ಭಾರತದ ಎರಡನೇ ಅತಿದೊಡ್ಡ ಟೆಲಿಕಾಂಯಾಗಿರುವ ಭಾರ್ತಿ ಏರ್ಟೆಲ್ (Airtel) ಈಗ ತನ್ನ ಬಳಕೆದಾರರಿಗೆ ರಿಲಯನ್ಸ್ ಜಿಯೋಗೆ (Reliance Jio) ಠಕ್ಕರ್ ನೀಡುವ ಈ ಪ್ರಿಪೇಯ್ಡ್ ಯೋಜನೆಯನ್ನು ಪರಿಗಣಿಸಬಹುದು. ಈ ಯೋಜನೆಯ ವಿಶೇಷವೆಂದರೆ ಬೆಲೆಯಲ್ಲಿ ಭಾರಿ ಕಡಿಮೆಯಾಗಿದ್ದು ಜಿಯೋಗಿಂತ 10 ದಿನಗಳ ಹೆಚ್ಚಿನ ವಾಲಿಡಿಟಿಯನ್ನು ನೀಡುತ್ತಿದೆ. ಹಾಗಾದ್ರೆ ಯಾವುದಪ್ಪಾ ಈ Airtel ಯೋಜನೆ ಇದರಲ್ಲಿ ಮತ್ತೆ ಬೇರೆ ಪ್ರಯೋಜನಗಳೇನು ಎನ್ನುವುದನ್ನು ಈ ಕೆಳಗೆ ವಿವರವಾಗಿ ತಿಳಿಯಬಹುದು. ಈ ಏರ್ಟೆಲ್ ಯೋಜನೆಯನ್ನು ಪ್ರಿಪೇಯ್ಡ್ ಯೋಜನೆಗಳ ಬೆಲೆ ಏರಿಕೆಯ ಅಡಿಯಲ್ಲಿ ತಂದಿದ್ದು ಜಿಯೋ ಬಳಕೆದಾರರಿಗೆ ಚುಡಾಯಿಸುವ ಸನ್ನಿವೇಶವನ್ನು ರಚಿಸಿದೆ.
Also Read: Amazon ಸೇಲ್‌ನಲ್ಲಿ 15,000 ರೂಗಳಿಗೆ ಹೆಚ್ಚಾಗಿ ಮಾರಾಟವಾಗುತ್ತಿರುವ 6 ಅತ್ಯುತ್ತಮ 5G Smartphones ಇಲ್ಲಿವೆ!
ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಗಳಾಗಿರುವ ಜಿಯೋ vs ಏರ್‌ಟೆಲ್ ತಮ ಬಳಕೆದಾರರಿಗಾಗಿ ಪ್ರತಿ ಭಾರಿ ಒಂದಲ್ಲ ಒಂದು ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಪ್ರಯೋಜನಗಳನ್ನು ನೀಡಲು ಸಜ್ಜಾಗಿರುತ್ತದೆ. Jio ಯಾವಾಗಲೂ ಏರ್‌ಟೆಲ್ ಅನ್ನು ಮೀರಿಸುತ್ತದೆ ಎಂದು ಸಾಮಾನ್ಯವಾಗಿ ನಂಬಲಾಗಿದೆ. ಏಕೆಂದರೆ ಜಿಯೋ ಏರ್‌ಟೆಲ್‌ಗಿಂತ ಹೆಚ್ಚಿನ ಪ್ರಯೋಜನಗಳೊಂದಿಗೆ ಯೋಜನೆಗಳನ್ನು ನೀಡುತ್ತದೆ. ಆದರೆ ಸುಂಕದ ಹೆಚ್ಚಳದ ನಂತರ ಈಗ ಏರ್‌ಟೆಲ್ ಕೂಡ ಹಲವಾರು ರೀತಿಯಲ್ಲಿ ಏರ್‌ಟೆಲ್‌ಗಿಂತ ಉತ್ತಮವಾದ ಅಂತಹ ಕೆಲವು ಯೋಜನೆಗಳನ್ನು ನೀಡುತ್ತಿದೆ. ಜಿಯೋ ಮತ್ತು ಏರ್‌ಟೆಲ್ ಎರಡೂ ರೂ 199 ಗೆ ಪ್ರಿಪೇಯ್ಡ್ ಯೋಜನೆಗಳನ್ನು ನೀಡುತ್ತವೆ. ಈ ಎರಡೂ ರೀಚಾರ್ಜ್‌ಗಳ ನಡುವಿನ ಮೂಲಭೂತ ವ್ಯತ್ಯಾಸವೆಂದರೆ ಮಾನ್ಯತೆಗೆ ಸಂಬಂಧಿಸಿದೆ.
ಇದಲ್ಲದೆ ಎರಡೂ ಯೋಜನೆಗಳಲ್ಲಿ ವಿಭಿನ್ನ ಡೇಟಾವನ್ನು ಸಹ ನೀಡಲಾಗುತ್ತದ್ದು ಏರ್‌ಟೆಲ್ ಪ್ರಿಪೇಯ್ಡ್ ಯೋಜನೆಯು ದೀರ್ಘ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಆದರೆ ಜಿಯೋ ಯೋಜನೆಯು 18 ದಿನಗಳ ಮಾನ್ಯತೆಯನ್ನು ಹೊಂದಿದೆ. ಆದಾಗ್ಯೂ ನೀವು ಹೆಚ್ಚಿನ ಡೇಟಾವನ್ನು ಬಯಸಿದರೆ ಜಿಯೋ ರೂ 199 ಯೋಜನೆಯು ನಿಮಗೆ ವ್ಯರ್ಥವಾಗುತ್ತದೆ. ಆದರೆ ನೀವು ಕಡಿಮೆ ಡೇಟಾದೊಂದಿಗೆ ದೀರ್ಘ ವ್ಯಾಲಿಡಿಟಿಯನ್ನು ಬಯಸಿದರೆ. ಹಾಗಾಗಿ ಏರ್ಟೆಲ್ ನ ರೂ.199 ಪ್ಲಾನ್ ಚೆನ್ನಾಗಿರಲಿದೆ.
ರಿಲಯನ್ಸ್ ಜಿಯೋದ ರೂ 199 ಪ್ರಿಪೇಯ್ಡ್ ಯೋಜನೆಯು 18 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಈ ಯೋಜನೆಯಲ್ಲಿ ಪ್ರತಿದಿನ 1.5GB ಡೇಟಾವನ್ನು ನೀಡಲಾಗುತ್ತದೆ. ಈ ರೀತಿಯಾಗಿ ಈ ಯೋಜನೆಯಲ್ಲಿ ಒಟ್ಟು 27GB ಡೇಟಾವನ್ನು ನೀಡಲಾಗುತ್ತಿದೆ. ಅಲ್ಲದೆ 100 ಎಸ್ಎಂಎಸ್ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಈ ಯೋಜನೆಯಲ್ಲಿ ಅನಿಯಮಿತ ಧ್ವನಿ ಕರೆ ಸೌಲಭ್ಯವೂ ಲಭ್ಯವಿದೆ. ಇದಲ್ಲದೆ JioTV, JioCinema, JoSecurity ಮತ್ತು JioCloud ನ ಉಚಿತ ಸೇವೆಗಳನ್ನು ಒದಗಿಸಲಾಗುತ್ತಿದೆ.
ಭಾರ್ತಿ ಏರ್‌ಟೆಲ್‌ನ ರೂ 199 ಯೋಜನೆಯಲ್ಲಿ ಒಟ್ಟು 2GB ಡೇಟಾವನ್ನು ನೀಡಲಾಗುತ್ತದೆ. ಈ ಯೋಜನೆಯಲ್ಲಿ ಅನಿಯಮಿತ ವಾಯ್ಸ್ ಕರೆ ಸೌಲಭ್ಯವನ್ನು ಸಹ ಒದಗಿಸಲಾಗಿದೆ. ಈ ಯೋಜನೆಯ ವಿಶೇಷತೆಯು ಅದರಲ್ಲಿ ಒದಗಿಸಲಾದ ಮಾನ್ಯತೆಯಾಗಿದೆ ಏಕೆಂದರೆ ಯೋಜನೆಯು 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ ಹೆಲ್ಲಟ್ಯೂನ್ಸ್ ಮತ್ತು ವಿಂಕ್ ಮ್ಯೂಸಿಕ್‌ನ ಉಚಿತ ಚಂದಾದಾರಿಕೆಯನ್ನು ನೀಡಲಾಗುತ್ತಿದೆ. ಈ ಮೂಲಕ ಮಾಸಿಕ ಯೋಜನೆಯಲ್ಲಿ ಜಿಯೋಗಿಂತ ಉತ್ತಮ ಪ್ರಯೋಜನಗಳನ್ನು ಕಡಿಮೆ ಬೆಲೆಗೆ ನೀಡುತ್ತಿದೆ.