ಭಾರ್ತಿ ಏರ್‌ಟೆಲ್ ತನ್ನ ಜನಪ್ರಿಯ 249 ರೂ. ರೀಚಾರ್ಜ್ ಯೋಜನೆಯೊಂದಿಗೆ 500MB ಉಚಿತ ದೈನಂದಿನ ಡೇಟಾವನ್ನು ನೀಡಲು ಪ್ರಾರಂಭಿಸಿದೆ. ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಮೂಲಕ ಬಳಕೆದಾರರು ಪ್ರತಿದಿನ 0.5 GB ಅಥವಾ 500MB ಡೇಟಾವನ್ನು ಉಚಿತವಾಗಿ ಪಡೆಯಬಹುದು ಎಂದು ಏರ್‌ಟೆಲ್ ತಿಳಿಸಿದ್ದು 249 ರೂ. ಗಳ ನಿರ್ದಿಷ್ಟ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗೆ ಮಾತ್ರ ಈ ಆಫರ್ ಲಭ್ಯವಿದೆ ಎಂದು ಕಂಪೆನಿ ಹೇಳಿದೆ. ಇದು ಹೊಸ ಯೋಜನೆ ಅಲ್ಲವಾದರೂ ಅಸ್ತಿತ್ವದಲ್ಲಿರುವ ಯೋಜನೆಗೆ ಈಗ ಹೊಸ ಪ್ರಯೋಜನಗಳನ್ನು ಸೇರಿಸಿದೆ.
ಏರ್‌ಟೆಲ್ ತನ್ನ ಜನಪ್ರಿಯ 28 ದಿನಗಳ ವ್ಯಾಲಿಡಿಟಿ ಹೊಂದಿರುವ 249 ರೂ. ಯೋಜನೆಯಲ್ಲಿ ಇದೀಗ ಅನಿಯಮಿತ ಧ್ವನಿ ಕರೆ, 100 SMS/ ದಿನಕ್ಕೆ 1.5GB ಉಚಿತ ಡೇಟಾವನ್ನು ನೀಡುತ್ತಿದೆ. ಈ ಮೊದಲು ನೀಡುತ್ತಿದ್ದ ಪ್ರಯೋಜನಗಳನ್ನು ಹಾಗೆಯೇ ಉಳಿಸಿಕೊಂಡಿದ್ದು ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಮೂಲಕ ಹೆಚ್ಚುವರಿಯಾಗಿ 500MB ಉಚಿತ ಡೇಟಾವನ್ನು ಸೇರಿಸಿದೆ. ಈ ಯೋಜನೆಯಲ್ಲಿ ದೈನಂದಿನ ಒಟ್ಟು ಡೇಟಾ ಮಿತಿಯು 2GBಗೆ ಹೆಚ್ಚಳವಾಗಿದ್ದು 14GB ಉಚಿತ ಡೇಟಾ ಸೇರಿ ದಿನಕ್ಕೆ 2GB ಡೇಟಾದಂತೆ ಒಟ್ಟು 56GB ಡೇಟಾವನ್ನು ಪಡೆಯಲಿದ್ದಾರೆ. ಜೊತೆಗೆ ಏರ್‌ಟೆಲ್ ಥ್ಯಾಂಕ್ಸ್ ಪ್ರಯೋಜನಗಳನ್ನು ಸಹ ಸಿಗಲಿದೆ.
ಏರ್‌ಟೆಲ್ 249 ರೂ. ರೀಚಾರ್ಜ್ ಯೋಜನೆಯೊಂದಿಗೆ 500MB ಉಚಿತ ದೈನಂದಿನ ಡೇಟಾವನ್ನು ಪಡೆಯಲು ಏರ್‌ಟೆಲ್ ಬಳಕೆದಾರರು ತಮ್ಮ ಮೊಬೈಲ್‌ನಲ್ಲಿ ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಹೊಂದಿರಬೇಕು. ಈ ಆಪ್ ಅನ್ನು ಹೊಂದಿಲ್ಲದಿದ್ದರೆ ಅದನ್ನು ಡೌನ್‌ಲೋಡ್ ಮಾಡಿ ನಂತರ ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ತೆರೆಯುವ ಮೂಲಕ ಅಲ್ಲಿ ಕಾಣಿಸುವ ಉಚಿತ 500MB ರಿಡೀಮ್ ಡೇಟಾ ಆಯ್ಕೆಯನ್ನು ಆಯ್ಕೆ ಮಾಡಿ. ಹೀಗೆ ನೀವು ಆಯ್ಕೆ ಮಾಡಿದರೆ 249 ರೂ. ಯೋಜನೆಗಾಗಿ 500MB ಉಚಿತ ದೈನಂದಿನ ಡೇಟಾವನ್ನು ಸೇರಿಸಲಾಗುತ್ತದೆ. ಎಂದು ಏರ್‌ಟೆಲ್ ಕಂಪೆನಿ ನೀಡಿರುವ ಮಾಹಿತಿಯಲ್ಲಿ ವಿವರಿಸಲಾಗಿದೆ.
ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಮೂಲಕ ಈ ನಿರ್ದಿಷ್ಟ ಯೋಜನೆಯೊಂದಿಗೆ ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್‌ನೊಂದಿಗೆ ಒಂದು ತಿಂಗಳ ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಎಡಿಷನ್, ಶಾ ಅಕಾಡೆಮಿ 1 ವರ್ಷ, ಅಪೊಲೊ 24|7 ಸರ್ಕಲ್, ಉಚಿತ ಹಲೋ ಟ್ಯೂನ್ಸ್ ಚಂದಾದಾರಿಕೆಗಳು, ವಿಂಕ್ ಮ್ಯೂಸಿಕ್ ಮತ್ತು ರೂ. FASTag ನಲ್ಲಿ 100 ಕ್ಯಾಶ್‌ಬ್ಯಾಕ್ ಸಿಗಲಿವೆ. ಏರ್‌ಟೆಲ್ ಸಂಸ್ಥೆ ತಿಳಿಸಿದೆ. ಈ ಮೂಲಕ ತನ್ನ ಗ್ರಾಹಕ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದು ಮಾತ್ರವಲ್ಲದೇ ತನ್ನ ಗ್ರಾಹಕರು ಹೆಚ್ಚೆಚ್ಚು ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಬಳಸಲು ಪ್ರೇರೇಪಿಸಲು ಈ ಆಫರ್‌ಗಳನ್ನು ನೀಡುತ್ತಿರುವುದನ್ನು ನಾವು ಗಮನಿಸಬಹುದು.
ನಾವು ಏರ್‌ಟೆಲ್ ನೀಡುತ್ತಿರುವ ಮತ್ತೊಂದು 219 ರೂಪಾಯಿಗಳ ಪ್ರಿಪೇಯ್ಡ್ ಯೋಜನೆಯನ್ನು ಸಹ ಇಲ್ಲಿ ಗಮನಿಸಬೇಕಿದೆ. ಏರ್‌ಟೆಲ್ 219 ರೂಪಾಯಿಗಳ ಪ್ರಿಪೇಯ್ಡ್ ಯೋಜನೆಯಲ್ಲಿ 1GB ದೈನಂದಿನ ಡೇಟಾವನ್ನು ನೀಡುತ್ತದೆ. ಈಗ ರೂ. 249 ಪ್ಯಾಕ್ 500MB ಉಚಿತ ದೈನಂದಿನ ಡೇಟಾವನ್ನು ಹೆಚ್ಚುವರಿಯಾಗಿ ಪಡೆಯುವ ಮೂಲಕ 2GB ದೈನಂದಿನ ಡೇಟಾವನ್ನು ನೀಡಲಿದೆ. ಇಲ್ಲಿ ರೂ. 249 ಪ್ಯಾಕೇಜ್ ವ್ಯತ್ಯಾಸ ಕೇವಲ ರೂ. 30 ಗಳಾಗಿವೆ. ಆದರೆ ಬಳಕೆದಾರರಿಗೆ ಸಿಗುವ ಡೇಟಾ ಮೊತ್ತವನ್ನು ದ್ವಿಗುಣಗೊಂಡಿದೆ. ಹಾಗಾಗಿ ಏರ್‌ಟೆಲ್ ನೀಡುತ್ತಿರುವ ರೂ. 249 ಪ್ಯಾಕ್ ಅತ್ಯುತ್ತಮ ಯೋಜನೆ ಎಂದು ಹೇಳಬಹುದು.