಕ್ಕೆ 1GB ಯ ಡೇಟಾವನ್ನು ಖರ್ಚು ಮಾಡುವ ಜಿಯೋ ಬಳಕೆದಾರರಿಗೆ 149 ರೂ.ಗಳ ಯೋಜನೆ ಉತ್ತಮವಾಗಿರುತ್ತದೆ. 24 ದಿನಗಳ ಮಾನ್ಯತೆಯೊಂದಿಗೆ ಈ ಯೋಜನೆಯಲ್ಲಿ ನೀವು ಪ್ರತಿದಿನ 1GB ಡೇಟಾದೊಂದಿಗೆ ಜಿಯೋದಿಂದ ಜಿಯೋಗೆ ಅನಿಯಮಿತ ಕರೆ ಜಿಯೋದಿಂದ ಇತರ ನೆಟ್‌ವರ್ಕ್‌ಗಳಿಗೆ ಕರೆಗಳಿಗೆ 300 ನಿಮಿಷಗಳು ಮತ್ತು ಪ್ರತಿದಿನ 100 ಎಸ್‌ಎಂಎಸ್ ಪಡೆಯುತ್ತೀರಿ. ಇದಲ್ಲದೆ ಕಂಪನಿಯು ಈ ಯೋಜನೆಯೊಂದಿಗೆ ಜಿಯೋ ಆಪ್‌ನ ಉಚಿತ ಚಂದಾದಾರಿಕೆಯನ್ನು ಸಹ ನೀಡುತ್ತಿದೆ.