Airtel 5G: ಏರ್ಟೆಲ್ ಬಳಕೆದಾರರು ಈಗ ಭಾರತದ ಈ 4 ನಗರಗಳಲ್ಲಿ 5G ನೆಟ್‌ವರ್ಕ್ ಸೇವೆಯನ್ನು ಆನಂದಿಸಬಹುದು!

Airtel 5G: ಏರ್ಟೆಲ್ ಬಳಕೆದಾರರು ಈಗ ಭಾರತದ ಈ 4 ನಗರಗಳಲ್ಲಿ 5G ನೆಟ್‌ವರ್ಕ್ ಸೇವೆಯನ್ನು ಆನಂದಿಸಬಹುದು!
HIGHLIGHTS

ಭಾರ್ತಿ ಏರ್ಟೆಲ್ ಮತ್ತು ರಿಲಯನ್ಸ್ ಜಿಯೋ ದೇಶದಲ್ಲಿ ಪ್ರತಿದಿನ ಒಂದಲ್ಲ ಒಂದು ನಗರಗಳಲ್ಲಿ ತಮ್ಮ 5G ನೆಟ್ವರ್ಕ್ ಅನ್ನು ಪ್ರಾರಂಭಿಸುತ್ತಿವೆ.

Airtel ಭಾರತದ ದಕ್ಷಿಣ ಭಾಗದಲ್ಲಿ 4 ಹೊಸ ನಗರಗಳು ಈಗ 5G ನೆಟ್‌ವರ್ಕ್ ಸೌಲಭ್ಯವನ್ನು ಪಡೆಯುತ್ತಿವೆ.

ದಕ್ಷಿಣ ಭಾರತದ ತಿರುವನಂತಪುರಂ, ಕೋಝಿಕ್ಕೋಡ್ ಮತ್ತು ತ್ರಿಶೂರ್ ನಗರಗಳು 5G ನೆಟ್‌ವರ್ಕ್ ಈಗ ತನ್ನ ಸೇವೆಗಳನ್ನು ನೀಡಲು ಆರಂಭಿಸಿವೆ

Airtel 5G: ಭಾರ್ತಿ ಏರ್ಟೆಲ್ ಮತ್ತು ರಿಲಯನ್ಸ್ ಜಿಯೋ ದೇಶದಲ್ಲಿ ಪ್ರತಿದಿನ ಒಂದಲ್ಲ ಒಂದು ನಗರಗಳಲ್ಲಿ ತಮ್ಮ 5G ನೆಟ್ವರ್ಕ್ ಅನ್ನು ಪ್ರಾರಂಭಿಸುತ್ತಿವೆ. ಜೊತೆಗೆ ದಿನದಿಂದ ದಿನಕ್ಕೆ ದೇಶದಲ್ಲಿ ನೆಟ್‌ವರ್ಕಿಂಗ್ ವಿಷಯದಲ್ಲಿ ಪ್ರಗತಿಯನ್ನು ಸಾಧಿಸುತ್ತಿದೆ. ಕಳೆದ 10 ವರ್ಷಗಳಲ್ಲಿ ನೆಟ್‌ವರ್ಕ್ ಅನ್ನು ಮೊದಲು 3G, 4G ನಂತರ 5G ಅನ್ನು ಸ್ಥಾಪಿಸಲಾಗಿದ್ದು ಮತ್ತು ಈಗ ಹಲವಾರು ಟೆಲಿಕಾಂ ಕಂಪನಿಗಳು 5G ನೆಟ್‌ವರ್ಕ್ ಅನ್ನು ವಿಸ್ತರಿಸಲು ಕೆಲಸ ಮಾಡುತ್ತಿವೆ. ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿ ಭಾರ್ತಿ ಏರ್‌ಟೆಲ್ 5G ನೆಟ್‌ವರ್ಕ್ ನಿರ್ಮಿಸಲು ವೇಗವಾಗಿ ಕಾರ್ಯನಿರ್ವಹಿಸುತ್ತಿದೆ. ಭಾರತದ ದಕ್ಷಿಣ ಭಾಗದಲ್ಲಿ 4 ಹೊಸ ನಗರಗಳು ಈಗ 5G ನೆಟ್‌ವರ್ಕ್ ಸೌಲಭ್ಯವನ್ನು ಪಡೆಯುತ್ತಿವೆ. ಬಳಕೆದಾರರು ಈಗ ನೆಟ್‌ವರ್ಕಿಂಗ್ ಸಂಬಂಧಿತ ಕಾರ್ಯಗಳನ್ನು ಯಾವುದೇ ತೊಂದರೆಗಳಿಲ್ಲದೆ ಮತ್ತು ಬಹಳ ವೇಗದಲ್ಲಿ ಪೂರ್ಣಗೊಳಿಸಬಹುದು.

ಏರ್ಟೆಲ್ ತಿರುವನಂತಪುರಂ, ಕೋಝಿಕ್ಕೋಡ್ ಮತ್ತು ತ್ರಿಶೂರ್​ನಲ್ಲಿ 5G

ದಕ್ಷಿಣ ಭಾರತದ ತಿರುವನಂತಪುರಂ, ಕೋಝಿಕ್ಕೋಡ್ ಮತ್ತು ತ್ರಿಶೂರ್ ನಗರಗಳು 5G ನೆಟ್‌ವರ್ಕ್ ಈಗ ತನ್ನ ಸೇವೆಗಳನ್ನು ನೀಡಲು ಆರಂಭಿಸಿವೆ. 5G ನೆಟ್‌ವರ್ಕ್ ಈಗಾಗಲೇ ಕೊಚ್ಚಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಕೋಝಿಕ್ಕೋಡ್, ಕಲ್ಲೈ, ಕುಟ್ಟಿಚಿರಾ, ಮೀಂಚಂದ ಮತ್ತು ಥೋಡಯದ್ ಸೇರಿದಂತೆ ವಿವಿಧ ತಿರುವನಂತಪುರಂ ಕೆಲವು ನಗರಗಳಲ್ಲಿ ಏರ್‌ಟೆಲ್ 5G ನೆಟ್‌ವರ್ಕಿಂಗ್ ಸೇವೆಗಳು ಈಗಾಗಲೇ ಲಭ್ಯವಿದೆ. ಪಟ್ಟಂ, ಪಾಲಯಂ, ಕೋವಲಂ, ವಟ್ಟಿಯುರ್ಕಾವೆ, ಈಸ್ಟ್ ಫೋರ್ಟ್, ವಿಂಝಿಜಂ ಮತ್ತು ಇತರ ತಿರುವನಂತಪುರಂ ನಗರಗಳಲ್ಲಿ ಪ್ರಸ್ತುತ 5G ಸೌಲಭ್ಯವನ್ನು ಒದಗಿಸಲಾಗುವುದು. ಇದಲ್ಲದೆ ತ್ರಿಶೂಲ್ ಜಿಲ್ಲೆಯ ಓಲೂರ್, ಒಲರಿಕ್ಕರಾ, ಕುರ್ಕೆಂಚೇರಿ, ತ್ರಿಶೂರ್ ರೌಂಡ್ ಮತ್ತು ನಾಥಧಾರಾದಲ್ಲಿನ ಏರ್‌ಟೆಲ್ ಬಳಕೆದಾರರಿಗೆ 5G ಸೇವೆಯನ್ನು ಒದಗಿಸಲಾಗುವುದು.

ಈ ಪ್ರಮುಖ ನಗರಗಳಲ್ಲಿ ಏರ್ಟೆಲ್ 5G ಸೇವೆ-

ಭಾರ್ತಿ ಏರ್‌ಟೆಲ್ ಕೇರಳದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿತ್ ಗುಪ್ತಾ ರವರು ಕಂಪನಿಯು ವರ್ಷಾಂತ್ಯದೊಳಗೆ ಎಲ್ಲಾ ಪ್ರಮುಖ ನಗರಗಳಲ್ಲಿ 5G ಸೇವೆಯನ್ನು ನೀಡಲು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ಕೊಚ್ಚಿಯ ಜೊತೆಗೆ ತಿರುವನಂತಪುರಂ, ತ್ರಿಶೂರ್ ಮತ್ತು ಕೊಂಜಿಕೊಂಡ್‌ನಲ್ಲಿಯೂ ಏರ್‌ಟೆಲ್‌ನ 5G ಸೇವೆಗಳನ್ನು ಪ್ರಾರಂಭಿಸಲಾಗಿದೆ ಎಂಬ ಸುದ್ದಿಗೆ ಅವರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೆ ಬಳಕೆದಾರರಿಗೆ ಈಗ ಹೆಚ್ಚುವರಿ ರೀಚಾರ್ಜ್ ಅಗತ್ಯವಿಲ್ಲದೇ ನೆಟ್‌ವರ್ಕ್‌ನ 20 ರಿಂದ 30 ಪಟ್ಟು ವೇಗದ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಮತ್ತು ಈ ಸ್ಥಳಗಳಲ್ಲಿನ ಬಳಕೆದಾರರು ಫೇಸ್ ಬ್ಯಾನರ್‌ನಲ್ಲಿನ ಇತ್ತೀಚಿನ ಸಂಪರ್ಕದ ಪ್ರಯೋಜನವನ್ನು ಸಹ ಹೊಂದಿರುತ್ತಾರೆ ಎಂದು ಅವರು ಹೇಳಿದರು.

ಫೋನ್‌ನಲ್ಲಿ ಏರ್ಟೆಲ್ 5G ಸಕ್ರಿಯಗೊಳಿಸುವ ವಿಧಾನ-

ಏರ್‌ಟೆಲ್‌ನ 5G ಸೇವೆಯನ್ನು ನೀವು ಈಗಾಗಲೇ ಲಭ್ಯವಿರುವ ಪ್ರದೇಶದಲ್ಲಿ ವಾಸಿಸುತ್ತಿದ್ದರೆ ಅದನ್ನು ಬಳಸಿಕೊಳ್ಳಲು ಮೊದಲು ನೀವು 5G ಅನ್ನು ಪ್ರವೇಶಿಸಬೇಕು ಎಂದು ಭಾರ್ತಿ ಏರ್‌ಟೆಲ್ ಕೇರಳದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಳಿದ್ದಾರೆ. ಇದಕ್ಕೆ 5G ಸ್ಮಾರ್ಟ್‌ಫೋನ್ ಹೊಂದಿರುವುದು ಅತ್ಯಗತ್ಯ. ಇದರ ನಂತರ ಮುಂದಿನ ಹಂತದಲ್ಲಿ ಸೆಟ್ಟಿಂಗ್‌ಗಳಿಗೆ ಹೋಗಿ ಸಿಮ್ ಮತ್ತು ನೆಟ್‌ವರ್ಕ್ ಸೆಟ್ಟಿಂಗ್ ಅನ್ನು ಆಯ್ಕೆ ಮಾಡಬೇಕು. ನಂತರ ಆದ್ಯತೆಯ ನೆಟ್‌ವರ್ಕ್ ಪ್ರಕಾರದ ಅಡಿಯಲ್ಲಿ 5G ಮಾತ್ರ ಆಯ್ಕೆ ಮಾಡಬೇಕು. ನಂತರ ನಿಮ್ಮ ಫೋನ್‌ನಲ್ಲಿ ಸರಾಗವಾಗಿ 5G ಸೇವೆ ಪ್ರಾರಂಭವಾಗುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo