Airtel, Jio ಮತ್ತು Vodafone Idea ಪ್ರಿಪೇಯ್ಡ್ ಪ್ಲಾನ್‌ಗಳನ್ನು ಸುಮಾರು ರೂ 300 ಕ್ಕಿಂತ ಕಡಿಮೆ ಬೆಲೆಯಲ್ಲಿ ಪ್ರತಿದಿನ ಡೇಟಾವನ್ನು ನೀವು ಬಳಸಬಹುದಾಗಿದೆ.
Jio ದಿನಕ್ಕೆ ಮೂರು 1GB ಪ್ಲಾನ್‌ಗಳನ್ನು ನೀಡುತ್ತದೆ. ಜೊತೆಗೆ ಅನ್ ಲಿಮಿಟೆಡ್ ಕರೆಗಳು, ದಿನಕ್ಕೆ 100 SMS ಮತ್ತು Jio ಅಪ್ಲಿಕೇಶನ್‌ಗಳಿಗೆ ಪ್ರವೇಶ ಸಿಗುತ್ತದೆ.
Airtel, Jio ಮತ್ತು Vi: ವರ್ಷ ಮುಗಿಯುವ ಮೊದಲು ಸುದೀರ್ಘ ರಜೆಗೆ ಹೊರಗಡೆ ಹೋಗೊ ಪ್ಲಾನ್ ಇದ್ಯಾ? ಅಥವಾ ರಜಾದಿನಗಳನ್ನು ಕಳೆಯಲು ಬ್ಯಾಕ್ ಟು ಬ್ಯಾಕ್ ಯಾವುದಾದರು ಪ್ಲಾನ್‌ಗಳಿದ್ಯಾ? ನೀವು ಹೋದಲ್ಲೆಲ್ಲಾ ವೈಫೈ ಲಭ್ಯವಿಲ್ಲದಿರಬಹುದು. ಮೊಬೈಲ್ ಡೇಟಾವು ನಿಮ್ಮ ರಜೆಯ ಪ್ಲಾನ್‌ಗಳಿಗೆ ಬೇಕಾಗಬಹುದು. ರಜಾದಿನಗಳಲ್ಲಿ WhatsApp ಬಳಸುವುದಕ್ಕಾಗಿ ವೀಡಿಯೊ ಕರೆಗಳನ್ನು ಮಾಡಲು ಡಿಜಿಟಲ್ ಪೆಮೆಂಟ್ಸ್ ಮಾಡಲು ಅಥವಾ Instagram ನಲ್ಲಿ ಸರಳವಾಗಿ ಸ್ಟೋರಿಗಳನ್ನು ಪೋಸ್ಟ್ ಮಾಡಲು ಡೇಟಾ ಬಹಳ ಮುಖ್ಯವಾಗಿರುತ್ತದೆ. ಇಲ್ಲಿ ಅತ್ಯುತ್ತಮವಾದ ಏರ್‌ಟೆಲ್, ಜಿಯೋ ಮತ್ತು ವೊಡಾಫೋನ್ ಐಡಿಯಾ ಪ್ರಿಪೇಯ್ಡ್ ಮೊಬೈಲ್ ಪ್ಲಾನ್‌ಗಳನ್ನು ನೀವು ಭಾರತದಲ್ಲಿ ಸುಮಾರು ರೂ 300 ಕ್ಕಿಂತ ಕಡಿಮೆ ಬೆಲೆಯಲ್ಲಿ ಪ್ರತಿದಿನ ಡೇಟಾವನ್ನು ನೀವು ಬಳಸಬಹುದಾಗಿದೆ.
ರಿಲಯನ್ಸ್ ಜಿಯೋ ಪ್ಲಾನ್
ಜಿಯೋ ದಿನಕ್ಕೆ ಮೂರು 1GB ಪ್ಲಾನ್‌ಗಳನ್ನು ನೀಡುತ್ತದೆ. ಜೊತೆಗೆ ಅನ್ ಲಿಮಿಟೆಡ್ ಕರೆಗಳು, ದಿನಕ್ಕೆ 100 SMS ಮತ್ತು Jio ಅಪ್ಲಿಕೇಶನ್‌ಗಳಿಗೆ ಪ್ರವೇಶ ಸಿಗುತ್ತದೆ. ಅವುಗಳೆಂದರೆ ರೂ 209 ಯೋಜನೆ (28 ದಿನಗಳು) ರೂ 179 ಯೋಜನೆ (24 ದಿನಗಳು) ಮತ್ತು ರೂ 149 ಯೋಜನೆಗಳು (20 ದಿನಗಳು) ಸ್ವಲ್ಪ ಹೆಚ್ಚು ಬ್ಯಾಂಡ್‌ವಿಡ್ತ್ ಅಗತ್ಯವಿರುವ ಬಳಕೆದಾರರು 1.5GB ಡೇಟಾ ಪ್ಲಾನ್ ಕೂಡ ಆಯ್ಕೆ ಮಾಡಬಹುದು. ಇವುಗಳ ಬೆಲೆ 14 ದಿನಗಳಿಗೆ ರೂ 119, 23 ದಿನಗಳಿಗೆ ರೂ 199, 28 ದಿನಗಳಿಗೆ ರೂ 239 ಮತ್ತು ಇಡೀ ತಿಂಗಳಿಗೆ ರೂ 259 ಆಗಿವೆ.
ಇತರ 1.5GB ದೈನಂದಿನ ಪ್ಲಾನ್‌ಗಳು ಸಹ ಇವೆ. ಆದರೆ ಅವು 479 ರಿಂದ 2545 ರೂಗಳ ನಡುವೆ ಹೆಚ್ಚು ದುಬಾರಿಯಾಗಿದೆ. ಇನ್ನೂ ಹೆಚ್ಚಿನ ಬ್ಯಾಂಡ್‌ವಿಡ್ತ್ ಅಗತ್ಯವಿದ್ದರೆ Jio ದಿನಕ್ಕೆ ಎರಡು 2GB ಪ್ಲಾನ್‌ಗಳನ್ನು 300 ರೂಗಳಲ್ಲಿ ಸಿಗುತ್ತದೆ. 28 ದಿನಗಳವರೆಗೆ ರೂ 299 ಪ್ಲಾನ್ ಮತ್ತು 23 ದಿನಗಳ ರೂ 249 ಪ್ಲಾನ್‌ಗಳಿವೆ. ನಿಮಗೆ ಇನ್ನೂ ಹೆಚ್ಚಿನ ಡೇಟಾ ಅಗತ್ಯವಿದ್ದರೆ ಜಿಯೋ 30 ದಿನಗಳವರೆಗೆ ರೂ 296 ಪ್ಲಾನ್ ಒದಗಿಸುತ್ತದೆ. ದೈನಂದಿನ ಡೇಟಾ ಬಳಕೆಯ ಮಿತಿ ಇಲ್ಲದಿರುವುದರಿಂದ ನೀವು ಸರಿಹೊಂದುವಂತೆ ಈ ಪ್ಲಾನ್‌ನಲ್ಲಿ ಸೇರಿಸಲಾದ 25GB ಮೊಬೈಲ್ ಡೇಟಾವನ್ನು ನೀವು ಬಳಸಬಹುದು.
ಭಾರ್ತಿ ಏರ್ಟೆಲ್
ಏರ್ಟೆಲ್ 300 ರೂ ಗಿಂತ ಕಡಿಮೆ ಬೆಲೆಗೆ ಹಲವಾರು ಏರ್‌ಟೆಲ್ ಪ್ಲಾನ್‌ಗಳು ಲಭ್ಯವಿವೆ. ಆದರೆ ನಾವು ಹೆಚ್ಚು ಡೇಟಾ ಹೊಂದಿರುವ ಪ್ಲಾನ್‌ಗಳನ್ನು ಹುಡುಕುತ್ತಿದ್ದರೆ ನಾವು ರೂ 209 ಪ್ಲಾನ್‌ನೊಂದಿಗೆ ಪ್ರಾರಂಭಿಸಬೇಕು.ಇದು 21 ದಿನಗಳವರೆಗೆ 1GB ಡೇಟಾವನ್ನು ನೀಡುತ್ತದೆ. ರೂ 239 ಪ್ಲಾನ್ ಮತ್ತು ರೂ 265 ಪ್ಲಾನ್ ಎರಡೂ ಕ್ರಮವಾಗಿ 24 ಮತ್ತು 28 ದಿನಗಳ ಅವಧಿಯಲ್ಲಿ ಒಂದೇ ರೀತಿಯ ಪ್ರಯೋಜನಗಳನ್ನು ನೀಡುತ್ತವೆ.
ಹೆಚ್ಚಿನ ಬ್ಯಾಂಡ್‌ವಿಡ್ತ್ ಅಗತ್ಯವಿರುವವರಿಗೆ ಏರ್‌ಟೆಲ್ 28 ದಿನಗಳವರೆಗೆ ಪ್ರತಿದಿನ 1.5GB ಡೇಟಾವನ್ನು ಒಳಗೊಂಡಿರುವ ರೂ 299 ಪ್ಲಾನ್ ಅನ್ನು ನೀಡುತ್ತಿದೆ. 30 ದಿನಗಳವರೆಗೆ ಯಾವುದೇ ದೈನಂದಿನ ಮಿತಿ ಇಲ್ಲದೆ 25GB ಒಟ್ಟು ಡೇಟಾವನ್ನು ರೂ 296 ಪ್ಲಾನ್ ಕೂಡಯಿದೆ. 300 ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ದಿನಕ್ಕೆ 2GB ಪ್ಲಾನ್‌ಗಳು ಲಭ್ಯವಿಲ್ಲ.ಆದರೆ ನೀವು 319 ರೂಪಾಯಿನ ಪ್ಲಾನ್‌ಗೆ ತಿಂಗಳಿಗೆ 2GB ಪ್ರತಿ ದಿನ ಪಡೆಯಬಹುದು.
ವೊಡಾಫೋನ್ ಐಡಿಯಾ ಪ್ಲಾನ್
ವೊಡಾಫೋನ್ ಐಡಿಯಾ ದಿಂದ ರೂ 299 ಪ್ಲಾನ್ ಬಳಕೆದಾರರಿಗೆ 28 ದಿನಗಳವರೆಗೆ ಪ್ರತಿದಿನ 1.5GB ಡೇಟಾವನ್ನು ನೀಡುತ್ತದೆ. ನೀವು 319 ರೂಪಾಯಿಗೆ 28 ದಿನಗಳವರೆಗೆ ಪ್ರತಿದಿನ 2GB ಡೇಟಾವನ್ನು ಅಪ್‌ಗ್ರೇಡ್ ಮಾಡಬಹುದು. ನೀವು ಕಟ್ಟುನಿಟ್ಟಾಗಿ ರೂ 300 ಕ್ಕಿಂತ ಕಡಿಮೆಯಿರುವ ಪ್ಲಾನ್ ಅನ್ನು ಹುಡುಕುತ್ತಿದ್ದರೆ 28 ದಿನಗಳವರೆಗೆ ದಿನಕ್ಕೆ 1GB ಡೇಟಾವನ್ನು ನೀಡುವ ರೂ 269 ಪ್ಲಾನ್ ಅಥವಾ ರೂ 239 ಪ್ಲಾನ್ 24 ದಿನಗಳವರೆಗೆ ದಿನಕ್ಕೆ 1GB ಡೇಟಾವನ್ನು ನೀಡುತ್ತದೆ.
ವೊಡಾಫೋನ್ ಐಡಿಯಾ ರೂ 199 ಪ್ಯಾಕೇಜ್ 18 ದಿನಗಳವರೆಗೆ ಪ್ರತಿದಿನ 1GB ಡೇಟಾವನ್ನು ನೀಡುತ್ತದೆ. ಮತ್ತು ರೂ 219 ಪ್ಲಾನ್ 21 ದಿನಗಳವರೆಗೆ ಅದೇ ರೀತಿ ನೀಡುತ್ತದೆ. ದುರದೃಷ್ಟವಶಾತ್ ರೂ 300 ಕ್ಕಿಂತ ಕಡಿಮೆ ಬೆಲೆಗೆ ಯಾವುದೇ ಯೋಜನೆಗಳು ಲಭ್ಯವಿಲ್ಲ. ಅದು ನಿಮಗೆ ಯಾವುದೇ ದೈನಂದಿನ ಮಿತಿ ಇಲ್ಲದೆಯೇ ಗಣನೀಯ ಪ್ರಮಾಣದ ಡೇಟಾವನ್ನು ನೀಡುತ್ತದೆ. ನೀವು ಸ್ವಲ್ಪ ಹೆಚ್ಚು ಖರ್ಚು ಮಾಡಲು ಸಿದ್ಧರಿದ್ದರೆ ರೂ 327 ಪ್ಲಾನ್ ಬಳಸಿಕೊಳ್ಳಬಹುದು.ಇದು ನಿಮಗೆ 30 ದಿನಗಳವರೆಗೆ ದೈನಂದಿನ ಮಿತಿಯಿಲ್ಲದೆ ಇಲ್ಲದೆ 25GB ಡೇಟಾವನ್ನು ನೀಡುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile