Airtel 2023 Plan: ಅನ್ಲಿಮಿಟೆಡ್ ಕರೆ ಮತ್ತು 4G ಡೇಟಾದೊಂದಿಗೆ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರರಿಗೆ ಸಂಪೂರ್ಣ ಉಚಿತ.!

Airtel 2023 Plan: ಅನ್ಲಿಮಿಟೆಡ್ ಕರೆ ಮತ್ತು 4G ಡೇಟಾದೊಂದಿಗೆ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರರಿಗೆ ಸಂಪೂರ್ಣ ಉಚಿತ.!
HIGHLIGHTS

Airtel ಎರಡು ಹೊಸ OTT ಸೇವೆಯನ್ನು ನೀಡುವ ಯೋಜನೆಗಳನ್ನು ಮತ್ತೆ ಪರಿಚಯಿಸಿದೆ.

Airtel ನಿಮ್ಮ ಹಣವನ್ನು ಮತ್ತಷ್ಟು ಉಳಿಸುವ ಜೊತೆಗೆ ಹೊಸ ಮಾದರಿಯ ಸುವರ್ಣಾವಕಾಶವನ್ನು ನೀಡಿದೆ.

ಏರ್‌ಟೆಲ್ ಮತ್ತೊಮ್ಮೆ 399 ರೂಗಳ ಈ ಯೋಜನೆಯನ್ನು ಬಿಡುಗಡೆ ಮಾಡಿದ್ದು ಇದರಲ್ಲಿ ಡಿಸ್ನಿ + ಹಾಟ್‌ಸ್ಟಾರ್‌ಗೆ ಮೂರು ತಿಂಗಳ ಉಚಿತ ಚಂದಾದಾರಿಕೆ ನೀಡಿದೆ.

Airtel 2023 Plan: ದೇಶದಲ್ಲಿ ಈ ಹಿಂದೆ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆ ಯೋಜನೆಗಳನ್ನು ಸ್ಥಗಿತಗೊಳಿಸಿದ ನಂತರ ಏರ್‌ಟೆಲ್ ಟೆಲಿಕಾಂ ಕಂಪನಿಯು ಹೊಸ ವರ್ಷದ ಸಂದರ್ಭದಲ್ಲಿ ಹಣವನ್ನು ಉಳಿಸಲು ಗ್ರಾಹಕರಿಗೆ ಸಹಾಯವಾಗಲೆಂದು ಎರಡು ಹೊಸ ಯೋಜನೆಗಳನ್ನು ಮತ್ತೆ ಪರಿಚಯಿಸುವುದರ ಜೊತೆಗೆ ಸುವರ್ಣಾವಕಾಶವನ್ನು ನೀಡಿದೆ. ಇಂದು ಪ್ರತ್ಯೇಕ ಚಲನಚಿತ್ರಗಳು ಮತ್ತು OTT ಪ್ಲಾಟ್‌ಫಾರ್ಮ್‌ನ ಆಯ್ಕೆಯನ್ನು ಪಡೆಯಲು ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಆದರೆ ಇದೀಗಾ ಏರ್‌ಟೆಲ್ ಮತ್ತೊಮ್ಮೆ ತನ್ನ ಚಂದಾದಾರರಿಗೆ ಯಾವುದೇ ವೆಚ್ಚವಿಲ್ಲದೆ. ಅತ್ಯುತ್ತಮ ಯೋಜನೆಯಿಂದ ಡಿಸ್ನಿ + ಹಾಟ್‌ಸ್ಟಾರ್ ನೈಜ ಶೀರ್ಷಿಕೆಗಳನ್ನು ಒದಗಿಸಲು ಆಯ್ಕೆ ಮಾಡಿದೆ.

ಏರ್‌ಟೆಲ್‌ನ ರೂ.399 ಪ್ಲಾನ್‌ನಲ್ಲಿ ಡಿಸ್ನಿ+ಹಾಟ್‌ಸ್ಟಾರ್ ಉಚಿತ:

ಏರ್‌ಟೆಲ್ ಮತ್ತೊಮ್ಮೆ 399 ರೂಗಳ ಈ ಯೋಜನೆಯನ್ನು ಬಿಡುಗಡೆ ಮಾಡಿದ್ದು ಇದರಲ್ಲಿ ಡಿಸ್ನಿ + ಹಾಟ್‌ಸ್ಟಾರ್‌ಗೆ ಮೂರು ತಿಂಗಳ ಉಚಿತ ಚಂದಾದಾರಿಕೆ ನೀಡುವುದರ ಜೊತೆಗೆ 28 ದಿನಗಳವರೆಗೆ ದಿನಕ್ಕೆ 2.5 GB ಡೇಟಾವನ್ನು ಸಹ ನೀಡಲಾಗಿದೆ. ಅಷೇ ಅಲ್ಲದೇ ಈ ಯೋಜನೆಯಲ್ಲಿ ಅನ್ ಲಿಮಿಟೆಡ್ ವಾಯ್ಸ್‌ ಕಾಲ್ಸ್ ಮತ್ತು ಒಟ್ಟು 28 ದಿನಗಳವರೆಗೆ ಪ್ರತಿದಿನ 100 SMS ಗಳು ಉಚಿತವಾಗಿದ್ದು ನಿಮ್ಮ ಸಿಮ್‌ಗೆ ಈ ಯೋಜನೆಯನ್ನು ಸೇರಿಸಿದ ನಂತರ ನೀವು ಮೂರು ತಿಂಗಳವರೆಗೆ ಉಚಿತ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಪಡೆಯಬಹುದು.

ಏರ್‌ಟೆಲ್‌ನ ರೂ.839 ಪ್ಲಾನ್‌ನಲ್ಲಿ ಡಿಸ್ನಿ+ಹಾಟ್‌ಸ್ಟಾರ್ ಉಚಿತ:

ಭಾರ್ತಿ ಏರ್‌ಟೆಲ್ ಕಂಪನಿಯು ಈ ಸೌಲಭ್ಯವನ್ನ ಉಚಿತವಾಗಿ ನೀಡಲು ಹೊಸದಾಗಿ ಪ್ರಾರಂಭಿಸಲಾದ ರೂ.839 ಪ್ಯಾಕೇಜ್‌ನ ಅಡಿಯಲ್ಲಿ 3 ತಿಂಗಳವರೆಗೆ ಹಾಟ್‌ಸ್ಟಾರ್ ಚಂದಾದಾರಿಕೆ ನೀಡುವುದರ ಜೊತೆಗೆ ಅನ್ ಲಿಮಿಟೆಡ್ ಕರೆಗಳು ಮತ್ತು 84 ದಿನಗಳವರೆಗೆ 100 SMS ಗಳು ನೀಡಿದೆ. ಪ್ರತಿದಿನ ಇದರ ಪ್ರಯೋಜನ ಪಡೆದುಕೊಳ್ಳುವ ಚಂದಾದಾರರಿಗೆ ಕಂಪನಿಯು ನಿಗಧಿ ಪಡಿಸಿದ ಸಮಯದವರಗೆ ದಿನಕ್ಕೆ 2GB ಡೇಟಾವನ್ನು ಸಹ ನೀಡುತ್ತದೆ.

ಏರ್‌ಟೆಲ್‌ನ ಈ ಯೋಜನೆಯಲ್ಲಿ ಡಿಸ್ನಿ ಹಾಟ್‌ಸ್ಟಾರ್ ಅನ್ನು ಹೇಗೆ ಸಕ್ರಿಯಗೊಳಿಸುವುದು?

ಬಳಕೆದಾರರು ತಮ್ಮ ಏರ್‌ಟೆಲ್ ಸಂಖ್ಯೆಗಳನ್ನು ವೋಚರ್‌ಗಳೊಂದಿಗೆ ರೀಚಾರ್ಜ್ ಮಾಡಿದ ತಕ್ಷಣ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಕೆಲವೇ ನಿಮಿಷಗಳಲ್ಲಿ ಅವರ ಸಂಖ್ಯೆಯಲ್ಲಿ ಸಕ್ರಿಯಗೊಳಿಸಲಾಗುತ್ತದೆ. ಬಳಕೆದಾರರು ನಂತರ ತಮ್ಮ ಫೋನ್ ಸಂಖ್ಯೆಯೊಂದಿಗೆ ನಮ್ಮ ವೆಬ್/ಆ್ಯಪ್‌ಗೆ ಲಾಗಿನ್ ಮಾಡಬಹುದು, OTP ಅನ್ನು ಮೌಲ್ಯೀಕರಿಸಬಹುದು ಮತ್ತು ನಮ್ಮ ವಿಷಯವನ್ನು ಆನಂದಿಸಬಹುದು. ಏರ್‌ಟೆಲ್ ತನ್ನ ಉಚಿತ ಹಾಟ್‌ಸ್ಟಾರ್ ಚಂದಾದಾರಿಕೆ ಯೋಜನೆಗಳನ್ನು ರೂ. 499 ಮತ್ತು ರೂ. 3359 ಗೆ ಸೀಮಿತಗೊಳಿಸಿದ್ದು ನಂತರ ಕಂಪನಿಯು ಮತ್ತೊಮ್ಮೆ ಇನ್ನಷ್ಟು ಯೋಜನೆಗಳಲ್ಲಿ ಉಚಿತ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆ ಆಯ್ಕೆಯನ್ನು ಮತ್ತೆ ತರುವ ಯೋಜನೆಗಳನ್ನು ಬಿಡುಗಡೆ ಮಾಡಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo