Jio-Airtel-Vi: ಸುಮಾರು 300 ರೂಗಳಲ್ಲಿ ಅನ್ಲಿಮಿಟೆಡ್ ಕರೆಗಳು ಮತ್ತು 5G ಡೇಟಾ ನೀಡುವ ಅತ್ಯುತ್ತಮ ಪ್ಲಾನ್ ಯಾವುದು?

Updated on 01-May-2023
HIGHLIGHTS

ರಿಲಯನ್ಸ್ ಜಿಯೋ (Reliance Jio), ಭಾರ್ತಿ ಏರ್ಟೆಲ್ (Airtel) ಮತ್ತು ವೊಡಾಫೋನ್ ಐಡಿಯಾ (Vi) ತಮ್ಮ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿರುತ್ತವೆ.

ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳಲ್ಲಿ 300 ರೂಗಿಂತ ಕಡಿಮೆ ರೀಚಾರ್ಜ್ ಯೋಜನೆಗಳ ಬಗ್ಗೆ ಹೇಳಲಿದ್ದೇವೆ.

ಸದ್ಯಕ್ಕೆ ಅತ್ಯಂತ ಜನಪ್ರಿಯ ಪ್ರಿಪೇಯ್ಡ್ 5G ಯೋಜನೆ ರಿಲಯನ್ಸ್ ಜಿಯೋ 299 ರೂಗಳ ಪ್ಯಾಕೇಜ್ ಆಗಿದೆ.

Recharge Plans: ಭಾರತದ ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರನ್ನು ಸೆಳೆಯಲು ಹೊಸ ಹೊಸ ಯೋಜನೆಗಳನ್ನು ಕಡಿಮೆ ಬೆಲೆಗೆ ನೀಡುತ್ತಿದ್ದಾರೆ. ಈ ಆಫರ್ ಅನ್ನು ನೀಡುವುದರಲ್ಲಿ ಮುಖ್ಯಾವಾಗಿ ರಿಲಯನ್ಸ್ ಜಿಯೋ (Reliance Jio), ಭಾರ್ತಿ ಏರ್ಟೆಲ್ (Airtel) ಮತ್ತು ವೊಡಾಫೋನ್ ಐಡಿಯಾ (Vi) ಮುಂದಾಗಿವೆ. ಏಕೆಂದರೆ ಮೊದಲಿಗೆ ಅತ್ಯಂತ ಜನಪ್ರಿಯ ಪ್ರಿಪೇಯ್ಡ್ ಯೋಜನೆಯು ಜಿಯೋದ 299 ರೂ ಪ್ಯಾಕೇಜ್ ಆಗಿದೆ. ಇದರ ಕ್ರಮವಾಗಿ ಈ 3 ಕಂಪನಿಗಳಲ್ಲಿ ಸುಮಾರು 300 ರೂಗಿಂತ ಕಡಿಮೆ ಬೆಲೆಯ ರೀಚಾರ್ಜ್ ಯೋಜನೆಗಳ ಬಗ್ಗೆ ನಿಮಗೆ ಈ ಲೇಖನದಲ್ಲಿ ತಿಳಿಸಲಾಗಿದೆ.

ಜಿಯೋವಿನ 300 ರೂಗಳ ರಿಚಾರ್ಜ್ ಯೋಜನೆಗಳು:

ದೇಶದ ನಂಬರ್ ಒನ್ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ (Reliance Jio) ಹೆಚ್ಚುವರಿಯಾಗಿ ತನ್ನೆಲ್ಲ ರಿಚಾರ್ಜ್ ಯೋಜನೆಗಳಲ್ಲಿ ಹೆಚ್ಚಿನ 4G ಡೇಟಾ ಪ್ಯಾಕ್‌ ಜೊತೆಗೆ ಜಿಯೋ ಟಿವಿ, ಜಿಯೋ ಸಿನಿಮಾ, ಸೆಕ್ಯುರಿಟಿ ಮತ್ತು ಕ್ಲೌಡ್‌ನ ಚಂದಾದಾರಿಕೆಯನ್ನು ಒಳಗೊಂಡಿದೆ. ಕಂಪನಿಯ ಸುಮಾರು 300 ರೂಗಿಂತ ಕಡಿಮೆ ಬೆಲೆಯ ರೀಚಾರ್ಜ್ ಯೋಜನೆ ಅಂದ್ರೆ ಅದು 259 ಮತ್ತು 299 ರೂಗಳಾದಾಗಿದೆ. ಮೊದಲಿಗೆ ಜಿಯೋದ 259 ರೂ ಪ್ರಿಪೇಯ್ಡ್ ಯೋಜನೆಯು 28 ದಿನಗಳ ಮಾನ್ಯತೆಯನ್ನು ಹೊಂದಿದೆ. ಇದರ ಕ್ರಮವಾಗಿ ಜಿಯೋದ 259 ರೂ ಪ್ರಿಪೇಯ್ಡ್ ಯೋಜನೆ 30 ದಿನಗಳವರೆಗೆ ಮಾನ್ಯವಾಗಿರುತ್ತದೆ. ಅಲ್ಲದೆ 299 ರೂ ಪ್ಯಾಕೇಜ್ ಜಿಯೋವಿನ ಪ್ರೀಮಿಯಂ ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶವನ್ನು ನೀಡುವುದರ ಜೊತೆಗೆ ಪ್ರತಿದಿನ 1.5GB ಡೇಟಾವನ್ನು ನೀಡುತ್ತದೆ.

ಇದನ್ನೂ ಓದಿ: Amazon Summer Sale 2023: ಅಮೆಜಾನ್ ಭರ್ಜರಿಯ ಆಫರ್‌ಗಳ ಸುರಿಮಳೆಯ ಸೇಲ್ ಮೇ 4 ರಿಂದ ಪ್ರಾರಂಭ!

ಏರ್ಟೆಲ್ನ 300 ರೂಗಳ ರಿಚಾರ್ಜ್ ಯೋಜನೆಗಳು:

ದೇಶದ ಎರಡನೇ ಸ್ಥಾನದಲ್ಲಿರುವ ಟೆಲಿಕಾಂ ಕಂಪನಿ ಭಾರ್ತಿ ಏರ್‌ಟೆಲ್‌ನ (Airtel) ತನ್ನೆಲ್ಲ ರಿಚಾರ್ಜ್ ಯೋಜನೆಗಳಲ್ಲಿ ಭಾರಿ ಮಾತ್ರದ ಪ್ರಯೋಜನಗಳನ್ನು ನೀಡದಿದ್ದರೂ ಕೆಲವೊಂದು ಯೋಜನೆಯನ್ನು ಜಿಯೊವಿನಂತೆ ಸಮನಾದ ಪ್ರಯೋಜನಗಳನ್ನು ನೀಡುತ್ತಿದೆ. ಏರ್ಟೆಲ್ನ  299 ರೂ ಪ್ರಿಪೇಯ್ಡ್ ಪ್ಯಾಕೇಜ್ 28 ದಿನಗಳವರೆಗೆ 100 SMS, ದಿನಕ್ಕೆ 1.5GB ಡೇಟಾ ಮತ್ತು ಉಚಿತ ಕರೆಯನ್ನು ನೀಡುತ್ತದೆ. ಈ ಯೋಜನೆಯು ಅನ್‌ಲಿಮಿಟೆಡ್ 5G ಡೇಟಾ, Wynk Music ಮತ್ತು HelloTunes ಗೆ ಉಚಿತ ಪ್ರವೇಶವನ್ನು ಸಹ ನೀಡುತ್ತದೆ. ಏರ್‌ಟೆಲ್‌ನ 296 ರೂ ಯೋಜನೆಯು ಒಟ್ಟು 25GB ಡೇಟಾ, ಅನ್‌ಲಿಮಿಟೆಡ್ ಕರೆ, ಅನ್‌ಲಿಮಿಟೆಡ್ 5G ಡೇಟಾ, ಉಚಿತ Hello Tunes ಮತ್ತು Wynk Music ಚಂದಾದಾರಿಕೆಯನ್ನು 30 ದಿನಗಳವರೆಗೆ ನೀಡುತ್ತದೆ. 

ವೊಡಾಫೋನ್ ಐಡಿಯಾದ 300 ರೂಗಳ ರಿಚಾರ್ಜ್ ಯೋಜನೆಗಳು:

ಇದರ ಕ್ರಮವಾಗಿ ದೇಶದ ಮೂರನೇ ಸ್ಥಾನದಲ್ಲಿರುವ ಟೆಲಿಕಾಂ ಬ್ರಾಂಡ್ ಅಂದ್ರೆ ವೊಡಾಫೋನ್ ಐಡಿಯಾ. ತಮ್ಮ ಬಳಕೆದಾರರನ್ನು ಪ್ರತಿ ತಿಂಗಳು ಕಳೆದುಕೊಳ್ಳುತ್ತಿರುವ ಕಂಪನಿ ತಮ್ಮ ಬಳಕೆರ್ದಾರರನ್ನು ತನ್ನಲ್ಲೇ ಇರಿಸಿಕೊಳ್ಳಲು ಹೊಸ ಯೋಜನೆಗಳೊಂದಿಗೆ ಜಿಯೋ ಮತ್ತು ಏರ್ಟೆಲ್ನೊಂದಿಗೆ ಸದಾ ಸಮಂತರಾದ ಯೋಜನೆಗಳನ್ನು ನೀಡುತ್ತಿದೆ. ಈ ಮೂಲಕ ವೊಡಾಫೋನ್ ಐಡಿಯಾ 296 ರೂ ಪ್ರಿಪೇಯ್ಡ್ ಯೋಜನೆಯು ಒಟ್ಟು 25GB ಡೇಟಾ, ಅನ್‌ಲಿಮಿಟೆಡ್ ಕರೆ, Vi Movies ಮತ್ತು ಲೈವ್ ಟಿವಿಗೆ 30 ದಿನಗಳ ಪ್ರವೇಶವನ್ನು ನೀಡುತ್ತದೆ. VI ನ 269 ರೂ ಯೋಜನೆಯು ದಿನಕ್ಕೆ 1GB ಡೇಟಾ, 100 SMS, 4GB ಹೆಚ್ಚುವರಿ ಡೇಟಾ, ಅನ್‌ಲಿಮಿಟೆಡ್ ಕರೆ, Vi Movies ಮತ್ತು ಲೈವ್ ಟಿವಿ ಇವೆಲ್ಲವನ್ನೂ 28 ದಿನಗಳ ಮಾನ್ಯತೆಯೊಂದಿಗೆ ನೀಡುತ್ತದೆ.

ಇದನ್ನೂ ಓದಿ: ಡ್ರೈವಿಂಗ್ ಲೈಸೆನ್ಸ್‌ ಪಡೆಯಲು ಇನ್ಮುಂದೆ ಪರೀಕ್ಷೆ ನೀಡಬೇಕಿಲ್ಲ! ಈ ಹೊಸ ನಿಯಮಗಳ ಬಗ್ಗೆ ನಿಮಗೆಷ್ಟು ಗೊತ್ತು?

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :