digit zero1 awards

Covid-19: ಏರ್ಟೆಲ್ ಬಳಕೆದಾರರ ಇನ್ಕಮಿಂಗ್ ಕರೆಗಳ ಉಚಿತ ಸೇವೆ ಮತ್ತಷ್ಟು ದಿನ ವಿಸ್ತರಣೆ

Covid-19: ಏರ್ಟೆಲ್ ಬಳಕೆದಾರರ ಇನ್ಕಮಿಂಗ್ ಕರೆಗಳ ಉಚಿತ ಸೇವೆ ಮತ್ತಷ್ಟು ದಿನ ವಿಸ್ತರಣೆ
HIGHLIGHTS

ಕಡಿಮೆ ಆದಾಯದ ಬಳಕೆದಾರರಿಗೆ ಲಾಕ್‌ಡೌನ್ ಸಮಯದಲ್ಲಿ ರೀಚಾರ್ಜ್ ಮಾಡಲು ಸಾಧ್ಯವಾಗದವರಿಗೆ ಇದು ಪ್ರಯೋಜಕಾರಿ

ಭಾರ್ತಿ ಏರ್ಟೆಲ್ ಈಗ ಕಡಿಮೆ ಆದಾಯದ ಗ್ರಾಹಕರ ವ್ಯಾಲಿಡಿಟಿಯನ್ನು 3ನೇ ಮೇ 2020 ರವರೆಗೆ ವಿಸ್ತರಿಸಿದೆ. ಅದು ಎರಡನೇ ಹಂತದ ಕೋವಿಡ್ -19 ಲಾಕ್‌ಡೌನ್ ಕೊನೆಗೊಳ್ಳುತ್ತದೆ. ಈ ಯೋಜನೆಯ ಬಳಕೆದಾರರು ತಮ್ಮ ಯೋಜನೆಯ ಮಾನ್ಯತೆ ಖಾಲಿಯಾದ ನಂತರವೂ ಅವರ ಸಂಖ್ಯೆಯಲ್ಲಿ ಒಳಬರುವ ಕರೆಗಳನ್ನು ಸ್ವೀಕರಿಸುವುದನ್ನು ಮುಂದುವರಿಸುತ್ತೇವೆ ಎಂದು ಕಂಪನಿ ತಿಳಿಸಿದೆ. ಮೊದಲು 17ನೇ ಏಪ್ರಿಲ್ 2020 ರವರೆಗೆ ಈ ಮೊಬೈಲ್ ಪ್ರಿಪೇಯ್ಡ್ ಪ್ಯಾಕ್‌ಗಳ ವ್ಯಾಲಿಡಿಟಿಯನ್ನು ವಿಸ್ತರಿಸುವುದು ಸೇರಿದಂತೆ ಕಳೆದ ತಿಂಗಳು ಕಡಿಮೆ ಆದಾಯದ ಗ್ರಾಹಕರಿಗೆ ಸಹಾಯ ಮಾಡಲು ಭಾರ್ತಿ ಏರ್ಟೆಲ್ ಹಲವಾರು ಕ್ರಮಗಳನ್ನು ಘೋಷಿಸಿತ್ತು. ಕಂಪನಿಯು ಸುಮಾರು 80 ಮಿಲಿಯನ್ ಬಳಕೆದಾರರ ಪ್ರಿಪೇಯ್ಡ್ ಖಾತೆಗಳಿಗೆ 10 ರೂಗಳನ್ನು ಭರ್ತಿ ಮಾಡಿದೆ.

ಈ ಗ್ರಾಹಕರಲ್ಲಿ ಅನೇಕರು ಡಿಜಿಟಲ್ ಚಾನೆಲ್‌ಗಳ ಜೊತೆಗೆ ATMಗಳು, ಪೋಸ್ಟ್ ಆಫೀಸ್, ದಿನಸಿ ಅಂಗಡಿಗಳು, ಮೇಡಿಕಲ್ ಶಾಪ್ಗಳು ಮತ್ತು ತೃತೀಯ ಸೇವೆಗಳನ್ನು ಬಳಸುವವರಿಗೆ ವಾಲೆಟ್‌ಗಳು ಮತ್ತು ಡಿಜಿಟಲ್ ಪಾಲುದಾರರಾದ PhonePe, Paytm, G-Pay, AmazonPay, Mobikwik ಮತ್ತು Freecharge ಸೇರಿದಂತೆ ಏರ್ಟೆಲ್ ಸಕ್ರಿಯಗೊಳಿಸಿದ ಹಲವಾರು ಚಾನೆಲ್‌ಗಳ ಮೂಲಕ ರೀಚಾರ್ಜ್ ಮಾಡಲು ಸಮರ್ಥರಾಗಿದ್ದಾರೆ. ಆದಾಗ್ಯೂ ಸುಮಾರು 30 ಮಿಲಿಯನ್ ಗ್ರಾಹಕರು ತಮ್ಮ ಪ್ರಿಪೇಯ್ಡ್ ಮೊಬೈಲ್ ಖಾತೆಗಳನ್ನು ರೀಚಾರ್ಜ್ ಮಾಡಲು ಇನ್ನೂ ಸಾಧ್ಯವಾಗಿಲ್ಲ ಎಂದು ಏರ್ಟೆಲ್ ಪ್ರಕಟಣೆಯಲ್ಲಿ ತಿಳಿಸಿದೆ. 

ಭಾರ್ತಿ ಏರ್ಟೆಲ್ ಹೊರತಾಗಿ ವೊಡಾಫೋನ್ ಐಡಿಯಾ ತನ್ನ 90 ಮಿಲಿಯನ್ ಕಡಿಮೆ-ಆದಾಯದ ಪ್ರಿಪೇಯ್ಡ್ ಗ್ರಾಹಕರಿಗೆ 2020 ರ ಮೇ 3 ರವರೆಗೆ ಫೀಚರ್ ಫೋನ್‌ಗಳನ್ನು ಬಳಸುವ ಒಳಬರುವ ಕರೆಗಳ ಸೌಲಭ್ಯವನ್ನು ವಿಸ್ತರಿಸಿದೆ. ಈ ಒಳಬರುವ ಕರೆಗಳ ವ್ಯಾಲಿಡಿಟಿಯನ್ನು  ಮುಂಬರುವ ದಿನಗಳಲ್ಲಿ ಎಲ್ಲ ಅರ್ಹ ಗ್ರಾಹಕರ ಖಾತೆಗಳಿಗೆ ಸಾಧ್ಯವಾದಷ್ಟು ವೇಗವಾಗಿ ಜಮಾ ಮಾಡಲಾಗುತ್ತಿದೆ. ಕಡಿಮೆ ಆದಾಯದ ಫೋನ್ ಬಳಕೆದಾರರಿಗಾಗಿ ಈ ವಿಶೇಷ ಉಪಕ್ರಮದಿಂದ ವೊಡಾಫೋನ್ ಐಡಿಯಾ ಗ್ರಾಹಕರು ಈಗ ತಮ್ಮ ಆತ್ಮೀಯರೊಂದಿಗೆ ಸಂಪೂರ್ಣವಾಗಿ ಸಂಪರ್ಕದಲ್ಲಿರಲು ಮುಂದುವರಿಯಬಹುದು. ಮತ್ತು ಸ್ಥಳೀಯ ಅಧಿಕಾರಿಗಳಿಂದ ಸಂಬಂಧಿತ ಇತ್ತೀಚಿನ ಅಪ್ಡೇಟ್ಗಳಿಗೆ ಪ್ರವೇಶಿಸಬಹುದೆಂದು ವೊಡಾಫೋನ್ ಐಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo