ಇನ್ಮೇಲೆ ಉಚಿತ 5G ಇಂಟರ್ನೆಟ್‌ ಸಿಗೋಲ್ಲ! ಇದೆ ಕಾರಣಕ್ಕಾಗಿ Airtel-Jio ತಮ್ಮ 5G ಪ್ಲಾನ್‌ಗಳು ದುಬಾರಿಯಾಗಲಿದೆ

Updated on 18-Jan-2024
HIGHLIGHTS

Airtel-Jio ಪ್ರಸ್ತುತ ನೀಡುತ್ತಿರುವ ತಮ್ಮ ಉಚಿತ 5G ಇಂಟರ್ನೆಟ್‌ನ ದಿನಗಳು ಶೀಘ್ರದಲ್ಲೇ ಕೊನೆಗೊಳ್ಳಬಹುದು.

ಆದಾಯವನ್ನು ಹೆಚ್ಚಿಸಲು ಟೆಲಿಕಾಂ ಕಂಪನಿಗಳು ಉಚಿತ 5G ಇಂಟರ್ನೆಟ್ ಪ್ರಯೋಗವನ್ನು ನಿಲ್ಲಿಸಬಹುದು

ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಗಳಾದ Airtel-Jio ಪ್ರಸ್ತುತ ನೀಡುತ್ತಿರುವ ತಮ್ಮ ಉಚಿತ 5G ಇಂಟರ್ನೆಟ್‌ನ ದಿನಗಳು ಶೀಘ್ರದಲ್ಲೇ ಕೊನೆಗೊಳ್ಳಬಹುದು. Jio ಮತ್ತು Airtel ಒಂದು ವರ್ಷಕ್ಕೂ ಹೆಚ್ಚು ಕಾಲ ಉಚಿತವಾಗಿ ಅನಿಯಮಿತ 5G ಡೇಟಾವನ್ನು ನೀಡುತ್ತಿವೆ. ಆದರೆ ಈಗ ಈ ಸೌಲಭ್ಯ ಕೊನೆಗೊಳ್ಳಬಹುದು. ಟೆಲಿಕಾಂ ಕಂಪನಿಗಳು ಶೀಘ್ರದಲ್ಲೇ 5G ಗಾಗಿ ವಿಭಿನ್ನ ಯೋಜನೆಗಳನ್ನು ಪರಿಚಯಿಸಲಿವೆ. 2024 ರ ದ್ವಿತೀಯಾರ್ಧದಲ್ಲಿ ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೋ 5G ಚಾರ್ಜ್ ಮಾಡಲು ಪ್ರಾರಂಭಿಸಬಹುದು ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.

Also Read: Amazon ರಿಪಬ್ಲಿಕ್ ಡೇ ಸೇಲ್‌ನಲ್ಲಿ 20,000 ರೂಗಳಲ್ಲಿನ ಲೇಟೆಸ್ಟ್ Washing Machine ಮೇಲೆ ಭಾರಿ ಡಿಸ್ಕೌಂಟ್‌!

Airtel-Jio ಇನ್ಮೇಲೆ ಅನ್ಲಿಮಿಟೆಡ್ 5G ಸೇವೆಗಾಗಿ ಹೆಚ್ಚುವರಿ ಶುಲ್ಕ

ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ 2024 ರ ದ್ವಿತೀಯಾರ್ಧದಿಂದ 5G ಇಂಟರ್ನೆಟ್ ಯೋಜನೆಗಳನ್ನು ಪರಿಚಯಿಸಬಹುದು ಮತ್ತು ಉಚಿತ 5G ಇಂಟರ್ನೆಟ್ ಸೌಲಭ್ಯವನ್ನು ಕೊನೆಗೊಳಿಸಬಹುದು. ಇದರರ್ಥ ಕಂಪನಿಗಳು ಪ್ರೀಮಿಯಂ ಗ್ರಾಹಕರಿಗೆ ತಮ್ಮ ಅನಿಯಮಿತ 5G ಡೇಟಾ ಯೋಜನೆಗಳನ್ನು ಹಿಂಪಡೆಯಬಹುದು ಮತ್ತು 4G ನೆಟ್ವರ್ಕ್ಗೆ ಹೋಲಿಸಿದರೆ 5G ಸೇವೆಗೆ ಕನಿಷ್ಠ 5-10% ಹೆಚ್ಚು ಶುಲ್ಕ ವಿಧಿಸಬಹುದು. ಅಂದರೆ ಈಗಿರುವ ಪ್ಲಾನ್‌ಗಳಿಗಿಂತ 5G ಪ್ಲಾನ್‌ಗಳು ಶೇಕಡಾ 10% ರಷ್ಟು ಹೆಚ್ಚು ದುಬಾರಿಯಾಗಬಹುದು.

ಅನ್ಲಿಮಿಟೆಡ್ 5G ಪ್ಲಾನ್ ಬೆಲೆ ಏರಿಕೆಯಾಗಲು ಕಾರಣ

ದೇಶದ ಈ ಟೆಲಿಕಾಂ ಕಂಪನಿಗಳ ಆದಾಯವನ್ನು ಹೆಚ್ಚಿಸಲು ಟೆಲಿಕಾಂ ಕಂಪನಿಗಳು ಉಚಿತ 5G ಇಂಟರ್ನೆಟ್ ಪ್ರಯೋಗವನ್ನು ನಿಲ್ಲಿಸಬಹುದು ಎಂದು ವಿಶ್ಲೇಷಕರು ಹೇಳುತ್ತಾರೆ. 2024 ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಈ ಎರಡೂ ಟೆಲಿಕಾಂ ಕಂಪನಿಗಳು 5G ವಯಲದಲ್ಲಿ ಮಾಡಿದ ಬೃಹತ್ ಹೂಡಿಕೆಗಳನ್ನು ಮರುಪಡೆಯಲು ಮೊಬೈಲ್ ಯೋಜನೆಗಳ ಸುಂಕಗಳನ್ನು (Plan Rate) ಕನಿಷ್ಠ 20% ವರೆಗೆ ಹೆಚ್ಚಿಸಬಹುದು ಎಂದು ಉದ್ಯಮ ತಜ್ಞರು ನಿರೀಕ್ಷಿಸುತ್ತಿದ್ದಾರೆ.

ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿನ ಇತರ ಎರಡು ಕಂಪನಿಗಳು ವೊಡಾಫೋನ್-ಐಡಿಯಾ ಮತ್ತು ಸರ್ಕಾರಿ ಸ್ವಾಮ್ಯದ BSNL ಇನ್ನೂ ತಮ್ಮ 5G ಸೇವೆಯನ್ನು ಪ್ರಾರಂಭಿಸಿಲ್ಲ. ಹೊಸ 5G ಯೋಜನೆಗಳು ಬರಬಹುದು. Airtel ಮತ್ತು Reliance Jio ಶೀಘ್ರದಲ್ಲೇ ತಮ್ಮ ಹೊಸ 5G ಯೋಜನೆಗಳನ್ನು ಪ್ರಕಟಿಸಬಹುದು. ಇದು 4G ಗಿಂತ 5-10% ಹೆಚ್ಚು. Jio ಮತ್ತು Airtel ಈಗಾಗಲೇ ಸುಮಾರು 125 ಮಿಲಿಯನ್ (12.5 ಕೋಟಿ) 5G ಗ್ರಾಹಕರನ್ನು ಹೊಂದಿದೆ ಮತ್ತು 2024 ರ ಅಂತ್ಯದ ವೇಳೆಗೆ ದೇಶದ ಒಟ್ಟು 5G ಬಳಕೆದಾರರ ಸಂಖ್ಯೆ 200 ಮಿಲಿಯನ್ (20 ಕೋಟಿ) ಮೀರಬಹುದು.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :