ಭಾರ್ತಿ ಏರ್ಟೆಲ್ ತನ್ನ ಕನಿಷ್ಠ ಮಾಸಿಕ ರೀಚಾರ್ಜ್ ಪ್ಲಾನ್ ಅನ್ನು ಪ್ರಿಪೇಯ್ಡ್ ಬಳಕೆದಾರರಿಗೆ ಮತ್ತೊಂಮ್ಮೆ ದುಬಾರಿಯಾನ್ನಾಗಿ ಮಾಡಿದೆ. ಈ ಮೊದಲು ಈ ಪ್ಲಾನ್ 35 ರೂಗಳಾಗಿತ್ತು ಆದರೆ ಈಗ ನೀವು ಇದರ ಬದಲಾಗಿ 45 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಅಂದರೆ ಈ ಯೋಜನೆ ತಿಂಗಳಿಗೆ ಸುಮಾರು 10 ರೂಪಾಯಿಗಳಷ್ಟು ದುಬಾರಿಯಾಗಿದೆ. ನೀವು ಏರ್‌ಟೆಲ್‌ನೊಂದಿಗೆ ಸಂಪರ್ಕದಲ್ಲಿರಲು ಬಯಸಿದರೆ ನೀವು ಪ್ರತಿ ತಿಂಗಳಿಗೆ ಕನಿಷ್ಠ 45 ರೂಪಾಯಿಗಳನ್ನು ರೀಚಾರ್ಜ್ ಮಾಡಿಕೊಳ್ಳಲೇಬೇಕು ಎಂಬುದು ಸ್ಪಷ್ಟವಾಗಿದೆ. ಈ ಯೋಜನೆ ಇಂದಿನಿಂದಲೇ ಅಂದ್ರೆ 30ನೇ ಡಿಸೆಂಬರ್ 2019 ರಿಂದ ಪ್ರಾರಂಭವಾಗುತ್ತಿದೆ.
ಏರ್ಟೆಲ್ ಬಳಕೆದಾರರು 28 ದಿನಗಳಿಗೊಮ್ಮೆ 45 ಅಥವಾ ಅದಕ್ಕಿಂತ ಹೆಚ್ಚಿನದನ್ನು ರೀಚಾರ್ಜ್ ಮಾಡಬೇಕಾಗುತ್ತದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ. ಹಾಗೆ ಮಾಡಿದರೆ ಮಾತ್ರ ಮಾತ್ರ ಏರ್ಟೆಲ್ ಬಳಕೆದಾರರು ಕಂಪನಿಯ ಸೇವೆಗಳ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಬಳಕೆದಾರರು 45 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ರೀಚಾರ್ಜ್ ಮಾಡದಿದ್ದರೆ ಅವರಿಗೆ ಸೀಮಿತ ಸೇವೆಯೊಂದಿಗೆ 15 ದಿನಗಳ ಗ್ರೇಸ್ (ವ್ಯಾಲಿಡಿಟಿ ಮುಗಿದ ನಂತರ 15 ದಿನ) ಅವಧಿ ನೀಡಲಾಗುತ್ತದೆ.
ಈ ಗ್ರೇಸ್ ಅವಧಿಯಲ್ಲಿ ಪುನಃ ರಿಚಾರ್ಜ್ ಮಾಡಿಕೊಳ್ಳಬೇಕು ಇಲ್ಲವಾದರೆ ಕಂಪನಿ ಎಲ್ಲಾ ಸೇವೆಗಳನ್ನು ನಿಲ್ಲಿಸುತ್ತದೆ. ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾದ ಯೋಜನೆಗಳು ಸುಮಾರು 40% ಪ್ರತಿಶತದಷ್ಟು ದುಬಾರಿಯಾಗಿರುವುದು ನಿಮಗೀಗಾಲೇ ತಿಳಿದಿದೆ. ಅದೂ ಕಳೆದ ಒಂದು ತಿಂಗಳಲ್ಲಿ ಈ ಸಣ್ಣ ರೀಚಾರ್ಜ್ ಕಂಪನಿಯ ಸೇವೆಯೊಂದಿಗೆ ಮಾತ್ರ ಸಂಪರ್ಕ ಹೊಂದಲು ಬಯಸುವ ಮತ್ತು ದೊಡ್ಡ ರೀಚಾರ್ಜ್ ಮಾಡದ ಬಳಕೆದಾರರ ಮೇಲೆ ಮಾತ್ರ ಹೆಚ್ಚು ಪರಿಣಾಮ ಬೀರುತ್ತದೆ.
ಈ ದಿನಗಳಲ್ಲಿ ಟೆಲಿಕಾಂ ಉದ್ಯಮದಲ್ಲಿ ತೀವ್ರ ಪೈಪೋಟಿ ನೀಡುತ್ತಿವೆ. ವೊಡಾಫೋನ್-ಐಡಿಯಾದ ಸ್ಥಿತಿ ದುರಸ್ತಿಯಲ್ಲಿವೆ. ಮತ್ತು ಅವರ ಬಿಸಿನೆಸ್ ಕುಸಿಯುತ್ತಿರುವ ವರದಿಗಳು ಇದ್ದರೂ BSNL ಕೂಡ ಕೆಳಗಿಳಿದರು ಉತ್ತಮವಾದ ಆಫರ್ಗಳನ್ನು ನೀಡುತ್ತಿದೆ. ಈ ಆಟದ ಅತಿದೊಡ್ಡ ಆಟಗಾರ ಜಿಯೋ ವಿರುದ್ಧ ನಿಲ್ಲಲು ಏರ್‌ಟೆಲ್ ಸಮರ್ಥವಾಗಿದೆ. ಅದೇ ಸಮಯದಲ್ಲಿ ಲಾಭದಲ್ಲಿ ನಡೆಯುತ್ತಿರುವ ಏಕೈಕ ಟೆಲಿಕಾಂ ಕಂಪನಿ ಎಂದರೆ ಅದು ರಿಲಯನ್ಸ್ ಜಿಯೋ ಆಗಿದೆ. ಟೆಲಿಕಾಂ ಉದ್ಯಮದಲ್ಲಿ ತೀವ್ರ ಪೈಪೋಟಿಯಿಂದಾಗಿ ಏರ್‌ಟೆಲ್, ವೊಡಾಫೋನ್ ಐಡಿಯಾ ಮತ್ತು ರಿಲಯನ್ಸ್ ಜಿಯೋ ಇತ್ತೀಚೆಗೆ ದರಗಳನ್ನು ಹೆಚ್ಚಿಸುವುದಾಗಿ ಘೋಷಿಸಿರುವುದು ಗಮನಿಸಬೇಕಾದ ಸಂಗತಿಯಾಗಿದೆ.