ಕರೆ, ಡೇಟಾ ಮತ್ತು OTT ಪ್ರಯೋಜನಕ್ಕೆ ಒಂದೇ ಏರ್ಟೆಲ್ ಪ್ಲಾನ್‌! ಹಾಗಾದ್ರೆ ಯಾವ ಪ್ಲಾನ್? ಬೆಲೆ ಎಷ್ಟು?

Updated on 24-May-2023
HIGHLIGHTS

ಭಾರ್ತಿ ಏರ್‌ಟೆಲ್ ಈಗ ತನ್ನ ಪೋಸ್ಟ್‌ಪೇಯ್ಡ್ ಕೊಡುಗೆಗಳ ಮೇಲೆ ಹೆಚ್ಚು ಗಮನಹರಿಸಲು ಬಯಸಿದೆ

Airtel ಪೋಸ್ಟ್‌ಪೇಯ್ಡ್ ಯೋಜನೆಯ ಪ್ರಯೋಜನವೆಂದರೆ ನೀವು ಸೇವಿಸುವ ಪ್ರಯೋಜನಗಳ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ

Airtel 499 Postpaid Plan: ಭಾರ್ತಿ ಏರ್‌ಟೆಲ್ ಈಗ ತನ್ನ ಪೋಸ್ಟ್‌ಪೇಯ್ಡ್ ಕೊಡುಗೆಗಳ ಮೇಲೆ ಹೆಚ್ಚು ಗಮನಹರಿಸಲು ಬಯಸಿದೆ. ಟೆಲ್ಕೋಸ್‌ಗೆ ಪೋಸ್ಟ್‌ಪೇಯ್ಡ್ ವಿಭಾಗದಲ್ಲಿ ದೊಡ್ಡ ಅವಕಾಶವಿದೆ. ಪೋಸ್ಟ್‌ಪೇಯ್ಡ್ ಯೋಜನೆಯ ಪ್ರಯೋಜನವೆಂದರೆ ನೀವು ಪಡೆಯುವ ಪ್ರಯೋಜನಗಳ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ. ಏಕೆಂದರೆ ಈ ಲೇಖಾನದಲ್ಲಿ ನಾವು ನಿಮಗೆ ಏರ್ಟೆಲ್ ಪೋಸ್ಟ್ಪಾಯ್ಡ್ ಪ್ಲಾನ್ ಬಗ್ಗೆ ಹೇಳಲಿದ್ದೇವೆ. ನೀವು ಭಾರ್ತಿ ಏರ್‌ಟೆಲ್ ಬಳಕೆದಾರರಾಗಿದ್ದರೆ ನೀವು ಸದಾ ಮೊಬೈಲ್ ನೆಟ್‌ವರ್ಕ್‌ಗೆ ಸಂಪರ್ಕ ಹೊಂದಿರುವಿ. ಭಾರ್ತಿ ಏರ್‌ಟೆಲ್‌ನ ಇದ್ಕಕಿಂತ ಕಡಿಮೆ ಬೆಲೆಯ ಪೋಸ್ಟ್‌ಪೇಯ್ಡ್ ಯೋಜನೆ ರೂ 399 ರುಗಳಿಗೆ ನೀಡುತ್ತಿದೆ ಆದರೆ ಅದರಲ್ಲಿ ನಿಮಗೆ ಯಾವುದೇ ಹೆಚ್ಚುವರಿ OTT  ಪ್ರಯೋಜನಗಳೊಂದಿಗೆ ಬರುವುದಿಲ್ಲ. ಆದ್ದರಿಂದ ನಿಮಗೆ ಡೇಟಾ, ಕರೆಗಳೊಂದಿಗೆ OTT ಪ್ರಯೋಜನಗಳನ್ನು ನೀಡುವ 499 ಪೋಸ್ಟ್‌ಪೇಯ್ಡ್ ಯೋಜನೆ ಬಗ್ಗೆ ತಿಳಿಯಿರಿ. 

ಏರ್‌ಟೆಲ್ ರೂ 499 ಪೋಸ್ಟ್‌ಪೇಯ್ಡ್ ಯೋಜನೆ:

ಭಾರ್ತಿ ಏರ್‌ಟೆಲ್‌ನ ರೂ 499 ಪೋಸ್ಟ್‌ಪೇಯ್ಡ್ ಯೋಜನೆಯು 75GB ಡೇಟಾ, 100 SMS/ದಿನ ಮತ್ತು ಅನಿಯಮಿತ ಧ್ವನಿ ಕರೆಗಳೊಂದಿಗೆ ಬರುತ್ತದೆ. ಈ ಯೋಜನೆಯೊಂದಿಗೆ ಅಮೆಜಾನ್ ಪ್ರೈಮ್‌ನ ಬಂಡಲಿಂಗ್ ಸಹ ಇದೆ. ಆದರೆ ಅಮೆಜಾನ್ ಪ್ರೈಮ್ ಕೇವಲ ಆರು ತಿಂಗಳಿಗೆ ಮಾತ್ರ ನೀಡಲಾಗುತ್ತದೆ. ಒಂದು ವರ್ಷವಲ್ಲ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯು ಒಂದು ವರ್ಷದವರೆಗೆ ಇರುತ್ತದೆ. ಬಳಕೆದಾರರು ಹ್ಯಾಂಡ್‌ಸೆಟ್ ಪ್ರೊಟೆಕ್ಷನ್, ಎಕ್ಸ್‌ಸ್ಟ್ರೀಮ್ ಮೊಬೈಲ್ ಪ್ಯಾಕ್ ಮತ್ತು ವಿಂಕ್ ಮ್ಯೂಸಿಕ್ ಪ್ರೀಮಿಯಂನಂತಹ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯುತ್ತಾರೆ.

ಒಂದು ಹೆಚ್ಚುವರಿ ಸಿಮ್ ಪ್ರಯೋಜನ

ಇದು ಕುಟುಂಬ ಯೋಜನೆ ಅಲ್ಲ ಎಂಬುದನ್ನು ಗಮನಿಸಿ.  ನೀವು ಈ ಯೋಜನೆಯೊಂದಿಗೆ ಆಡ್-ಆನ್ (Add-On) ಕನೆಕ್ಷನ್ ಅಂದ್ರೆ ಒಂದು ಹೆಚ್ಚುವರಿ ಸಿಮ್ ಕಾರ್ಡ್ ಮನೆಯಲ್ಲಿ ಯಾರಿಗಾದರೂ ನೀಡಲು ಬಯಸಿದರೆ ನೀವು ಪ್ರತಿಯೊಂದಕ್ಕೂ ನೀವು ಕೇವಲ 299 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಇದರೊಂದಿಗೆ ಪ್ರತಿಯೊಂದು ಆಡ್-ಆನ್ ಸಂಪರ್ಕಗಳೊಂದಿಗೆ 30GB ಡೇಟಾ, ಅನಿಯಮಿತ ಧ್ವನಿ ಕರೆ ಮತ್ತು 100 SMS/ದಿನವನ್ನು ಒಳಗೊಂಡಿದೆ. ಈ ಯೋಜನೆಯೊಂದಿಗೆ ಸಕ್ರಿಯಗೊಳಿಸುವ ಶುಲ್ಕವೂ ಇದೆ ಎಂಬುದನ್ನು ಗಮನಿಸಬೇಕಿದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :