Airtel ಒಂದೇ ಯೋಜನೆಯಲ್ಲಿ ಡೇಟಾ, ಕರೆಗಳೊಂದಿಗೆ OTT ಸೇವೆಗಳನ್ನು ಸಹ ನೀಡುತ್ತಿದೆ
ಅನಿಯಮಿತ ವಾಯ್ಸ್ ಕರೆಗಳೊಂದಿಗೆ ಪ್ರತಿದಿನ ನಿಮಗೆ 3GB ಹೈಸ್ಪೀಡ್ ಡೇಟಾ ಮತ್ತು ದಿನಕ್ಕೆ 100 SMS ಸಹ ಲಭ್ಯ
ಉಚಿತ OTT ಚಂದಾದಾರಿಕೆ ನೀಡುವ 499 ಮತ್ತು 699 ರೂಗಳ Airtel ಯೋಜನೆಗಳ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯಿರಿ
ಭಾರತದ ಜನಪ್ರಿಯ ಟೆಲಿಕಾ ಕಂಪನಿ ಭಾರ್ತಿ ಏರ್ಟೆಲ್ ತನ್ನ ಬಳಕೆದಾರರನ್ನು ಆಕರ್ಷಿಸಲು ಹೊಸ ರಿಚಾರ್ಜ್ ಯೋಜನೆಗಳನ್ನು ನೀಡುತ್ತಿದ್ದು ಒಂದೇ ಯೋಜನೆಯಲ್ಲಿ ಡೇಟಾ, ಕರೆಗಳೊಂದಿಗೆ OTT ಸೇವೆಗಳನ್ನು ಸಹ ನೀಡುತ್ತಿದೆ. ಏರ್‌ಟೆಲ್ ಭಾರತದಲ್ಲಿನ ಇತ್ತೀಚಿನ ಟೆಲಿಕಾಂ ಆಪರೇಟರ್ ಆಗಿದ್ದು ಡಿಸ್ನಿ+ ಹಾಟ್‌ಸ್ಟಾರ್, ನೆಟ್‍ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್‌ನಂತಹ ಮೊಬೈಲ್ ಚಂದಾದಾರಿಕೆಯೊಂದಿಗೆ ಹೊಸ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ನೀಡುತ್ತಿದೆ. ಪ್ರಸ್ತುತ ಭಾರ್ತಿ ಏರ್ಟೆಲ್ ಅತಿ ಕಡಿಮೆ ಬೆಲೆಯಲ್ಲಿ ಡಿಸ್ನಿ+ ಹಾಟ್‌ಸ್ಟಾರ್ ಜೊತೆಗೆ ಅಮೆಜಾನ್ ಪ್ರೈಮ್ ಮೊಬೈಲ್ ಉಚಿತ ಚಂದಾದಾರಿಕೆಯನ್ನು ನೀಡುವ ಈ ಎರಡು 499 ಮತ್ತು 699 ರೂಗಳ ಯೋಜನೆಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿಯಿರಿ.
Also Read: 64MP + 50MP + 50MP ಕ್ಯಾಮೆರಾ ಮತ್ತು Powerful ಪ್ರೊಸೆಸರ್‌ನೊಂದಿಗೆ iQOO 12 ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು?
ಏರ್ಟೆಲ್ 499 ರೂಗಳ OTT ಪ್ರಿಪೇಯ್ಡ್ ಪ್ಲಾನ್ ವಿವರಗಳು
ಭಾರ್ತಿ ಏರ್ಟೆಲ್‌ನ ಈ ಪ್ಲಾನ್ ಬೆಲೆ ರೂ 499 ರೂಗಳಾಗಿದ್ದು ಯೋಜನೆಯು ಪೂರ್ತಿ 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಲೋಕಲ್ ಮತ್ತು ಎಸ್‌ಟಿಡಿಗೆ ಅನಿಯಮಿತ ವಾಯ್ಸ್ ಕರೆಗಳೊಂದಿಗೆ ಪ್ರತಿದಿನ ನಿಮಗೆ 3GB ಹೈಸ್ಪೀಡ್ ಡೇಟಾ ಮತ್ತು ದಿನಕ್ಕೆ 100 SMS ಸಹ ಲಭ್ಯವಿರುತ್ತದೆ. ಒಮ್ಮೆ ನೀವು ಈ ರಿಚಾರ್ಜ್ ಮಾಡಿಕೊಂಡರೆ ಅಲ್ಲಿಂದ ಮುಂದಿನ 3 ತಿಂಗಳ ಉಚಿತ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ಸಹ ಒಳಗೊಂಡಿದೆ. ಪ್ರತಿ ದಿನ ಹೆಚ್ಚು ಡೇಟಾ ಮತ್ತು ಮನರಂಜನೆ ಬಯಸುವವರಿಗಾಗಿ ಈ ಯೋಜನೆ ಉತ್ತಮವಾಗಿದೆ.
ಏರ್ಟೆಲ್ 699 ರೂಗಳ ಪ್ರಿಪೇಯ್ಡ್ ಪ್ಲಾನ್ ವಿವರಗಳು
ಏರ್ಟೆಲ್‌ನ ಬಳಕೆದಾರರು 56 ದಿನಗಳವರೆಗೆ ದಿನಕ್ಕೆ 3GB ಡೇಟಾವನ್ನು ಪಡೆಯುತ್ತಾರೆ. ಇದರಲ್ಲೂ ಬಳಕೆದಾರರು ಲೋಕಲ್ ಮತ್ತು ಎಸ್‌ಟಿಡಿಗೆ ಅನಿಯಮಿತ ವಾಯ್ಸ್ ಕರೆಗಳೊಂದಿಗೆ ಪ್ರತಿದಿನ ನಿಮಗೆ 3GB ಹೈಸ್ಪೀಡ್ ಡೇಟಾ ಮತ್ತು ದಿನಕ್ಕೆ 100 SMS ಸಹ ಲಭ್ಯವಿರುತ್ತದೆ. ಅಲ್ಲದೆ ಇದರಲ್ಲಿ ನಿಮಗೆ ಅಮೆಜಾನ್ ಪ್ರೈಮ್ ಸದಸ್ಯತ್ವ ಚಂದಾದಾರಿಕೆಯನ್ನು ಉಚಿತವಾಗಿ ಲಭ್ಯವಿರುತ್ತದೆ. ಬಳಕೆದಾರರು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಅಪ್ಲಿಕೇಶನ್, ಒಂದು ಏರ್‌ಟೆಲ್ ವಿಂಕ್ ಮ್ಯೂಸಿಕ್ ಉಚಿತ, ಉಚಿತವಾಗಿ ಎಕ್ಸ್‌ಸ್ಟ್ರೀಮ್ ಚಾನೆಲ್ ಆಯ್ಕೆ, ಅಪೊಲೊ 24 ಬೈ 7 ಸರ್ಕಲ್, ಉಚಿತ ಹೆಲೋಟ್ಯೂನ್ಸ್ ಮತ್ತು ಕ್ಯಾಶ್‌ಬ್ಯಾಕ್ ಅನ್ನು ಫಾಸ್ಟ್‌ಟ್ಯಾಗ್‌ನಲ್ಲಿ ಆನಂದಿಸಬಹುದು.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile