ಏರ್ಟೆಲ್ ಚಂದಾದಾರರು ಜನಪ್ರಿಯ ತಿಂಗಳ ಯೋಜನೆಗಳಿಗೆ ಕನಿಷ್ಠ 50 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
ಕ್ರಮವಾಗಿ 56 ದಿನಗಳು ಮತ್ತು 84 ದಿನಗಳ ವ್ಯಾಲಿಡಿಟಿಯ ಯೋಜನೆಗಳಿಗೆ ಕನಿಷ್ಠ 479 ಮತ್ತು 455 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ಅನುಗುಣವಾದ ಡೇಟಾ (Data) ಮತ್ತು ಸ್ಟ್ರೀಮಿಂಗ್ ಪ್ರಯೋಜನಗಳನ್ನು ನೀಡುತ್ತದೆ
ಏರ್‌ಟೆಲ್ ಚಂದಾದಾರರು ಜನಪ್ರಿಯ ತಿಂಗಳ ಯೋಜನೆಗಳಿಗೆ ಕನಿಷ್ಠ 50 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಆದರೆ ಕ್ರಮವಾಗಿ 56 ದಿನಗಳು ಮತ್ತು 84 ದಿನಗಳ ವ್ಯಾಲಿಡಿಟಿಯ ಯೋಜನೆಗಳಿಗೆ ಕನಿಷ್ಠ 479 ಮತ್ತು 455 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಡೇಟಾ ಟಾಪ್-ಅಪ್ ಯೋಜನೆಗಳ (Top-Up) ವೆಚ್ಚವನ್ನು ಸಹ ಹೆಚ್ಚಿಸಲಾಗಿದೆ. ಈಗಿರುವ ರೂ.48 ದರವನ್ನು ರೂ.58ಕ್ಕೆ ಹೆಚ್ಚಿಸಲಾಗಿದ್ದು ರೂ.98 ಮತ್ತು ರೂ.251 ರೀಪ್‌ಅಪ್‌ಗಳನ್ನು ಕ್ರಮವಾಗಿ ರೂ.118 ಮತ್ತು ರೂ.301ಕ್ಕೆ ಹೆಚ್ಚಿಸಲಾಗಿದೆ.
28 ದಿನಗಳ ಮಾನ್ಯತೆ ಪ್ರಿಪೇಯ್ಡ್ ಪ್ಲಾನ್
ನವೆಂಬರ್ 26 ರಿಂದ 28 ದಿನಗಳ ಮಾನ್ಯತೆಯ ಅವಧಿಯೊಂದಿಗೆ ರೂ 75 ರ ಪ್ರಿಪೇಯ್ಡ್ ಯೋಜನೆಯನ್ನು ರೂ 99 ಕ್ಕೆ ಹೆಚ್ಚಿಸಲಾಗಿದೆ. ರೂ 149 ರ ಏರ್‌ಟೆಲ್ ಪ್ರಿಪೇಯ್ಡ್ ಯೋಜನೆಯು ಈಗ ರೂ 179 ಆಗಲಿದೆ. ರೂ 219 ಏರ್‌ಟೆಲ್ ಯೋಜನೆಯು ರೂ 265 ಆಗಲಿದೆ. ರೂ 249 ಮತ್ತು ರೂ 298 ಪ್ರಿಪೇಯ್ಡ್ ಯೋಜನೆಗಳು ಈಗ ಕ್ರಮವಾಗಿ 299 ಮತ್ತು 359 ರೂ.ಗೆ ಸಿಗಲಿದೆ.
84 ದಿನಗಳ ಮಾನ್ಯತೆ ಪ್ರಿಪೇಯ್ಡ್ ಪ್ಲಾನ್
84 ದಿನಗಳ ವ್ಯಾಲಿಡಿಟಿಯೊಂದಿಗೆ ಏರ್‌ಟೆಲ್ ಪ್ರಿಪೇಯ್ಡ್ ಪ್ಲಾನ್‌ಗಳು ಈಗ ಕನಿಷ್ಠ 455 ರೂ.ಗಳ ಬೆಲೆಯನ್ನು ಪಡೆಯುತ್ತವೆ. ರೂ. 598 ಪ್ರಿಪೇಯ್ಡ್ ಯೋಜನೆಯು ರೂ. 719 ಮತ್ತು ರೂ. 698 ಪ್ಲಾನ್ ಅನ್ನು ರೂ. 839 ಕ್ಕೆ ಹೆಚ್ಚಿಸಲಾಗಿದೆ. ವಾರ್ಷಿಕ ಯೋಜನೆಗಳಿಗೆ ಸಂಬಂಧಿಸಿದಂತೆ 365 ದಿನಗಳ ಮಾನ್ಯತೆಯೊಂದಿಗೆ ರೂ 1498 ಪ್ರಿಪೇಯ್ಡ್ ಯೋಜನೆಯು ಈಗ ರೂ 1799 ಮತ್ತು ರೂ 2498 ಯೋಜನೆಯನ್ನು ರೂ 2999 ಕ್ಕೆ ಹೆಚ್ಚಿಸಲಾಗಿದೆ.
ಏರ್ಟೆಲ್ 289 ರೂನ ಪ್ರಿಪೇಯ್ಡ್ ಪ್ಲಾನ್
ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ಅನುಗುಣವಾದ ಡೇಟಾ (Data) ಮತ್ತು ಸ್ಟ್ರೀಮಿಂಗ್ ಪ್ರಯೋಜನಗಳನ್ನು ನೀಡುತ್ತದೆ. ಮಾತ್ರವಲ್ಲದೆ ಎಸ್‌ಎಂಎಸ್ ಪ್ರಯೋಜನ ಮತ್ತು ಧ್ವನಿ ಕರೆಗಳಿಗೆ ಪ್ರವೇಶವನ್ನು ಒದಗಿಸುತ್ತದೆ. ದೈನಂದಿನ ಡೇಟಾ ಮತ್ತು ಇತರ ಪ್ರಯೋಜನಗಳನ್ನು ಹುಡುಕುತ್ತಿರುವ ಬಳಕೆದಾರರಿಗೆ ಕೆಲವು ಯೋಜನೆಗಳು ಪ್ರಯೋಜನಕ್ಕೆ ಬರುತ್ತವೆ. ಅದರಂತೆ ಏರ್ಟೆಲ್(Airtel) ಪರಿಣಾಮಕಾರಿ ಪ್ರಿಪೇಯ್ಡ್ ಯೋಜನೆಯೊಂದನ್ನು ಪರಿಚಯಿಸಿದೆ. ಈ ಯೋಜನೆ 289 ರೂವಿನ ಬೆಲೆಯದ್ದಾಗಿದೆ. ಈ ಯೋಜನೆಯು ಸ್ಟ್ರೀಮಿಂಗ್ ಪ್ರಯೋಜನಗಳೊಂದಿಗೆ ದೈನಂದಿನ ಡೇಟಾಗೆ ಪ್ರವೇಶವನ್ನು ನೀಡುತ್ತದೆ ಮತ್ತು ಹೆಚ್ಚುವರಿ ಡೇಟಾ (Datya Coupon) ಕೂಪನ್‌ಗಳೊಂದಿಗೆ ಬರುತ್ತದೆ.
ಏರ್ಟೆಲ್ 289 ರೂ.ವಿನ. ಪ್ರಿಪೇಯ್ಡ್ ಯೋಜನೆಯು (Airtel Prepaid Plan) ದಿನಕ್ಕೆ 1.5GB ಡೇಟಾವನ್ನು ಜತೆಗೆ ಅನಿಯಮಿತ ಕರೆಗಳು ಮತ್ತು 100 SMS ನೀಡುತ್ತದೆ. ಇದು 28 ದಿನಗಳವರೆ ಮಾನ್ಯತೆ ಹೊಂದಿದೆ. ಈ ಯೋಜನೆಯ ಮೂಲಕ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಸೇವೆಗಳನ್ನು ಉಚಿತ HelloTunes ಮತ್ತು ಬಂಡಲ್ ZEE5 ಪ್ರೀಮಿಯಂ ಚಂದಾದಾರಿಕೆಯನ್ನು ನೀಡುತ್ತದೆ. ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಗೆ ಪ್ರವೇಶವನ್ನು ನೀಡುತ್ತದೆ. ಯೋಜನೆಯು ಉಚಿತ ಡೇಟಾ ಕೂಪನ್‌ಗಳನ್ನು ನೀಡುತ್ತದೆ. ಅದು 1GB ಡೇಟಾದ 2 ಕೂಪನ್‌ಗಳೊಂದಿಗೆ ಬರುತ್ತದೆ. 28 ದಿನಗಳವರೆಗೆ ಮಾನ್ಯವಾಗಿರುತ್ತದೆ.
ಏರ್ಟೆಲ್ 299 ರೂನ ಪ್ರಿಪೇಯ್ಡ್ ಪ್ಲಾನ್
ಏರ್‌ಟೆಲ್ 299 ರೂ. ವಿನ ಪ್ರಿಪೇಯ್ಡ್ ಪ್ಲಾನ್ ಮೂಲಕ 30 ದಿನಗಳವರೆಗೆ 30 ಜಿಬಿ ಡೇಟಾ ಪ್ರವೇಶವನ್ನು ಪಡೆಯಬಹುದಾಗಿದೆ. ಪ್ರತಿದಿನ 1 ಜಿಬಿ ಡೇಟಾಗೆ ಬಳಸಬಹುದಾಗಿದೆ. ಯೋಜನೆಯು ಅನಿಯಮಿತ ಕರೆಗಳಿಗೆ ಮತ್ತು ದಿನಕ್ಕೆ 100 SMS ಗೆ ಪ್ರವೇಶವನ್ನು ನೀಡುತ್ತದೆ. ಇದು ಅನಿಯಮಿತ ಕರೆಗಳಿಗೆ ಪ್ರವೇಶವನ್ನು ಸಹ ನೀಡುತ್ತದೆ. ಯೋಜನೆಯು ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿ ಮತ್ತು ವಿಂಕ್ ಸಂಗೀತಕ್ಕೆ ಪ್ರವೇಶವನ್ನು ನೀಡುತ್ತದೆ.
ಏರ್‌ಟೆಲ್ 129 ರೂ ಮತ್ತು 199 ರೂ.ವಿನ ಪ್ಲಾನ್‌ಗಳ ಮೂಲಕ ಗ್ರಾಹಕರಿಗೆ ಪ್ರಯೋಜನ ಒದಗಿಸುತ್ತಾ ಬಂದಿದೆ. ಇದು 24 ದಿನಗಳ ಮಾನ್ಯತೆಯನ್ನು ಹೊಂದಿದೆ. 129 ರೂ. ಪ್ಲಾನ್ 1GB ಡೇಟಾವನ್ನು ನೀಡಿದರೆ 199 ರೂ. ಯೋಜನೆಯು 1GB ದೈನಂದಿನ ಡೇಟಾಗೆ ಪ್ರವೇಶವನ್ನು ನೀಡುತ್ತದೆ. 129 ರೂ ಯೋಜನೆಯು ಅನಿಯಮಿತ ಕರೆಗಳು ಮತ್ತು 300 SMS ಗೆ ಪ್ರವೇಶವನ್ನು ನೀಡುತ್ತದೆ. ರೂ 199 ಯೋಜನೆಯು ದಿನಕ್ಕೆ 100 SMS ಮತ್ತು ಅನಿಯಮಿತ ಕರೆಗಳನ್ನು ನೀಡುತ್ತದೆ. ಎರಡೂ ಯೋಜನೆಗಳು ಪ್ರೈಮ್ ವೀಡಿಯೊ ಮೊಬೈಲ್ ಆವೃತ್ತಿಗೆ ಪ್ರವೇಶವನ್ನು ನೀಡುತ್ತವೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile