Amazon Prime Lite Vs JioCinema: ಸಾಮಾನ್ಯವಾಗಿ ಇಂದಿನ ದಿನಗಳಲ್ಲಿ ಮನೋರಂಜನೆಗಾಗಿ ಅಧಿಕವಾಗಿ ಡೇಟಾ ಮತ್ತು ಯೋಜನೆಗಳ ಅಲೆಯಲ್ಲಿ ಸ್ಮಾರ್ಟ್ಫೋನ್ ಬಳಸುವ ಪ್ರತಿಯೊಬ್ಬರೂ ಸಿಲುಕಿದ್ದಾರೆ. ಆದರೆ ಇವೇರಡಲ್ಲಿ ಯಾರ ಪ್ಲಾನ್ ಯಾವ ಬೆಲೆಗೆ ಏನೇನು ಪ್ರಯೋಜನಗಳನ್ನು ನೀಡುತ್ತಿದೆ ಎಂದು ತಿಳಿದುಕೊಳ್ಳುವುದು ಪ್ರತಿ ಬಳಕೆದಾರರಿಗೆ ಬಹು ಮುಖ್ಯವಾದ ಅಂಶವಾಗಿದೆ. ಈ ಮೂಲಕ ಸದ್ಯಕ್ಕೆ ಕಡಿಮೆ ಬೆಲೆಯ ಚಂದಾದಾರಿಕೆಯನ್ನು ನೀಡುತ್ತಿರುವ ಅಮೆಜಾನ್ ಪ್ರೈಮ್ ಲೈಟ್ ಮತ್ತು ಜಿಯೋ ಸಿನಿಮಾದ ₹999 ರೂಗಳ ಚಂದಾದಾರಿಕೆಯ ಪ್ಲಾನ್ ಬಗ್ಗೆ ತಿಳಿಯೋಣ.
ರಿಲಯನ್ಸ್ ಜಿಯೋದ ಈ JioCinema Premium ಚಂದಾದಾರಿಕೆ ಯೋಜನೆಗೆ ಠಕ್ಕರ್ ನೀಡಲು ಅಮೆಜಾನ್ ತನ್ನ ಹೊಸ Amazon Prime Lite ಸೇವೆಯನ್ನು ಜಾರಿಗೆ ತಂದಿದೆ. ಈಗ ಅದರ ಸ್ಪರ್ಧೆಯಲ್ಲಿ ಅಮೆಜಾನ್ ಪ್ರೈಮ್ ಲೈಟ್ ಮೂಲಕ ಜಿಯೋದಂತೆ ಉತ್ತಮ ಪ್ರಯೋಜನಗಳನ್ನು ನೀಡಲು ಪ್ರಾರಂಭಿಸಿದೆ. ಇದು ಅತಿ ಕಡಿಮೆ ಬೆಲೆಯ ಚಂದಾದಾರಿಕೆ ಯೋಜನೆಗೆ ಪ್ರಯೋಜನಗಳ ಆಧಾರದ ಮೇರೆಗೆ ಉತ್ತಮ ಎನ್ನುವುದು ನನ್ನ ಅನಿಸಿಕೆ ಅಷ್ಟೇ. ಆದರೆ ಅಮೆಜಾನ್ ಏನೂ ಕಡಿಮೆಯಲ್ಲ Amazon Prime Lite ಚಂದಾದಾರಿಕೆಯನ್ನು ₹999 ರೂಗಳಿಗೆ ಬಿಡುಗಡೆ ಮಾಡಲಾಗಿದೆ.
ಜಿಯೋ ಸಿನಿಮಾದ ಚಂದಾದಾರಿಕೆ ಯೋಜನೆಯು 12 ತಿಂಗಳ ಮಾನ್ಯತೆಯನ್ನು ನೀಡುತ್ತದೆ. ಇದರಲ್ಲಿ ಯಾವುದೇ ಡಿವೈಸ್ ಮೊಬೈಲ್, ಲ್ಯಾಪ್‌ಟಾಪ್, ಕಂಪ್ಯೂಟರ್ ಮತ್ತು ಟ್ಯಾಬ್ಲೆಟ್‌ನಲ್ಲಿ ವಿಶೇಷ ಕಂಟೆಂಟ್‌ಗಳನ್ನು ನೋಡಬಹುದು. ಇದು ಅತ್ಯುತ್ತಮ ವೀಡಿಯೊ ಮತ್ತು ಆಡಿಯೊ ಗುಣಮಟ್ಟವನ್ನು ನೀಡುತ್ತದೆ. ಈ ಚಂದಾದಾರಿಕೆ ಯೋಜನೆಯಲ್ಲಿ ನೀವು ಏಕಕಾಲದಲ್ಲಿ ನಾಲ್ಕು ಡಿವೈಸ್‌ಗಳಲ್ಲಿ ಕಂಟೆಂಟ್‌ಗಳನ್ನು ವೀಕ್ಷಿಸಬಹುದು. JioCinema Premium ಲೇಟೆಸ್ಟ್ ಹಾಲಿವುಡ್ ಕಂಟೆಂಟ್‌ಗಳನ್ನು ಒದಗಿಸಲು ಇತ್ತೀಚೆಗೆ ಇಂಟರ್ನ್ಯಾಷನಲ್ ಕಂಟೆಂಟ್ ಪೂರೈಕೆಯೊಂದಿಗೆ ತಮ್ಮ ಪಾಲುದಾರಿಕೆಯನ್ನು ಕಂಪನಿ ಹೊಂದಿದೆ.
ಜಿಯೋ ಸಿನಿಮಾದಂತೆ ಅಮೆಜಾನ್ ಪ್ರೈಮ್ ಲೈಟ್‌ನಲ್ಲಿ 12 ತಿಂಗಳ ವ್ಯಾಲಿಡಿಟಿಯನ್ನು ಸಹ ನೀಡಲಾಗುತ್ತದೆ. ಈ ಚಂದಾದಾರಿಕೆ ಯೋಜನೆಯಲ್ಲಿ ಅನಿಯಮಿತ ವೀಡಿಯೊಗಳು, ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಿಗೆ ಪ್ರವೇಶ ಲಭ್ಯವಿದೆ. ಈ ಯೋಜನೆಯಲ್ಲಿ ಬಳಕೆದಾರರು ಜಾಹೀರಾತುಗಳಿಲ್ಲದೆ ಏಕಕಾಲದಲ್ಲಿ ಎರಡು ಡಿವೈಸ್‌ಗಳಲ್ಲಿ HD ಕಂಟೆಂಟ್‌ಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. Amazon Prime Lite ಚಂದಾದಾರಿಕೆ ಹೊಂದಿರುವ ಬಳಕೆದಾರರು 2 ದಿನಗಳಲ್ಲಿ ಅಮೆಜಾನ್ ಮೂಲಕ ಮಾಡಿದ ಶಾಪಿಂಗ್ ವಸ್ತುಗಳನ್ನು ಪಡೆಯುಲಿವ ಸೇವೆಯನ್ನು ಸಹ ಉಚಿತವಾಗಿ ಪಡೆಯುತ್ತಾರೆ. ಅಲ್ಲದೆ ನೀವು 25% ಪ್ರತಿಶತ ಕ್ಯಾಶ್ಬ್ಯಾಕ್ ಆನಂದಿಸಲು ಸಾಧ್ಯವಾಗುತ್ತದೆ. ಅಲ್ಲದೆ Amazon Pay ICICI ಬ್ಯಾಂಕ್ ಕಾರ್ಡ್‌ನೊಂದಿಗೆ ಮಾಡಿದ ಖರೀದಿಗಳ ಮೇಲೆ 5%ಶೇಕಡಾ ರಿಯಾಯಿತಿಯನ್ನು ಆನಂದಿಸಲು ಸಾಧ್ಯವಾಗುತ್ತದೆ.