Airtel ತಮ್ಮ ಗ್ರಾಹಕರಿಗೆ ಈ ಯೋಜನೆಯಲ್ಲಿ ಉಚಿತ ನೆಟ್‌ಫ್ಲಿಕ್ಸ್ ಬೇಸಿಕ್ ಚಂದಾದಾರಿಕೆ ನೀಡುತ್ತಿದೆ.
ಏರ್‌ಟೆಲ್ ಅನ್ಲಿಮಿಟೆಡ್ ವಾಯ್ಸ್ ಕರೆಗಳು ಮತ್ತು ಅನ್ಲಿಮಿಟೆಡ್ 5G ಡೇಟಾ ಜೊತೆಗೆ ದಿನಕ್ಕೆ SMS ಸೌಲಭ್ಯ
Airtel ಡೇಟಾದೊಂದಿಗೆ ಉಚಿತ OTT ಅಪ್ಲಿಕೇಶನ್‌ಗಳಾದ Amaznon Prime, Netflix, Disney+ Hotstar ಮತ್ತು ZEE5 ನೀಡುತ್ತಿದೆ.
Airtel 1499 Plan: ಭಾರತದಲ್ಲಿ ಟೆಲಿಕಾಂ ಕಂಪನಿಗಳಾದ Jio, Airtel ಮತ್ತು BSNL ತಮ್ಮ ಬಳಕೆದಾರರನ್ನು ಆಕರ್ಷಿಸಲು ಅತಿ ಕಡಿಮೆ ಬೆಲೆಗೆ ಹೆಚ್ಚು ಪ್ರಯೋಜನಗಳನ್ನು ನೀಡುತ್ತಿರುವುದು ನಮಗೆಲ್ಲ ತಿಳಿದಿದೆ. ಭಾರತದಲ್ಲಿ TRAI (Telecom Regulatory Authority of India) ನೀಡಿರುವ ಹೊಸ ನಿಯಮದ ಅನುಸಾರವಾಗಿ ಪ್ರತಿ ಸಕ್ರಿಯ ಸಿಮ್ ಕಾರ್ಡ್ (SIM Card) ಪ್ರಿಪೇಯ್ಡ್ ಅಥವಾ ಪೋಸ್ಟ್‌ಪೇಯ್ಡ್ ಆಗಿರಲಿ ಪ್ರತಿ ತಿಂಗಳು ಒಂದು ನಿರ್ದಿಷ್ಟವಾದ ರಿಚಾರ್ಜ್ ಮಾಡಿಸುವುದು ಕಡ್ಡಾಯಗೊಳಿಸಿರುವ ಕಾರಣ ಟೆಲಿಕಾಂ ಕಂಪನಿಗಳು ಹೊಸ ಆಫರ್ಗಳನ್ನು ನೀಡಲೇಬೇಕಾದ ಅನಿವಾರ್ಯತೆ ಈಗ ರೂಢಿಯಲ್ಲಿದೆ.
Also Read: Aadhaar ಕಾರ್ಡ್‌ನ ಹಳೆ ಫೋಟೋದಿಂದ ಬೇಸರವಾಗಿದ್ರೆ ಹೊಸ Photo ಅಪ್ಡೇಟ್ ಮಾಡಿಸೋದು ಹೇಗೆ?
ಈಗ ನೀವು ರಿಚಾರ್ಜ್ ಮಾಡಿಸಬೇಂದುಕೊಂಡಿದ್ದರೆ ನೇರವಾಗಿ ನೀವು ಇಂತಹ ಧೀರ್ಘವಾದಿಯ ವ್ಯಾಲಿಡಿಟಿದೊಂದಿಗೆ ಬರುವ ಬೆಸ್ಟ್ ಕಾಂಬೋ ಪ್ಯಾಕ್ಗಳನ್ನು ಪರಿಶೀಲಿಸಬಹುದು. ಏಕೆಂದರೆ ಇದರಲ್ಲಿ ನಿಮಗೆ ಉತ್ತಮ ಡೇಟಾದೊಂದಿಗೆ ಉಚಿತ OTT ಅಪ್ಲಿಕೇಶನ್‌ಗಳಾದ Amaznon Prime, Netflix, Disney+ Hotstar ಮತ್ತು ZEE5 ಸಹ ನೀಡುತ್ತಿದೆ. ಮತ್ತು ಅನ್ಲಿಮಿಟೆಡ್ ವಾಯ್ಸ್ ಕರೆಗಳು ಮತ್ತು ಅನ್ಲಿಮಿಟೆಡ್ 5G ಡೇಟಾ ಜೊತೆಗೆ ದಿನಕ್ಕೆ SMS ಸೌಲಭ್ಯ ನೀಡುವ ಈ ಏರ್ಟೆಲ್ ಪ್ಲಾನ್ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ತಿಳಿಯಿರಿ.
ಉಚಿತ Netflix ನೀಡುವ Airtel ಬೆಸ್ಟ್ 1499 ರೂಗಳ ಪ್ಲಾನ್!
ಭಾರ್ತಿ ಏರ್‌ಟೆಲ್ ತಮ್ಮ ಗ್ರಾಹಕರಿಗೆ ಈ ಯೋಜನೆಯಲ್ಲಿ ಉಚಿತ ನೆಟ್‌ಫ್ಲಿಕ್ಸ್ ಬೇಸಿಕ್ ಚಂದಾದಾರಿಕೆ ಮತ್ತು ಅನಿಯಮಿತ 5G ಡೇಟಾದೊಂದಿಗೆ ಹೊಸ ಪ್ರಿಪೇಯ್ಡ್ ಯೋಜನೆಯನ್ನು ಸದ್ದಿಲ್ಲದೆ ಪ್ರಾರಂಭಿಸಿದೆ. ಈ 1,499 ರೂಗಳ ಏರ್‌ಟೆಲ್ ಪ್ರಿಪೇಯ್ಡ್ ಯೋಜನೆಯು ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ಜೊತೆಗೆ ದಿನಕ್ಕೆ 3GB ಡೇಟಾವನ್ನು ನೀಡುತ್ತದೆ. ಏರ್‌ಟೆಲ್‌ನ ಈ ಪ್ಲಾನ್ ಪೂರ್ತಿ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.
ಹೆಚ್ಚುವರಿಯಾಗಿ ಯೋಜನೆಯು ಅಪೊಲೊ 24|7 ಸರ್ಕಲ್‌ಗೆ ಮೂರು ತಿಂಗಳ ಯಾವುದೇ ವೆಚ್ಚದ ಪ್ರವೇಶ, ಉಚಿತ HelloTunes ಮತ್ತು Wynk ಮ್ಯೂಸಿಕ್ ಪ್ರವೇಶದೊಂದಿಗೆ ಬರುತ್ತದೆ. ಇದು ದಿನಕ್ಕೆ 2GB ಡೇಟಾ, ಅನಿಯಮಿತ ವಾಯ್ಸ್ ಕರೆಗಳು ಮತ್ತು ಅನಿಯಮಿತ 5G ಡೇಟಾ ಜೊತೆಗೆ ದಿನಕ್ಕೆ 100 SMS ನೀಡುತ್ತದೆ.
ರಿಲಯನ್ಸ್ ಜಿಯೊದೊಂದಿಗೆ ನೇರ ಠಕ್ಕರ್!
ಭಾರತದಲ್ಲಿ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ಭಾರಿ ಜನಪ್ರಿಯವಾಗಿರುವ ಟೆಲಿಕಾಂ ಕಂಪನಿಗಳಲ್ಲಿ ಮುಖ್ಯವಾಗಿವೆ. ಆದರೆ ಗಮನಾರ್ಹವಾಗಿ ಏರ್‌ಟೆಲ್‌ಗೆ ಪ್ರತಿಸ್ಪರ್ಧಿ ರಿಲಯನ್ಸ್ ಜಿಯೋ ಸಹ ಅದೇ ಬೆಲೆಯ ಎರಡು ಅತ್ಯುತ್ತಮ ಬೆಸ್ಟ್ ಪ್ರಿಪೇಯ್ಡ್ ಯೋಜನೆಯನ್ನು ಸಹ ಹೊಂದಿದೆ. ಅವೆಂದರೆ 1,099 ರೂ ಮತ್ತು 1499 ರೂಗಳಾಗಿವೆ. ಈ ಎರಡು ಯೋಜನೆಗಳ ವ್ಯಾಲಿಡಿಟಿ 84 ದಿನಗಳಾಗಿವೆ. ಜಿಯೋ ಸಹ ಉಚಿತ ನೆಟ್‌ಫ್ಲಿಕ್ಸ್ ಮೊಬೈಲ್ ಚಂದಾದಾರಿಕೆಯೊಂದಿಗೆ ಪ್ರಾರಂಭಿಸಿದೆ. ಇದರೊಂದಿಗೆ ರೂಢಿಯಂತೆ ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ 5G ಡೇಟಾ ಮತ್ತು SMS ಸೋಲ್ ಸೌಲಭ್ಯವನ್ನು ಸಹ ಜಿಯೋ ನೀಡುತ್ತಿದೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile