ಪ್ರತಿದಿನ 3GB ಡೇಟಾ ಮತ್ತು ಉಚಿತ ಕರೆ ನೀಡುವ Airtel, Jio ಮತ್ತು Vi ಅತ್ಯುತ್ತಮ ಯೋಜನೆಗಳು

ಪ್ರತಿದಿನ 3GB ಡೇಟಾ ಮತ್ತು ಉಚಿತ ಕರೆ ನೀಡುವ Airtel, Jio ಮತ್ತು Vi ಅತ್ಯುತ್ತಮ ಯೋಜನೆಗಳು
HIGHLIGHTS

ಭಾರತದ ಟೆಲಿಕಾಂ ಕಂಪೆನಿಗಳು ತಮ್ಮ ಚಂದಾದಾರರಿಗೆ ವಿವಿಧ ಬೆಲೆ ಮತ್ತು ಲಾಭಗಳಲ್ಲಿ ಪ್ರಿಪೇಯ್ಡ್ ಯೋಜನೆಗಳನ್ನು ಒದಗಿಸುತ್ತಿವೆ

Jio ದೈನಂದಿನ ಡೇಟಾ ಯೋಜನೆಯಲ್ಲಿ ಜಿಯೋ ನೀಡುವ ಗರಿಷ್ಠ ಪ್ರಮಾಣದ ಡೇಟಾ 3GB ಆಗಿದೆ.

ಈ ಯೋಜನೆಯು Disney+ Hotstar Mobile OTT ಪ್ಲಾಟ್‌ಫಾರ್ಮ್‌ಗೆ ವಾರ್ಷಿಕ ಚಂದಾದಾರಿಕೆಗೆ ಪ್ರವೇಶದೊಂದಿಗೆ ಬರುತ್ತದೆ.

ಭಾರತದ ಟೆಲಿಕಾಂ ಕಂಪೆನಿಗಳು ತಮ್ಮ ಚಂದಾದಾರರಿಗೆ ವಿವಿಧ ಬೆಲೆ ಮತ್ತು ಲಾಭಗಳಲ್ಲಿ ಪ್ರಿಪೇಯ್ಡ್ ಯೋಜನೆಗಳನ್ನು ಒದಗಿಸುತ್ತಿವೆ. ಹೆಚ್ಚು ದೈನಂದಿನ ಡೇಟಾವನ್ನು ಬಳಸುವ ಗ್ರಾಹಕರು ವೆಚ್ಚ ಪರಿಣಾಮಕಾರಿ ದೈನಂದಿನ ಡೇಟಾ ಯೋಜನೆಗಳಿಗೆ ಹೋಗಲು ಅಥವಾ ಪ್ರತಿದಿನ ಹೆಚ್ಚಿನ ಡೇಟಾವನ್ನು ನೀಡುವ ಉನ್ನತ-ಮಟ್ಟದ ಪ್ರಿಪೇಯ್ಡ್ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಲು ಬಯಸುತ್ತಾರೆ. ನೀವು ಕೂಡ ದೈನಂದಿಕವಾಗಿ ಹೆಚ್ಚು ಡೇಟಾವನ್ನು ಒದಗಿರುವ ಪ್ರಿಪೇಯ್ಡ್ ಯೋಜನೆಗಳನ್ನು ಹೊಂದಲು ಬಯಸಿದ್ದರೆ ಇಂದಿನ ಲೇಖನದಲ್ಲಿ ಜಿಯೋ, ಏರ್‌ಟೆಲ್ ಮತ್ತು ವಿಐ ಕಂಪೆನಿಗಳು ಒದಗಿಸುತ್ತಿರುವ ಹೆಚ್ಚು ದೈನಂದಿನ ಡೇಟಾವನ್ನು ಹೊಂದಿರುವ ಪ್ರಿಪೇಯ್ಡ್ ಯೋಜನೆಗಳ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.

ಜಿಯೋ (Jio) ದೈನಂದಿನ ಡೇಟಾ ನೀಡುವ ಯೋಜನೆ

ದೈನಂದಿನ ಡೇಟಾ ಯೋಜನೆಯಲ್ಲಿ ಜಿಯೋ ನೀಡುವ ಗರಿಷ್ಠ ಪ್ರಮಾಣದ ಡೇಟಾ 3GB ಆಗಿದೆ. Jio ದಿನಕ್ಕೆ 3GB ಡೆಟಾವನ್ನು ಹೊಂದಿರುವ ಆರಂಭಿ ಯೋಜನೆಯನ್ನು 419 ರೂ.ಗಳಿಂದ ಪ್ರಾರಂಭಿಸುತ್ತದೆ. ಈ 419 ಬೆಲೆ ಯೋಜನೆಯು ಅನಿಯಮಿತ ಧ್ವನಿ ಕರೆಗಳು ಮತ್ತು 100 SMS/ದಿನದ ಜೊತೆಗೆ 28 ದಿನಗಳ ಮಾನ್ಯತೆಯ ಅವಧಿಗೆ ದಿನಕ್ಕೆ 3GB ಡೇಟಾವನ್ನು ನೀಡುತ್ತದೆ. Jioವಿನ ಮತ್ತೊಂದು 3GB/ದಿನದ ಪ್ರಿಪೇಯ್ಡ್ ಯೋಜನೆಯು 601 ರೂ. ಬೆಲೆಯಲ್ಲಿ ಲಭ್ಯವಿದೆ. ಆದರೆ ಈ ಯೋಜನೆಯು ಕೂಡ ಕೇವಲ 28 ದಿನಗಳ ಅವಧಿಯೊಂದಿಗೆ ಬಂದಿದೆ ಮತ್ತು ಯೋಜನೆಯು ಅನಿಯಮಿತ ಧ್ವನಿ ಕರೆಗಳು ಮತ್ತು 100 SMS/ದಿನವನ್ನು ನೀಡುತ್ತದೆ. ದೈನಂದಿನ 3GB ಡೇಟಾದ ಜೊತೆಗೆ ಬಳಕೆದಾರರು ಒಟ್ಟು 6GB ಡೇಟಾವನ್ನು ಸಹ ಪಡೆಯುತ್ತಾರೆ. ಈ ಯೋಜನೆಯು Disney+ Hotstar Mobile OTT ಪ್ಲಾಟ್‌ಫಾರ್ಮ್‌ಗೆ ವಾರ್ಷಿಕ ಚಂದಾದಾರಿಕೆಗೆ ಪ್ರವೇಶದೊಂದಿಗೆ ಬರುತ್ತದೆ.

ಏರ್ಟೆಲ್ (Airtel) ದೈನಂದಿನ ಡೇಟಾ ನೀಡುವ ಯೋಜನೆ

ದೈನಂದಿನ ಡೇಟಾ ಯೋಜನೆಯೊಂದಿಗೆ ಏರ್‌ಟೆಲ್ ನೀಡುವ ಗರಿಷ್ಠ ಪ್ರಮಾಣದ ಡೇಟಾವು ಕೂಡ 3GB ಆಗಿದೆ. ಈ ಟೆಲಿಕಾಂ ಕಂಪನಿಯು ಕೇವಲ ಒಂದೆರಡು 3GB/ದಿನದ ಯೋಜನೆಗಳನ್ನು ನೀಡುತ್ತದೆ ಅದರಲ್ಲಿ ಯಾವುದೂ ದೀರ್ಘಾವಧಿಯ ಯೋಜನೆ ಅಲ್ಲ. ಏರ್‌ಟೆಲ್ ರೂ 599 ಬೆಲೆಯಲ್ಲಿ 28 ದಿನಗಳ ಮಾನ್ಯತೆಯ ಅವಧಿಗೆ 3GB/ದಿನದ ಪ್ರಿಪೇಯ್ಡ್ ಯೋಜನೆಯನ್ನು ನೀಡುತ್ತದೆ. ಈ ಯೋಜನೆಯು ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ OTT ಪ್ಲಾಟ್‌ಫಾರ್ಮ್‌ಗೆ ವಾರ್ಷಿಕ ಚಂದಾದಾರಿಕೆಯೊಂದಿಗೆ ಅನಿಯಮಿತ ಧ್ವನಿ ಕರೆಗಳು ಮತ್ತು 100 SMS/ದಿನವನ್ನು ನೀಡುತ್ತದೆ. ಬಳಕೆದಾರರು ಏರ್‌ಟೆಲ್‌ನಿಂದ ಮತ್ತೊಂದು ಹೆಚ್ಚು ಡೆಟಾ ಪ್ರಿಪೇಯ್ಡ್ ಪ್ಲಾನ್ ಅನ್ನು ರೂ 699 ಬೆಲೆಯಲ್ಲಿ ಪಡೆಯಬಹುದು. ಈ ಯೋಜನೆಯು ಪ್ರತಿ ದಿನ 3GB ಡೇಟಾವನ್ನು ನೀಡುತ್ತದೆ.

ವೊಡಾಫೋನ್ ಐಡಿಯಾ (Vi) ದೈನಂದಿನ ಡೇಟಾ ನೀಡುವ ಯೋಜನೆ

ವೊಡಾಫೋನ್ ಐಡಿಯಾ ಕಂಪನಿ ದಿನಕ್ಕೆ 3GB ಇಂಟರ್ನೆಟ್ ಅನ್ನು ನೀಡುವ ಬಹು ಪ್ರಿಪೇಯ್ಡ್ ಯೋಜನೆಗಳನ್ನು ಹೊಂದಿದೆ. ಮತ್ತು 3GB/ದಿನದ ಪ್ಯಾಕ್ ರೂ. 475 ಬೆಲೆಯಲ್ಲಿ ಆರಂಭವಾಗುತ್ತದೆ. ಈ . 475 ಬೆಲೆಯ ಯೋಜನೆಯು ಅನಿಯಮಿತ ಧ್ವನಿ ಕರೆಗಳು ಮತ್ತು 100 SMS/ದಿನದೊಂದಿಗೆ 28 ದಿನಗಳ ಮಾನ್ಯತೆಯ ಅವಧಿಗೆ ದಿನಕ್ಕೆ 3GB ಡೇಟಾವನ್ನು ನೀಡುತ್ತದೆ. ಪಟ್ಟಿಯಲ್ಲಿರುವ ಮುಂದಿನ ಯೋಜನೆಯು ರೂ 699 ಬೆಲೆಯಲ್ಲಿ ಲಭ್ಯವಿದೆ. ಮತ್ತು ಏರ್‌ಟೆಲ್ ನೀಡುವ ಪ್ಲಾನ್‌ನಂತೆಯೇ ಇದು ಕೂಡ ಒಮದೇ ರೀತಿಯ ಪ್ರಯೋಜನಗಳನ್ನು ಹೊಂದಿದ್ದು, ರೂ 699 ಗೆ ಬಳಕೆದಾರರು 56 ದಿನಗಳ ಮಾನ್ಯತೆಯ ಅವಧಿಗೆ ದಿನಕ್ಕೆ 3GB ಡೇಟಾವನ್ನು ಪಡೆಯುತ್ತಾರೆ ಮತ್ತು ಈಯೋಜನೆಯು ಅನಿಯಮಿತ ಧ್ವನಿ ಕರೆಗಳನ್ನು ಮತ್ತು ದಿನಕ್ಕೆ 100 SMS ನೀಡುತ್ತದೆ.

ನಿಮ್ಮ ನಂಬರ್‌ಗೆ ನೀಡುತ್ತಿರುವ ಇತ್ತೀಚಿನ ಅತ್ಯುತ್ತಮ ಯೋಜನೆಗಳನ್ನು ಇಲ್ಲಿ My Best Plan ನೋಡಿ!

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo