Airtel Offer: 56 ದಿನಗಳಿಗೆ ಅನ್ಲಿಮಿಟೆಡ್ ಕರೆ ಮತ್ತು 3GB ಡೇಟಾ ನೀಡುವ ಈ ಪ್ಲಾನ್ ಬೆಲೆ ಎಷ್ಟು । High Tech

Updated on 07-Sep-2023
HIGHLIGHTS

ಭಾರ್ತಿ ಏರ್‌ಟೆಲ್ ಈಗ ಗ್ರಾಹಕರಿಗೆ ತನ್ನ ಸೇವೆಗಳನ್ನು ಅತ್ಯಂತ ಕೈಗೆಟುಕುವ ವೆಚ್ಚದಲ್ಲಿ ಪಡೆಯಲು ಅವಕಾಶ ನೀಡುತ್ತಿದೆ

ಏರ್‌ಟೆಲ್ ಬ್ಲ್ಯಾಕ್ (Airtel Black) ಪ್ಲಾನ್ ಮನೆಯ ಸ್ಮಾರ್ಟ್ ಟಿವಿ ಮತ್ತು ಫೈಬರ್ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಬಯಸುವ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿದೆ.

ಏರ್‌ಟೆಲ್ ಡಿಸ್ನಿ+ ಹಾಟ್‌ಸ್ಟಾರ್, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಮತ್ತು ಹೆಚ್ಚಿನವುಗಳಂತಹ ಉಚಿತ OTT ಚಂದಾದಾರಿಕೆಗಳನ್ನು ಸಹ ಬಂಡಲ್ ಮಾಡುತ್ತದೆ.

Airtel Black Offer: ಭಾರತದ ಎರಡನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿರುವ ಭಾರ್ತಿ ಏರ್‌ಟೆಲ್ ಈಗ ಗ್ರಾಹಕರಿಗೆ ತನ್ನ ಸೇವೆಗಳನ್ನು ಅತ್ಯಂತ ಕೈಗೆಟುಕುವ ವೆಚ್ಚದಲ್ಲಿ ಪಡೆಯಲು ಅವಕಾಶ ನೀಡುತ್ತಿದೆ. ಈ ಯೋಜನೆ ಕೇವಲ ಕೈಗೆಟುಕುವ ಬೆಲೆ ಮಾತ್ರವಲ್ಲ ಅದಕ್ಕೆ ತಕ್ಕಂತೆ ಭಾರಿ ಅನುಕೂಲಕರ ರೀತಿಯಲ್ಲಿಯೂ ಪ್ರಯೋಜನಗಳನ್ನು ಸಹ ನೀಡುತ್ತಿದೆ. ಏರ್ಟೆಲ್ ನಿಮಗೆ ಅನ್ಲಿಮಿಟೆಡ್ ಕರೆ, 5G ಡೇಟಾ, Wi-Fi, ಸ್ಮಾರ್ಟ್ ಟಿವಿ ಮತ್ತು OTT ಸೇರಿದಂತೆ ಏರ್‌ಟೆಲ್‌ನ ಸೇವೆಗಳನ್ನು ಬಯಸುವ ಗ್ರಾಹಕರಿಗೆ ಈ ಏರ್‌ಟೆಲ್ ಬ್ಲ್ಯಾಕ್ (Airtel Black) ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಪ್ರಿಪೇಯ್ಡ್ ಯೋಜನೆಯಾಗಿದೆ. 

ಏರ್‌ಟೆಲ್ ಬ್ಲ್ಯಾಕ್ (Airtel Black) ಪ್ಲಾನ್

ಅತಿ ಅಡಿಮೆ ಬೆಲೆಗೆ ಹೆಚ್ಚಿನ ಪ್ರಯೋಜನ ನೀಡುವ ಬಳಕೆದಾರರು ಈ ಯೋಜನೆಗಳಿಂದ ಒಂದನ್ನು ಆಯ್ಕೆ ಮಾಡಬಹುದು. ಏಕೆಂದರೆ ಇದರಲ್ಲಿ ತಮ್ಮದೇ ಆದ ಕಸ್ಟಮ್ ಪ್ಲಾನ್‌ಗಳನ್ನು ನಿರ್ಮಿಸಬಹುದು. ಈ ಸಮಯದಲ್ಲಿ ಅತ್ಯಂತ ಕೈಗೆಟುಕುವ ಏರ್‌ಟೆಲ್ ಬ್ಲಾಕ್ ಪ್ಲಾನ್ 699 ರೂಗಳಾಗಿದೆ. ಈ ಯೋಜನೆಯು ಯಾವುದೇ ಹೆಚ್ಚುವರಿಯ ಮೊಬೈಲ್ ಸಂಪರ್ಕಗಳನ್ನು ನೀಡುವುದಿಲ್ಲವಾದರೂ ನಿಮ್ಮ ಮನೆಯ ಸ್ಮಾರ್ಟ್ ಟಿವಿ ಮತ್ತು ಫೈಬರ್ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಬಯಸುವ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿದೆ. ಮುಂದೆ ಇದರ ಬೆಲೆ ಮತ್ತು ಇದರ ಸಂಪೂರ್ಣ ಮಾಹಿತಿಗಳನ್ನು ತಿಳಿಯೋಣ.

ಏರ್‌ಟೆಲ್ ರೂ.699 ಪ್ಲಾನ್ ವಿವರಗಳು

ಈ ಜನಪ್ರಿಯ ಏರ್‌ಟೆಲ್ ಬ್ಲಾಕ್‌ನ ಬಳಕೆದಾರರಿಗೆ 40Mbps ವೇಗದೊಂದಿಗೆ ಎಕ್ಸ್‌ಸ್ಟ್ರೀಮ್ ಫೈಬರ್ ಕನೆಕ್ಷನ್ ಅನ್ನು ಆಫರ್ ಮಾಡುತ್ತಿದೆ. ಇದೇನು ಕಡ್ಡಾಯವಲ್ಲ ಬೇಕಿದ್ದರೆ ಪಡೆಯಬಹುದು ಇದರಿಂದ ನಿಮಗೆ ಹೆಚ್ಚಿನ ಪ್ರಯೋಜನೆಗಳೇ ಹೊರೆತು ಯಾವುದೇ ನಷ್ಟಗಳಿಲ್ಲ. ಇದರಲ್ಲಿ ನಿಮಗೆ ಪ್ರತಿ ತಿಂಗಳಿಗೆ 3.33TB ಡೇಟಾವನ್ನು ನೀಡಲಾಗುತ್ತದೆ. ಇದರಲ್ಲಿ ಅನಿಯಮಿತ ಕರೆಯೊಂದಿಗೆ ಲ್ಯಾಂಡ್ಲೈನ್ ಧ್ವನಿ ಕರೆ ಸಹ ಸಂಪರ್ಕವಿದೆ. ಗ್ರಾಹಕರು ರೂ 300 ಮೌಲ್ಯದ ಟಿವಿ ಚಾನೆಲ್‌ಗಳೊಂದಿಗೆ DTH ಸಂಪರ್ಕವನ್ನು ಸಹ ಪಡೆಯಬಹುದು. ಇದರೊಂದಿಗೆ ನಿಮಗೆ  ಏರ್‌ಟೆಲ್ ಡಿಸ್ನಿ+ ಹಾಟ್‌ಸ್ಟಾರ್, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಮತ್ತು ಹೆಚ್ಚಿನವುಗಳಂತಹ ಉಚಿತ OTT ಚಂದಾದಾರಿಕೆಗಳನ್ನು ಸಹ ಬಂಡಲ್ ಮಾಡುತ್ತದೆ. 

ಏರ್‌ಟೆಲ್ ಬ್ಲಾಕ್ (Airtel Black) ಆಫರ್ ವಿವರಗಳು

ಈ ಏರ್ಟೆಲ್ ಬ್ಲಾಕ್ DTH ಕನೆಕ್ಷನ್ಗಾಗಿ ಏರ್‌ಟೆಲ್ ಬಳಕೆದಾರರು ಕಂಪನಿಯಿಂದ ಎಕ್ಸ್‌ಸ್ಟ್ರೀಮ್ ಬಾಕ್ಸ್ ಅನ್ನು ಪಡೆಯುತ್ತಾರೆ. ಗ್ರಾಹಕರು ಮುಂಗಡ ಪಾವತಿಯಾಗಿ 4000 ರೂಪಾಯಿಗಳನ್ನು ಪಾವತಿಸಿ ಸಂಪರ್ಕಕ್ಕಾಗಿ ಹಾರ್ಡ್‌ವೇರ್ ಅನ್ನು ಉಚಿತವಾಗಿ ಸ್ಥಾಪಿಸಬಹುದು ಎಂದು ಏರ್‌ಟೆಲ್ ಹೇಳಿದೆ. ಗ್ರಾಹಕರು ಪಾವತಿಸಿದ ಮುಂಗಡವನ್ನು (Security Deposit) ಬಳಕೆದಾರರು ಭವಿಷ್ಯದ ಬರುವ ಮಾಸಿಕ ಬಿಲ್‌ಗಳಲ್ಲಿ ಸರಿಹೊಂದಿಸಲ್ಪಡುತ್ತದೆ. ಇದಲ್ಲದೆ ನೀವು ಏರ್‌ಟೆಲ್ ಬ್ಲಾಕ್ ಅಡಿಯಲ್ಲಿ ಹೊಸ ಸೇವೆಯನ್ನು ಖರೀದಿಸಿದರೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನೀವು ಅದನ್ನು 30 ದಿನಗಳವರೆಗೆ ಪಡೆಯಬಹುದು ಎಂದು ಏರ್‌ಟೆಲ್ ಹೇಳಿದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :