ಒಮ್ಮೆ ಈ Airtel ರಿಚಾರ್ಜ್ ಮಾಡ್ಕೊಳ್ಳಿ ಸಾಕು ಉಚಿತ Amazon Prime Video ಜೊತೆಗೆ ಅನ್ಲಿಮಿಟೆಡ್ ಕರೆ ಮತ್ತು 5G ಡೇಟಾ!

Updated on 07-Mar-2024
HIGHLIGHTS

ಏರ್‌ಟೆಲ್‌ನ ಈ ಪ್ಲಾನ್ ಉಚಿತ ಅಮೆಜಾನ್ ಪ್ರೈಮ್ ವಿಡಿಯೋ (Amazon Prime Video) ಸೌಲಭ್ಯ ನೀಡುತ್ತಿದೆ.

ಉತ್ತಮ ಪ್ರಯೋಜನಗಳನ್ನು ನೀಡುವ ಏರ್‌ಟೆಲ್ 999 ರೂಗಳ ಬೆಸ್ಟ್ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯ ಮಾಹಿತಿ ಇಲ್ಲಿದೆ.

ಭಾರ್ತಿ ಏರ್‌ಟೆಲ್ ರೂ 999 ಪ್ರಿಪೇಯ್ಡ್ ರೀಚಾರ್ಜ್ ಗ್ರಾಹಕರಿಗೆ ದಿನಕ್ಕೆ 2.5GB ಡೇಟಾವನ್ನು ಪಡೆಯುವಿರಿ.

Airtel Rs 999 Prepaid Recharge Plan: ಭಾರತದ ಪ್ರಮುಖ ದೂರಸಂಪರ್ಕ ಪೂರೈಕೆದಾರರಾದ ಭಾರ್ತಿ ಏರ್‌ಟೆಲ್ (Airtel) ತಮ್ಮ ಗ್ರಾಹಕರಿಗೆ ಅನಿಯಮಿತ ಯೋಜನೆಗಳು, ಡೇಟಾ ಆಡ್-ಆನ್‌ಗಳು ಮತ್ತು OTT ಯೋಜನೆಗಳನ್ನು ಒಳಗೊಂಡಂತೆ ವಿಭಿನ್ನ ರೀಚಾರ್ಜ್ ಆಯ್ಕೆಗಳನ್ನು ಹೊಂದಿದ್ದು ವಿಭಿನ್ನ ಬೆಲೆಯ ವಿಭಾಗಗಳಲ್ಲಿ ಗ್ರಾಹಕರಗ ವಿಭಿನ್ನ ಬಳಕೆಯ ಅಗತ್ಯಗಳನ್ನು ಪೂರೈಸುತ್ತಿದೆ. ದೈನಂದಿನ ಡೇಟಾದ ಜೊತೆಗೆ OTT ಪ್ರಯೋಜನಗಳನ್ನು ನೀಡುವ ರೀಚಾರ್ಜ್‌ಗಾಗಿ ನೀವು ಹುಡುಕುತ್ತಿದ್ದರೆ ಏರ್‌ಟೆಲ್ (Airtel) ಅನಿಯಮಿತ ರೀಚಾರ್ಜ್ ಯೋಜನೆಯನ್ನು ನೀಡುತ್ತದೆ. ಈ ಯೋಜನೆಯಲ್ಲಿ ನಿಮಗೆ ಅಮೆಜಾನ್ ಪ್ರೈಮ್ ವಿಡಿಯೋದ (Amazon Prime Video) ಸೇವೆಗಳೊಂದಿಗೆ ಇತರ ಪ್ರಯೋಜನಗಳೊಂದಿಗೆ ಬರುತ್ತದೆ. ಆದ್ದರಿಂದ ಈ ಪ್ರಯೋಜನಗಳನ್ನು ಒದಗಿಸುವ ಏರ್‌ಟೆಲ್ 999 ರೂಗಳ ಬೆಸ್ಟ್ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳ ಬಗ್ಗೆ ಎಲ್ಲ ಮಾಹಿತಿ ಈ ಕೆಳಗೆ ನೀಡಲಾಗಿದೆ.

Also Read: Samsung Galaxy M14 4G: ಕೈಗೆಟಕುವ ಬೆಲೆಗೆ ಸ್ಯಾಮ್‌ಸಂಗ್ 4G ಫೋನ್ ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು?

Airtel ರೂ 999 ಪ್ರಿಪೇಯ್ಡ್ ರೀಚಾರ್ಜ್ ಯೋಜನೆ Amazon Prime Video ವಿವರ:

ಭಾರ್ತಿ ಏರ್‌ಟೆಲ್ ರೂ 999 ಪ್ರಿಪೇಯ್ಡ್ ರೀಚಾರ್ಜ್ ಗ್ರಾಹಕರಿಗೆ ದಿನಕ್ಕೆ 2.5GB ಡೇಟಾವನ್ನು ಪಡೆಯುವಿರಿ. ಇದರೊಂದಿಗೆ ನೀವು ದಿನದ ಕೋಟ ಮುಗಿದ ನಂತರ ಇದರ ಸ್ಪೀಡ್ 64kbps ವೇಗದಲ್ಲಿ ಅನಿಯಮಿತ ಬಳಕೆಯೊಂದಿಗೆ ಅನಿಯಮಿತ ಸ್ಥಳೀಯ, ಎಸ್‌ಟಿಡಿ ಮತ್ತು ರೋಮಿಂಗ್ ವಾಯ್ಸ್ ಕರೆಗಳನ್ನು ಪಡೆಯುತ್ತಿರ. ಅಲ್ಲದೆ ಇದರಲ್ಲಿ ನಿಮಗೆ ದಿನಕ್ಕೆ 100 ಉಚಿತ SMS ಸಾಗ ನೀಡುತ್ತಿದ್ದು ಇವೆಲ್ಲ ಪ್ರಯೋಜನಗಳು ನಿಮಗೆ 84 ದಿನಗಳ ಮಾನ್ಯತೆಯೊಂದಿಗೆ ನೀಡುತ್ತದೆ. ಈ ಏರ್‌ಟೆಲ್‌ನ ರೂ 999 ಪ್ರಿಪೇಯ್ಡ್ ಯೋಜನೆಯು 3 ತಿಂಗಳವರೆಗೆ ಅಪೊಲೊ 24×7 ಸರ್ಕಲ್, ಫಾಸ್ಟ್‌ಟ್ಯಾಗ್‌ನಲ್ಲಿ ರೂ 100 ಕ್ಯಾಶ್‌ಬ್ಯಾಕ್, ವೈಂಕ್ ಮ್ಯೂಸಿಕ್ ಫ್ರೀ, ಉಚಿತ ಹೆಲೋಟ್ಯೂನ್ಸ್ ಮತ್ತು ರಿವಾರ್ಡ್‌ಮಿನಿ ಚಂದಾದಾರಿಕೆಯಂತಹ ಇತರ ಪ್ರಯೋಜನಗಳನ್ನು ಒಳಗೊಂಡಿದೆ.

Airtel Rs 999 Prepaid Recharge Plan with Amazon Prime Video

Airtel Xstream Play (FREE 20+ OTTs)

ಏರ್‌ಟೆಲ್ ರೂ 999 ಪ್ರಿಪೇಯ್ಡ್ ಯೋಜನೆಯು ಗ್ರಾಹಕರಿಗೆ 84 ದಿನಗಳ ಮಾನ್ಯತೆಯೊಂದಿಗೆ OTT ಸೇವೆಗಳ ಪ್ರಯೋಜನಗಳನ್ನು ನೀಡುವ ಏಕೈಕ ರೀಚಾರ್ಜ್ ಆಯ್ಕೆಯಾಗಿದೆ. ಈ ಯೋಜನೆಯು ಏರ್‌ಟೆಲ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಿಂದ ರೀಚಾರ್ಜ್‌ನಲ್ಲಿ SonyLIV, ErosNow, Lionsgate Play, Hoichoi, ManoramaMax, Shemaroo, Ultra, HungamaPlay, EPICon, DivoTV, Klikk, Nammaflix, Dollywood ಮತ್ತು Shorts TV ಬರುತ್ತದೆ. ಈ ಎಲ್ಲಾ ಪ್ರಯೋಜನಗಳು ಪೂರ್ತಿ 84 ದಿನಗಳವರೆಗೆ ಅಮೆಜಾನ್ ಪ್ರೈಮ್ ವಿಡಿಯೋದ (Amazon Prime Video) ಸದಸ್ಯತ್ವವನ್ನು ಹೊಂದಿದೆ.

ಈ Airtel ಯೋಜನೆ ದಿನಕ್ಕೆ ಕೇವಲ 12 ರೂಗಳ ಖರ್ಚು

ಈ ಯೋಜನೆಯಲ್ಲಿ ನೀವು ದಿನಕ್ಕೆ ಸರಿಸುಮಾರು ಕೇವಲ 12 ರೂಗಳೊಂದಿಗೆ ಅನಿಯಮಿತ ವಾಯ್ಸ್ ಮತ್ತು ದಿನಕ್ಕೆ 2.5GB ಹೆಚ್ಚಿನ ವೇಗದ ಡೇಟಾವನ್ನು ಆನಂದಿಸಬಹುದು. ಅಲ್ಲದೆ ಇದರೊಂದಿಗೆ ನಿಮಗೆ Wynk Music, Airtel Xstream App, Amazon Prime ಪ್ರಯೋಜನಗಳನ್ನು ಸಂಯೋಜಿಸಲಾಗಿದೆ. ರಿವಾರ್ಡ್‌ಮಿನಿ ಚಂದಾದಾರಿಕೆಯು ಏರ್‌ಟೆಲ್‌ನಿಂದ 84 ದಿನಗಳವರೆಗೆ ಸಂಪೂರ್ಣ ಮನರಂಜನಾ ಬಂಡಲ್ ಕೊಡುಗೆಯಾಗಿದೆ. ಆದ್ದರಿಂದ ನೀವು ಲೋಡ್ ಮಾಡಲಾದ ಮನರಂಜನೆಯೊಂದಿಗೆ 84 ದಿನಗಳ ಅಥವಾ 3 ತಿಂಗಳ ಯೋಜನೆಯನ್ನು ಹುಡುಕುತ್ತಿದ್ದರೆ ಈ ಏರ್‌ಟೆಲ್ ರೂ 999 ಪ್ರಿಪೇಯ್ಡ್ ಯೋಜನೆಯು ಅತ್ಯುತ್ತಮ ಆಯ್ಕೆಯಾಗಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :