ಭಾರತದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ಭಾರ್ತಿ ಏರ್‌ಟೆಲ್ (Airtel) ಭಾರತದಾದ್ಯಂತ ತನ್ನ Unlimited 5G ಸೇವೆಗಳನ್ನು ನೀಡುತ್ತಿದ್ದೆ ಮತ್ತು ಕೆಲವು ಆಯ್ದ ಪ್ರದೇಶ ಪಟ್ಟಣಗಳಲ್ಲಿ ಇನ್ನೂ 4G ಸೇವೆಯನ್ನೇ ನೀಡುತ್ತದೆ. ಏರ್‌ಟೆಲ್ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್‌ನಲ್ಲಿ ನೀವು ರೂ 929 ರೀಚಾರ್ಜ್ ಯೋಜನೆಗಳ ಮಾಹಿತಿಯನ್ನು ಕಾಣಬಹುದು. ಈ ಎರಡೂ ಯೋಜನೆಗಳು ತಮ್ಮ ಚಂದಾದಾರರಿಗೆ ಕೆಲವು ಪ್ರಯೋಜನಗಳನ್ನು ಹೊಂದಿವೆ. ಈ ಏರ್ಟೆಲ್ ರೂ 929 ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯು 90 ದಿನಗಳ ಮಾನ್ಯತೆಯ ಅವಧಿಯನ್ನು ಹೊಂದಿದೆ. ಮೊದಲು ಈ ವ್ಯಾಲಿಡಿಟಿ 779 ರೂಗಳ ರಿಚಾರ್ಜ್ ಯೋಜನೆಯಲ್ಲಿ ಲಭ್ಯವಿತ್ತು ಆದರೆ ಈಗ ಬದಲಾಗಿದೆ.
Also Read: 32MP ಸೆಲ್ಫಿ ಕ್ಯಾಮೆರಾದ ಜೊತೆ Vivo Y300 Plus 5G ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು?
ಈ ಏರ್ಟೆಲ್ ಯೋಜನೆಯಲ್ಲಿ ಅನಿಯಮಿತ ಸ್ಥಳೀಯ STD ಮತ್ತು ರೋಮಿಂಗ್ ಕರೆಗಳನ್ನು ಒಳಗೊಂಡಿವೆ ಮತ್ತು ಗ್ರಾಹಕರಿಗೆ ದಿನಕ್ಕೆ 1.5GB ಡೇಟಾವನ್ನು ಒಳಗೊಂಡಿರುತ್ತದೆ. ಏರ್‌ಟೆಲ್ ರೂ 929 ಪ್ಲಾನ್‌ಗಳ ಚಂದಾದಾರರು ಪ್ರತಿದಿನ 1.5GB ಡೇಟಾ ಜೊತೆಗೆ ಪ್ರತಿದಿನ 100 ಉಚಿತ SMS ಅನ್ನು ಸ್ವೀಕರಿಸುತ್ತಾರೆ. ಈಗಾಗಲೇ ಹೇಳಿರುವಂತೆ ಈ ಏರ್‌ಟೆಲ್ 929 ಯೋಜನೆಯು 90 ದಿನಗಳವರೆಗೆ ಮಾನ್ಯತೆಯ ಅವಧಿಯನ್ನು ಹೊಂದಿದೆ.
ಹೆಚ್ಚುವರಿ ಪ್ರಯೋಜನಗಳು ಎಕ್ಸ್‌ಸ್ಟ್ರೀಮ್ ಪ್ಲೇ ಉಚಿತ ಟಿವಿ ಕಾರ್ಯಕ್ರಮಗಳು, ಚಲನಚಿತ್ರಗಳು, ಲೈವ್ ಚಾನೆಲ್‌ಗಳು ಮತ್ತು ಹೆಚ್ಚಿನದೊಂದಿಗೆ ಉಚಿತ ವಿಷಯವನ್ನು ಆನಂದಿಸಲು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.ಈ ಯೋಜನೆಯಲ್ಲಿ ಭಾರತದ 1ನೇ ಸ್ಪ್ಯಾಮ್ ಫೈಟಿಂಗ್ ನೆಟ್‌ವರ್ಕ್ ಒಳಬರುವ ಸ್ಪ್ಯಾಮ್ ಕರೆಗಳು ಮತ್ತು SMS ಗಾಗಿ ನಿಮ್ಮ ಫೋನ್‌ನಲ್ಲಿ ಶಂಕಿತ ಸ್ಪ್ಯಾಮ್ ಎಚ್ಚರಿಕೆಯನ್ನು ಪಡೆಯಿರಿ. 3 ತಿಂಗಳ ಯಾವುದೇ ವೆಚ್ಚವಿಲ್ಲ ವೈಂಕ್‌ನಲ್ಲಿ ಉಚಿತ ಹಲೋ ಟ್ಯೂನ್‌ಗಳು ತಿಂಗಳಿಗೆ ಯಾವುದೇ ಒಂದು ಟ್ಯೂನ್ ಅನ್ನು ಉಚಿತವಾಗಿ ಪಡೆಯುತ್ತಾರೆ.
ಏರ್ಟೆಲ್ ಈ ರಿಚಾರ್ಜ್ 929 ಪ್ಲಾನ್‌ನ ಬಳಕೆದಾರರು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಮೊಬೈಲ್ ಪ್ಯಾಕ್‌ಗೆ ಉಚಿತ ಪ್ರವೇಶ ರಿವಾರ್ಡ್ಸ್‌ಮಿನಿ ಚಂದಾದಾರಿಕೆಯೊಂದಿಗೆ ಮೂರು ತಿಂಗಳವರೆಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಅಪೊಲೊ 24/7 ಸರ್ಕಲ್ ಚಂದಾದಾರಿಕೆ, ಫಾಸ್ಟ್‌ಟ್ಯಾಗ್ ಪಾವತಿಗಳ ಮೇಲೆ ರೂ 100 ಕ್ಯಾಶ್‌ಬ್ಯಾಕ್ ಸೇರಿದಂತೆ 6 ವಿಭಿನ್ನ ಅಪ್ಲಿಕೇಶನ್‌ಗಳಿಗೆ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯುತ್ತಾರೆ. ಉಚಿತ Hellotunes ಮತ್ತು Wynk ಸಂಗೀತವನ್ನು ಸಹ ಹೊಂದಿದೆ.
ಮೊದಲು ಇದೆ ಪ್ರಯೋಜನಗಳನ್ನು ನೀಡುತ್ತಿದ್ದ ರೂ 779 ಪ್ಲಾನ್‌ನ ಬೆಲೆಯನ್ನು ಏರಿಸಿದ್ದು ಈಗ ಏರ್ಟೆಲ್ ಚಂದಾದಾರರು ಕೇವಲ ನಾಲ್ಕು ಅಪ್ಲಿಕೇಶನ್‌ಗಳಿಗೆ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯುತ್ತಾರೆ ಅಪೊಲೊ 24/7 ಸರ್ಕಲ್‌ಗೆ ಉಚಿತ ಮೂರು ತಿಂಗಳ ಚಂದಾದಾರಿಕೆ ಫಾಸ್ಟ್‌ಟ್ಯಾಗ್ ಖರೀದಿಗಳ ಮೇಲೆ ರೂ. 100 ಮರುಪಾವತಿ, ಉಚಿತ ಹೆಲೋಟ್ಯೂನ್ಸ್ ಮತ್ತು ವಿಂಕ್ ಸಂಗೀತ ಚಂದಾದಾರಿಕೆ ಮತ್ತು 100 SMS ದೈನಂದಿನ ಮಿತಿಯನ್ನು ತಲುಪಿದಾಗ ಈ ಎರಡೂ ಯೋಜನೆಗಳು ಸ್ಥಳೀಯ SMS ಸುಮಾರು ರೂ 1 ಮತ್ತು ಬೇರೆ ರಾಜ್ಯದ SMS ಗೆ ರೂ 1.5 ವಿಧಿಸುತ್ತವೆ ಎಂಬುದನ್ನು ಗಮನಿಸಬೇಕು. ಅಲ್ಲದೆ ಇದರಲ್ಲಿ ನಿಮಗೆ ಪ್ರತಿದಿನ 1.5GB ಡೇಟಾವನ್ನು ಬಳಸಿದ ನಂತರ ವೇಗವು 64kbps ಇಳಿಯುತ್ತದೆ ಆದರೆ ಬಳಕೆದಾರರು ಇದನ್ನು ಅನ್ಲಿಮಿಟೆಡ್ ಬಳಸಲು ಅವಕಾಶವಿದೆ.