ಭಾರ್ತಿ ಏರ್‌ಟೆಲ್ ಭಾರತದಲ್ಲಿ ಎರಡನೇ ಅತಿ ದೊಡ್ಡ ಟೆಲಿಕಾಂ ಆಪರೇಟರ್ ಕಂಪನಿ ಆಗಿದೆ. ಏರ್ಟೆಲ್ (Airtel) ತನ್ನ ಪೋರ್ಟ್‌ಫೋಲಿಯೊ ಅಡಿಯಲ್ಲಿ ನೆಟ್ವರ್ಕ್ ಸೇವೆಗಳನ್ನು ಸಕ್ರಿಯವಾಗಿ ಬಳಸಲು ಹಲವಾರು ಗ್ರಾಹಕರನ್ನು ಹೊಂದಿದೆ. ಏರ್ಟೆಲ್ ಈಗ ದೇಶದ ಮೂಲೆ ಮೂಲೆಯಲ್ಲಿರುವ ಎಲ್ಲರಿಗೂ 5G ಅನ್ನು ನೀಡುವಲ್ಲಿ ನಿಧಾನವಾಗಿ ಯಶಸ್ಸನ್ನು ಕಾಣುತ್ತಿದೆ. ಭಾರ್ತಿ ಏರ್‌ಟೆಲ್ ತನ್ನ 5G ಸೇವೆಗಳೊಂದಿಗೆ ಈಗಾಗಲೇ 3000 ಕ್ಕೂ ಹೆಚ್ಚು ನಗರಗಳನ್ನು ತಲುಪಿದೆ. ಈ ಲೇಖನದಲ್ಲಿ ಅತಿ ಕಡಿಮೆ ಬೆಲೆಗೆ ಹೆಚ್ಚು ವ್ಯಾಲಿಡಿಟಿ ಮತ್ತು ಹೆಚ್ಚುವರಿ ಪ್ರಯೋಜನಗಳನ್ನು ನೀಡುವ 289, 296 ಮತ್ತು 199 ರೂಗಳ ಪ್ರಿಪೇಯ್ಡ್ ಯೋಜನೆಯ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ.
Also Read: SIM Card Rules 2024: ಇದೇ 1ನೇ ಜನವರಿ 2024 ರಿಂದ ಸಿಮ್ ಕಾರ್ಡ್‌ಗಳಿಗೆ ಹೊಸ ನಿಯಮ ಜಾರಿ
ಭಾರ್ತಿ ಏರ್‌ಟೆಲ್ ತನ್ನ ಗ್ರಾಹಕರಿಗೆ ರೂ 289 ಬೆಲೆಯ ಹೊಸ ಪ್ರಿಪೇಯ್ಡ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಏರ್‌ಟೆಲ್ ರೂ 289 ಪ್ರಿಪೇಯ್ಡ್ ಯೋಜನೆಯು 4GB ಡೇಟಾದೊಂದಿಗೆ ಒತ್ತರೆಯಾಗಿ 300 SMS ಮತ್ತು ಅನಿಯಮಿತ ವಾಯ್ಸ್ ಕರೆಯೊಂದಿಗೆ ಪೂರ್ತಿ 35 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಟೆಲಿಕಾಂ ಆಪರೇಟರ್‌ಗಳ ಪಟ್ಟಿಯ ಪ್ರಕಾರ ಏರ್‌ಟೆಲ್ ಪ್ರಿಪೇಯ್ಡ್ ಪ್ಲಾನ್ ಮೂರು ತಿಂಗಳ ಕಾಲ ಅಪೋಲೋ 24/7 ಸರ್ಕಲ್, ಹೆಲೋಟ್ಯೂನ್ಸ್ ಮತ್ತು ವಿಂಕ್ ಮ್ಯೂಸಿಕ್ ಅನ್ನು ನೀವು ಉಚಿತವಾಗಿ ಬಳಸಬಹುದು.
ಏರ್ಟೆಲ್ನ ರೂ 296 ಯೋಜನೆಯು ಅದರ ಚಂದಾದಾರರಿಗೆ ಒಟ್ಟು 25GB ಡೇಟಾವನ್ನು 30 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಯೋಜನೆಯ ಜೊತೆಗೆ ಏರ್‌ಟೆಲ್ ಚಂದಾದಾರರು ಅನಿಯಮಿತ ವಾಯ್ಸ್ ಕರೆ ಮತ್ತು ದಿನಕ್ಕೆ 100 SMS ಗಳನ್ನು ಸಹ ಪಡೆಯುತ್ತಾರೆ. ಈ ಯೋಜನೆಯಲ್ಲಿ ನೀಡಲಾದ ಕೆಲವು ಏರ್‌ಟೆಲ್ ಥ್ಯಾಂಕ್ಸ್ ಪ್ರಯೋಜನಗಳೆಂದರೆ ಅಪೊಲೊ 24×7 ಸರ್ಕಲ್, ಫಾಸ್ಟ್‌ಟ್ಯಾಗ್‌ನಲ್ಲಿ ರೂ 100 ಕ್ಯಾಶ್‌ಬ್ಯಾಕ್, ಉಚಿತ ಹೆಲೋಟ್ಯೂನ್ಸ್ ಮತ್ತು ವಿಂಕ್ ಮ್ಯೂಸಿಕ್ ಬಳಸಬಹುದು.
ಭಾರ್ತಿ ಏರ್ಟೆಲ್ ತಮ್ಮ ಬಳಕೆದಾರರಿಗೆ ರೂ 199 ಪ್ರಿಪೇಯ್ಡ್ ಯೋಜನೆಯು ಒಟ್ಟು 3GB ಡೇಟಾದೊಂದಿಗೆ ಬರುತ್ತದೆ. ಏರ್‌ಟೆಲ್ ಚಂದಾದಾರರು 30 ದಿನಗಳವರೆಗೆ ಅನಿಯಮಿತ ವಾಯ್ಸ್ ಕರೆ ಮತ್ತು 300 SMS ಅನ್ನು ಸಹ ಪಡೆಯುತ್ತಾರೆ. ಈ ಯೋಜನೆಯೊಂದಿಗೆ ನೀಡಲಾಗುವ ಕೆಲವು ಏರ್‌ಟೆಲ್ ಥ್ಯಾಂಕ್ಸ್ ಪ್ರಯೋಜನಗಳು ವಿಂಕ್ ಮ್ಯೂಸಿಕ್ ಮತ್ತು ಹೆಲೋಟ್ಯೂನ್ಸ್ ಮತ್ತು ಮತ್ತು ವಿಂಕ್ ಮ್ಯೂಸಿಕ್ ಬಳಸಬಹುದು.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ