ಪ್ರತಿದಿನ ಡೇಟಾ ಮತ್ತು Unlimited Calling ಪೂರ್ತಿ ಒಂದು ವರ್ಷಕ್ಕೆ ಬೇಕಿದ್ದರೆ ಯಾವ ಪ್ಲಾನ್ ಬೆಸ್ಟ್?

ಪ್ರತಿದಿನ ಡೇಟಾ ಮತ್ತು Unlimited Calling ಪೂರ್ತಿ ಒಂದು ವರ್ಷಕ್ಕೆ ಬೇಕಿದ್ದರೆ ಯಾವ ಪ್ಲಾನ್ ಬೆಸ್ಟ್?
HIGHLIGHTS

ಬೆಲೆಯನ್ನು ಈಗ ಹೆಚ್ಚಿಸಿದ್ದು ಮಾಸಿಕ ರಿಚಾರ್ಜ್ ಜನಸಾಮಾನ್ಯರ ಬಳಕೆಗೆ ಭಾರಿ ತಲೆನೋವಾಗಿದೆ ಅಂದ್ರೆ ತಪ್ಪಿಲ್ಲ.

ಮುಖ್ಯವಾಗಿ ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ (Reliance Jio) ಸುಮಾರು 20% ಅಧಿಕಗೊಳಿಸಿದೆ.

ಇದರ ಹಿನ್ನೆಲೆಯಲ್ಲಿ ಮೊದಲು 249 ರೂಗಳಿಗೆ ಪೂರ್ತಿ 28 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತಿದ್ದ ಈ ಯೋಜನೆ ಬೆಲೆ ಏರಿಕೆಯ ನಂತರ 299 ರೂಗಳಾಗಿದೆ.

Unlimited Calling and Daily Data: ಭಾರತದಲ್ಲಿ ಜನಪ್ರಿಯ ಟೆಲಿಕಾಂ ಕಂಪನಿಗಳಾಗಿರುವ Jio, Airtel ಮತ್ತು Vi ತಮ್ಮ ರಿಚಾರ್ಜ್ ಯೋಜನೆಗಳ ಬೆಲೆಯನ್ನು ಈಗ ಹೆಚ್ಚಿಸಿದ್ದು ಮಾಸಿಕ ರಿಚಾರ್ಜ್ ಜನಸಾಮಾನ್ಯರ ಬಳಕೆಗೆ ಭಾರಿ ತಲೆನೋವಾಗಿದೆ ಅಂದ್ರೆ ತಪ್ಪಿಲ್ಲ. ಅದರಲ್ಲೂ ಮುಖ್ಯವಾಗಿ ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ (Reliance Jio) ಸುಮಾರು 20% ಅಧಿಕಗೊಳಿಸಿದೆ. ಇದರ ಹಿನ್ನೆಲೆಯಲ್ಲಿ ಮೊದಲು 249 ರೂಗಳಿಗೆ ಪೂರ್ತಿ 28 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತಿದ್ದ ಈ ಯೋಜನೆ ಬೆಲೆ ಏರಿಕೆಯ ನಂತರ 299 ರೂಗಳಾಗಿದೆ ಅಂದ್ರೆ ಬರೋಬ್ಬರಿ 50 ರೂಗಳ ಹೆಚ್ಚಳವಾಗಿದೆ. ಈ ಮೂಲಕ ಜನಸಾಮಾನ್ಯರು ಈಗ ವಾರ್ಷಿಕ ಯೋಜನೆಗಳತ್ತ ಮುಖ ಮಾಡಿದ್ದೂ Jio, Airtel ಮತ್ತು Vi ನೀಡುತ್ತಿರುವ ವಾರ್ಷಿಕ ಯೋಜನೆಗಳಲ್ಲಿ ಯಾವುದು ಬೆಸ್ಟ್ ಈ ಕೆಳಗೆ ನೀವು ಒಂದಕ್ಕೊಂದು ಹೋಲಿಸಿ ನೋಡಬಹುದು.

Also Read: FASTag New Rule: ನಿಮ್ಮ ವಾಹನದ ಮೇಲೆ ಫಾಸ್ಟ್‌ಟ್ಯಾಗ್‌ ಇಲ್ಲದಿದ್ದರೆ ಭಾರಿ ದಂಡ! ಹೊಸ ನಿಯಮ ಹೇಳುವುದೇನು?

ಜಿಯೋದ 3599 ರೂಗಳ ವಾರ್ಷಿಕ ಯೋಜನೆಯ ವಿವರಗಳು

ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ (Reliance Jio) ಈಗ ಕೇವಲ ಎರಡು ವಾರ್ಷಿಕ ಯೋಜನೆಯನ್ನು ಮಾತ್ರ ಹೊಂದಿದ್ದು ಜಿಯೋದ 3599 ರೂಗಳ ವಾರ್ಷಿಕ ಯೋಜನೆಯ ವಿವರಗಳನ್ನು ಈ ಕೆಳಗೆ ನೀಡಲಾಗಿದೆ. ಇದರಲ್ಲಿ ನಿಮಗೆ ಪ್ರತಿದಿನ 2.5GB ಡೇಟಾದೊಂದಿಗೆ ಒಟ್ಟಾರೆಯಾಗಿ 912.5GB ಡೇಟಾವನ್ನು ಪೂರ್ತಿ ವ್ಯಾಲಿಡಿಟಿಗೆ ಲಭ್ಯವಿರುತ್ತದೆ. ಇದರೊಂದಿಗೆ ಅನ್ಲಿಮಿಟೆಡ್ ವಾಯ್ಸ್ ಕರೆಗಳನ್ನು ಸಹ ನೀಡುವುದರೊಂದಿಗೆ ಪ್ರತಿದಿನಕ್ಕೆ 100 ಉಚಿತ SMS ಸಹ ನೀಡುತ್ತಿದೆ. ಈ ಯೋಜನೆಯನ್ನು ಬಳಕೆದಾರರು 365 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದರೊಂದಿಗೆ ಬಳಕೆದಾದರೂ ಹೆಚ್ಚುವರಿಯಾಗಿ JioTV, JioCinema ಮತ್ತು JioCloud Subscription ಉಚಿತವಾಗಿ ಪಡೆಯಬಹುದು.

Best annual validity plan with daily data and unlimited calling
Best annual validity plan with daily data and unlimited calling

ಏರ್‌ಟೆಲ್‌ನ 3599 ರೂಗಳ ವಾರ್ಷಿಕ ಯೋಜನೆಯ ವಿವರಗಳು

ಭಾರತದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ಭಾರ್ತಿ ಏರ್ಟೆಲ್ (Airtel) ಸಹ ಜಿಯೋದಂತೆ ಅದೇ ಬೆಲೆಯ ಯೋಜನೆಯನ್ನು ಹೊಂದ್ದಿದ್ದು 3599 ರೂಗಳ ವಾರ್ಷಿಕ ಯೋಜನೆಯ ವಿವರಗಳನ್ನು ತಿಳಿಯಿರಿ. ಇದರಲ್ಲಿ ನಿಮಗೆ ಪ್ರತಿದಿನ 2GB ಡೇಟಾದೊಂದಿಗೆ ಒಟ್ಟಾರೆಯಾಗಿ 730GB ಡೇಟಾವನ್ನು ಪೂರ್ತಿ 365 ದಿನಗಳ ವ್ಯಾಲಿಡಿಟಿಗೆ ಲಭ್ಯವಿರುತ್ತದೆ. ಇದರೊಂದಿಗೆ ಅನ್ಲಿಮಿಟೆಡ್ ವಾಯ್ಸ್ ಕರೆಗಳನ್ನು ಸಹ ನೀಡುವುದರೊಂದಿಗೆ ಪ್ರತಿದಿನಕ್ಕೆ 100 ಉಚಿತ SMS ಸಹ ನೀಡುತ್ತಿದೆ. ಇದರೊಂದಿಗೆ ಬಳಕೆದಾದರೂ ಹೆಚ್ಚುವರಿಯಾಗಿ Airtel Xstream, Wynk Music ಅನ್ನು ಉಚಿತವಾಗಿ ಪಡೆಯಬಹುದು.

ವೊಡಾಫೋನ್ ಐಡಿಯಾದ 3499 ರೂಗಳ ವಾರ್ಷಿಕ ಯೋಜನೆಯ ವಿವರಗಳು

ಕೊನೆಯದಾಗಿ ವೊಡಾಫೋನ್ ಐಡಿಯಾ (Vi) ಸಹ ಏರ್ಟೆಲ್ ಮತ್ತು ಜಿಯೋದಂತೆ ಅದೇ ಬೆಲೆಗೆ ಅಂದ್ರೆ 3499 ರೂಗಳಿಗೆ ಈ ವಾರ್ಷಿಕ ಯೋಜನೆಯನ್ನು ನೀಡುತ್ತಿದ್ದು ಇದರಲ್ಲಿ ನಿಮಗೆ ಪ್ರತಿದಿನ 1.5GB ಡೇಟಾದೊಂದಿಗೆ ಒಟ್ಟಾರೆಯಾಗಿ 547.5GB ಡೇಟಾವನ್ನು ಪೂರ್ತಿ 365 ದಿನಗಳ ವ್ಯಾಲಿಡಿಟಿಗೆ ಲಭ್ಯವಿರುತ್ತದೆ. ಇದರೊಂದಿಗೆ ಅನ್ಲಿಮಿಟೆಡ್ ವಾಯ್ಸ್ ಕರೆಗಳನ್ನು ಸಹ ನೀಡುವುದರೊಂದಿಗೆ ಪ್ರತಿದಿನಕ್ಕೆ 100 ಉಚಿತ SMS ಸಹ ನೀಡುತ್ತಿದೆ.

Best annual validity plan with daily data and unlimited calling
Best annual validity plan with daily data and unlimited calling

ಇದರೊಂದಿಗೆ ಬಳಕೆದಾದರೂ ಹೆಚ್ಚುವರಿಯಾಗಿ ಹೆಚ್ಚುವರಿಯಾಗಿ ಇದರಲ್ಲಿ Vi ಬಳಕೆದಾರರಿಗೆ ವಾರಾಂತ್ಯದ ಡೇಟಾ ರೋಲ್‌ಓವರ್, ‘ಬಿಂಜ್ ಆಲ್ ನೈಟ್ ಸೌಲಭ್ಯವನ್ನು ನೀಡುತ್ತಿದೆ. ಅಂದ್ರೆ ನೀವು ರಾತ್ರಿ 12 ಗಂಟೆಯಿಂದ ಬೆಳಿಗ್ಗೆ 6am ವರೆಗೆ ನಿಮ್ಮ ಯಾವುದೇ ವೆಚ್ಚವಿಲ್ಲದೆ ಡೇಟಾ ಮತ್ತು ಕರೆಯನ್ನು ಅನುಭವಿಸಬಹುದು. ಅಲ್ಲದೆ Vi ಅಪ್ಲಿಕೇಶನ್ ಮೂಲಕ ಚಲನಚಿತ್ರಗಳಿಗೆ ಪ್ರವೇಶ ಮತ್ತು ಹೆಚ್ಚುವರಿ ವೆಚ್ಚವಿಲ್ಲದೆ 2GB ಡೇಟಾ ಬ್ಯಾಕಪ್‌ನಂತಹ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯುತ್ತವೆ.

ನಿಮ್ಮ ಗಮನಕ್ಕೆ: ನಿಮ್ಮ ಮೊಬೈಲ್ ನಂಬರ್‌ಗೆ ಲಭ್ಯವಿರುವ ಅತ್ಯುತ್ತಮವಾದ ಯೋಜನೆ ಮತ್ತು ಪ್ರಯೋಜನಗಳನ್ನು Digit Recharge ಮೇಲೆ ಕ್ಲಿಕ್ ಮಾಡಿ ಪರಿಶೀಲಿಸಬಹುದು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo