ಭಾರತೀಯ ಟೆಲಿಕಾಂ ವಲಯದಲ್ಲಿ ಎರಡನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿ ಗುರುತಿಸಿಕೊಂಡಿರುವ ಭಾರ್ತಿ ಏರ್‌ಟೆಲ್ ಚಂದಾದಾರರಿಗೆ ಭಿನ್ನ ಶ್ರೇಣಿಯಲ್ಲಿ ಪ್ರೀಪೇಯ್ಡ್ ಪ್ಲಾನ್ ಆಯ್ಕೆ ಪರಿಚಯಿಸಿದೆ. ಭಾರತದ ಟೆಲಿಕಾಂ ಕಂಪನಿಗಳಲ್ಲಿ ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ಕಂಪೆನಿಗಳ ನಡುವಿನ ದರ ಪೈಪೋಟಿ ದಿನೇ ದಿನೇ ಮುಂದುವರಿಯುತ್ತಲೇ ಇದೆ. ಏರ್‌ಟೆಲ್ ಟೆಲಿಕಾಂನ ಬಹುತೇಕ ಯೋಜನೆಗಳು ಅಧಿಕ ಡೇಟಾ, ಆಕರ್ಷಕ ವ್ಯಾಲಿಡಿಟಿ ಪ್ರಯೋಜನ ಒಳಗೊಂಡಿವೆ. ಏರ್‌ಟೆಲ್ ಟೆಲಿಕಾಂನ ಈ ಎರಡು ಪ್ಲಾನ್‌ಗಳಲ್ಲಿ ಸಿಗುವ ಪ್ರಯೋಜನಗಳು ಗ್ರಾಹಕರಿಗೆ ಖಂಡಿತಾ ಉಪಯುಕ್ತವಾಗಿದೆ.
ಭಾರತದ ಪ್ರಮುಖ ಟೆಲಿಕಾಂ ಕಂಪೆನಿಗಳಾದ ಜಿಯೋ ಮತ್ತು ಏರ್‌ಟೆಲ್ ಕಂಪೆನಿಗಳು ಒದಗಿಸುತ್ತಿರುವ ಹಲವಾರು ಪ್ರೀಪೇಡ್ ಯೋಜನೆಗಳಲ್ಲಿ ಜಿಯೋ ಯಾವಾಗಲೂ ಕಡಿಮೆ ಬೆಲೆಯನ್ನು ನಿಗಧಿಪಡಿಸುವುದು ಸಾಮಾನ್ಯ. ಇದರಿಂದ ಜಿಯೋ ಗ್ರಾಹಕರು ಹೆಚ್ಚು ಸಂತಸವಾಗಿರುತ್ತಾರೆ. ಆದರೆ ಏರ್‌ಟೆಲ್ ಗ್ರಾಹಕರು ಜಿಯೋಗಿಂತಲೂ ಒಂದು ಅತ್ಯುತ್ತಮ ಪ್ರೀಪೇಡ್ ಯೋಜನೆಯೊಂದನ್ನು ಹೊಂದಿದ್ದಾರೆ. ಹೌದು ಒಂದು ತಿಂಗಳ ವ್ಯಾಲಿಡಿಟಿಗೆ ಸಂಬಂಧಿಸಿದಂತೆ ಭಾರತದಲ್ಲಿನ ಗ್ರಾಹಕರಿಗೆ ಹೆಚ್ಚು ಕೈಗೆಟುಕುವ ಪ್ರಿಪೇಯ್ಡ್ ಯೋಜನೆಯೊಂದನ್ನು ಏರ್‌ಟೆಲ್ ನೀಡುತ್ತಿದೆ.
➥ಏರ್‌ಟೆಲ್ ಒದಗಿಸುತ್ತಿರುವ ಒಂದು ತಿಂಗಳ ವ್ಯಾಲಿಡಿಟಿಯ ಈ ಯೋಜನೆಯು ಕೇವಲ 111 ರೂ.ಗೆ ಲಭ್ಯವಿದೆ.
➥ಏರ್‌ಟೆಲ್ ಒದಗಿಸುತ್ತಿರುವ ಅತ್ಯಂತ ಕೈಗೆಟುಕುವ ಒಂದು ತಿಂಗಳ ವ್ಯಾಲಿಡಿಟಿಯ ಪ್ರೀಪೇಡ್ ಯೋಜನೆ ಇದಾಗಿದೆ.
➥ಈ ಯೋಜನೆಯಲ್ಲಿ ಏರ್‌ಟೆಲ್ ಗ್ರಾಹಕರು ಒಂದು ತಿಂಗಳ ವ್ಯಾಲಿಡಿಟಿಯೊಂದಿಗೆ 99 ರೂ. ಮೌಲ್ಯದ ಟಾಕ್ಟೈಮ್ ಹಾಗೂ 200MB ಡೇಟಾ ಪಡೆಯುತ್ತಾರೆ.
➥ಈ ಯೋಜನೆಯನ್ನು ಖರೀದಿಸುವ ಗ್ರಾಹಕರಿಗೆ ಪ್ರತಿ ಸೆಕೆಂಡಿಗೆ 2.5 ಪೈಸೆ ಕರೆ ಶುಲ್ಕ ಇದೆ.
➥ವಿಶೇಷವೆಂದರೆ ಈ ಬೇಸಿಕ್ ಯೋಜನೆಯಲ್ಲಿ ಸ್ಥಳೀಯ ಎಸ್‌ಎಂಎಸ್‌ಗೆ 1 ರೂ. ಮತ್ತು ಎಸ್‌ಟಿಡಿ ಎಸ್‌ಎಂಎಸ್‌ಗೆ 1.5 ರೂ ನಂತರ ನೀವು SMSಗಳನ್ನು ಸಹ ಕಳುಹಿಸಬಹುದು.
➥ಇನ್ನು 200MB ಡೇಟಾ ಮುಗಿದ ನಂತರ ಪ್ರತಿ MB ಡೇಟಾಗೆ 50 ಪೈಸೆ ವಿಧಿಸಲಾಗುತ್ತದೆ.
ಈ ಯೋಜನೆಯು ಏರ್‌ಟೆಲ್ ಸಿಮ್ ಅನ್ನು ಸಕ್ರೀಯವಾಗಿ ಇಟ್ಟುಕೊಳ್ಳಲು ಇರುವ ಪ್ರಮುಖ ರೀಚಾರ್ಜ್ ಯೋಜನೆಯಂತೆ ಕಾಣಿಸುತ್ತದೆ. ಏರ್‌ಟೆಲ್, ಜಿಯೋ ಸೇರಿದಂತೆ ದೇಶದ ಎಲ್ಲಾ ಟೆಲಿಕಾಂ ಕಂಪೆನಿಗಳು 14 ದಿನಗಳು, 28 ದಿನಗಳು, 24 ದಿನಗಳು, 30 ದಿನಗಳು ಮತ್ತು 31 ದಿನಗಳ ವ್ಯಾಲಿಡಿಟಿಯಲ್ಲಿ ಪ್ರೀಪೇಡ್ ಯೋಜನೆಗಳನ್ನು ಒದಗಿಸುತ್ತವೆ. ಆದರೆ ಒಂದು ತಿಂಗಳು ವ್ಯಾಲಿಡಿಟಿ ಎಂದರೆ ಎಂದರೆ ಗ್ರಾಹಕರಿಗೆ ವಿಭಿನ್ನ ದಿನಗಳ ಕಾಲ ಪ್ರಯೋಜನ ದೊರೆಯಲಿದೆ. ಜಿಯೋ ತನ್ನ ಬಳಕೆದಾರರಿಗೆ ಈ ರೀತಿಯ ಯಾವುದೇ ತಿಂಗಳ ವ್ಯಾಲಿಡಿಟಿ ಅವಧಿಯ ಯೋಜನೆಯನ್ನು ನೀಡುತ್ತಿಲ್ಲ ಎಂಬುದು ಇಲ್ಲಿ ಗಮನಾರ್ಹ.
ನೀವು ಜಿಯೋ ಬಳಕೆದಾರರಾಗಿದ್ದರೆ ಜಿಯೋದ ಒಂದು ತಿಂಗಳ ವ್ಯಾಲಿಡಿಟಿ ಪ್ರಿಪೇಯ್ಡ್ ಯೋಜನೆಯು ಕನಿಷ್ಟ 259 ರೂ.ಗಳಿಂದ ಆರಂಭವಾಗುತ್ತದೆ. ಆದರೆ ಈ ಯೋಜನೆಯಲ್ಲಿ ಏರ್‌ಟೆಲ್ ಗ್ರಾಹಕರು 111 ರೂ. ಯೋಜನೆಯಲ್ಲಿ ಪಡೆಯುವುದಕ್ಕಿಂತ ಹೆಚ್ಚಿನ ಪ್ರಯೋಜನಗಳು ಜಿಯೋ ಗ್ರಾಹಕರಿಗೆ ದೊರೆಯುತ್ತವೆ. ಈ ಯೋಜನೆಯಲ್ಲಿ ಜಿಯೋ ಗ್ರಾಹಕರು 1.5GB ದೈನಂದಿನ ಡೇಟಾ ಮತ್ತು ಅನಿಯಮಿತ ಧ್ವನಿ ಕರೆಗಳ ಜೊತೆಗೆ ಪ್ರತಿದಿನ 100 SMSಗಳನ್ನು ಪಡೆಯುತ್ತಾರೆ. ಜೊತೆಗೆ ಬಳಕೆದಾರರಿಗೆ JioCinema, JioTV, JioCloud ಮತ್ತು JioSecurity ಸೇರಿದಂತೆ ಎಲ್ಲಾ Jio ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆ ಪ್ರಯೋಜನಗಳು ಸಹ ದೊರೆಯುತ್ತದೆ. ಈ ಯೋಜನೆಯು ಗ್ರಾಹಕರಿಗೆ ಹೆಚ್ಚು ಪ್ರಯೋಜನಗಳನ್ನು ಒದಗಿಸಬಹುದು. ಆದರೆ ಈ ಯೋಜನೆಯು ದುಬಾರಿಯಾಗಿದೆ.