60 ದಿನಗಳಿಗೆ ಪ್ರತಿದಿನ 1.5GB ಡೇಟಾ ಮತ್ತು ಅನಿಯಮಿತ ಕರೆಗಳನ್ನು ನೀಡುವ ಈ Airtel ಪ್ಲಾನ್ ಯಾವುದು?

Updated on 12-Jun-2023
HIGHLIGHTS

ಇತ್ತೀಚೆಗೆ ಬಿಡುಗಡೆಯಾದ ರೂ 519 ಏರ್‌ಟೆಲ್ ಪ್ರಿಪೇಯ್ಡ್ ಯೋಜನೆಯು 60-ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ.

ಈ ಯೋಜನೆಯು ಒಟ್ಟು 90GB ಡೇಟಾವನ್ನು ನೀಡುತ್ತದೆ. ದೈನಂದಿನ ಡೇಟಾ ಕ್ಯಾಪ್ ಅನ್ನು ಪೂರೈಸಿದ ನಂತರ ಇಂಟರ್ನೆಟ್ ವೇಗವು 64 Kbps ಗೆ ಕಡಿಮೆಯಾಗುತ್ತದೆ.

ಭಾರತದಲ್ಲಿ ಈ ಏರ್‌ಟೆಲ್ ಪ್ರಿಪೇಯ್ಡ್ ಪ್ಲಾನ್‌ನ ಬೆಲೆ ರೂ 779 ಆಗಿದೆ ಮತ್ತು ಇದು ಒಟ್ಟು 135GB ಡೇಟಾದೊಂದಿಗೆ ಬರುತ್ತದೆ.

ಭಾರ್ತಿ ಏರ್ಟೆಲ್ ತಮ್ಮ ಬಳಕೆದಾರರಿಗೆ ಉತ್ತಮ ಡೇಟಾ ಮತ್ತು ಕರೆಗಳ ಅನುಕೂಲವನ್ನು ನೀಡಲು ಪ್ರತಿ ಬಾರಿ ಒಂದಲ್ಲ ಒಂದು ರೀತಿಯ ಯೋಜನೆಗಳನ್ನು ತರುತ್ತಲೇ ಇರುತ್ತದೆ. ಅಂಥ ಮತ್ತೊಂದು ವಿಶೇಷ ಯೋಜನೆಯೇ ಈ ಏರ್ಟೆಲ್ 60 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಏರ್‌ಟೆಲ್ ಪ್ರಿಪೇಯ್ಡ್ ಯೋಜನೆ ಬಳಕೆದಾರರಿಗೆ ಅನಿಯಮಿತ ಧ್ವನಿ ಕರೆಗಳೊಂದಿಗೆ ಪ್ರತಿದಿನ 1.5GB ದೈನಂದಿನ ಹೈ-ಸ್ಪೀಡ್ ಡೇಟಾ, ದಿನಕ್ಕೆ 100 SMS ಮತ್ತು ಹೆಚ್ಚಿನ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಲು ಅವಕಾಶ ನೀಡುತ್ತದೆ. ಈ ಏರ್‌ಟೆಲ್ ಯೋಜನೆಗಳನ್ನು ಈಗಾಗಲೇ ಟೆಲಿಕಾಂ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಹಾಗೂ ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್‌ನಲ್ಲಿ ಪಟ್ಟಿ ಮಾಡಲಾಗಿದೆ. 

ಏರ್‌ಟೆಲ್ ರೂ 519 ಪ್ರಿಪೇಯ್ಡ್ ಯೋಜನೆ

ಇತ್ತೀಚೆಗೆ ಬಿಡುಗಡೆಯಾದ ರೂ 519 ಏರ್‌ಟೆಲ್ ಪ್ರಿಪೇಯ್ಡ್ ಯೋಜನೆಯು 60-ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಮತ್ತು ದಿನಕ್ಕೆ 100 SMS, ಅನಿಯಮಿತ ಧ್ವನಿ ಕರೆ ಮತ್ತು ದಿನಕ್ಕೆ 1.5GB ಡೇಟಾವನ್ನು ಒಳಗೊಂಡಿದೆ. ಈ ಯೋಜನೆಯು ಒಟ್ಟು 90GB ಡೇಟಾವನ್ನು ನೀಡುತ್ತದೆ.  ದೈನಂದಿನ ಡೇಟಾ ಕ್ಯಾಪ್ ಅನ್ನು ಪೂರೈಸಿದ ನಂತರ ಇಂಟರ್ನೆಟ್ ವೇಗವು 64 Kbps ಗೆ ಕಡಿಮೆಯಾಗುತ್ತದೆ. ಹೆಚ್ಚುವರಿಯಾಗಿ ಇದು ಉಚಿತ ವೈಂಕ್ ಮ್ಯೂಸಿಕ್, ಹೆಲೋಟ್ಯೂನ್ಸ್ ಮತ್ತು ಅಪೊಲೊ 24/7 ಸರ್ಕಲ್‌ನಂತಹ ಏರ್‌ಟೆಲ್ ಥ್ಯಾಂಕ್ಸ್ ಪ್ರಯೋಜನಗಳನ್ನು ಒದಗಿಸುತ್ತದೆ ಮತ್ತು ಫಾಸ್ಟ್‌ಟ್ಯಾಗ್‌ನಲ್ಲಿ ರೂ 100 ಕ್ಯಾಶ್‌ಬ್ಯಾಕ್ ಅನ್ನು ಒದಗಿಸುತ್ತದೆ.

ಏರ್‌ಟೆಲ್ ರೂ 799 ಪ್ರಿಪೇಯ್ಡ್ ಯೋಜನೆ

ಭಾರತದಲ್ಲಿ ಈ ಏರ್‌ಟೆಲ್ ಪ್ರಿಪೇಯ್ಡ್ ಪ್ಲಾನ್‌ನ ಬೆಲೆ ರೂ 779 ಆಗಿದೆ ಮತ್ತು ಇದು ಒಟ್ಟು 135GB ಡೇಟಾದೊಂದಿಗೆ ಬರುತ್ತದೆ. ಇದು ಅನಿಯಮಿತ ಫೋನ್ ಕರೆ, 100 ದೈನಂದಿನ SMS ಮತ್ತು ದಿನಕ್ಕೆ 1.5GB ಹೆಚ್ಚಿನ ವೇಗವನ್ನು ನೀಡುತ್ತದೆ. ಇದು 90-ದಿನಗಳ ಮಾನ್ಯತೆಯನ್ನು ಹೊಂದಿದೆ ಮತ್ತು ಉಚಿತ ಅಪೊಲೊ 24/7 ಸರ್ಕಲ್, ಹೆಲೋಟ್ಯೂನ್ಸ್, ವಿಂಕ್ ಮ್ಯೂಸಿಕ್ ಮತ್ತು ಫಾಸ್ಟ್‌ಟ್ಯಾಗ್‌ನಲ್ಲಿ ರೂ 100 ಕ್ಯಾಶ್‌ಬ್ಯಾಕ್ ಸೇರಿದಂತೆ ಹಿಂದಿನ ಪ್ಲಾನ್‌ನಂತೆ ಅದೇ ಏರ್‌ಟೆಲ್ ಥ್ಯಾಂಕ್ಸ್ ಪರ್ಕ್‌ಗಳನ್ನು ಒಳಗೊಂಡಿದೆ. ನಿಮಗೆ ಈ ಪ್ಲಾನ್ ಅನ್ವಯಿಸುತ್ತವೆಯೋ ಇಲ್ಲವೇ ಎಂದು ಒಮ್ಮೆ ರಿಚಾರ್ಜ್ ಮಾಡುವ ಮೊದಲು ಖಚಿತಪಡಿಸಿಕೊಳ್ಳಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :