Airtel vs Jio Plan: ಅತಿ ಕಡಿಮೆ ಬೆಲೆಗೆ Unlimited ಪ್ರಯೋಜನ ನೀಡುವ ಬೆಸ್ಟ್ ವಾರ್ಷಿಕ ಯೋಜನೆಗಳು!

Airtel vs Jio Plan: ಅತಿ ಕಡಿಮೆ ಬೆಲೆಗೆ Unlimited ಪ್ರಯೋಜನ ನೀಡುವ ಬೆಸ್ಟ್ ವಾರ್ಷಿಕ ಯೋಜನೆಗಳು!
HIGHLIGHTS

ರಿಲಯನ್ಸ್ ಜಿಯೋ (Reliance Jio) ಮತ್ತು ಭಾರ್ತಿ ಏರ್ಟೆಲ್ (Airtel) ತಮ್ಮ ಬಳಕೆದಾರರಿಗೆ ಹಲವು ಉತ್ತಮ ಯೋಜನೆಗಳನ್ನು ಹೊಂದಿದೆ.

Airtel vs Jio Plan ಕಡಿಮೆ ಬೆಲೆಗೆ ಲಭ್ಯವಿರುವ 2 ವಾರ್ಷಿಕ ಯೋಜನೆಯ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ.

Airtel vs Jio Plan ಅತಿ ಕಡಿಮೆ ಬೆಲೆಗೆ Unlimited ಪ್ರಯೋಜನ ನೀಡುವ ಬೆಸ್ಟ್ ವಾರ್ಷಿಕ ಯೋಜನೆಗಳು!

Airtel vs Jio Plan: ಭಾರತದ ಅತಿದೊಡ್ಡ ಎರಡು ಟೆಲಿಕಾಂ ಕಂಪನಿಗಳಾಗಿರುವ ರಿಲಯನ್ಸ್ ಜಿಯೋ (Reliance Jio) ಮತ್ತು ಭಾರ್ತಿ ಏರ್ಟೆಲ್ (Airtel) ತಮ್ಮ ಬಳಕೆದಾರರಿಗೆ ಒಂದಲ್ಲ ಹಲವು ಉತ್ತಮ ಯೋಜನೆಗಳನ್ನು ಹೊಂದಿದೆ. ನೀವು ಸಹ ಜಿಯೋ ಬಳಕೆದಾರರಾಗಿದ್ದರೆ ಮತ್ತು ಕಡಿಮೆ ಡೇಟಾವನ್ನು ನೀಡುವ ಆದರೆ ದೀರ್ಘಾವಧಿಯ ಮಾನ್ಯತೆಯೊಂದಿಗೆ ಬರುವ ಯೋಜನೆಯನ್ನು ಅತಿ ಕಡಿಮೆ ಬೆಲೆಗೆ ಲಭ್ಯವಿರುವ ಎರಡು ವಾರ್ಷಿಕ ಯೋಜನೆಯ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ರಿಲಯನ್ಸ್ ಜಿಯೋ (Reliance Jio) 1559 ರೂಗಳ ಪ್ರಿಪೇಯ್ಡ್ ಪ್ಲಾನ್ ಮತ್ತು ಏರ್ಟೆಲ್ (Airtel) 1799 ರೂಗಳ ಪ್ರಿಪೇಯ್ಡ್ ಪ್ಲಾನ್ ನಡುವಿನ ವ್ಯತ್ಯಾಸದೊಂದಿಗೆ ಯಾವ ಪ್ಲಾನ್ ಎಷ್ಟು ಪ್ರಯೋಜನಗಳನ್ನು ನೀಡುತ್ತಿದೆ ಎನ್ನುವುದನ್ನು ತಿಳಿಯೋಣ.

Airtel vs Jio Plan ಬೆಸ್ಟ್ ವಾರ್ಷಿಕ ಯೋಜನೆಗಳು!

Also Read: Realme 12x 5G: ಖರೀದಿಸುವ ಮುಂಚೆ 50MP ಕ್ಯಾಮೆರಾದೊಂದಿಗೆ ಟಾಪ್ 5 ಫೀಚರ್‌ಗಳ ವಿಶೇಷತೆಗಳನ್ನು ತಿಳಿಯಿರಿ!

ಏರ್ಟೆಲ್ (Airtel) 1799 ರೂಗಳ ಪ್ರಿಪೇಯ್ಡ್ ಪ್ಲಾನ್

365 ದಿನಗಳ ಮಾನ್ಯತೆಯೊಂದಿಗೆ ಈ ಏರ್‌ಟೆಲ್ ರೀಚಾರ್ಜ್ ಯೋಜನೆಯು ಅನಿಯಮಿತ ಕರೆಯೊಂದಿಗೆ ಬರುತ್ತದೆ. 3600 SMS ಗಳ ಕೋಟಾ ಮತ್ತು 24GB ಇಂಟರ್ನೆಟ್ ಡೇಟಾವನ್ನು ನೀಡುತ್ತದೆ. ಡೇಟಾ ಖಾಲಿಯಾದ ಮೇಲೆ 50 ಪೈಸೆ/MB ದರದಲ್ಲಿ ಶುಲ್ಕ ವಿಧಿಸಲಾಗುತ್ತದೆ. ಹೆಚ್ಚುವರಿಯಾಗಿ ಏರ್‌ಟೆಲ್ 30 ದಿನಗಳ ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಚಂದಾದಾರಿಕೆ, ಮೂರು ತಿಂಗಳ ಉಚಿತ ಅಪೊಲೊ 24/7 ಸರ್ಕಲ್, ಶಾ ಅಕಾಡೆಮಿಯಲ್ಲಿ ಉಚಿತ ಆನ್‌ಲೈನ್ ಕೋರ್ಸ್‌ಗಳಿಗೆ ಪ್ರವೇಶ, ಫಾಸ್ಟ್ಯಾಗ್‌ನಲ್ಲಿ ರೂ 100 ಮೌಲ್ಯದ ಕ್ಯಾಶ್‌ಬ್ಯಾಕ್, ಉಚಿತ ಹಲೋ ಟ್ಯೂನ್ಸ್ ಮತ್ತು ರೂ 1,799 ನೊಂದಿಗೆ ವಿಂಕ್ ಮ್ಯೂಸಿಕ್ ಚಂದಾದಾರಿಕೆಯನ್ನು ನೀಡುತ್ತದೆ.

Airtel vs Jio Plan best and Cheapest Annual Prepaid Plan
Airtel vs Jio Plan best and Cheapest Annual Prepaid Plan

ರಿಲಯನ್ಸ್ ಜಿಯೋ (Reliance Jio) 1559 ರೂಗಳ ಪ್ರಿಪೇಯ್ಡ್ ಪ್ಲಾನ್

ರಿಲಯನ್ಸ್ ಜಿಯೋ ಬಳಕೆದಾರರಿಗೆ ಈ ಯೋಜನೆಯ ಪ್ರಕಾರ ದಿನನಿತ್ಯದ ಖರ್ಚು ಕೇವಲ 4.64 ರೂಗಳಾಗಿವೆ. ಇದರ ಬೆಲೆ 1559 ಜಿಯೋ ರೀಚಾರ್ಜ್ ಯೋಜನೆಯೊಂದಿಗೆ ನೀವು ಒಟ್ಟು 24 GB ಹೈ ಸ್ಪೀಡ್ ಡೇಟಾದ ಪ್ರಯೋಜನವನ್ನು ಪಡೆಯುತ್ತೀರಿ. ಡೇಟಾವನ್ನು ಹೊರತುಪಡಿಸಿ ಈ ಜಿಯೋ ಯೋಜನೆಯೊಂದಿಗೆ ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಉಚಿತ ವಾಯ್ಸ್ ಕರೆ ಮಾಡುವ ಪ್ರಯೋಜನವನ್ನು ನೀವು ಪಡೆಯುತ್ತೀರಿ. ಡೇಟಾ ಮತ್ತು ವಾಯ್ಸ್ ಕರೆಗಳ ಹೊರತಾಗಿ ಈ ಕೈಗೆಟುಕುವ ಯೋಜನೆಯೊಂದಿಗೆ ನಿಮಗೆ ಒಟ್ಟು 3600 SMS ಅನ್ನು ಸಹ ನೀಡಲಾಗುತ್ತದೆ.

Airtel vs Jio Plan best and Cheapest Annual Prepaid Plan
Airtel vs Jio Plan best and Cheapest Annual Prepaid Plan

ಡೇಟಾ ಮಿತಿಯನ್ನು ತಲುಪಿದ ನಂತರ ವೇಗದ ಮಿತಿಯನ್ನು 64Kbps ಗೆ ಇಳಿಸಲಾಗುತ್ತದೆ. ನಿಮ್ಮ ಪ್ರದೇಶದಲ್ಲಿ ರಿಲಯನ್ಸ್ ಜಿಯೊದ 5G ಸೇವೆ ಇದ್ದರೆ ಈ ಯೋಜನೆಯೊಂದಿಗೆ ನಿಮಗೆ ಅನಿಯಮಿತ 5G ಡೇಟಾದ ಪ್ರಯೋಜನವನ್ನು ಸಹ ನೀಡಲಾಗುತ್ತದೆ. ರಿಲಯನ್ಸ್ ಜಿಯೋ ರೂ 1559 ಈ ಪ್ರಿಪೇಯ್ಡ್ ಯೋಜನೆಯೊಂದಿಗೆ ನಿಮಗೆ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್‌ಗೆ ಉಚಿತ ಪ್ರವೇಶವನ್ನು ನೀಡಲಾಗುತ್ತದೆ. ಇಲ್ಲಿ ಗಮನಿಸಬೇಕಾದ ಒಂದು ವಿಷಯವೆಂದರೆ ಜಿಯೋ ಸಿನಿಮಾ ಚಂದಾದಾರಿಕೆಯು ಪ್ರೀಮಿಯಂ ಪ್ರವೇಶವನ್ನು ಒಳಗೊಂಡಿರುವುದಿಲ್ಲ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo