ಭಾರ್ತಿ ಏರ್ಟೆಲ್ (Airtel) ತನ್ನ ಲೇಟೆಸ್ಟ್ ಪ್ರಿಪೇಯ್ಡ್ ಪ್ಲಾನ್ ಒಳಗೆ ಬೆಲೆ ಹೆಚ್ಚಿಸದೆ ಅದೇ ಹಳೆಯ ಬೆಲೆಗೆ ಉಚಿತವಾಗಿ ಬರೋಬ್ಬರಿ 2 ವಾರಗಳ ವ್ಯಾಲಿಡಿಟಿಯನ್ನು ವಿಸ್ತರಿಸಿದೆ. ನಾವು ಈ ಲೇಖನದಲ್ಲಿ ಅದೇ 395 ರೂಗಳ ರಿಚಾರ್ಜ್ ಯೋಜನೆಯ ಬಗ್ಗೆ ಮಾತನಾಡುತ್ತಿದ್ದು ಏರ್ಟೆಲ್ (Airtel) ಈ ಯೋಜನೆಯಲ್ಲಿ ಕೆಲವೇ ದಿನಗಳ ಹಿಂದೆಯಷ್ಟೇ ಪರಿಚಯಿಸಿತು ಆದರೆ ಮತ್ತೆ ಈ ಯೋಜನೆಯಲ್ಲಿ ಕೊಂಚ ಬದಲಾವಣೆಯನ್ನು ಮಾಡಿ ಹೆಚ್ಚು ಪ್ರಯೋಜನಗಳನ್ನು ನೀಡುತ್ತಿದೆ. ಭಾರತದ ಟೆಲಿಕಾಂ ಕಂಪನಿ ಏರ್ಟೆಲ್ (Airtel Offer) ಅಡಿಯಲ್ಲಿ ಇತ್ತೀಚಿಗಷ್ಟೇ ಪರಿಚಯವಾದ ₹395 ರೂಗಳಪ್ರಿಪೇಯ್ಡ್ ಯೋಜನೆಯಲ್ಲಿ 56 ದಿನಗಳ ವ್ಯಾಲಿಡಿಟಿಯ ಬದಲಿಗೆ ಈಗ 70 ದಿನಗಳಿಗೆ ವಿಸ್ತರಿಸಿದೆ.
ಹೌದು ಈಗಾಗಲೇ ಮೇಲೆ ತಿಳಿಯಿರುವಂತೆ ಪ್ರಸ್ತುತ ಏರ್ಟೆಲ್ ಇದರ ಬದಲಾವಣೆಗೆ ಕಾರಣಗಳೇನು ಎನ್ನುವುದರ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಯಾಕೆಂದರೆ ಮೊದಲು ಈ ಯೋಜನೆಯ ವ್ಯಾಲಿಡಿಟಿ 56 ದಿನಗಳೊಂದಿಗೆ ಬಿಡುಗಡೆಗೊಳಿಸಿತ್ತು ಆದರೆ ಈಗ ಇದನ್ನು 70 ದಿನಗಳಿಗೆ ವಿಸ್ತರಿಸಿದೆ. ಇದರ ಬೆಲೆ, ಡೇಟಾ, ಕರೆ ಮತ್ತು SMS ಸೇರಿ ಎಲ್ಲ ಪ್ರಯೋಜನಗಳು ಅದೇ ಆಗಿದ್ದು ಕೇವಲ ವ್ಯಾಲಿಡಿಟಿಯನ್ನು ಮಾತ್ರ ಬದಲಾಯಿಸಿದೆ.
ಏರ್‌ಟೆಲ್‌ನ ಈ ಹೊಸ ಪ್ರಿಪೇಯ್ಡ್ ಯೋಜನೆಯು ಮುಖ್ಯವಾಗಿ ಕರೆ ಪ್ರಯೋಜನಗಳನ್ನು ಮತ್ತು SMS ಸೇವೆಗಳನ್ನು ಒಂದು ಮಟ್ಟಿಗೆ ಬಯಸುವ ಬಳಕೆದಾರರಿಗೆ ಒಂದು ಆಯ್ಕೆಯಾಗಿ ಬರುತ್ತದೆ. ಡೇಟಾವು ದ್ವಿತೀಯಕ ಅವಶ್ಯಕತೆಯಾಗಿದೆ. ಏರ್‌ಟೆಲ್ ನೀಡುವ ಹೆಚ್ಚಿನ ಪ್ಲಾನ್‌ಗಳು ದೈನಂದಿನ ಡೇಟಾ ಪ್ರಯೋಜನಗಳೊಂದಿಗೆ ಬರುತ್ತವೆ ಮತ್ತು ತುಲನಾತ್ಮಕವಾಗಿ ಹೆಚ್ಚಿನ ವೆಚ್ಚವನ್ನು ಪರಿಗಣಿಸಿದರೆ ರೂ 395 ಯೋಜನೆಯು ಅವರಿಗೆ ಉತ್ತಮ ಆಯ್ಕೆಯಾಗಿದೆ. ಪ್ರಯೋಜನಗಳ ವಿಷಯದಲ್ಲಿ ಯೋಜನೆಯು ಸ್ಥಳೀಯ ಮತ್ತು STD ಎರಡರಲ್ಲೂ ಅನಿಯಮಿತ ಕರೆಗಳನ್ನು ಒಳಗೊಂಡಿದೆ. ಇದೊಂದು ವಾಯ್ಸ್ ಕರೆಗಳ ಯೋಜನೆಯಾಗಿದ್ದು ಇದರಲ್ಲಿ 70 ದಿನಗಳಿಗೆ ಕೇಲವ 6GB ಡೇಟಾ ಮಾತ್ರ ಲಭ್ಯವಿರುತ್ತದೆ. ಈ ಉಚಿತ ಡೇಟಾ ಮುಗಿದ ನಂತರ ಪ್ರತಿ MB ಬಳಕೆಗೆ 50 ಪೈಸೆಗಳ ಶುಲ್ಕ ಚಾರ್ಜ್ ಆಗುತ್ತದೆ.
Also Read: 108MP ಕ್ಯಾಮೆರಾದೊಂದಿಗೆ POCO M6 4G ಬಿಡುಗಡೆಗೆ ಸಿದ್ದ! ನಿರೀಕ್ಷಿತ ಬೆಲೆ ಮತ್ತು ಟಾಪ್ ಫೀಚರ್‌ಗಳೇನು?
ಇದಲ್ಲದೆ ಏರ್‌ಟೆಲ್‌ನ ಈ ಯೋಜನೆಯಲ್ಲಿ ಬಳಕೆದಾರರುಬರೋಬ್ಬರಿ 70 ದಿನಗಳವರೆಗೆ 600SMS ಪಡೆಯುತ್ತಾರೆ. ಈ ಉಚಿತ ಮೆಸೇಜ್ ಕಳುಹಿಸಿದ ನಂತರ ಪ್ರತಿಯೊಂದು ಸ್ಥಳೀಯ ಮೆಸೇಜ್ 1 ರೂಗಳು ಮತ್ತು STD ಮೆಸೇಜ್ 1.5 ರೂಗಳ ಶುಲ್ಕ ಚಾರ್ಜ್ ಆಗುತ್ತದೆ. ಇದರ ನಂತರ ನೀವು ಹೆಚ್ಚುವರಿಯಾಗಿ ಏರ್‌ಟೆಲ್ ಉಚಿತ ಹಲೋ ಟ್ಯೂನ್, ಅಪೊಲೊ ಸರ್ಕಲ್ ಮತ್ತು ಹೆಚ್ಚಿನವು ಸೇರಿದಂತೆ ಕೆಲವು ಹೆಚ್ಚುವರಿ ಪ್ರಯೋಜನಗಳನ್ನು ಎಸೆದಿದೆ. ಏರ್‌ಟೆಲ್‌ನ ಈ ರೂ 395 ಪ್ರಿಪೇಯ್ಡ್ ಯೋಜನೆಯನ್ನು ಈಗಾಗಲೇ ಏರ್‌ಟೆಲ್‌ನ ವೆಬ್‌ಸೈಟ್ ಮತ್ತು ಇತರ ಆನ್‌ಲೈನ್ ರೀಚಾರ್ಜ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪಟ್ಟಿ ಮಾಡಲಾಗಿದೆ.