ಭಾರತದಲ್ಲಿನ Airtel ಮತ್ತು Jio ಅತಿ ಕಡಿಮೆ ಬೆಲೆಗೆ ಕಾಂಬೋ ಪ್ಲಾನ್ಗಳನ್ನು ನೀಡುತ್ತಿವೆ.
Airtel ಹೊಸ ಪ್ರಿಪೇಯ್ಡ್ ಯೋಜನೆಯನ್ನು ಪ್ರಾರಂಭಿಸಿದ್ದು ಉಚಿತ Disney+ Hotstar ಚಂದಾದಾರಿಕೆ ಕೊಡುಗೆಯನ್ನು ನೀಡುತ್ತಿದೆ.
ಉಚಿತ ಡಿಸ್ನಿ+ ಹಾಟ್‌ಸ್ಟಾರ್, ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ಹೊಂದಿರುವ ಉತ್ತಮ ಪ್ರಿಪೇಯ್ಡ್ ಯೋಜನೆಗಳನ್ನು ಹೊಂದಿವೆ.
ಭಾರತದಲ್ಲಿನ ಏರ್ಟೆಲ್ ಮತ್ತು ಜಿಯೋ ಅತಿ ಕಡಿಮೆ ಬೆಲೆಗೆ ಕಾಂಬೋ ಪ್ಲಾನ್ಗಳನ್ನು ನೀಡುತ್ತಿದ್ದು ಈ ಬೆಲೆಯಲ್ಲಿ ಉಚಿತ ಡಿಸ್ನಿ+ ಹಾಟ್‌ಸ್ಟಾರ್, ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ಚಂದಾದಾರಿಕೆಯೊಂದಿಗೆ ಬರುವ ಉತ್ತಮ ಪ್ರಿಪೇಯ್ಡ್ ಯೋಜನೆಗಳನ್ನು ಹೊಂದಿವೆ. ಏರ್ಟೆಲ್ ಈಗ ಸದ್ದಿಲ್ಲದೆ ಹೊಸ ಪ್ರಿಪೇಯ್ಡ್ ಯೋಜನೆಯನ್ನು ಪ್ರಾರಂಭಿಸಿದ್ದು ಉಚಿತ Disney+ Hotstar ಚಂದಾದಾರಿಕೆ ಕೊಡುಗೆಯನ್ನು ನೀಡುತ್ತಿದೆ. ಉಚಿತ OTT ಪ್ರಯೋಜನಗಳನ್ನು ಹೊಂದಿರುವ ಈ ಹೊಸ ಏರ್ಟೆಲ್ ಪ್ಲಾನ್ ಬಂಡಲ್ ಅನುಕೂಲಗಳೊಂದಿಗೆ ಅನಿಯಮಿತ ಕರೆ, SMS ಮತ್ತು 5G ಡೇಟಾವನ್ನು ಪೂರ್ತಿ 84 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ.
Also Read: AI Voice Scam: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನಿಂದ ಭಾರಿ ವಂಚನೆಗಳು! ಏನಿದು ಎಐ ವಾಯ್ಸ್ ಸ್ಕ್ಯಾಮ್?
ಉಚಿತ Disney+ Hotstar ಹೊಂದಿರುವ Airtel ಪ್ರಿಪೇಯ್ಡ್ ಯೋಜನೆ
ಭಾರತದಲ್ಲಿ 5G ಸಂಪರ್ಕವನ್ನು ನೀಡುವ ಎರಡು ಟೆಲಿಕಾಂ ಆಪರೇಟರ್‌ಗಳಲ್ಲಿ ಏರ್‌ಟೆಲ್ (Airtel) ಒಂದಾಗಿದೆ. ದೇಶದಲ್ಲಿ 5G ಸಂಪರ್ಕ ಬೆಂಬಲವನ್ನು ಹೊಂದಿರುವ ಇತರ ನೆಟ್‌ವರ್ಕ್ ಪೂರೈಕೆದಾರ ಜಿಯೋ, ಇದು ಡಿಸ್ನಿ + ಹಾಟ್‌ಸ್ಟಾರ್ ಮತ್ತು ನೆಟ್‌ಫ್ಲಿಕ್ಸ್ ಪ್ರಿಪೇಯ್ಡ್ ಬಂಡಲ್‌ಗಳನ್ನು ಸಹ ನೀಡುತ್ತದೆ. ಏರ್ಟೆಲ್ನಿಂದ Disney+ Hotstar ಬಂಡಲ್ ಹೊಂದಿರುವ ಬೆಸ್ಟ್ ಪ್ಲಾನ್ ಆಗಿದೆ. ಅಲ್ಲದೆ ಈ 869 ಈಗಾಗಲೇ ಲಭ್ಯವಿರುವ 839 ರೂಗಳ ಅಪ್‌ಗ್ರೇಡ್ ಪ್ಲಾನ್ ಅಂದ್ರೆ ತಪ್ಪಿಲ್ಲ. ಏಕೆಂದರೆ ಇದು 84 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತಿದಿನ 2GB ಡೇಟಾವನ್ನು ನೀಡುತ್ತದೆ.
Airtel ರೂ. 869 ಪ್ರಿಪೇಯ್ಡ್ ಯೋಜನೆ ವಿವರ
ಈ ಪ್ಲಾನ್ ಒಟ್ಟಾರೆಯಾಗಿ 3 ತಿಂಗಳವರೆಗೆ ಉಚಿತ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಗೆ ಉಚಿತ ಪ್ರವೇಶವನ್ನು ನೀಡುತ್ತದೆ. ಬಳಕೆದಾರರು ಇದನ್ನು ತಮ್ಮ ಸ್ಮಾರ್ಟ್‌ಫೋನ್‌ಗಳ ಮೂಲಕ ಮಾತ್ರ ಬಳಸಬಹುದು. ಈ ಯೋಜನೆಯು ಬಳಕೆದಾರರಿಗೆ ಅನಿಯಮಿತ ಸ್ಥಳೀಯ STD ಮತ್ತು ರೋಮಿಂಗ್ ವಾಯ್ಸ್ ಕರೆಗಳನ್ನು ಮತ್ತು 84 ದಿನಗಳ ಅವಧಿಯ ಯೋಜನೆಯ ಅವಧಿಯ ಉದ್ದಕ್ಕೂ ದಿನಕ್ಕೆ 100 SMS ಅನ್ನು ಅನುಮತಿಸುತ್ತದೆ. ಈ ಪ್ರಿಪೇಯ್ಡ್ ಯೋಜನೆಯೊಂದಿಗೆ ನೀಡಲಾಗುವ ಇತರ ಪ್ರಯೋಜನಗಳು ಮೂರು ತಿಂಗಳವರೆಗೆ ಉಚಿತ ಅಪೊಲೊ 24/7 ಸರ್ಕಲ್, ವಿಂಕ್ ಮ್ಯೂಸಿಕ್ ಮತ್ತು ಹಲೋ ಟ್ಯೂನ್ಸ್ ಪ್ರವೇಶ, ಹಾಗೆಯೇ ರಿವಾರ್ಡ್‌ಮಿನಿ ಚಂದಾದಾರಿಕೆಯನ್ನು ಸಹ ನೀಡುತ್ತಿದೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile