Jio vs Airtel vs Vi: ಇಂದಿನ ದಿನಗಳಲ್ಲಿ ಎಲ್ಲಾ ಸ್ಮಾರ್ಟ್‌ಫೋನ್ ತಯಾರಕರು ಡ್ಯುಯಲ್ ಸಿಮ್ ಕಾರ್ಡ್ ಸ್ಲಾಟ್‌ಗಳನ್ನು ನೀಡುತ್ತಿದ್ದಾರೆ. ಸಾಮಾನ್ಯವಾಗಿ ಬಳಕೆದಾರರು ತಮ್ಮ ಪ್ರೈಮರಿ ಸಿಮ್ ಅನ್ನು ಪರ್ಸನಲ್ ಕೆಲಸಕ್ಕಾಗಿ ಮತ್ತೊಂದನ್ನು ಸಾಮಾನ್ಯ ಬಳಕೆಗೆ ಇಟ್ಟುಕೊಳ್ಳುವುದು ಅನಿವಾರ್ಯ. ಆದರೆ TRAI ನಿಯಮದ ಪ್ರಕಾರ ನೀವು ಯಾವುದೇ ಸಿಮ್ ಕಾರ್ಡ್ ಹೊಂದಿರಿ ಅದಕ್ಕೆ ಕನಿಷ್ಠ ರಿಚಾರ್ಜ್ ಮಾಡಿಸಲೇಬೇಕಾಗುತ್ತದೆ. ಇಲ್ಲವಾದರೆ ಸಿಮ್ ಕಾರ್ಡ್ ಅನ್ನು ಬಂದ್ ಆಗುತ್ತದೆ. ಈ ಮಧ್ಯೆ ಮೊದಲು ಹೊರ ಹೋಗುವ ಕರೆಗಳು ಬಂದ್ ಆಗಿ ನಂತರ ಒಳಬರುವ ಕರೆಗಳು ಬಂದ್ ಆಗುತ್ತವೆ. ಇವನ್ನು ತಪ್ಪಿಸಲು ನೀವು Jio, Airtel, Vi ನೀಡುತ್ತಿರುವ ವಾರ್ಷಿಕ ಯೋಜನಗೆಳ ಪ್ರಯೋಜನೆಗಳ ಬಗ್ಗೆ ತಿಳಿಯಿರಿ.
Also Read: ಇವೇ ನೋಡಿ ₹10,000 ರೂಗಳೊಳಗೆ ಬರುವ ಬೆಸ್ಟ್ Smart TVs! ಫೀಚರ್ ಮತ್ತು ಆಫರ್‌ಗಳೇನು?
ದೇಶದಲ್ಲಿ ಅತಿ ಕಡಿಮೆ ಬೆಲೆಗೆ ಭಾರಿ ಪ್ರಯೋಜನಗಳನ್ನು ನೀಡುವ ಟೆಲಿಕಾಂ ಕಂಪನಿಯ ಬೆಸ್ಟ್ ವಾರ್ಷಿಕ ರಿಚಾರ್ಜ್ ಯೋಜನೆಗಳಲ್ಲಿ ಒಂದಾಗಿರುವ ಈ ರಿಲಯನ್ಸ್ ಜಿಯೋದ ರೂ 1,559 ರೀಚಾರ್ಜ್ ಯೋಜನೆಯು ಬಳಕೆದಾರರಿಗೆ ಪೂರ್ತಿ ಮಾನ್ಯತೆಗಾಗಿ ಒಟ್ಟಾರೆ 24GB ಹೈಸ್ಪೀಡ್ 5G ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು 3600 SMS (ದಿನಕ್ಕೆ 100 ಸೀಮಿತವಾಗಿದೆ) ಜೊತೆಗೆ 336 ದಿನಗಳ ಮಾನ್ಯತೆಯನ್ನು ನೀಡುತ್ತದೆ. 5G ಬಳಕೆದಾರರು ಯಾವುದೇ ಡೇಟಾ ಕ್ಯಾಪ್ ಇಲ್ಲದೆ ಅನಿಯಮಿತ 5G ಡೇಟಾಗೆ ಪ್ರವೇಶವನ್ನು ಪಡೆಯುತ್ತಾರೆ. ಇದಲ್ಲದೆ ಈ ರಿಲಯನ್ಸ್ ಜಿಯೋ ಯೋಜನೆಯು JioTV, JioCinema ಮತ್ತು JioCloud ಪೂರಕ ಪ್ರವೇಶವನ್ನು ಒಳಗೊಂಡಿದೆ.
ಏರ್‌ಟೆಲ್‌ನ ಈ ಪ್ರೀಪೇಯ್ಡ್ ಯೋಜನೆಯಲ್ಲಿ ವರ್ಷಕ್ಕಾಗಿ ರಿಚಾರ್ಜ್ ಪ್ಲಾನ್ ಹುಡುಕುವ ಬಳಕೆದಾರರಿಗೆ ಈ ಏರ್‌ಟೆಲ್‌ನ ರೂ 1,799 ರೀಚಾರ್ಜ್ ಯೋಜನೆಯು ಅತ್ಯುತ್ತಮ ಪ್ರಯೋಜನಗಳ ಪಟ್ಟಿಯಲ್ಲಿ ಒಂದಾಗಿದೆ. ಇದರಲ್ಲಿ ಬಳಕೆದಾರರಿಗೆ 365 ದಿನಗಳ ಮಾನ್ಯತೆ ಉಚಿತ ಅನಿಯಮಿತ ಕರೆಯೊಂದಿಗೆ 3600 SMS ಮತ್ತು ಒಟ್ಟಾರೆಯ 24GB ಹೈಸ್ಪೀಡ್ 4G ಡೇಟಾ ಸೇರಿವೆ. ಈ ಯೋಜನೆಯು ತಿಂಗಳಿಗೆ ಕೇವಲ 150 ರೂಗಿಂತ ಕಡಿಮೆ ವೆಚ್ಚವಾಗುತ್ತದೆ. ಏರ್‌ಟೆಲ್ ವೈಂಕ್ ಮ್ಯೂಸಿಕ್ ಪ್ರವೇಶ ಮತ್ತು ಹಲೋ ಟ್ಯೂನ್‌ಗಳಿಗೆ ಉಚಿತ ಪ್ರವೇಶದಂತಹ ಹೆಚ್ಚುವರಿ ಪ್ರಯೋಜನಗಳನ್ನು ಸಹ ನೀಡುತ್ತದೆ.
ವೊಡಾಫೋನ್ ಐಡಿಯಾದ (Vi) ಈ ಅತ್ಯಂತ ಕೈಗೆಟುಕುವ ವಾರ್ಷಿಕ ರೀಚಾರ್ಜ್ ಯೋಜನೆಯು ರೂ 1,799 ವೆಚ್ಚವಾಗುತ್ತದೆ. ಮತ್ತು 365 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಇದು ಉಚಿತ ಅನಿಯಮಿತ ಕರೆಗಳೊಂದಿಗೆ ಒಟ್ಟಾರೆಯಾಗಿ 24GB ಹೈಸ್ಪೀಡ್ 4G ಡೇಟಾ ಮತ್ತು 3600 SMS ಅನ್ನು ಒಳಗೊಂಡಿರುವ ಏರ್‌ಟೆಲ್ ಯೋಜನೆಯಂತೆಯೇ ಭಾರಿ ಪ್ರಯೋಜನಗಳನ್ನು ನೀಡುತ್ತದೆ. ಅಲ್ಲದೆ ಹೆಚ್ಚುವರಿಯಾಗಿ ಬಳಕೆದಾರರು ವಾಪೋಡಾಪೋನ್ ಐಡಿಯಾದ (Vi) ಚಲನಚಿತ್ರಗಳು ಮತ್ತು ಟಿವಿಗೆ ಉಚಿತವಾಗಿ ಪ್ರವೇಶವನ್ನು ಪಡೆಯಬಹುದು.