ಏರ್ಟೆಲ್ 289 ರೂಗಳ ಹೊಸ ಪ್ರಿಪೇಯ್ಡ್ ಪ್ಲಾನಲ್ಲಿ ಅನ್ಲಿಮಿಟೆಡ್ ಕರೆಯನ್ನು ಪೂರ್ತಿ 48 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡುತ್ತಿದೆ.

Updated on 13-Jan-2019
HIGHLIGHTS

ಅನ್ಲಿಮಿಟೆಡ್ ಅಂದ್ರೆ ಲೋಕಲ್, ಎಸ್ಟಿಡಿ ಮತ್ತು ರೋಮಿಂಗ್ ಕರೆಗಳನ್ನು ಸಂಪೂರ್ಣ ಮಾನ್ಯತೆ ಅವಧಿಯವರೆಗೆ ಒದಗಿಸುತ್ತದೆ.

ಪ್ರಸ್ತುತ ಹಲವಾರು ಬದಲಾವಣೆಗಳಿಗೆ ಒಳಗಾಗುತ್ತಿರುವ ಭಾರ್ತಿ ಏರ್ಟೆಲ್ ಈಗ ವೊಡಾಫೋನ್ ನೀಡುತ್ತಿರುವಂತೆ ಹೊಸ ಪ್ರಿಪೇಡ್ ಪ್ಲಾನನ್ನು 289 ರೂಪಾಯಿಗಳೊಂದಿಗೆ ಪರಿಚಯಿಸಿದೆ. ಈ ಪ್ಲಾನ್ ಸದ್ಯಕ್ಕೆ ಆಂಧ್ರಪ್ರದೇಶ ಮತ್ತು ತೆಲಂಗಾಣ, ಚೆನ್ನೈ ಮತ್ತು ಇತರ ಕೆಲವು ವಲಯಗಳಲ್ಲಿ ಏರ್ಟೆಲ್ನ ಈ ಹೊಸ ಪ್ರಿಪೇಡ್ ಪ್ಲಾನ್ ಓಪನ್ ಮಾರುಕಟ್ಟೆಯಾಲ್ಲಿ ಲಭ್ಯವಿದೆ. ಆದರೆ ದೆಹಲಿ ಮತ್ತು ಇತರ ಮೆಟ್ರೊ ವಲಯಗಳಲ್ಲಿ ಇದು ಇನ್ನು ಪೂರ್ತಿಯಾಗಿ ಮಾನ್ಯವಾಗಿಲ್ಲ. 

ಏರ್ಟೆಲ್ನ ಈ ಹೊಸ ಪ್ರಿಪೇಡ್ ಪ್ಲಾನಲ್ಲಿ ಅನ್ಲಿಮಿಟೆಡ್ ಕರೆಯೊಂದಿಗೆ 1GB ಯ 2G/ 3G/ 4G ಡೇಟಾ ಮತ್ತು ದಿನಕ್ಕೆ 100 SMS ಅನ್ನು 48 ದಿನಗಳಿಗೆ ಪಡೆಯಬವುದು.ಈ ಭಾರ್ತಿ ಏರ್ಟೆಲ್ನಿಂದ ಹೊಸದಾಗಿ ಪರಿಚಯಿಸಲಾದ 289 ರೂಗಳ ಪ್ರಿಪೇಯ್ಡ್ ಯೋಜನೆಯ ಪ್ರಯೋಜನಗಳ ಕುರಿತು ಹೆಚ್ಚು ಹೇಳಬೇಕೇದರೆ ಇದು ಅನಿಯಮಿತ ಧ್ವನಿ ಕರೆಗಳನ್ನು ನಿಮಗೆ ಒದಗಿಸುತ್ತದೆ. 

ಈ ಪ್ಲಾನಲ್ಲಿ ಅನ್ಲಿಮಿಟೆಡ್ ಅಂದ್ರೆ ಲೋಕಲ್, ಎಸ್ಟಿಡಿ ಮತ್ತು ರೋಮಿಂಗ್ ಕರೆಗಳನ್ನು ಸಂಪೂರ್ಣ ಮಾನ್ಯತೆ ಅವಧಿಯವರೆಗೆ ಅದರಲ್ಲೂ ವಾಯ್ಸ್ ಕರೆಯೊಂದಿಗೆ ಪ್ಲಾನಲ್ಲಿ 1GB 2G / 3G / 4G ಡೇಟಾವನ್ನು ಮತ್ತು ದಿನಕ್ಕೆ 100 SMS ಅನ್ನು ಒದಗಿಸುತ್ತದೆ. ಈ ಪ್ಲಾನಿನ ವಿಶೇಷತೆಯೆಂದರೆ ಭಾರ್ತಿ ಏರ್ಟೆಲ್ ಈ ಪ್ಲಾನನ್ನು ಓಪನ್ ಮಾರುಕಟ್ಟೆಗೆ ತಂದಿರುವುದು. ಅಲ್ಲದೆ ಈ ಪ್ಲಾನ್ ನೀವು ಯಾವ ಹ್ಯಾಂಡ್ಸೆಟ್ ಬಳಸುತ್ತಿದ್ದೀರೋ ಅದರ ಮೇಲೆ ಅನ್ವಯಿಸುತ್ತದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :