84 ದಿನಗಳ ವ್ಯಾಲಿಡಿಟಿಯೊಂದಿಗೆ ಅನ್ಲಿಮಿಟೆಡ್ ಕರೆ, SMS ಮತ್ತು ಡೇಟಾದ ಪ್ರಯೋಜನಗಳು ಲಭ್ಯ!

84 ದಿನಗಳ ವ್ಯಾಲಿಡಿಟಿಯೊಂದಿಗೆ ಅನ್ಲಿಮಿಟೆಡ್ ಕರೆ, SMS ಮತ್ತು ಡೇಟಾದ ಪ್ರಯೋಜನಗಳು ಲಭ್ಯ!
HIGHLIGHTS

ಏರ್‌ಟೆಲ್‌ನ (Airtel) ಈ ಯೋಜನೆಯಲ್ಲಿ ನಿಮಗೆ 6GB ಡೇಟಾ ನೀಡಲಾಗುತ್ತದೆ.

ಏರ್‌ಟೆಲ್‌ನ (Airtel) ಈ ಯೋಜನೆಯಲ್ಲಿ ನಿಮಗೆ ಉಚಿತ ವಿಂಕ್ ಮ್ಯೂಸಿಕ್ ಚಂದಾದಾರಿಕೆಯನ್ನು ನೀಡಲಾಗುತ್ತದೆ.

ಏರ್‌ಟೆಲ್‌ನ (Airtel ಅನ್ಲಿಮಿಟೆಡ್ ಲೋಕಲ್, STD ಕರೆ ಮತ್ತು ರೋಮಿಂಗ್ ಕರೆಗಳ ಸೌಲಭ್ಯ ಲಭ್ಯ.

Airtel 455 Plan: ಏರ್‌ಟೆಲ್ ತನ್ನ ಗ್ರಾಹಕರಿಗೆ ಅನ್‌ಲಿಮಿಟೆಡ್ ಕರೆಗಳನ್ನು ಈ ಯೋಜನೆಯಲ್ಲಿ ನೀಡುತ್ತದೆ. ಹೆಚ್ಚಿನ ವ್ಯಾಲಿಡಿಟಿಯೊಂದಿಗೆ ಅನ್‌ಲಿಮಿಟೆಡ್ ಕರೆಗಳು ಮತ್ತು ಕೈಗೆಟುಕುವ ದರದಲ್ಲಿ ಇಂಟರ್ನೆಟ್ ಬಳಕೆಯನ್ನು ಬಯಸುವ ಗ್ರಾಹಕರಿಗೆ ಈ ಯೋಜನೆಯು ಹೆಚ್ಚು ಪ್ರಯೋಜನಕಾರಿಯಾಗಿದೆ. ಈ ಯೋಜನೆಯ ವಿಶೇಷವೆಂದರೆ ಇಲ್ಲಿನ ಡೇಟಾವನ್ನು ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ಬಳಸಿಕೊಳ್ಳಬಹುದು. ಅಲ್ಲದೆ ಇದು ಬಳಕೆದಾರರಿಗೆ ಹೆಚ್ಚುವರಿ ಪ್ರಯೋಜನಗಳನ್ನು ಸಹ ಒದಗಿಸುತ್ತದೆ. ಇದರ ಬಗ್ಗೆ ಮಟ್ಟತ್ಸು ಮಾಹಿತಿಯನ್ನು ಮುಂದೆ ನೋಡಿ.

ಏರ್‌ಟೆಲ್‌ನ 455 ರೂಗಳ ಪ್ರಿಪೇಯ್ಡ್ ಯೋಜನೆ:

ಏರ್‌ಟೆಲ್‌ನಲ್ಲಿ ಕಡಿಮೆ ಬೆಲೆಗೆ 84 ದಿನಗಳ ಯೋಜನೆಯೊಂದು ಲಭ್ಯವಿದೆ. ನೀವು ಏರ್‌ಟೆಲ್ ಥ್ಯಾಂಕ್ಸ್ ಆ್ಯಪ್ ಅಥವಾ ಕಂಪನಿಯ ವೆಬ್‌ಸೈಟ್ ಮೂಲಕ ಈ ಪ್ರಿಪೇಯ್ಡ್ ಯೋಜನೆಯನ್ನು 455 ರೂಗಳಲ್ಲಿ ಪಡೆಯಬಹುದು. ಅಲ್ಲದೆ 3 ತಿಂಗಳ ವ್ಯಾಲಿಡಿಟಿಯನ್ನು ಹೊಂದಿರುವ ಈ ಯೋಜನೆಯು ಅನ್‌ಲಿಮಿಟೆಡ್ ಸ್ಥಳೀಯ, STD ಮತ್ತು ರೋಮಿಂಗ್ ಕರೆಗಳನ್ನು ನೀಡುತ್ತದೆ. ಈ ಯೋಜನೆಯಲ್ಲಿ ಬಳಕೆದಾರರು 6GB ಹೈಸ್ಪೀಡ್ ಇಂಟರ್ನೆಟ್ ಡೇಟಾವನ್ನು ಪಡೆಯುತ್ತಾರೆ. ಈ ಯೋಜನೆಯಲ್ಲಿ ಡೇಟಾದ ಯಾವುದೇ ಮಿತಿಯಿಲ್ಲ.

ಏರ್ಟೆಲ್ ಉಚಿತ ವಿಂಕ್ ಮ್ಯೂಸಿಕ್ ಚಂದಾದಾರಿಕೆ 

ನೀವು ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ನಿಮ್ಮ ಡೇಟಾವನ್ನು ಬಳಸಿಕೊಳ್ಳಬಹುದು. ಈ ಏರ್‌ಟೆಲ್ ಯೋಜನೆಯೊಂದಿಗೆ 900 ಉಚಿತ SMS ಸಹ ನೀವು ಬಳಸಬಹುದು. ಈ ಯೋಜನೆ ಕೆಲವು ಹೆಚ್ಚುವರಿ ಪ್ರಯೋಜನಗಳನ್ನು ಸಹ ಒಳಗೊಂಡಿದ್ದು ಫಾಸ್ಟ್ಯಾಗ್‌ನಲ್ಲಿ 100 ರೂಪಾಯಿ ಕ್ಯಾಶ್‌ಬ್ಯಾಕ್ ನೀಡಲಾಗುತ್ತದೆ. ಉಚಿತ ಹಲೋ ಟ್ಯೂನ್ಸ್ ಚಂದಾದಾರಿಕೆಯೊಂದಿಗೆ ನಿಮ್ಮ ಹಲೋ ಟ್ಯೂನ್ ಆಗಿ ನಿಮ್ಮ ನೆಚ್ಚಿನ ಹಾಡನ್ನು ಹೊಂದಿಸಬಹುದು.

ಅಲ್ಲದೆ ನೀವು ಸಂಗೀತವನ್ನು ಕೇಳಲು ಬಯಸಿದರೆ ಈ ಯೋಜನೆಯಲ್ಲಿ ಉಚಿತ ವಿಂಕ್ ಮ್ಯೂಸಿಕ್ ಚಂದಾದಾರಿಕೆಯು ಸಹ ಲಭ್ಯವಿದೆ. ಏರ್‌ಟೆಲ್‌ನ ಈ ಯೋಜನೆಯು ಹೆಚ್ಚಿನ ವ್ಯಾಲಿಡಿಟಿಯೊಂದಿಗೆ ಅನ್ಲಿಮಿಟೆಡ್ ಕರೆಗಳನ್ನು ಮಾಡುವ ಗ್ರಾಹಕರಿಗೆ ಹೆಚ್ಚು ಪ್ರಯೋಜನಕಾರಿಯಾಗಿದ್ದು ಇದು 6GB ಇಂಟರ್ನೆಟ್ ಅನ್ನು ಒಳಗೊಂಡಿರುತ್ತದೆ.ಈ ಯೋಜನೆ ಕುರಿತು ಇನ್ನಷ್ಟು ಮಾಹಿತಿ ತಿಳಿದುಕೊಳ್ಳಲು ನೀವು ಏರ್‌ಟೆಲ್‌ ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಸಹ ಭೇಟಿ ನೀಡಬಹುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo