Airtel Data Loan: ಭಾರತದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ಭಾರ್ತಿ ಏರ್ಟೆಲ್ (Airtel) ತಮ್ಮ ಗ್ರಾಹಕರಿಗೆ ಹೊಸ ವರ್ಷಕ್ಕೆ ಹೊಸ ಫೀಚರ್ ಅನ್ನು ಪರಿಚಯಿಸಿದೆ. ಈಗ ಏರ್ಟೆಲ್ ಬಳಕೆದಾರರು ಡೇಟಾ ಖಾಲಿಯಾದ್ರು ಚಿಂತಿಸದೆ ತಮ್ಮ ಮನರಂಜನೆಗಳನ್ನು ಅಥವಾ ತುರ್ತು ಸಮಯವನ್ನು ಸದುಪಯೋಗಪಡಿಸಿಕೊಳ್ಳಬಹುದು. ಅಂದ್ರೆ ಏರ್ಟೆಲ್ ನಿಮಗೆ 1GB ಡೇಟಾವನ್ನು ಸಾಲದ ರೂಪದಲ್ಲಿ ನೀಡುತ್ತದೆ.
Also Read: ಸೂಪರ್ Electric Car SU7 ಬಿಡುಗಡೆಗೊಳಿಸಿದ Xiaomi, ಸ್ಮಾರ್ಟ್‌ಫೋನ್‌ನಿಂದಲೇ ಫುಲ್ ಕಂಟ್ರೋಲ್
ಇದನ್ನು ಕಂಪನಿ ತುರ್ತು ಡೇಟಾ ಸಾಲ (Emergency Data Loan) ಸೌಲಭ್ಯ ಎಂದು ಕರೆಯುತ್ತದೆ. ರೀಚಾರ್ಜ್ ಮಾಡದೆಯೇ ತುರ್ತಾಗಿ ಡೇಟಾ ಅಗತ್ಯವಿರುವ ಗ್ರಾಹಕರಿಗೆ ಇದು ಮೀಸಲಾಗಿದೆ. ಇದು ಲೋನ್ ಆಗಿರುವುದರಿಂದ ಏರ್ಟೆಲ್ ಗ್ರಾಹಕರು ಅದನ್ನು ಮರುಪಾವತಿಸಬೇಕಾಗುತ್ತದೆ. ನೀವು ರೂಢಿಯಂತೆ ಸಾಲಕ್ಕೆ ಪ್ರತ್ಯೇಕವಾಗಿ ಪಾವತಿಸಬೇಕಾಗಿಲ್ಲ. ಭವಿಷ್ಯದಲ್ಲಿ ಗ್ರಾಹಕರು ಡೇಟಾ ಪ್ಯಾಕ್‌ನೊಂದಿಗೆ ರೀಚಾರ್ಜ್ ಮಾಡಿದಾಗ ಏರ್ಟೆಲ್ ಈ ಡೇಟಾ ಸಾಲದ ಮೊತ್ತವನ್ನು ಪಡೆದುಕೊಳ್ಳುತ್ತದೆ.
ಷರತ್ತುಗಳೇನು ಅಂದ್ರೆ ಏರ್ಟೆಲ್ ಗ್ರಾಹಕರಿಗೆ ನೀಡಲಾಗುವ ಡೇಟಾ ಸಾಲವು 1GB ಮಾತ್ರ ಲಭ್ಯವಿರುತ್ತದೆ. ಅಲ್ಲದೆ ಇದರ ವ್ಯಾಲಿಡಿಟಿ ಕೇವಲ 1 ದಿನವಾಗಿರುತ್ತದೆ. ಅದೇ ದಿನ ಮಧ್ಯರಾತ್ರಿಯಲ್ಲಿ ಡೇಟಾ ಅವಧಿ ಮುಗಿಯುತ್ತದೆ ಎಂದು ಏರ್ಟೆಲ್ ಹೇಳಿದೆ. ಡೇಟಾ ಸಾಲವನ್ನು ವಿನಂತಿಸಲು ನಿಮ್ಮ ಏರ್ಟೆಲ್ ನಂಬರ್ ಆಕ್ಟಿವ್ ಆಗಿರಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಜೊತೆಗೆ ನಿಮ್ಮ ಸಿಮ್ ಸಕ್ರಿಯ ಮಾನ್ಯತೆಯನ್ನು ಹೊಂದಿರಬೇಕು. ಈ ಮೂಲಕ ನಿಮ್ಮ ಪ್ಲಾನ್‌ನಲ್ಲಿ ಡೇಟಾ ಬ್ಯಾಲೆನ್ಸ್ ಹೊಂದಿಲ್ಲದಿದ್ದರೆ ಅಥವಾ ದಿನದ ಡೇಟಾವನ್ನು ಖಾಲಿ ಮಾಡಿಕೊಂಡಿದ್ದರೆ ನೀವು ಏರ್ಟೆಲ್‌ನಿಂದ ತುರ್ತು ಡೇಟಾ ಸಾಲವನ್ನು ವಿನಂತಿಸಬಹುದು.
ಏರ್ಟೆಲ್ ಗ್ರಾಹಕರು ಈ ಡೇಟಾ ಲೋನ್ ಪಡೆಯಲು ಸರಳವಾಗಿ ತಮ್ಮ ಮೊಬೈಲ್ನಲ್ಲಿ ಈ USSD ಕೋಡ್ ಅನ್ನು ಬಳಸಬೇಕಾಗುತ್ತದೆ. ಡಯಲ್ ಪ್ಯಾಡ್ ತೆರೆದು 5673# ಒತ್ತಿ ಅಥವಾ ನಿಮ್ಮ ಮೊಬೈಲ್ ಡೇಟಾ ಬ್ಯಾಲೆನ್ಸ್ ಮುಗಿದ ನಂತರ ನೇರವಾಗಿ CLI 56321 ನಿಂದ ಕಳುಹಿಸಲಾದ SMS “1” ನೊಂದಿಗೆ ಪ್ರತ್ಯುತ್ತರಿಸುವ ಮೂಲಕ 1GB ಡೇಟಾವನ್ನು ಸಾಲವಾಗಿ ನೀಡುತ್ತದೆ. ಗ್ರಾಹಕರು ಈ ರೂ 19, ರೂ 29, ರೂ 49, ರೂ 58, ರೂ 65, ರೂ 98, ರೂ 148, ರೂ 149, ಮತ್ತು ರೂ. 301 ಪ್ಯಾಕ್‌ಗಳೊಂದಿಗೆ ರೀಚಾರ್ಜ್ ಮಾಡಿದಾಗ 1GB ಡೇಟಾ ಸಾಲವನ್ನು ಮರುಪಡೆಯುವುದಾಗಿ ಏರ್ಟೆಲ್ ಹೇಳಿದೆ.
ನೀವು ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಅಥವಾ ಇತರ ಥರ್ಡ್ ಪಾರ್ಟಿ ಮೊಬೈಲ್ ರೀಚಾರ್ಜ್ ಅಥವಾ ಪಾವತಿ ಪ್ಲಾಟ್‌ಫಾರ್ಮ್‌ಗಳ ಮೂಲಕ ಈ ಯೋಜನೆಗಳೊಂದಿಗೆ ರೀಚಾರ್ಜ್ ಮಾಡಬಹುದು. ಏರ್ಟೆಲ್ ಈ ಡೇಟಾ ಸಾಲದ ಸೌಲಭ್ಯವು ಪ್ರಸ್ತುತ ತಮಿಳುನಾಡು ಮತ್ತು ಪಂಜಾಬ್‌ನ ಗ್ರಾಹಕರಿಗೆ ಮಾತ್ರ ಲಭ್ಯವಿದೆ. ಭಾರ್ತಿ ಏರ್ಟೆಲ್ ಈ ಸೌಲಭ್ಯವನ್ನು ಇತರ ರಾಜ್ಯಗಳು/ಟೆಲಿಕಾಂ ವಲಯಗಳಿಗೂ ವಿಸ್ತರಿಸುತ್ತದೆಯೇ ಎಂಬುದು ಅಸ್ಪಷ್ಟವಾಗಿದೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ