Best Airtel Data Plan With Free OTT Subscription ಭಾರ್ತಿ ಏರ್‌ಟೆಲ್ ಟೆಲಿಕಾಂ ಮಾರುಕಟ್ಟೆಯಲ್ಲಿ ಎರಡನೇ ಅತಿದೊಡ್ಡ ಪೂರೈಕೆದಾರರಾಗಿ ಹೆಸರು ಮಾಡಿದ್ದು ಅನೇಕ ಡೇಟಾ ಪ್ರಿಪೇಯ್ಡ್ ಯೋಜನೆಗಳನ್ನು ಒಳಗೊಂಡಿದೆ. ಈ ದಿನಗಳಲ್ಲಿ OTT ಸೇವೆಗಳ ಚಂದಾದಾರಿಕೆಯು ಉಚಿತವಾಗಿ ಲಭ್ಯವಿರುವ ಯೋಜನೆಗಳಿಂದ ರೀಚಾರ್ಜ್ ಮಾಡುವುದು ಉತ್ತಮ ಎಂದು ಬಳಕೆದಾರರು ಕಂಡುಕೊಳ್ಳುತ್ತಾರೆ. ಏರ್‌ಟೆಲ್ ಅತಿ ಕಡಿಮೆ ಬೆಲೆಗೆ ಡೇಟಾ ಯೋಜನೆಗಳೊಂದಿಗೆ (Airtel Data Plan) ಉಚಿತ OTT ಪ್ರಯೋಜನವನ್ನು ನೀಡುತ್ತವೆ.
ಏರ್ಟೆಲ್ 150 ರೂ.ಗಿಂತ ಕಡಿಮೆಯಿರುವ ಯೋಜನೆಯಲ್ಲಿ 20ಕ್ಕೂ ಹೆಚ್ಚು OTT ಸೇವೆಗಳನ್ನು ನೀಡುತ್ತಿದೆ. ಈ ರಿಚಾರ್ಜ್ ಯೋಜನೆ ಡೇಟಾ ಆಡ್ ಆನ್ (Airtel Data Plan) ಆಗಿದ್ದು ನೇರವಾಗಿ ಈ ಯೋಜನೆಯನ್ನು ಬಳಸಲು ಸಾಧ್ಯವಿಲ್ಲ ಈ ಯೋಜನೆ ಬಳಸಲು ನೀವು ಮೊದಲು ಏರ್ಟೆಲ್ ನೀಡುತ್ತಿರುವ True Unlimited ಪಟ್ಟಿಯಲ್ಲಿನ ಯಾವುದಾದರೊಂದು ಯೋಜನೆಯನ್ನು ಹೊಂದಿರುವುದು ಮುಖ್ಯವಾಗಿದೆ ಎನ್ನುವುದನ್ನು ಗಮನಿಸಬೇಕಿದೆ.
ಜನಪ್ರಿಯ OTT ಸೇವೆಗಳ ವಿಷಯವನ್ನು ವೀಕ್ಷಿಸಲು ಬಳಕೆದಾರರು ವಿಭಿನ್ನ ಚಂದಾದಾರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಇದಕ್ಕಾಗಿ ದೊಡ್ಡ ಮೊತ್ತವನ್ನು ವ್ಯಯಿಸಬೇಕಾಗಿದೆ. ಈಗ ಬಳಕೆದಾರರು ಹೇಗಾದರೂ ಮಾಡಿ ಮೊಬೈಲ್ ರೀಚಾರ್ಜ್ ಮಾಡುತ್ತಾರೆ ಇತರ ಪ್ರಯೋಜನಗಳ ಜೊತೆಗೆ ಕಾಂಪ್ಲಿಮೆಂಟರಿ OTT ಚಂದಾದಾರಿಕೆಯನ್ನು ನೀಡುವ ಯೋಜನೆಯನ್ನು ಆಯ್ಕೆ ಮಾಡುವುದು ಉತ್ತಮ.
ಏರ್ಟೆಲ್ ತನ್ನ ಬಳಕೆದಾರರಿಗೆ ರೂ 149 ಬೆಲೆಯ ಈ ಏರ್‌ಟೆಲ್ ಪ್ರಿಪೇಯ್ಡ್ ಯೋಜನೆಯು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಅಪ್ಲಿಕೇಶನ್‌ಗೆ ಉಚಿತ ಪ್ರೀಮಿಯಂ ಚಂದಾದಾರಿಕೆಯನ್ನು ನೀಡುತ್ತದೆ. ಏರ್‌ಟೆಲ್ ಅಸ್ತಿತ್ವದಲ್ಲಿರುವ ಪ್ಲಾನ್‌ನ ಮಾನ್ಯತೆ ಕೊನೆಗೊಳ್ಳಲು ನೀವು ಕಾಯಬೇಕಾಗಿಲ್ಲ ಏಕೆಂದರೆ ಈ ರೂ 148 ರೀಚಾರ್ಜ್ ಹೆಚ್ಚುವರಿ ಡೇಟಾದ ಪ್ರಯೋಜನವನ್ನು ನೀಡುತ್ತದೆ. ಇದು ಡೇಟಾ ಬೂಸ್ಟರ್ ಆಗಿದೆ ಮತ್ತು ಈಗಾಗಲೇ ಸಕ್ರಿಯವಾಗಿರುವ ಯೋಜನೆಯಂತೆಯೇ 15GB ಹೆಚ್ಚುವರಿ ಡೇಟಾವನ್ನು ನೀಡುತ್ತದೆ.
Also Read: ಭಾರತದಲ್ಲಿ Nothing Phone 2a Blue edition ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು?
ನೀವು ಇತರ ಕರೆ ಅಥವಾ SMS ಪ್ರಯೋಜನಗಳನ್ನು ಪಡೆಯದಿರಬಹುದು. ಈ ರೀಚಾರ್ಜ್ ನಂತರ ಬಳಕೆದಾರರು ಹೆಚ್ಚುವರಿ ಪ್ರಯೋಜನಗಳಾಗಿ 28 ದಿನಗಳವರೆಗೆ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲೇಗೆ ಉಚಿತ ಪ್ರವೇಶವನ್ನು ಸಹ ಪಡೆಯುತ್ತಾರೆ. Airtel ಇಂತಹ ಒಂದು ಯೋಜನೆ ಹೊಂದಿರುವುದು ಮುಖ್ಯವಾಗಿದೆ. ಈ ಸೇವೆಯು ಚಂದಾದಾರರಿಗೆ 20 ಕ್ಕೂ ಹೆಚ್ಚು OTT ಗಳಿಂದ ವಿಷಯವನ್ನು ಸ್ಟ್ರೀಮ್ ಮಾಡುವ ಆಯ್ಕೆಯನ್ನು ನೀಡುತ್ತದೆ.
ಇವುಗಳ ಹೊರತಾಗಿ ನಿಮಗೆ SonyLIV, Eros Now, ShemarooME, Hoichoi, Ultra, LionsgatePlay, Epicon, ManoramaMax, Dollywood Play, Divo, Klikk, Namaflix, HungamaPlay, Docubay, SocialSwag, ShortsTV, Chaupal, Kanccha Lannka ಮತ್ತು Raj Digital TV ಮತ್ತು ಹೆಚ್ಚಿನವು ಸೇರಿದಂತೆ ಬಹು OTT ಚಾನಲ್‌ಗಳಿಗೆ ಉಚಿತ ಪ್ರವೇಶವನ್ನು ಒಳಗೊಂಡಿದೆ. ಆದ್ದರಿಂದ OTT ಪ್ರಯೋಜನಗಳನ್ನು ಬಯಸುವ ಆದರೆ ಹೆಚ್ಚು ಖರ್ಚು ಮಾಡಲು ಬಯಸದ ಬಳಕೆದಾರರಿಗೆ ಅವರು ರೂ 149 ಯೋಜನೆಯನ್ನು ಖರೀದಿಸಬಹುದು.