ಭಾರ್ತಿ ಏರ್ಟೆಲ್ ಈಗ ತನ್ನ ಆಯ್ದ ಗ್ರಾಹಕರಿಗೆ ಉಚಿತವಾಗಿ 1GB ಡೇಟಾವನ್ನು ನೀಡುತ್ತಿದೆ. ಇದು ಸದ್ಯಕ್ಕೆ ಕೆಲ ಆಯ್ದ ವಲಯದಲ್ಲಿ ಮಾತ್ರ ನೀಡಲಾಗುತ್ತಿದ್ದು ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಒಮ್ಮೆ ಅದರಲ್ಲೂ ನಿಮ್ಮ ನಂಬರ್ಗೆ ಈ ಆಫರ್ ಇದೆಯೋ ಇಲ್ವೋ ಒಮ್ಮೆ ಖಚಿತಪಡಿಸಿಕೊಳ್ಳುವುದು ಉತ್ತಮ. ವರದಿಯೊಂದರ ಪ್ರಕಾರ ಟೆಲಿಕಾಂ ದೈತ್ಯ ಏರ್‌ಟೆಲ್ ತನ್ನ ಗ್ರಾಹಕರಿಗೆ ತಮ್ಮ ಖಾತೆಗಳಿಗೆ ಉಚಿತ ಡೇಟಾ ವೋಚರ್‌ಗಳನ್ನು ಸೇರಿಸಲಾಗಿದೆ ಎಂದು ತಿಳಿಸುವ ಪಠ್ಯ ಸಂದೇಶಗಳನ್ನು ಕಳುಹಿಸುತ್ತಿದೆ.
ಹೆಚ್ಚಿನ ವೇಗದ ಡೇಟಾವನ್ನು ವೋಚರ್‌ಗಳ ರೂಪದಲ್ಲಿ ಉಚಿತವಾಗಿ ನೀಡಲಾಗುತ್ತದೆ. ಇದನ್ನು ಏರ್‌ಟೆಲ್ ಥ್ಯಾಂಕ್ಸ್ ಆ್ಯಪ್‌ನ 'ಕೂಪನ್‌ಗಳು' ವಿಭಾಗಕ್ಕೆ ಹೋಗುವ ಮೂಲಕ ರಿಡೀಮ್ ಮಾಡಿಕೊಳ್ಳಬಹುದು. ಹೈ-ಸ್ಪೀಡ್ ಡೇಟಾ ಕೇವಲ 3 ದಿನಗಳವರೆಗೆ ಲಭ್ಯವಿರುತ್ತದೆ ಮತ್ತು ಕ್ಲೈಮ್ ಮಾಡದಿದ್ದಲ್ಲಿ ಜೂನ್ 1 ರಂದು ಅವಧಿ ಮುಗಿಯುತ್ತದೆ.
ಹೆಚ್ಚುವರಿಯಾಗಿ ಕಡಿಮೆ ರೀಚಾರ್ಜ್ ಗ್ರಾಹಕರಿಗೆ ಉಚಿತ ಡೇಟಾವನ್ನು ನೀಡಲಾಗುತ್ತದೆ. ಸಾಮಾನ್ಯವಾಗಿ ರೂ.99 ರ ಸ್ಮಾರ್ಟ್ ಪ್ಯಾಕ್‌ಗಳಲ್ಲಿ ವೋಚರ್ ಕ್ಲೈಮ್ ಮಾಡಿದ 15 ನಿಮಿಷಗಳಲ್ಲಿ ಬಳಕೆದಾರರ ಏರ್‌ಟೆಲ್ ಖಾತೆಯ ಬ್ಯಾಲೆನ್ಸ್‌ನಲ್ಲಿ ಬಳಕೆಗೆ ಉಚಿತ ಡೇಟಾ ಲಭ್ಯವಿರುತ್ತದೆ. ಏರ್‌ಟೆಲ್ ಪ್ಯಾನ್-ಇಂಡಿಯಾ 5G ಸ್ಪೆಕ್ಟ್ರಮ್ ಅನ್ನು ಖರೀದಿಸಲು ನೋಡುತ್ತಿದೆ ಎಂದು ವರದಿಯೊಂದು ಹೇಳಿದ ಕೆಲವೇ ದಿನಗಳ ನಂತರ ಈ ಪ್ರಕಟಣೆ ಹೊರಬಿದ್ದಿದೆ.
ಟೆಲಿಕಾಂ ನಿಯಂತ್ರಕ TRAI ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಏರ್‌ಟೆಲ್ ಮಾರ್ಚ್‌ನಲ್ಲಿ 22.55 ಲಕ್ಷ ಹೊಸ ಮೊಬೈಲ್ ಚಂದಾದಾರರನ್ನು ಸೇರಿಸಿದೆ. ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಯು ಸಾಕಷ್ಟು ಲಾಭ ಗಳಿಸಿದೆ. ಕಂಪನಿಯು 2,008 ಕೋಟಿ ನಿವ್ವಳ ಲಾಭ ಗಳಿಸಿದೆ. ಕಳೆದ ಹಣಕಾಸು ವರ್ಷದಲ್ಲಿ ನಿವ್ವಳ ಲಾಭ 759 ಕೋಟಿ ರೂ. ಎಂದು ತಿಳಿದುಬಂದಿದೆ.