ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿ ಭಾರ್ತಿ ಏರ್ಟೆಲ್ (Airtel) ಹೊಸ 2024 ವರ್ಷದಲ್ಲಿ ಗ್ರಾಹಕರನ್ನು ಆಕರ್ಷಿಸಲು Jio, Vi ಮತ್ತು BSNL ಕಂಪನಿಗೆ ಠಕ್ಕರ್ ನೀಡಲು ಅತ್ಯುತ್ತಮ ಪ್ರಿಪೇಯ್ಡ್ ಯೋಜನೆಗಳನ್ನು ಕೈಗೆಟಕುವ ಬೆಲೆಗೆ ನೀಡುತ್ತಿದೆ. ಏರ್‌ಟೆಲ್‌ನ ಈ ರಿಚಾರ್ಜ್ ಪ್ಲಾನ್ ಪಡೆದು ಪೂರ್ತಿ 3 ತಿಂಗಳಿಗೆ (90 ದಿನಗಳಿಗೆ) ರಿಚಾರ್ಜ್ ಮಾಡುವ ತಲೆನೋವಿನಿಂದ ದೂರವಿರಬಹುದು. ನಾವು ಏರ್‌ಟೆಲ್‌ನ ₹779 ರೂಗಳ ಪ್ಲಾನ್ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಇಲ್ಲಿ ನೀಡಿದ್ದೇವೆ. ನೀವು ಏರ್ಟೆಲ್ ಬಳಕೆದಾರರಿಗಿದ್ದು ಈ ತಿಂಗಳ ರಿಚಾರ್ಜ್ ಇನ್ನು ಮಾಡಿಲ್ಲವಾದರೆ ಒಮ್ಮೆ ಈ ಬೆಸ್ಟ್ ಪ್ರಿಪೇಯ್ಡ್ ಪ್ಲಾನ್ ಅನ್ನು ಪರಿಶೀಲಿಸಲೇಬೇಕು.
Also Read: ನೀವು ಆಕಸ್ಮಿಕವಾಗಿ ತಪ್ಪಾದ UPI ಖಾತೆಗೆ ಹಣ ವರ್ಗಾವಣೆ ಮಾಡಿದರೆ ತಕ್ಷಣ ಈ ಕೆಲಸ ಮಾಡಿ
ಏಕೆಂದರೆ ಏರ್‌ಟೆಲ್‌ನ ನಿಮಗೆ 90 ದಿನಗಳ ವ್ಯಾಲಿಡಿಟಿಯೊಂದಿಗೆ Unlimited ಕರೆ ಮತ್ತು 5G ಡೇಟಾ ಲಭ್ಯವಿದೆ. ಭಾರ್ತಿ ಏರ್ಟೆಲ್ ಈ ₹799 ರೂಗಳ ಬೆಲೆಯಲ್ಲಿ ನಿಮಗೆ ಪ್ರಿಪೇಯ್ಡ್, ಪೋಸ್ಟ್‌ಪೇಯ್ಡ್ ಮತ್ತು ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಸಹ ನೀಡುತ್ತಿದೆ. ಆದರೆ ಈ ಲೇಖನದಲ್ಲಿ ಅತಿ ಹೆಚ್ಚಾಗಿ ಬಳಕೆಯಲ್ಲಿರುವ ಏರ್‌ಟೆಲ್‌ನ ₹779 ರೂಗಳ ಪ್ರಿಪೇಯ್ಡ್ ಪ್ಲಾನ್ ಬಗ್ಗೆ ಮಾತ್ರ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇನೆ. ಇದರ ಕ್ರಮವಾಗಿ ನೀವು ದಿನಕ್ಕೆ ಕೇವಲ ₹8.6 ರೂಗಳನ್ನು ಖರ್ಚ್ ಮಾಡಿ 90 ದಿನಗಳಿಗೆ ಉತ್ತಮ ಪ್ರಯೋಜನಗಳನ್ನು ಪಡೆಯಬಹುದು.
ಏರ್‌ಟೆಲ್‌ನ ಈ ಬೆಸ್ಟ್ 779 ಯೋಜನೆಯು ಪೂರ್ತಿ 90 ತಿಂಗಳ ವ್ಯಾಲಿಡಿಟಿಯೊಂದಿಗೆ ಬರುವ ಅತ್ಯುತ್ತಮ ಯೋಜನೆ ವಿಭಾಗದಲ್ಲಿ ಈ ಪ್ಲಾನ್ ಬಹಳಷ್ಟು ಜನಪ್ರಿಯವಾಗಿದೆ. ಏಕೆಂದರೆ ಇದರಲ್ಲಿ ಬಳಕೆದಾರರಿಗೆ ಅನಿಯಮಿತ ವಾಯ್ಸ್ ಸ್ಥಳೀಯ, STD ಮತ್ತು ರೋಮಿಂಗ್ ಕರೆಗಳೊಂದಿಗೆ ಪ್ರತಿದಿನ 1.5GB ಡೇಟಾವನ್ನು ನೀಡುತ್ತಿದೆ. ಒಟ್ಟಾರೆಯಾಗಿ ಈ ಯೋಜನೆಯಲ್ಲಿ 135GB ಡೇಟಾವನ್ನು ಪೂರ್ತಿ ವ್ಯಾಲಿಡಿಟಿವರೆಗೆ ನೀಡುತ್ತಿದೆ. ಈ ದಿನದ ಡೇಟಾ ಖಾಲಿಯಾದ ನಂತರ ನೀವು ಅನ್ಲಿಮಿಟೆಡ್ ಡೇಟಾವನ್ನು 64kbps ವೇಗದಲ್ಲಿ ಬಳಸಲು ಅನುಮತಿಸುತ್ತದೆ.
ಏರ್ಟೆಲ್ ನಿಮಗೆ ಈ ಯೋಜನೆಯಲ್ಲಿ ದಿನಕ್ಕೆ 100 SMS ನೀಡುತ್ತಿದೆ. ಒಂದು ವೇಳೆ ನೀವು ನೂರು SMS ನಂತರ ಸೆಂಡ್ ಮಾಡಿದರೆ ಲೋಕಲ್ 1 ರೂಗಳು ಮತ್ತು SDT ಅಲ್ಲಿ 1.5 ರೂಗಳ ಶುಲ್ಕ ನೀಡಬೇಕಾಗುತ್ತದೆ. ಅಲ್ಲದೆ ಏರ್‌ಟೆಲ್ ಥ್ಯಾಂಕ್ಸ್ ರಿವಾರ್ಡ್‌ಗಳ ಅಡಿಯಲ್ಲಿ ಏರ್‌ಟೆಲ್ ಬಳಕೆದಾರರು ಅನ್‌ಲಿಮಿಟೆಡ್ 5G ಡೇಟಾ, ಅಪೊಲೊ 24x 7 ಸರ್ಕಲ್ 3 ತಿಂಗಳ ಸದಸ್ಯತ್ವವನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಉಚಿತ ಹೆಲೋಟ್ಯೂನ್ಸ್ ಮತ್ತು ವಿಂಕ್ ಮ್ಯೂಸಿಕ್ ಅನ್ನು ಆನಂದಿಸಲು ಅನುಮತಿಸುತ್ತದೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ